Search
  • Follow NativePlanet
Share
ಮುಖಪುಟ » ಸ್ಥಳಗಳು » ಕ್ಯಾಲಿಕಟ್ » ಆಕರ್ಷಣೆಗಳು » ತಾಲಿ ದೇವಸ್ಥಾನ

ತಾಲಿ ದೇವಸ್ಥಾನ, ಕ್ಯಾಲಿಕಟ್

2

ಕೇರಳದ ಅತ್ಯಂತ ಪುರಾತನ ದೇವಾಲಯಗಳಲ್ಲಿ ತಾಲಿ ದೇವಸ್ಥಾನ ಕೂಡ ಒಂದು. ಕ್ಯಾಲಿಕಟ್‌ ನಗರ ಕೇಂದ್ರಭಾಗದಲ್ಲಿದೆ. ಇದು ಮಲಬಾರ್‌ ಹಾಗೂ ಕ್ಯಾಲಿಕಟ್‌ನ ಇತಿಹಾಸದ ವಿಶೇಷ ಅಂಶವನ್ನು ವಿವರಿಸುತ್ತದೆ. ಈ ದೇವಾಲಯವು ಜಮೋರಿನ್ಸ್‌ ಹಾಗೂ ರೇವತಿ ಪಟ್ಟತಾನಂ (ಬುದ್ಧಿವಂತರ ಒಂದು ಸಮೂಹ) ಸೇರಿ ನಿರ್ಮಿಸಿದೆ.

ಇದು ಶಿವನ ದೇವಾಲಯವಾಗಿದೆ. ಸಾವಿರಾರು ಭಕ್ತರು, ಧಾರ್ಮಿಕ ವ್ಯಕ್ತಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ. ವಿಶೇಷ ವಿನ್ಯಾಸ ಬಳಸಿ ಇದನ್ನು ನಿರ್ಮಿಸಲಾಗಿದೆ. ಕಂಬಗಳಿಗೆ ದೀಪಗಳ ಅಲಂಕಾರ ಇದೆ. ಬೃಹತ್‌ ಪ್ರವೇಶ ದ್ವಾರ, ಆನೆಗಳ ಮೂರ್ತಿ ನಿಲ್ಲಿಸುವ ಆವರಣ ಇತ್ಯಾದಿಗಳು ಗಮನ ಸೆಳೆಯುತ್ತವೆ. ದೇವಾಲಯದ ಆವರಣವನ್ನು ಸಾಕಷ್ಟು ಮ್ಯೂರಲ್‌ ಪೇಂಟಿಂಗ್‌ನಿಂದ ಅಲಂಕರಿಸಲಾಗಿದೆ. ಇದನ್ನು ಮರ ಹಾಗೂ ಕಲ್ಲಿನಿಂದ ಕೆತ್ತಿ ಸಿದ್ಧಪಡಿಸಲಾಗಿದೆ. ಇದನ್ನು ಕೇರಳದ ಅಪರೂಪದ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಿರುವುದು ವಿಶೇಷ.

ನಿತ್ಯ ದೇವಾಲಯದಲ್ಲಿ ಒಂದಲ್ಲಾ ಒಂದು ಉತ್ಸವ ನಡೆಯುವುದರಿಂದ ಭಾರಿ ಸಂಖ್ಯೆಯಲ್ಲಿ ಸ್ಥಳೀಯ ಭಕ್ತರು ಆಗಮಿಸುತ್ತಾರೆ. ಮಲಯಾಳಂ ಹೊಸ ವರ್ಷಾಚರಣೆಗೆ ನಡೆಯುವ ಸಂಭ್ರಮ ಇಲ್ಲಿನ ದೊಡ್ಡ ಆಚರಣೆ. 'ವಿಶು' ಹೆಸರಿನಲ್ಲಿ ಆಚರಿಸುವ ಈ ಉತ್ಸವ ಏಳು ದಿನಗಳ ಕಾಲ ನಡೆಯುತ್ತದೆ. ಆ ಸಂದರ್ಭದಲ್ಲಿ ದೇವಾಲಯಕ್ಕೆ ಭೇಟಿ ನೀಡುವವರಿಗೆ ಮನಃಶಾಂತಿ ಸಿಗುತ್ತದೆ ಎನ್ನುವುದು ಭಕ್ತ ನಂಬಿಕೆ. ಇದರಿಂದ ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಾಲಯದಲ್ಲಿ ಸೇರುತ್ತಾರೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu