Search
  • Follow NativePlanet
Share
ಮುಖಪುಟ » ಸ್ಥಳಗಳು» ಪಯ್ಯೋಲಿ

ಪಯ್ಯೋಲಿ: ಶ್ರೀಮಂತ ಪರಂಪರೆ ಮತ್ತು ಗಂಭೀರ ಕಡಲತೀರಗಳು!

7

ದಕ್ಷಿಣ ಕೇರಳದ ಒಂದು ಸಣ್ಣ ಹಳ್ಳಿ ಪಯ್ಯೋಲಿ. ಇದು ಉತ್ತರ ಮಲಬಾರ್ ಕರಾವಳಿ ಭಾಗದಲ್ಲಿದ್ದು, ಇಲ್ಲಿನ ಆಳವಿಲ್ಲದ ಕಡಲತೀರ ಮತ್ತು ಹೊನ್ನಿನ ವರ್ಣದ ಮರಳು ಕಿನಾರೆಗಳು ಮನಸಿಗೆ ಖುಷಿ ಕೊಡುತ್ತವೆ.

ಕಡಲತೀರದಿಂದಾಗಿ ಈ ಪ್ರದೇಶ ಸಾಕಷ್ಟು ಹೆಸರುವಾಸಿಯಾಗಿದ್ದರೂ, ಇಲ್ಲಿಯೇ ಸಮೀಪದಲ್ಲಿರುವ ಸಾಕಷ್ಟು ಪ್ರೇಕ್ಷಣಿಯ ತಾಣಗಳು ಪಯ್ಯೋಲಿಯ ಮೆರಗನ್ನು ಇನ್ನಷ್ಟು ಹೆಚ್ಚಿಸಿವೆ. ಭಾರತದ ಹೆಮ್ಮೆಯ ಅಥ್ಲೀಟ್ ಪಿ.ಟಿ. ಉಷಾ ಹುಟ್ಟಿ ಬೆಳೆದದ್ದು ಇಲ್ಲಿಯೇ. ಕ್ಯಾಲಿಕಟ್‌ನಿಂದ ಪಯ್ಯೋಲಿ ಕೇವಲ ಮೂವತ್ತು ಕಿಲೋಮೀಟರುಗಳ ಅಂತರದಲ್ಲಿದೆ.

ಬಾಯಲ್ಲಿ ನೀರೂರಿಸುವ ಭಕ್ಷ್ಯಗಳು:

ಇಲ್ಲಿನ ಪ್ರವಾಸೀ ತಾಣಗಳಿಗೆ ಮತ್ತಷ್ಟು ಮೆರಗು ನೀಡಿದ್ದು, ಇಲ್ಲಿ ಲಭ್ಯವಿರುವ ತರಾವರೀ ಭಕ್ಷ್ಯಗಳು. ತಿಂಡಿ ತಿನಿಸುಗಳು. ಆಹಾರ ಮಳಿಗಗೆ ಮತ್ತು ರೆಸ್ಟೋರೆಂಟ್‌ಗಳೂ ಅತೀ ಸುಂದರವಾಗಿ ನಿರ್ಮಾಣವಾಗಿದ್ದು, ಅವುಗಳೂ ಮನಮೋಹಕ ಅನುಭೂತಿಯನ್ನು ನೀಡುತ್ತವೆ. ಕೇರಳಾ ಮತ್ತು ಇತರ ರಾಜ್ಯ, ದೇಶಗಳ ಪಾಕಶಾಸ್ತ್ರಗಳ ಮಿಶ್ರಣದಲ್ಲಿ ತಯಾರಿಸಲಾಗುವ ತಿಂಡಿಗಳು, ಆಹಾರಗಳು ನಿಮ್ಮ ಬಾಯಲ್ಲಿ ನೀರೂರಿಸುತ್ತವೆ. ಇಲ್ಲಿ ಲಭ್ಯವಿರುವ ಚಿಕನ್‌, ಪೊಯ್ಯಾಲಿ ಚಿಕನ್‌ ಎಂದೇ ಪ್ರಸಿದ್ಧವಾಗಿದೆ. ಕೆಂಪು ಮೆಣಸು ಹಾಗೂ ವಿಶೇಷ ಮಸಾಲೆ ಪಧಾರ್ಥಗಳನ್ನು ಬಳಸಿ ಸಿದ್ಧಪಡಿಸುವ ಆಹಾರಗಳು ನಿಮ್ಮ ಭಾವನೆಗಳನ್ನು ಉದ್ದೀಪಿಸುತ್ತವೆ. ತಿಂದಷ್ಟೂ ಮತ್ತೂ ಬೇಕು ಇನ್ನೂ ಬೇಕು ಅನ್ನಿಸುವಂತೆ ಮಾಡುತ್ತವೆ. ಇದುವರೆಗೂ ಕಂಡರಿಯದ ಸ್ವಾದಗಳ ರಸಾನುಭವ ಬೇಕಿದ್ದರೆ ನೀವೊಮ್ಮೆ  ಇಲ್ಲಿಗೆ ಭೇಟಿ ನೀಡಲೇಬೇಕು.

