Search
 • Follow NativePlanet
Share
ಮುಖಪುಟ » ಸ್ಥಳಗಳು» ವಯನಾಡ್

ವಯನಾಡ್ : ಒಂದು ಪವಿತ್ರ ಭೂಮಿ

39

ವಯನಾಡ್ ಕೇರಳದಲ್ಲಿರುವ ಹನ್ನೆರಡು ಜಿಲ್ಲೆಗಳಲ್ಲಿ ಒಂದಾಗಿದೆ. ಇದು ಕಣ್ಣೂರ್ ಮತ್ತು ಕೋಳಿಕೋಡ್ ಜಿಲ್ಲೆಗಳ ನಡುವೆ ನೆಲೆಸಿದೆ. ಇಲ್ಲಿನ ಸುಂದರವಾದ ಪರಿಸರದಿಂದಾಗಿ ಈ ಸ್ಥಳವು ಅತ್ಯಂತ ಪ್ರಸಿದ್ಧವಾದ ಯಾತ್ರಾಸ್ಥಳವಾಗಿದೆ. ಈ ಸ್ಥಳವು ಹಚ್ಚ ಹಸಿರಿನಿಂದ ಕೂಡಿದ ಪಶ್ಚಿಮ ಘಟ್ಟಗಳ ಶ್ರೇಣಿಯಲ್ಲಿ ನೆಲೆಗೊಂಡಿದೆ. ವಯನಾಡಿನ ಸ್ವಾಭಾವಿಕ ಚೆಲುವು, ಇನ್ನು ತನ್ನ ನೈರ್ಮಲ್ಯವನ್ನು ಉಳಿಸಿಕೊಂಡಿದೆ. ಇಲ್ಲಿನ ಸೌಂದರ್ಯವನ್ನು ನೋಡಿ ತಣಿಯಲು ಎರಡು ಕಣ್ಣುಗಳು ಸಾಲವು. ವಯನಾಡ್ ಒಂದು ಕಿರು ಅದ್ಭುತವೆಂದೆ ಹೇಳಬಹುದು, ಈ ಅದ್ಭುತವನ್ನು ಕಣ್ತುಂಬಿಕೊಳ್ಳಲು ದೂರದ ಸ್ಥಳಗಳಿಂದ ಪ್ರವಾಸಿಗರು ಪ್ರತಿ ವರ್ಷ ಇಲ್ಲಿಗೆ ಆಗಮಿಸುತ್ತಿರುತ್ತಾರೆ. ಇಲ್ಲಿ ವಾರಾಂತ್ಯದಲ್ಲಿ ಕಾರ್ಪೋರೇಟ್ ವಲಯದ ಹಲವಾರು ಮಂದಿ ವಿಶ್ರಾಂತಿ ಮತ್ತು ಮೈ ಮನಗಳನ್ನು ಪುನಃಶ್ಚೇತನಗೊಳಿಸುವ ಸಲುವಾಗಿ ಇಲ್ಲಿಗೆ ಆಗಮಿಸುತ್ತಿರುತ್ತಾರೆ. ದೈನಂದಿನ ಜಂಜಾಟಗಳಿಂದ ನಾವು ಕಳೆದು ಕೊಂಡಿರುವ ಶಾಂತಿ ಮತ್ತು ಆತ್ಮತೃಪ್ತಿಯನ್ನು ಗಳಿಸಲು ಇದು ಹೇಳಿ ಮಾಡಿಸಿದ ತಾಣವಾಗಿದೆ.

ಆರಂಭಿಕ ದಿನಗಳು

1ನವೆಂಬರ್ 1980ರಂದು ವಯನಾಡ್ ಕೇರಳದ ಹನ್ನೆರಡನೆ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದಿತು. ಆಗ ಈ ಸ್ಥಳಕ್ಕೆ ಭೂಪಟದಲ್ಲಿ ಒಂದು ಸ್ಥಾನ ದೊರೆಯಿತು. ಮೊದಲಿಗೆ ಈ ಪ್ರದೇಶ ಮಯಕ್ಷೇತ್ರ ಅಂದರೆ ಮಯನ ನಾಡು ಎಂದು ಕರೆಯಲಾಗುತ್ತಿತ್ತು. ಮಯಕ್ಷೇತ್ರವು ಮಯನಾಡಾಗಿ ನಂತರ ವಯನಾಡ್ ಎಂಬ ಈಗಿನ ಹೆಸರು ಖಾಯಂ ಆಗಿದೆ.

ಸ್ಥಳೀಯ ದಂತಕಥೆಗಳ ಪ್ರಕಾರ ಈ ಪ್ರದೇಶದ ಹೆಸರು “ ವಯಲ್ ” ಮತ್ತು “ ನಾಡ್ ” ಎಂಬ ಎರಡು ಪದಗಳಿಂದ ಬಂದಿದೆ. ಈ ಎರಡು ಪದಗಳ ಅರ್ಥ “ ಗದ್ದೆಗಳ ನಾಡು “ ಎಂಬ ಅರ್ಥಬರುತ್ತದೆ.

ವಯನಾಡ್ ಭವ್ಯವಾದ ಪಶ್ಚಿಮ ಘಟ್ಟ ಶ್ರೇಣಿಗಳಲ್ಲಿ ನೆಲೆಸಿದ್ದು,  ಮಳೆಗಾಲದಲ್ಲಿ ನೋಡಲು ಮನಮೋಹಕವಾಗಿರುತ್ತದೆ. ಮಳೆಯು ಇಲ್ಲಿನ ಗಿಡ ಮರಗಳ ಮೇಲಿರುವ ಧೂಳನ್ನು ಹೊಡೆದೊಡಿಸಿ ಇಡೀ ಪರಿಸರಕ್ಕೆ ಒಂದು ಮನಸೆಳೆಯುವ ಕಳೆಯನ್ನೊದಗಿಸುತ್ತದೆ. ಈ ಘಟ್ಟಗಳು ಹಚ್ಚ ಹಸಿರಿನಿಂದ ಕೂಡಿದ ದಟ್ಟ ಕಾಡುಗಳನ್ನು ಒಳಗೊಂಡಿದೆ. ಈ ಸ್ಥಳದ ಕುರಿತಾಗಿ ನೀವು ನಿಮ್ಮದೇ ಆದ ಒಂದು ಅದ್ಭುತವಾದ ಕಥೆಯನ್ನು ಹೆಣೆಯಬಹುದು.

