India
Search
 • Follow NativePlanet
Share
ಮುಖಪುಟ » ಸ್ಥಳಗಳು» ಕ್ಯಾಲಿಕಟ್

ಕ್ಯಾಲಿಕಟ್‌: ಕಥೆಗಳು ಹಾಗೂ ಇತಿಹಾಸಗಳ ಭೂಮಿ

29

ಕ್ಯಾಲಿಕಟ್‌ ಎಲ್ಲರಿಗೂ ಚಿರಪರಿಚಿತ ಹೆಸರು. ಇದನ್ನು ಕೋಜಿಕೋಡ್‌ ಅಂತಲೂ ಕರೆಯಲಾಗುತ್ತದೆ. ರಾಜ್ಯದ ಉತ್ತರ ಭಾಗದ ಜಿಲ್ಲೆಯಾಗಿರುವ ಇದು ನೈಋತ್ಯ ಭಾಗದಲ್ಲಿ ಬರುತ್ತದೆ. ಜಿಲ್ಲೆಯ ಕೇಂದ್ರವೂ ಕ್ಯಾಲಿಕಟ್‌ ಆಗಿದೆ. ಜಿಲ್ಲೆ ಅರಬ್ಬಿ ಸಮುದ್ರದಿಂದ ಸುತ್ತುವರಿದಿದ್ದು, ಜಿಲ್ಲೆಯ ಪೂರ್ವ ಭಾಗ ಪ್ರಸಕ್ತ ಯುಗದ ವಾಣಿಜ್ಯ ಹಾಗೂ ವ್ಯಾಪಾರ ಕೇಂದ್ರವಾಗಿ ಜನಪ್ರಿಯವಾಗಿದೆ.

ಇಲ್ಲಿನ ಆಧುನಿಕ ಯುಗದ ಇತಿಹಾಸ ತಜ್ಞರ ಪ್ರಕಾರ, ಕ್ಯಾಲಿಕಟ್‌ ಸಾಂಬಾರು ಪದಾರ್ಥ ಹಾಗೂ ಸಿಲ್ಕ್‌ಗೆ ಅತ್ಯಂತ ಜನಪ್ರಿಯ ತಾಣ. ಇದರಿಂದಾಗಿಯೇ ಈ ಭಾಗವು ದೇಶವನ್ನು ಸಮುದ್ರ ಮಾರ್ಗದ ಮೂಲಕ ಸಂಪರ್ಕಿಸುವ ಅನೇಕ ರಾಷ್ಟ್ರಗಳ ಜತೆ ಉತ್ತಮ ವಾಣಿಜ್ಯ ಸಂಪರ್ಕವನ್ನು ಹೊಂದಿದೆ. ಸದೃಢ ವಾಣಿಜ್ಯೋದ್ಯಮ ಸಂಪರ್ಕವನ್ನು ಆಫ್ರಿಕಾದ ಹಲವು ರಾಷ್ಟ್ರ, ಏಷ್ಯಾ ಹಾಗೂ ಮಧ್ಯಪ್ರಾಚ್ಯ ರಾಷ್ಟ್ರಗಳೊಂದಿಗೆ ಹೊಂದಿದೆ. ಈ ಮೂಲಕ ಕ್ಯಾಲಿಕಟ್‌ ವಾಣಿಜ್ಯ ಹಬ್‌ ಆಗಿ ಪರಿವರ್ತನೆಗೊಂಡಿದ್ದು, ಸುವರ್ಣ ದಿನಗಳನ್ನು ಅನುಭವಿಸುತ್ತಿದೆ.

