Search
 • Follow NativePlanet
Share
ಮುಖಪುಟ » ಸ್ಥಳಗಳು» ಕಲ್ಪೆಟ್ಟಾ

ಕಲ್ಪೆಟ್ಟಾ: ನಿಸರ್ಗ ಸೌಂದರ್ಯದ ಖನಿ

26

ಕಲ್ಪೆಟ್ಟಾ ಒಂದು ಚಿಕ್ಕ ಪಟ್ಟಣವಾಗಿದೆ. ಅತ್ಯಾಕರ್ಷಕ ಕಾಫಿ ತೋಟಗಳಿಂದಾಗಿ ಇದು ಕಾಫಿ ನಾಡಾಗಿ ಹೆಸರುವಾಸಿಯಾಗಿದೆ. ಆಕರ್ಷಕ ಬೆಟ್ಟಗಳ ಮಧ್ಯೆ ಕಾಫಿ ತೋಟಗಳಿದ್ದು, ನೋಡುಗರ ಕಣ್ಮನ ಸೂರೆಗೊಳ್ಳುತ್ತದೆ. ಸಮುದ್ರ ಮಟ್ಟದಿಂದ 780 ಮೀಟರ್‌ ಎತ್ತರದಲ್ಲಿರುವ ಈ ಪ್ರದೇಶ ವೈನಾಡು ಜಿಲ್ಲೆ ವ್ಯಾಪ್ತಿಗೆ ಬರುತ್ತದೆ. ನಿಸರ್ಗ ಪ್ರಿಯರಿಗೆ ಇದೊಂದು ಪ್ರಶಸ್ತ ತಾಣ. ಇದರೊಂದಿಗೆ ಅತ್ಯುತ್ತಮವಾಗಿ ವಿನ್ಯಾಸಪಡಿಸಿದ ಪ್ರಾರ್ಥನಾ ಮಂದಿರಗಳು ಇಲ್ಲಿ ಸಾಕಷ್ಟಿದ್ದು  ಭಕ್ತರು ಅಪಾರ ಸಂಖ್ಯೆಯಲ್ಲಿ ಪ್ರಾರ್ಥನೆ ಸಲ್ಲಿಸಲು ಆಗಮಿಸುತ್ತಾರೆ.

ಸಾಕಷ್ಟು ದೇವಾಲಯಗಳು ಈ ಭಾಗದಲ್ಲಿದ್ದು, ಇದೊಂದು ಹಿಂದು ಧಾರ್ಮಿಕ ತಾಣವಾಗಿಯೂ ಜನಪ್ರಿಯವಾಗಿದೆ. ಇದರಲ್ಲೇ ಅತ್ಯಂತ ಪ್ರಮುಖ ದೇವಾಲಯಗಳೆಂದರೆ ಗ್ರಾಮಮ್ಮ ದೇವಿ ದೇವಾಲಯ, ಶ್ರೀ ಮಹಾ ವಿಷ್ಣು ದೇವಸ್ಥಾನ, ಅಯ್ಯಪ್ಪ ಸ್ವಾಮಿ ದೇವಾಲಯ. ವಿಷ್ಣುವಿಗೆ ಮೀಸಲಾಗಿರುವುದು ಮಹಾ ವಿಷ್ಣು ದೇವಾಲಯ. ಈ ಭಾಗದ ಕೆಲ ವಿಷ್ಣು ದೇವಾಲಯಗಳಲ್ಲಿ ಇದೂ ಒಂದು. ಸ್ಥಳೀಯ ಮಹಿಳೆಯರ ಪಾಲಿನ ಆರಾಧ್ಯ ದೈವ ಗ್ರಾಮಮ್ಮ ದೇವಿ. ಈ ದೇವಾಲಯಕ್ಕೆ ಸಾಕಷ್ಟು ಜನ ಭೇಟಿ ನೀಡುತ್ತಾರೆ. ಅಯ್ಯಪ್ಪ ಸ್ವಾಮಿಗೆ ಸಂಬಂಧಿಸಿದ ದೇವಾಲಯವು ಅತ್ಯಂತ ಪ್ರಮುಖ ದೇವಸ್ಥಾನವಾಗಿದ್ದು ಕಲ್ಪೆಟ್ಟಾದ ಹೊರವಲಯದಲ್ಲಿದೆ. ಈ ಭಾಗದಲ್ಲಿ ಸಾಕಷ್ಟು ಜೈನ ದೇವಾಲಯಗಳಿವೆ. ಇದರಲ್ಲಿ ಪುಲ್ಲಿಯಾರಮಾಲಾ ಜೈನ್‌ ದೇವಸ್ಥಾನ ಕೂಡ ಒಂದು. ಇದು ಈ ಭಾಗದ ಅತ್ಯಂತ ಜನಪ್ರಿಯ ದೇವಾಲಯವಾಗಿದೆ. ಈ ದೇವಾಲಯಗಳ ಹೊರತಾಗಿ ಇಲ್ಲಿ 300 ವರ್ಷ ಹಳೆಯದಾದ ಮುಸಲ್ಮಾನರ ಜನಪ್ರಿಯ ತಾಣ ವರಂಬೆಟ್ಟಾ ಮಸೀದಿ ಇದೆ.  ಈ ಪವಿತ್ರ ತಾಣದ ಜತೆ ಇಲ್ಲಿನ ಮೀನುಮುಟ್ಟಾ, ಸೂಚಿಪ್ಪರಾ ಹಾಗೂ ಕಾಂತಪರಾ ಎಂಬಲ್ಲಿ ಜಲಪಾತಗಳು ಇವೆ. ಈ ಜಲಪಾತಗಳು ಹೊಂದಿಕೆಯಾಗುವ ತಾಣಗಳಲ್ಲಿಯೇ ಇವೆ. ಈ ಎಲ್ಲಾ ಆಕರ್ಷಕ ತಾಣಗಳು ನೈಸರ್ಗಿಕ ಸೌಂದರ್ಯದಿಂದ ಕಂಗೊಳಿಸುತ್ತಿವೆ. ಹೇರಳ ನಿಸರ್ಗ ಸಂಪತ್ತಿನ ನಡುವೆ ಇವುಗಳನ್ನು ಕಾಣಬಹುದಾಗಿದೆ.

