ಮಟ್ಟುಪೆಟ್ಟಿ ಕೆರೆಯು ದೇವಿಕುಲಂ ನಲ್ಲಿ ಇಡುಕ್ಕಿ ಬೆಟ್ಟದಲ್ಲಿ ಸುಮಾರು 1700 ಮೀಟರುಗಳಷ್ಟು ಎತ್ತರದಲ್ಲಿದೆ. ದಟ್ಟವಾದ ಅರಣ್ಯ ಪ್ರದೇಶಗಳು ಮತ್ತು ನೆಡುತೋಪುಗಳು ನೋಡುಗರ ಕಣ್ಣಿಗೆ ಹಬ್ಬ. ಪ್ರಶಾಂತ ವಾತಾವರಣ, ನಿಸರ್ಗ ಸೌಂದರ್ಯವು ಪ್ರವಾಸಿಗರ ಮನತಣಿಸುತ್ತದೆ. ಮಟ್ಟುಪೆಟ್ಟಿ ಆಣೆಕಟ್ಟನ್ನು 1940 ರಲ್ಲಿ ನಿರ್ಮಿಸಲಾಯಿತು. ಆಗಿನಿಂದಲೇ ಇದು ಪಿಕ್ನಿಕ್ ತಾಣವಾಗಿ ಜನಪ್ರಿಯವಾಗಿದೆ. ಮಟ್ಟುಪೆಟ್ಟಿಯು ಇಂಡೋ-ಸ್ವಿಸ್ ಜಾನುವಾರು ಪ್ರಾಜೆಕ್ಟಿಗೆ ಹೆಸರುವಾಸಿ. ಇಲ್ಲಿ ಸುಮಾರು 100ಕ್ಕೂ ಹೆಚ್ಚು ವಿವಿಧ ತಳಿಯ ಹಸುಗಳನ್ನು ಸಾಕಲಾಗಿದೆ. ಈ ಕೆರೆಯ ಹಿಂಬದಿಗೆ ಸುಂದರವಾದ ಮೆಣಸಿನ ಉದ್ಯಾನಗಳು ಮತ್ತು ಪರ್ವತ ಪ್ರದೇಶವು ಸೌಂದರ್ಯವನ್ನು ಹೆಚ್ಚಿಸುತ್ತದೆ. ಈ ಕೆರೆಯ ಬದಿಯಲ್ಲಿ ಸುತ್ತಾಡಿ ಇಲ್ಲಿನ ನಿಸರ್ಗವನ್ನು ನೋಡಬಹುದು. ಸ್ಪೀಡ್ ಮೋಟರ್ ಮತ್ತು ಪೆಡಲ್ ಬೋಟಿಂಗ್ಗಳೂ ಬಾಡಿಗೆ ರೂಪದಲ್ಲಿ ಲಭ್ಯ. ಈ ಪರ್ವತ ಶ್ರೇಣಿಯು ಹಕ್ಕಿಗಳ ಕಲರವದಿಂದ ಯಾವಾಗಲೂ ತುಂಬಿರುತ್ತದೆ. ಹೀಗಾಗಿ ಇಲ್ಲಿ ಪಕ್ಷಿ ವೀಕ್ಷಣೆ ಕೂಡಾ ಇನ್ನೊಂದು ಪ್ರಮುಖ ಆಕರ್ಷಣೆ.