ಕ್ಯಾಲಿಕಟ್‌ ಬ್ರಿಟೀಷ್ ಈಸ್ಟ್‌ ಇಂಡಿಯಾ ಕಂಪನಿ ಆಡಳಿತದ ಅಡಿ ಇದ್ದ ಸಂದರ್ಭದಲ್ಲಿ ಇದರ ನಿರ್ವಹಣೆ ಮದ್ರಾಸ್‌ ಅಧ್ಯಕ್ಷರ ಅಧೀನದಲ್ಲಿತ್ತು. ಕ್ಯಾಲಿಕಟ್‌ ವಿಶ್ವ ಇತಿಹಾಸದಲ್ಲಿ ಪ್ರಮುಖ ಸ್ಥಾನ ಪಡೆದಿದೆ. "ಕಪ್ಪಡ್‌' ಎಂಬ ಹೆಸರಿನಿಂದ (ಕ್ಯಾಲಿಕಟ್‌ನಿಂದ 18 ಕಿ.ಮೀ. ದೂರದಲ್ಲಿರುವ ಪ್ರದೇಶ) ಕರೆಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಅಂದರೆ 1498ರಲ್ಲಿ ಪೋರ್ಚುಗೀಸ್‌ ನಾವಿಕ ವಾಸ್ಕೋಡಗಾಮ ಇಲ್ಲಿಗೆ ಬಂದಿಳಿದ. ಅಂದು ಈತ ಬಂದಿಳಿದ ನೆನಪಿಗೆ ನಿರ್ಮಿಸಿದ ಸ್ಮಾರಕ ಇಂದು ಕ್ಯಾಲಿಕಟ್‌ನ ಅತ್ಯಂತ ಜನಪ್ರಿಯ ಪ್ರವಾಸಿ ತಾಣ. ಜನ ಹುಡುಕಿ ಬರುವ ಸ್ಥಳವೆಂದು ಇದು ಗುರುತಾಗಿದೆ.

ಅತ್ಯಾಕರ್ಷಕ ಸಂಸ್ಕೃತಿ, ಆದರಾತಿಥ್ಯ

ಇವೆಲ್ಲವುಗಳ ಜತೆ ಕ್ಯಾಲಿಕಟ್‌ ತನ್ನ ಅತ್ಯುತ್ತಮ ಸಂಸ್ಕೃತಿ ಹಾಗೂ ಪ್ರವಾಸಿಗರ ಆತಿಥ್ಯದಲ್ಲಿ ಸಾಧಿಸಿದ ಹಿರಿಮೆ ಅತಿ ದೊಡ್ಡದು. ಪ್ರವಾಸಿಗರನ್ನು, ಇತಿಹಾಸ ತಜ್ಞರು, ಸಂಶೋಧಕರು ಹಾಗೂ ಇತರೆ ಕೆಲಸದ ನಿಮಿತ್ತ ಇಲ್ಲಿಗೆ ಬಂದವರನ್ನು ಇದು ಬಹುವಾಗಿ ಮೆಚ್ಚಿಸುತ್ತದೆ. ವಿಶ್ವ ಪ್ರಸಿದ್ಧ ಗಾಯಕ ವಡಕ್ಕನ್‌ ಪಟ್ಟುಕ್ಕಲ್‌ರ ಜನ್ಮಸ್ಥಳ ಕೂಡ ಆಗಿದೆ. ಮುಸ್ಲೀಮರ ನೃತ್ಯ ರೂಪಕ "ಒಪ್ಪನಾ', ಗೀತೆಯಾದ "ಮಪ್ಪಲಪಟ್ಟುಕಲ್‌' ಹಾಗೂ ಗಜಲ್‌ಗಳು ಇಲ್ಲಿ ಅತ್ಯಂತ ಜನಪ್ರಿಯ ಇಸ್ಲಾಮಿಕ್‌ ಕಲಾ ಪ್ರಕಾರಗಳಾಗಿವೆ. ಈ ನಗರವು ಸಾಕಷ್ಟು ಪ್ರಗತಿಪರ ಐತಿಹಾಸಿಕ ಘಟನೆಗಳಿಗೆ ಕಾರಣವಾಗಿದೆ. ಇದರ ಪ್ರಭಾವದಿಂದಲೇ ಅನೇಕ ಜನಪ್ರಿಯ ಸ್ಥಳೀಯ ಬರಹಗಾರರು ಹುಟ್ಟಿಕೊಂಡಿದ್ದಾರೆ. ಸಾಂಸ್ಕೃತಿಕ ಹಿನ್ನಲೆ ಹೊರತಾಗಿ ಇಲ್ಲಿನವರ ಫುಟ್‌ಬಾಲ್‌ ಪ್ರೇಮ ಹಾಗೂ ಆದರಾತಿಥ್ಯ ಮನೋಭಾವ ಮೆಚ್ಚುಗೆಯಾಗುತ್ತದೆ.