ಕಡಲತೀರ ಮತ್ತು ದೇವಸ್ಥಾನಗಳು:

ಈ ಸ್ಥಳದ ಆಕರ್ಷಣೆಗಳ ಸಾಲಿನಲ್ಲಿ ಪ್ರಮುಖವಾಗಿ ಪಾಮ್‌ ಜಾತಿಯ ಸಾಲುಮರಗಳಿಂದ ಆವೃತವಾದ ಕಡಲತೀರ ಮತ್ತು ದೇವಾಲಯಗಳು ಗಮನಸೆಳೆಯುತ್ತವೆ. ಕುಂಜಾಲಿ ಮರ್ರಾಕ್ಕರ್ ವಸ್ತುಸಂಗ್ರಹಾಲಯ, ವೆಲ್ಲಿಯಾಂಕಲ್ಲು ಮತ್ತು ತ್ರಿಕ್ಕೊಟ್ಟೂರು ಮೆರುಮಾಳುಪುರಂ ದೇವಾಲಯಗಳು ಈ  ಕಡಲ ಕಿನಾರೆಯ ಬಳಿ ಇವೆ. ಕೇರಳದ ಇತರ ಭಾಗಗಳ ಹವಾಮಾನವನ್ನೇ ಹೋಲುವ ಈ ಪ್ರದೇಶಕ್ಕೆ ರಾಜ್ಯದ ಬೇರೆ ಬೇರೆ ಭಾಗಗಳಿಂದ ರಸ್ತೆ ಸಂಪರ್ಕವಿದೆ. ವಾಹನ ಸೌಲಭ್ಯಗಳೂ ಇವೆ.

ಪಯ್ಯೋಲಿ ಪ್ರಸಿದ್ಧವಾಗಿದೆ

ಪಯ್ಯೋಲಿ ಹವಾಮಾನ

ಉತ್ತಮ ಸಮಯ ಪಯ್ಯೋಲಿ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಪಯ್ಯೋಲಿ

  • ರಸ್ತೆಯ ಮೂಲಕ
    ಕ್ಯಾಲಿಕಟ್‌ ವಿಮಾನ ನಿಲ್ದಾಣದಿಂದ ಇಲ್ಲಿಗೆ ತೆರಳಲು ಕಾರಿನಲ್ಲಿ ಕೇವಲ ಅರ್ಧ ಗಂಟೆ ಸಾಕು. ರಾಜ್ಯದ ಎಲ್ಲ ನಗರಗಳ ಜತೆ ಪಯ್ಯೋಲಿಗೆ ಸಂಪರ್ಕವಿರುವುದರಿಂದ ಉತ್ತಮ ರಸ್ತೆ ವ್ಯವಸ್ಥೆಯಿದೆ. ಮದ್ರಾಸ್ ಕ್ಯಾಲಿಕಟ್ ಗ್ರ್ಯಾಂಡ್ ಟ್ರಂಕ್ ರಸ್ತೆ ಕ್ಯಾಲಿಕಟ್ ಸಂಪರ್ಕಿಸುತ್ತದೆ. ಕ್ಯಾಬ್ಗಳು ಮತ್ತು ಟ್ಯಾಕ್ಸಿಗಳು ಬಾಡಿಗೆಗೆ ಲಭ್ಯವಿರುತ್ತದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಪಯ್ಯೋಲಿಯಲ್ಲೇ ರೈಲು ನಿಲ್ದಾಣ ಇರುವುದರಿಂದ ರೈಲಿನಲ್ಲಿ ಪ್ರಯಾಣ ಮಾಡುವುದು ಅನುಕೂಲಕರ. ಆದರೆ ಎಲ್ಲ ಪ್ರಮುಖ ರೈಲುಗಳನ್ನೂ ಇಲ್ಲಿ ನಿಲ್ಲಿಸದ ಕಾರಣ ಸೂಕ್ತ ವಿಚಾರಣೆ ನಡೆಸಿಯೇ ರೈಲು ಹತ್ತುವುದು ಒಳ್ಳೆಯದು. ಹಾಗಾಗಿ, ಹೆಚ್ಚಿನ ಪ್ರಯಾಣಿಕರು ಕಲ್ಲಿಕೋಟೆಯ ರೈಲು ನಿಲ್ದಾಣದಲ್ಲಿ ಇಳಿದು ಇಲ್ಲಿಗೆ ಆಗಮಿಸುತ್ತಾರೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಈ ಪ್ರದೇಶಕ್ಕೆ ಅತೀ ಸಮೀಪದಲ್ಲಿರುವ ವಿಮಾನ ನಿಲ್ದಾಣವೆಂದರೆ ಕ್ಯಾಲಿಕಟ್‌ ಇಂಟರ್ನ್ಯಾಶನಲ್‌ ವಿಮಾನ ನಿಲ್ದಾಣ. 37 ಕಿಲೋಮೀಟರುಗಳ ಅಂತರದಲ್ಲಿ ಇದೆ. ತಿರುವನಂತಪುರ, ಕೊಚ್ಚಿ, ಬೆಂಗಳೂರು ವಿಮಾನ ನಿಲ್ದಾಣಗಳ ಮೂಲಕವೂ ಇಲ್ಲಿಗೆ ಬರಬಹುದಾಗಿದ್ದು, ಉತ್ತಮ ರಸ್ತೆ ಸಂಪರ್ಕವಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat