Search
  • Follow NativePlanet
Share
ಮುಖಪುಟ » ಸ್ಥಳಗಳು » ಬೇಕಲ್ » ಹವಾಮಾನ

ಬೇಕಲ್ ಹವಾಮಾನ

ಬೆಕಲ್ ಪಟ್ಟಣವು ವರ್ಷವಿಡಿ ಮಿಶ್ರಣ ಹಮಾಮಾನ ಪರಿಸ್ಥಿಯನ್ನು ಹೊಂದಿದೆ. ಹೆಚ್ಚಿನ ಸಮಯ ಹವಾಗುಣವು ಸಮಶೀತೋಷ್ಣವಾಗಿರುತ್ತದೆ. ಇಲ್ಲಿನ ಸೌಂದರ್ಯದಲ್ಲಿ ನಿಮ್ಮನ್ನು ನೀವು ಮರೆಯಲು ಪ್ರಶಸ್ತವಾದ ಸಮಯವೆಂದರೆ ಅದು ಅಕ್ಟೋಬರ್ ನಿಂದ ಮಾರ್ಚ್ ತಿಂಗಳು. ಈ ಸಮಯದಲ್ಲಿ ಇಲ್ಲಿನ ವಾಯುಗುಣವು ತಂಪಾಗಿದ್ದು ಶುಷ್ಕವಾಗಿರುತ್ತದೆ. ಈ ಸಮಯದಲ್ಲಿ ಪ್ರವಾಸ ಹಾಗೂ ಪ್ರಕೃತಿ ವೀಕ್ಷಣೆಗೆ ಸರಿಯಾದ ಸಮಯ. ಹೆಚ್ಚಾಗಿ ಎಲ್ಲಾ ಪ್ರವಾಸಿಗರೂ ಬಿಸಿಲಿನ ನಡುವೆಯೂ ಎಪ್ರೀಲ್ ಹಾಗೂ ಮೇ ತಿಂಗಳುಗಳಲ್ಲಿ ಬೆಕಲ್ ಗೆ ಪ್ರವಾಸಕ್ಕಾಗಿ ಬರುತ್ತಾರೆ. ನೀವೇನಾದರೂ ಮಳೆಯನ್ನು ಇಷ್ಟಪಡುವುದಾದರೆ ಬೆಕಲ್ ಗೆ ಜೂನ್ ನಿಂದ ಸೆಪ್ಟಂಬರ್ ತಿಂಗಳುಗಳಲ್ಲಿ ನಿಮ್ಮ ಪ್ರಯಾಣವನ್ನು ಕೈಗೊಳ್ಳಿ.

ಬೇಸಿಗೆಗಾಲ

ಮಾರ್ಚ್ ನಲ್ಲಿ ಪ್ರಾರಂಭವಾದ ಬೇಸಿಗೆ ಕಾಲವು ಮೇ ತಿಂಗಳಲ್ಲಿ ಕೊನೆಗೊಳ್ಳುತ್ತವೆ. ಬೇಸಿಗೆಯಲ್ಲಿ ಬೆಕಲ್ ನಲ್ಲಿ ಅತ್ಯಧಿಕ ಬಿಸಿಲಿದ್ದು, ಈ ಸಮಯದಲ್ಲಿ ಗರಿಷ್ಠ 36 ಡಿ. ಸೆ. ತಾಪಮಾನವಿರುತ್ತದೆ. ಆದರೆ ಬಿಸಿಲಿನಿಂದ ಉಂಟಾಗುವ ಕಂದು ಬಣ್ಣವನ್ನು ಅನುಭವಿಸಲು ಇಲ್ಲಿಗೆ ಬರಲೆ ಬೇಕು.

ಮಳೆಗಾಲ

ಬೆಕಲ್ ನಲ್ಲಿ ಜೂನ್ ತಿಂಗಳಿನಲ್ಲಿ ಆರಂಭವಾದ ಮಳೆಯು ಸೆಪ್ಟಂಬರ್ ವರೆಗೆ ಮುಂದುವರಿಯುತ್ತದೆ. ನೈಋತ್ಯ ಮಾನ್ಸೂನ್ ಮಾರುತದಿಂದಾಗಿ ಜೂನ್ ತಿಂಗಳ ಮೊದಲ ವಾರ ಭಾರಿ ಮಳೆ ಸುರಿಯುತ್ತದೆ. ಈ ಸಮಯದಲ್ಲಿ  ಬೆಕಲ್ ಪ್ರದೇಶದಲ್ಲಿ ಸುಮಾರು ಶೇಕಡಾ 90 ರಷ್ಟು ಆರ್ದ್ರತೆ ಇರುತ್ತದೆ. ಈಶಾನ್ಯ ಮಾನ್ಸೂನ್ ಸುಮಾರು ಅಕ್ಟೋಬರ್ ವೆಳೆಗೆ ಆರಂಭವಾಗುತ್ತದೆ.

ಚಳಿಗಾಲ

ಚಳಿಗಾಲದಲ್ಲಿ ಬೆಕಲ್ ನ ಹವಾಮಾನವು ಮಧ್ಯಮ ಶುಷ್ಕ ಹಾಗೂ ತಂಪಾಗಿರುತ್ತದೆ. ಚಳಿಗಾಲವು ಡಿಸೆಂಬರ್ ನಲ್ಲಿ ಪ್ರಾರಂಭವಾಗಿ ಫೆಬ್ರವರಿಯಲ್ಲಿ ಕೊನೆಗೊಳ್ಳುತ್ತದೆ. ಈ ಸಮಯದಲ್ಲಿ ವಾತಾವರಣವು ಅತ್ಯಂತ ಪ್ರಶಾಂತವಾಗಿರುತ್ತದೆ. ಈ ಸಮಯದಲ್ಲಿ ತಾಪಮಾನವು 20 ಡಿ.ಸೆ ನಷ್ಟು ಕಡಿಮೆಯಾಗಿರುತ್ತದೆ.