ಇದು ಹಲವು ಸಂಸ್ಕೃತಿಗಳ ಮಿಶ್ರಣವಾಗಿ ಕೂಡ ಕಂಡು ಬರುತ್ತದೆ. ಇಲ್ಲಿ ಅರೇಬಿಕ್‌ ಹಾಗೂ ಚೈನಿಸ್‌ ಸಂಸ್ಕೃತಿಯೂ ಗೋಚರಿಸುತ್ತದೆ. ಈ ನಗರವು ಕೋಳಿಕೋಡನ್‌ ಹಲ್ವಾ (ಹಲವು ಹೂವುಗಳ ಮಿಶ್ರಣದಿಂದ ಸಿದ್ಧಪಡಿಸಿದ ಸಿಹಿತಿಂಡಿ ) ತಯಾರಿಕೆಗೆ ಜನಪ್ರಿಯ. ಪ್ರವಾಸಿಗರು ಇಲ್ಲಿ ಬಂದಾಗ ಅತ್ಯಂತ ರುಚಿಕರವಾದ ಈ ತಿಂಡಿಯನ್ನು ಕೊಳ್ಳಲು ಮಾತ್ರ ಮರೆಯುವುದಿಲ್ಲ. ಕ್ಯಾಲಿಕಟ್‌ನಲ್ಲಿ ಸಿದ್ಧಪಡಿಸುವ ಇನ್ನೊಂದು ತಿಂಡಿ "ಮಲಬಾರ್‌ ಬಿರ್ಯಾನಿ'. ಇದು ಕೇವಲ ದೇಶದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಅತ್ಯಂತ ಜನಪ್ರಿಯ. ಜಿಲ್ಲೆಯ ಬಹುತೇಕ ಎಲ್ಲಾ ಹೋಟೆಲ್‌, ರೆಸ್ಟೊರೆಂಟ್‌ಗಳಲ್ಲಿ ಇದು ಎಲ್ಲಾ ದಿನ ಸಿಗುತ್ತದೆ. ಸಮುದ್ರ ಜೀವಿಗಳ ಆಹಾರ, ಪಥಿರಿ, ಬಾಳೆಕಾಯಿ ಚಿಪ್ಸ್‌, ತುಪ್ಪದನ್ನ (ಘಿ ರೈಸ್‌) ಇಲ್ಲಿನ ಇತರೆ ಜನಪ್ರಿಯ ಆಹಾರಗಳು. ಪ್ರವಾಸಿಗರು ಇಲ್ಲಿಗೆ ಬಂದಾಗ ಇದ್ಯಾವುದನ್ನೂ ತಪ್ಪಿಸಿಕೊಳ್ಳುವುದಿಲ್ಲ.