ಈ ಎಲ್ಲಾ ಕಾರಣದಿಂದ ಕಲ್ಪೆಟ್ಟಾ ಜನಪ್ರಿಯ ಪ್ರವಾಸಿ ತಾಣವಾಗಿ ಗುರುತಾಗಿದೆ. ವರ್ಷದ ಎಲ್ಲಾ ಸಂದರ್ಭದಲ್ಲಿಯೂ ಭೇಟಿ ನೀಡಲು ಅನುಕೂಲಕರವಾದ ವಾತಾವರಣ ಇಲ್ಲಿದೆ. ಆದರೂ ಇಲ್ಲಿಗೆ ಚಳಿಗಾಲದಲ್ಲಿ ಭೇಟಿ ನೀಡುವುದು ಉತ್ತಮ. ರಸ್ತೆ, ರೈಲು, ವಾಯು ಮಾರ್ಗದ ಮೂಲಕ ಈ ಪ್ರದೇಶವನ್ನು ತಲುಪಬಹುದಾಗಿದೆ.

ಕಲ್ಪೆಟ್ಟಾ ಪ್ರಸಿದ್ಧವಾಗಿದೆ

ಕಲ್ಪೆಟ್ಟಾ ಹವಾಮಾನ

ಕಲ್ಪೆಟ್ಟಾ
25oC / 76oF
 • Partly cloudy
 • Wind: SW 3 km/h

ಉತ್ತಮ ಸಮಯ ಕಲ್ಪೆಟ್ಟಾ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಕಲ್ಪೆಟ್ಟಾ

 • ರಸ್ತೆಯ ಮೂಲಕ
  ಕಲ್ಪೆಟ್ಟಾವು ಕೋಳಿಕೋಡ್ ‌- ಮೈಸೂರು ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್‌ 212) ಸಂಪರ್ಕವನ್ನು ಹೊಂದಿದೆ. ಕ್ಯಾಲಿಕಟ್‌ ಸೇರಿದಂತೆ ಸುತ್ತಲಿನ ಸಾಕಷ್ಟು ನಗರಗಳಿಂದ ಇಲ್ಲಿಗೆ ಉತ್ತಮ ರಸ್ತೆ ಸಂಪರ್ಕ ಇದೆ. ಇದಲ್ಲದೇ ಬೆಂಗಳೂರು, ಮೈಸೂರು, ಮಂಗಳೂರಿನಿಂದಲೂ ಇಲ್ಲಿಗೆ ಉತ್ತಮ ಸಂಪರ್ಕ ಇದೆ. ಎಲ್ಲೆಡೆಯಿಂದ ಹವಾನಿಯಂತ್ರಿತ ಹಾಗೂ ಹವಾನಿಯಂತ್ರಣ ರಹಿತ ಬಸ್‌ ಸೌಲಭ್ಯ ಇದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಇದಕ್ಕೆ ಹತ್ತಿರದ ರೈಲು ನಿಲ್ದಾಣ ಕೂಡ ಕ್ಯಾಲಿಕಟ್‌ ಆಗಿದೆ. 42 ಕಿ.ಮೀ. ದೂರದಲ್ಲಿ ಈ ನಿಲ್ದಾಣ ಇದೆ. ಇಲ್ಲಿಂದ ಟ್ಯಾಕ್ಸಿ ಅಥವಾ ಬಸ್‌ ಮೂಲಕ ಕಲ್ಪೆಟ್ಟಾಗೆ ಆಗಮಿಸಬಹುದು.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಕಲ್ಪೆಟ್ಟಾಗೆ ಅತ್ಯಂತ ಸಮೀಪದ ವಿಮಾನ ನಿಲ್ದಾಣ ಕ್ಯಾಲಿಕಟ್‌ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್. ಇಲ್ಲಿಂದ 42 ಕಿ.ಮೀ. ದೂರದಲ್ಲಿದೆ. ಈ ವಿಮಾನ ನಿಲ್ದಾಣವು ದೇಶದ ಎಲ್ಲಾ ಭಾಗದಿಂದ ಮಾತ್ರವಲ್ಲ ವಿದೇಶಗಳಿಂದಲೂ ಉತ್ತಮ ಸಂಪರ್ಕ ಹೊಂದಿದೆ. ಕಲ್ಪೆಟ್ಟಾಗೆ ಈ ನಿಲ್ದಾಣದಿಂದ ಟ್ಯಾಕ್ಸಿ ಪಡೆದು ಬರಬಹುದಾಗಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
11 Aug,Tue
Return On
12 Aug,Wed
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
11 Aug,Tue
Check Out
12 Aug,Wed
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
11 Aug,Tue
Return On
12 Aug,Wed
 • Today
  Kalpetta
  25 OC
  76 OF
  UV Index: 6
  Partly cloudy
 • Tomorrow
  Kalpetta
  22 OC
  72 OF
  UV Index: 5
  Patchy rain possible
 • Day After
  Kalpetta
  22 OC
  72 OF
  UV Index: 5
  Patchy light rain with thunder