Search
  • Follow NativePlanet
Share
ಮುಖಪುಟ » ಸ್ಥಳಗಳು » ಕಲ್ಪೆಟ್ಟಾ » ಹವಾಮಾನ

ಕಲ್ಪೆಟ್ಟಾ ಹವಾಮಾನ

ವರ್ಷದ ಎಲ್ಲಾ ಕಾಲವೂ ತಂಪು ಹವಾಮಾನ ಇರುವುದರಿಂದ ಪ್ರವಾಸಿಗರನ್ನು ಕಲ್ಪೆಟ್ಟಾ ಸದಾ ಕೈಬೀಸಿ ಕರೆಯುತ್ತಿರುತ್ತದೆ. ಆದರೂ ಚಳಿಗಾಲ ಭೇಟಿ ನೀಡಲು ಸೂಕ್ತ ಸಮಯ. ಬೇಸಿಗೆ ಹಾಗೂ ಮಳೆಗಾಲ ಸಾಮಾನ್ಯವಾಗಿ ಭೇಟಿಗೆ ಉತ್ತಮ ಸಮಯವಲ್ಲ ಎಂಬುದು ಇಲ್ಲಿನ ಸ್ಥಿತಿ ಹೇಳುತ್ತದೆ. 

ಬೇಸಿಗೆಗಾಲ

ಕಲ್ಪೆಟ್ಟಾದಲ್ಲಿ ಬೇಸಿಗೆ ಮಾರ್ಚ್ ನಲ್ಲಿ ಆರಂಭವಾಗಿ ಮೇವರೆಗೂ ಇರುತ್ತದೆ. ಅತಿ ಹೆಚ್ಚು ಉಷ್ಣಾಂಶ ಈ ಸಮಯದಲ್ಲಿದ್ದು, ಹೆಚ್ಚೆಂದರೆ 35 ಡಿಗ್ರಿ ಸೆಲ್ಶಿಯಸ್‌ ಆಗಿದ್ದು, ಕಡಿಮೆ ಎಂದರೆ 27 ಡಿಗ್ರಿ ಸೆಲ್ಶಿಯಸ್‌ವರೆಗೆ ಇರುತ್ತದೆ.

ಮಳೆಗಾಲ

ಈ ಭಾಗವು ನೈಋತ್ಯ ಹಾಗೂ ಈಶಾನ್ಯ ಎರಡೂ ಮಾರುತಗಳ ವ್ಯಾಪ್ತಿಗೆ ಒಳಪಡುತ್ತದೆ. ಇದರಿಂದ ಮಳೆಗಾಲದಲ್ಲಿ ಇಲ್ಲಿ ವಿಪರೀತ ಮಳೆ ಸುರಿಯುತ್ತದೆ. ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ನೈಋತ್ಯ ಮುಂಗಾರು ಇಲ್ಲಿನ ನೆಲವನ್ನು ಸದಾ ಒದ್ದೆಯಾಗಿಯೇ ಇರಿಸುತ್ತದೆ. ಈಶಾನ್ಯ ಮುಂಗಾರು ಅಕ್ಟೋಬರ್‌ನಿಂದ ನವೆಂಬರ್‌ಕೊನೆಯವರೆಗೂ ವ್ಯಾಪಿಸಿಕೊಳ್ಳುತ್ತದೆ. ಮಳೆಗಾಲದಲ್ಲಿ ಅಪಾರ ಮಳೆ ಸುರಿಯುವುದರಿಂದ ಪ್ರವಾಸಿಗರಿಗೆ ಈ ಕಾಲ ಬರುವುದಕ್ಕೆ ಉಚಿತವಲ್ಲ.

ಚಳಿಗಾಲ

ಡಿಸೆಂಬರ್‌ನಲ್ಲಿ ಆರಂಭವಾಗುವ ಚಳಿ ಫೆಬ್ರವರಿವರೆಗೂ ಇರುತ್ತದೆ. ತಾಪಮಾನ ಈ ಸಮಯದಲ್ಲಿ ಹೆಚ್ಚೆಂದರೆ 24 ಡಿಗ್ರಿ ಸೆಲ್ಶಿಯಸ್‌ನಿಂದ ಕನಿಷ್ಠ 10 ಡಿಗ್ರಿ ಸೆಲ್ಶಿಯಸ್‌ವರೆಗೆ ಇರುತ್ತದೆ. ಇದಕ್ಕಿಂತ ಕಡಿಮೆ ಆಗುವ ಸಾಧ್ಯತೆಯೂ ಇರುತ್ತದೆ. ಅತಿ ಕಡಿಮೆ ಹವಾಮಾನ ಗುಣವನ್ನು ಹೊಂದಿರುವ ಕೇರಳದ ಕೆಲವು ಭಾಗದಲ್ಲಿ ಇದೂ ಒಂದು. ಕಲ್ಪೆಟ್ಟಾಗೆ ಭೇಟಿ ನೀಡಲು ಚಳಿಗಾಲ ಸಕಾಲ.