ಸ್ಥಳ ವೀಕ್ಷಣೆಯೆಂಬ ಅತ್ಯದ್ಭುತ ಅನುಭವ

ಕಾಲ್ನಡಿಗೆಯಲ್ಲಿ ತೆರಳಿ ಸ್ಥಳ ವೀಕ್ಷಿಸಲು ಬಯಸುವ ಪ್ರವಾಸಿಗರಿಗೆ ಇಲ್ಲಿ ಆವಕಾಶವ ದೊರೆಯುತ್ತದೆ. ಹೆಜ್ಜೆ ಹೆಜ್ಜೆಗೆ ಒಂದು ಅದ್ಭುತ ಇಲ್ಲಿ ಗೋಚರಿಸುತ್ತದೆ. ಚರ್ಚ್ ಗಳು, ದೇವಾಲಯಗಳು, ಮಾರ್ಗಗಳು, ಸ್ಮಾರಕಗಳು ತಮ್ಮದೇ ಆದ ವಿಶಿಷ್ಟ ಇತಿಹಾಸವನ್ನು ಹೊಂದಿದ್ದು, ಇದನ್ನು ಅರಿಯಲು ಭಾರಿ ಪ್ರಮಾಣದಲ್ಲಿ ವೀಕ್ಷಕರು ಆಗಮಿಸುತ್ತಾರೆ. ಬೈಪೋರೆ ಹಾಗೂ ಕಪ್ಪಡ್‌ ಸಮುದ್ರ ತೀರಗಳು ವಿಹಂಗಮ ನೋಟವನ್ನು ನೀಡುತ್ತಿದ್ದು, ವೀಕ್ಷಕರಿಗೆ ಮಹದಾನಂದ ದಯಪಾಲಿಸುತ್ತವೆ. ಪಕ್ಷಿ ವೀಕ್ಷಕರಿಗೆ ಇಷ್ಟವಾಗುವ ತಾಣ ಕಡಲುಂಡಿ ಪಕ್ಷಿಧಾಮ. ಹಲವು ವಿಧದ ಹಾಗೂ ಸಂಕುಲದ ಪಕ್ಷಿಗಳು ಇಲ್ಲಿ ಸದಾ ಇರುತ್ತವೆ. ತುಷಾರಗಿರಿ ಜಲಪಾತ ಹಾಗೂ ಪೆರುವನ್ನಮುಳಿ ಅಣೆಕಟ್ಟೆಗಳು ಕೌಟುಂಬಿಕ ಪ್ರವಾಸ, ಪಿಕ್‌ನಿಕ್‌ಗೆ ಹೇಳಿ ಮಾಡಿಸಿದ ತಾಣಗಳು. ಒಂದು ದಿನದ ರಜೆ ಕಳೆಯಲು ಇದು ಸೂಕ್ತ ಸ್ಥಳ.

ಕ್ಯಾಲಿಕಟ್‌ನ ಇನ್ನೊಂದು ನೋಡಲೇ ಬೇಕಾದ ತಾಣ ಮಿಥಾಯಿ ತೆರುವು (ಎಸ್‌ಎಂ ಸ್ಟ್ರೀಟ್‌ ಅಂತಲೇ ಬಹು ಜನಪ್ರಿಯವಾಗಿದೆ). ನಗರದ ಅತಿ ಜನಪ್ರಿಯ ಹಾಗೂ ಮುಖ್ಯ ವಾಣಿಜ್ಯ ವ್ಯವಹಾರ ತಾಣವಾಗಿದೆ. ಶಾಪಿಂಗ್‌ಗೆ ಪ್ರವಾಸಿಗರಿಗೆ ಹೇಳಿ ಮಾಡಿಸಿದ ತಾಣ. ಇಲ್ಲಿನ ಇನ್ನಿತರ ಆಕರ್ಷಣೀಯ ಸ್ಥಳಗಳೆಂದರೆ ತಿಕ್ಕೋಟಿ ಲೈಟ್‌ಹೌಸ್‌, ಮಂಚಿರಾಸ್ಕ್ವೇರ್‌, ಪಜಾಸ್ಸಿರಜಾ ಮ್ಯೂಸಿಯಂ, ಕಾಲಿಪೋಯಿಂಕಾ, ಲಯನ್ಸ್‌ ಪಾರ್ಕ್, ತಾಲಿ ದೇವಸ್ಥಾನ, ಕಕ್ಕಾಯಂ, ಕೃಷ್ಣ ಮೆನನ್‌ ಮ್ಯೂಸಿಯಂ ಹಾಗೂ ಪ್ಲಾನಿಟೋರಿಯಂ.

ಅತ್ಯಂತ ಪ್ರಶಸ್ತ ತಾಣ

ಒತ್ತಡದ ದಿನದ ಅಂತ್ಯವನ್ನು ಅತ್ಯಂತ ಸುಮಧುರವಾಗಿ ಕಳೆಯಲು ಕ್ಯಾಲಿಕಟ್‌ ಕಡಲತೀರ ಅತ್ಯಂತ ಪ್ರಶಸ್ತ ಜಾಗ. ಸೂರ್ಯಾಸ್ತದ ಜತೆ ಚಿನ್ನಾಟವಾಡುವ ಸಮುದ್ರದ ಅಲೆಯನ್ನು ನೋಡುವುದೇ ಕಣ್ಣಿಗೆ ಹಬ್ಬ. ಕ್ಯಾಲಿಕಟ್‌ ಆತಿಥ್ಯಕ್ಕೆ ಹೆಸರಾದ ತಾಣ. ಸಾಕಷ್ಟು ರೆಸ್ಟೊರೆಂಟ್‌ಗಳು ಇಲ್ಲಿವೆ. ವಿಶ್ವದರ್ಜೆಯ ಮಾನ್ಯತೆ ಹೊಂದಿರುವ ಇವು ಪ್ರವಾಸಿಗರಿಗೆ ಮಲಬಾರ್‌ ಆಹಾರ ಶೈಲಿಯನ್ನು ಯಥೇಚ್ಛವಾಗಿ ಉಣಬಡಿಸುತ್ತವೆ. ದುಬಾರಿಯಲ್ಲದ ಆಹಾರ ನೀಡುವ ಸಾಕಷ್ಟು ಉತ್ತಮ ಹೋಟೆಲ್‌ಗಳು ಇಲ್ಲಿವೆ. ಕಡಿಮೆ ಬಜೆಟ್‌ನ ಊಟಗಳು ಇಲ್ಲಿ ಸಾಕಷ್ಟು ಕಡೆ ಸಿಗುತ್ತವೆ.

ರಸ್ತೆ, ರೈಲು ಹಾಗೂ ವಾಯು ಮಾರ್ಗಗಳ ಉತ್ತಮ ಸಂಪರ್ಕವನ್ನು ಕ್ಯಾಲಿಕಟ್‌ ಹೊಂದಿದೆ. ದೇಶದ ಬಹುತೇಕ ಪ್ರಮುಖ ನಗರಗಳಿಂದ ಇದು ಉತ್ತಮ ಸಂಪರ್ಕ ವ್ಯವಸ್ಥೆ ಹೊಂದಿದೆ. ಇದರಿಂದಾಗಿಯೇ ಇದು ಪ್ರವಾಸಿಗರ ಅತ್ಯಂತ ನೆಚ್ಚಿನ ತಾಣವಾಗಿ ಬೆಳೆದಿದೆ. ಐತಿಹಾಸಿಕ ಹಿನ್ನೆಲೆ, ಸುದೀರ್ಘ ಕಡಲ ತೀರ, ಸ್ವರ್ಗಸದೃಶ ತಿನಿಸುಗಳು, ಒತ್ತಡ ನಿವಾರಣೆ, ಪ್ರಭಾವಿ ಸಂಸ್ಕೃತಿ, ಉತ್ತಮ ಪರಿಸರ ಒಳಗೊಂಡು ಕ್ಯಾಲಿಕಟ್‌ ಅತ್ಯಂತ ಪ್ರಮುಖ ತಾಣ ಎನಿಸಿಕೊಂಡಿದೆ. ಸಾಕಷ್ಟು ಪ್ರವಾಸಿಗರನ್ನೂ ಈ ಹಿನ್ನೆಲೆಯಲ್ಲಿಯೇ ಆಕರ್ಷಿಸುತ್ತದೆ.

