Search
  • Follow NativePlanet
Share
ಮುಖಪುಟ » ಸ್ಥಳಗಳು » ಕ್ಯಾಲಿಕಟ್ » ಆಕರ್ಷಣೆಗಳು » ಮಂಚಿರಾ ಸ್ಕ್ವೇರ್‌

ಮಂಚಿರಾ ಸ್ಕ್ವೇರ್‌, ಕ್ಯಾಲಿಕಟ್

1

ಮಂಚಿರಾ ಸ್ಕ್ವೇರ್‌ ಅನ್ನುವುದು ಕ್ಯಾಲಿಕಟ್‌ನ ಅತ್ಯಾಕರ್ಷಕ ತಾಣ. 'ಮಂಚಿರಾ' ಹೆಸರಿನ ಮಾನವ ನಿರ್ಮಿತ ನೀರಿನ ಕೊಳ ಇಲ್ಲಿನ ಪ್ರಮುಖ ಆಕರ್ಷಣೆ. 3.5 ಎಕರೆ ವಿಸ್ತೀರ್ಣ ಪ್ರದೇಶವನ್ನು ಈ ಕೊಳ ಆವರಿಸಿದೆ. ನೈಸರ್ಗಿಕ ನೀರಿನ ಚಿಲುಮೆಯಿಂದ ಸಮೃದ್ಧವಾಗಿದೆ. ಜನ ಇಲ್ಲಿಗೆ ತಮ್ಮ ಸಂಜೆಯ ಅವಧಿ ಕಳೆಯಲು ಬರುತ್ತಾರೆ. ನಗರ ಜೀವನದ ಒತ್ತಡ ನಿವಾರಿಸಲು ಇದು ಸರಿಯಾದ ತಾಣ.

ಈ ಕೊಳದ ನಿರ್ಮಾಣ 14ನೇ ಶತಮಾನದಲ್ಲಿ ಆಗಿದ್ದು ಎನ್ನಲಾಗುತ್ತಿದೆ. ಕ್ಯಾಲಿಕಟ್‌ನ್ನು ಅಂದು ಆಳುತ್ತಿದ್ದ ಜಮೋರಿನ್‌ ಮನಾ ವಿಕ್ರಮಾ ಇದನ್ನು ನಿರ್ಮಿಸಿದ ಎನ್ನಲಾಗುತ್ತಿದೆ. ಇದು ರಾಜನ ಸ್ನಾನಕ್ಕಾಗಿ ನಿರ್ಮಿಸಿದ ಕೊಳವಾಗಿತ್ತು. ಇತಿಹಾಸದ ಹೇಳಿಕೆಗಳ ಪ್ರಕಾರ ಹಾಗೂ ಕಲ್ಲಿನ ಮೇಲೆ ಕೆತ್ತಿದ ಲಿಪಿಗಳ ಅಧ್ಯಯನದಿಂದ ತಿಳಿದು ಬರುವ ಅಂಶವೇನೆಂದರೆ, ಇದೇ ಮಾದರಿಯ ಎರಡು ಕೊಳವನ್ನು ಅಂದು ನಿರ್ಮಿಸಲಾಗಿತ್ತು. 19ನೇ ಶತಮಾನದ ನಂತರ ಈ ಕೊಳಗಳಲ್ಲಿ ಸಾರ್ವಜನಿಕರ ಸ್ನಾನ, ಬಟ್ಟೆ ತೊಳೆಯುವುದು ಸೇರಿದಂತೆ ಇತರೆ ಬಳಕೆಯನ್ನು ನಿರ್ಬಂಧಿಸಲಾಯಿತು. ಇದನ್ನು ಕೇವಲ ನಗರದ ಕುಡಿಯುವ ನೀರಿನ ಬಳಕೆಗೆ ಮೀಸಲಿಡಲಾಯಿತು.

ಇಂದು ಈ ಟ್ಯಾಂಕ್‌ ಜತೆ ಉದ್ಯಾನವೂ ಸೇರ್ಪಡೆಯಾಗಿದೆ. 1994ರಲ್ಲಿ ಇದನ್ನು ಕ್ಯಾಲಿಕಟ್‌ ಪಾಲಿಕೆ ನಿರ್ಮಿಸಿದೆ. ಇಲ್ಲಿನ ಉದ್ಯಾನ ಪ್ರವಾಸಿಗರ ಅನುಕೂಲಕ್ಕಾಗಿ ಲಾನ್‌, ಹಸಿರಿನಿಂದ ಆವರಿಸಿದ ಪ್ರದೇಶ, ಸಂಗೀತ ಕಾರಂಜಿ, ಹೇರಳ ಮರಗಳಿಂದ ಆವೃತ್ತವಾಗಿದೆ. ಇದರ ಪಕ್ಕದಲ್ಲಿಯೇ ಎಕರೆಗಳಷ್ಟು ವಿಸ್ತಾರವಾದ ಪ್ರದೇಶದಲ್ಲಿ ಸಾರ್ವಜನಿಕ ಗ್ರಂಥಾಲಯವಿದೆ. ಇಲ್ಲಿ ಟಿಪ್ಪು ಸುಲ್ತಾನನ ಆಕರ್ಷಕ ಕಲಾಕೃತಿ ಇದೆ. ಅತ್ಯಾಕರ್ಷಕ ವಾಸ್ತುಶಿಲ್ಪಕ್ಕೆ ಕೂಡ ಮಂಚಿರಾ ಸ್ಕ್ವೇರ್‌ ಹೆಸರಾಗಿದೆ. ಮಿಥಾಯಿ ತೆರುವು ಅಕಾ, ಎಸ್‌ಎಂ ಸ್ಟ್ರೀಟ್‌ ಇದಕ್ಕೆ ಅತ್ಯಂತ ಸಮೀಪದಲ್ಲಿವೆ.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue