ಬೆಕಲ್ : ಪ್ರಶಾಂತ ಸಾಗರದ ಬಳಿಯ ಪ್ರವಾಸಿ ತಾಣ

ಭಾರತದಲ್ಲಿ ಧಾರ್ಮಿಕ ದೇವಾಲಯಗಳು, ಮಸೀದಿ, ಚರ್ಚ್ ಗಳು ಎಷ್ಟಿವೆಯೋ ಅಷ್ಟೇ ಪ್ರಮಾಣದಲ್ಲಿ ಕೋಟೆ ಕೊತ್ತಲಗಳನ್ನು ಕಾಣಬಹುದು. ಶತ್ರುಗಳಿಂದ ರಕ್ಷಣೆಗಾಗಿ, ಸಾಮ್ರಾಜ್ಯದ ಸಂಪತ್ತನ್ನು ಕಾಪಾಡುವುದಕ್ಕಾಗಿ ಹಿಂದೆ ರಾಜರುಗಳು ಕೋಟೆಯನ್ನು ಕಟ್ತಿಸುತ್ತಿದ್ದರು. ಈ ಕೋಟೆಗಳು ತಮ್ಮದೇ ಆದ ವೈಶಿಷ್ಟ್ಯತೆಗಳನ್ನು ಹೊಂದಿರುತ್ತದೆ. ಇಂದಿನ ಜಮಾನಕ್ಕೆ ಸವಾಲು ಹಾಕುವ ರೀತಿಯಲ್ಲಿ ಅದನ್ನು ನಿರ್ಮಿಸಲಾಗಿರುತ್ತದೆ. ಅಂತಹ ಒಂದು ಅದ್ಭುತ ಕುತೂಹಲಗಳನ್ನೊಳಗೊಂಡ ಕೋಟೆ ಕೇರಳ ರಾಜ್ಯದ ಬೆಕಲ್ ಕೋಟೆ. ಇಲ್ಲಿಗೆ ಯಾವುದೇ ಸಮಯದಲ್ಲಾದರೂ ಪ್ರವಾಸಕ್ಕಾಗಿ ನೀವು ಆಗಮಿಸಬಹುದು. ನಿಮ್ಮ ಪ್ರಯಾಣವನ್ನು ಪರಿಪೂರ್ಣಗೊಳಿಸಲು ಈ ಸಾರಿ ನಿಮ್ಮ ಪ್ರವಾಸದ ಆಯ್ಕೆಯ ಸ್ಥಳ ಬೆಕಲ್ ಪಟ್ಟಣವಾಗಿರಲಿ. ಈ ಸ್ಥಳದ ಬಗ್ಗೆ ಕಿರು ನೋಟ ಇಲ್ಲಿದೆ.

ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಪಲಿಕ್ಕರೆ ಎಂಬಲ್ಲಿ ಬೆಕಲ್ ಎಂಬ ಸಣ್ಣ ಪಟ್ಟಣವೊಂದನ್ನು ಕಾಣಬಹುದು. ಈ ಪಟ್ಟಣ ಶಾಂತವಾದ, ಅರೇಬಿಯನ್ ಸಮುದ್ರದ ಕರಾವಳಿ ತೀರದಲ್ಲಿದೆ. ಬೆಕಲ್ ಎಂಬ ಪದ ಹುಟ್ಟಿದ್ದು ’ಬಲೈಕುಲಂ’ ಎಂಬ ಶಬ್ದದಿಂದ ಇದರ ಅರ್ಥ ದೊಡ್ಡ ಅರಮನೆ ಎಂಬುದು. ಸ್ಥಳೀಯರ ನಂಬಿಕೆಯ ಪ್ರಕಾರ ಈ ಸ್ಥಳದಲ್ಲಿ ಮೊದಲು ದೊಡ್ದ ಅರಮನೆಯಿತ್ತು. ಇಲ್ಲಿನ ಗುರುತಿಸುವಂತಹ ಹಾಗೂ ಪ್ರಸಿದ್ಧವಾದ ಆಕರ್ಷಣೆಯಿಂದಾಗಿ ಬೆಕಲ್ ಹೆಸರುವಾಸಿ ಪ್ರವಾಸಿ ತಾಣ ಎನಿಸಿದೆ. ಇಲ್ಲಿನ ಮೂಲೆ ಮೂಲೆಯಲ್ಲಿಯೂ ಒಂದೊಂದು ವಿಶೇಷತೆಗಳನ್ನು ಆಕರ್ಷಣೆಗಳನ್ನು ಕಾಣಬಹುದಾಗಿದ್ದು ಪ್ರವಾಸಿಗರ ಆಕರ್ಷಣೆಯೆ ಕೇಂದ್ರಬಿಂದುವಾಗಿದೆ. ಬೆಕಲ್ ಇಲ್ಲಿನ ಔಪಚಾರಿಕತೆಗೂ ಹೆಸರುವಾಸಿ. ಇಲ್ಲಿಗೆ ಪ್ರವಾಸಕ್ಕಾಗಿ ಬಂದಿದ್ದರೆ  ಇಲ್ಲಿನ ಸ್ಥಳೀಯರಿಂದ ತಯಾರಿಸಲಾಗುವ ’ಪಾಯಸ’ ಸಿಹಿ ಖಾದ್ಯದ ರುಚಿ ಣೊಡಲು ಮರೆಯಬೇಡಿ ! ಇಲ್ಲಿನ ಪ್ರತಿಯೊಂದು ದೇವಾಲಯವೂ ಬೇರೆ ಬೇರೆ ಕುಟುಂಬಗಳಿಗೆ ಸೇರಿದ್ದಾಗಿದ್ದು ಅಲ್ಲಿ ಪೂಜಿಸಲ್ಪಡುವ ದೇವತೆಗಳೂ ಬೇರೆಯೆ. ವರ್ಷದ ಆರಂಭದ ತಿಂಗಳುಗಳಿಅಲ್ಲಿಯೇ ಇಲ್ಲಿಗೆ ಬಂದರೆ ಇಲ್ಲಿನ ’ತೆಯ್ಯಂ’ ಪ್ರದರ್ಶನವನ್ನು ನೋಡಬಹುದು. ಬೆಕಲ್ ಕೋಟೆಗೆ ಪ್ರಾಚ್ಯಶಾಸ್ತ್ರ ಹಾಗೂ ಐತಿಹಾಸಿಕ ಪ್ರಾಮುಖ್ಯತೆಯನ್ನು ನೀಡಲಾಗಿದೆ.

ಈ ಕೋಟೆಯು ದೊಡ್ಡ ಕೋಟೆಯಾಗಿದ್ದು,  ಭಾರತೀಯ ಪ್ರಾಚ್ಯಶಾಸ್ತ್ರ ಇಲಾಖೆಯಿಂದ ಸಂರಕ್ಷಿಸಲ್ಪಡುತ್ತಿದೆ. ಬೆಕಲ್ ಕೋಟೆಯು ತನ್ನದೇ ಆದ ಮೌಲ್ಯವನ್ನು ಹೊಂದಿದ್ದು ಇಲ್ಲಿನ ಅರೇಬಿಯನ್ ಸಮುದ್ರದ ನೋಟ ಅತ್ಯದ್ಭುತ. ಬೆಕಲ್ ಕೋಟೆಯ ಹತ್ತಿರ ಪ್ರಯಾಣೀಕರ ಬಂಗಲೆಯಿದ್ದು ಇದು ಕೇರಳ ರಾಜ್ಯದ ಪಿ.ಡಬ್ಲ್ಯೂ.ಡಿ ಇಲಾಖೆಯಿಂದ ಸಂರಕ್ಷಿಸಲ್ಪಡುತ್ತದೆ. ಇಲ್ಲಿನ ಇನ್ನೂ ಅನೇಕ ಆಕರ್ಷಣೆಗಳೆಂದರೆ ದೇವಾಲಯಗಳು, ಹಾಗೂ ಅತ್ಯಂತ ಹಳೆಯದಾದ ಟಿಪ್ಪು ಸುಲ್ತಾನನಂದ ನಿರ್ಮಿಸಲ್ಪಟ್ಟ ಮಸೀದಿ ಒಂದು ಚಿಕ್ಕ ಪಟ್ಟಣದಲ್ಲಿರುವ ಕೋಟೆ ಐತಿಹಾಸಿಕ ಪ್ರಾಮುಖ್ಯತೆಯನ್ನು ಗಳಿಸಿದೆ.

Please Wait while comments are loading...