ಕ್ಯಾಲಿಕಟ್ ಪ್ರಸಿದ್ಧವಾಗಿದೆ

ಕ್ಯಾಲಿಕಟ್ ಹವಾಮಾನ

ಉತ್ತಮ ಸಮಯ ಕ್ಯಾಲಿಕಟ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಕ್ಯಾಲಿಕಟ್

 • ರಸ್ತೆಯ ಮೂಲಕ
  ರಾಷ್ಟ್ರೀಯ ಹೆದ್ದಾರಿ 17 ಇದೇ ಮಾರ್ಗವಾಗಿ ಹಾದು ಹೋಗಿರುವುದರಿಂದ ಅತ್ಯುತ್ತಮ ರಸ್ತೆ ಸಂಪರ್ಕವನ್ನು ಕ್ಯಾಲಿಕಟ್‌ ಹೊಂದಿದೆ. ಇಲ್ಲಿನ ಮೊಫ್ಯುಸಲ್‌ ಬಸ್‌ ನಿಲ್ದಾಣದಿಂದ ಸಾಕಷ್ಟು ಬಸ್‌ಗಳು ಲಭ್ಯವಿದೆ. ಕಣ್ಣೂರು, ತೆಲಸ್ಸೆರಿ, ಪಾಲಕ್ಕಾಡ್‌, ಎನರ್ನಾಕುಲಂ ಮತ್ತಿತರ ಕಡೆಗಳಿಂದ ಸಂಪರ್ಕ ಇದೆ. ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಸ್‌ ನಿಲ್ದಾಣ ಕೂಡ ಮೊಫ್ಯುಸಲ್‌ ನಿಲ್ದಾಣಕ್ಕೆ ಸಮೀಪವಾಗಿಯೇ ಇದೆ. ಇಲ್ಲಿಂದ ಬೆಂಗಳೂರು, ಮೈಸೂರು, ವೈನಾಡ್‌ ಮತ್ತಿತರೆಡೆ ಲಕ್ಸುರಿ ಬಸ್‌ ಸೇವೆ ಇದೆ. ಇದಲ್ಲದೇ ಕ್ಯಾಲಿಕಟ್‌ಗೆ ಬೆಂಗಳೂರು, ಮಂಗಳೂರು, ಚೆನ್ನೈ, ತಿರುವನಂತಪುರಂ ಸೇರಿದಂತೆ ಹಲವೆಡೆಗಳಿಂದ ಬಸ್‌ ಸೌಲಭ್ಯ ಇದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಕ್ಯಾಲಿಕಟ್‌ ರೈಲು ನಿಲ್ದಾಣವನ್ನು ಕೂಡ ಹೊಂದಿದೆ. ಎಲ್ಲೆಡೆಯಿಂದ ನಿರಾತಂಕ ಸಂಪರ್ಕ ಇದಕ್ಕಿದೆ. ಕೇರಳ ಹಾಗೂ ದೇಶದ ಇತರೆ ಭಾಗದಿಂದಲೂ ಬರಬಹುದು. ಚೆನ್ನೈ, ಕೊಯಮತ್ತೂರು, ಬೆಂಗಳೂರು, ದಿಲ್ಲಿ, ಹೈದ್ರಾಬಾದ್‌, ತಿರುವನಂತಪುರ, ಕೊಚ್ಚಿ, ಪಾಲಕ್ಕಾಡ್‌, ಕಣ್ಣೂರು ಮತ್ತಿತರ ಭಾಗದಿಂದ ಸಂಪರ್ಕ ಸೌಲಭ್ಯ ಇದೆ. ಇದಲ್ಲದೇ ಬಸ್‌, ಆಟೊರಿಕ್ಷಾ, ಟ್ಯಾಕ್ಸಿ ಸಿಗುತ್ತವೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಕ್ಯಾಲಿಕಟ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಹೊಂದಿದೆ. ಇದನ್ನು ಕಾರಿಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಕೂಡ ಕರೆಯಲಾಗುತ್ತದೆ. ಕ್ಯಾಲಿಕಟ್‌ನಿಂದ 25 ಕಿ.ಮೀ. ದೂರದಲ್ಲಿ ನಿಲ್ದಾಣ ಇದೆ. ದೇಶದ ಎಲ್ಲಾ ಪ್ರಮುಖ ನಗರಗಳ ಜತೆ ಸಂಪರ್ಕ ಹೊಂದಿದೆ. ಮಧ್ಯ ಏಷ್ಯಾ ಖಂಡದ ರಾಷ್ಟ್ರಗಳ ಸಂಪರ್ಕವೂ ಇಲ್ಲಿಗಿದೆ. ವಿಮಾನದಲ್ಲಿ ಬಂದವರು ನಿಲ್ದಾಣದಿಂದ ಬೇರೆಡೆ ತಲುಪಲು ಉತ್ತಮ ಟ್ಯಾಕ್ಸಿ ಸೌಲಭ್ಯ ಇದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
15 Aug,Mon
Return On
16 Aug,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
15 Aug,Mon
Check Out
16 Aug,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
15 Aug,Mon
Return On
16 Aug,Tue