ಇಲ್ಲಿ ದೊರೆತಿರುವ ಪ್ರಾಚ್ಯ ವಸ್ತುಗಳ ಆಧಾರದ ಮೇಲೆ ವಯನಾಡ್ ಮೂರು ಸಾವಿರ ವರ್ಷಗಳ ಹಿಂದೆಯೆ ಅಸ್ತಿತ್ವದಲ್ಲಿತ್ತು ಎಂದು ತಿಳಿದು ಬಂದಿದೆ. ಇಲ್ಲಿನ ಕಾಡುಗಳಲ್ಲಿ ಮಾನವರು ಮತ್ತು ಪ್ರಾಣಿಗಳು ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿರುವುದನ್ನು ಕಾಣಬಹುದಾಗಿದೆ. ಈ ಸ್ಥಳವು ಕ್ರಿಸ್ತನು ಹುಟ್ಟುವುದಕ್ಕೆ ಹತ್ತು ಶತಮಾನಗಳ ಹಿಂದೆಯೆ ಜನವಸತಿಯಿಂದ ತುಂಬಿ ತುಳುಕುತ್ತಿತ್ತು. ಹಲವಾರು ಕೆತ್ತನೆಗಳು ಮತ್ತು ರಚನೆಗಳು ಈ ನಿಟ್ಟಿನಲ್ಲಿ ಪುರಾವೆಗಳನ್ನು ಒದಗಿಸುತ್ತವೆ. ಹಲವಾರು ಶತಮಾನಗಳಿಂದಲು ವಯನಾಡ್ ಶ್ರೀಮಂತ ಸಾಂಸ್ಕೃತಿಕ ಇತಿಹಾಸಕ್ಕೆ ಖ್ಯಾತಿಪಡೆದಿದೆ. ಈ ಸ್ಥಳವು 18ನೇ ಶತಮಾನದಲ್ಲಿ ಹೈದರಾಲಿಯ ಆಕ್ರಮಣಕ್ಕೆ ಒಳಗಾಗಿತ್ತು. ನಂತರದ ಕಾಲದಲ್ಲಿ ಇದನ್ನು ಕೊಟ್ಟಾಯಂನ ರಾಜ ಮನೆತನದವರು ಆಳಿದರು. ಆನಂತರ ಈ ಸ್ಥಳವನ್ನು ಬ್ರಿಟೀಷರು ನೂರುವರ್ಷಗಳ ಕಾಲ ಆಳಿದರು. ಬ್ರಿಟೀಷರ ಆಳ್ವಿಕೆಯ ಕಾಲದಲ್ಲಿ ಇಲ್ಲಿ ಟೀ ಮತ್ತು ಕಾಫಿ ತೋಟಗಳನ್ನು ಪ್ರಾರಂಭಿಸಲಾಯಿತು. ಅಲ್ಲದೆ ಬ್ರಿಟೀಷರು ವಯನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ನಿರ್ಮಾಣ ಮಾಡಿ ವಯನಾಡಿಗೆ ಬರುವವರ ಪ್ರಯಾಣವನ್ನು ಸುಲಭಗೊಳಿಸಲಾಯಿತು. ಈ ಕಾರಣದಿಂದಾಗಿ ಇಲ್ಲಿ ಜನವಸತಿ ಅಧಿಕವಾಯಿತು. ವಯನಾಡ್ ಹೊಸತನ್ನು ಹುಡುಕುವ ಜನರಿಗೆ ನಿಜಕ್ಕು ಅವರ ಮುಂದೆ ಒಂದು ಕನಸಿನ ಲೋಕವನ್ನು ತೆರೆದಿಡುತ್ತದೆ.

ವಯನಾಡಿನ ಗುಪ್ತ ಸಂಪತ್ತು

ವಯನಾಡಿನ ದಟ್ಟ ಹಸಿರು ಕಾಡುಗಳಂತೆಯೆ ಇಲ್ಲಿ ದೇಶದ ಅತ್ಯಂತ ಹಳೆಯ ಬುಡಕಟ್ಟು ಸಮುದಾಯಗಳು ಜನರ ಕಣ್ಣಿಗೆ ಕಾಣದೆ ನೆಲೆಸಿವೆ. ಈ ಬುಡಕಟ್ಟು ಸಮುದಾಯಗಳು ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆಯುವ ಯಾವುದೇ ಆಸಕ್ತಿಯನ್ನು ಹೊಂದಿಲ್ಲ. ಅವರು ಸದಾ ಪರಿಸರದ ಜೊತೆಗೆ ಉಳಿದು ಕೊಳ್ಳಬೇಕು ಎಂಬ ಉತ್ಕಟ ಬಯಕೆಯನ್ನು ಹೊಂದಿದ್ದಾರೆ ಹಾಗು ಅದನ್ನು ಇಂದಿಗು ಕಾಪಾಡಿಕೊಂಡು ಬಂದಿದ್ದಾರೆ. ಈ ಕಾರಣಕ್ಕಾಗಿ ಅವರನ್ನು ಟೀಕಿಸುವಂತಹ ಯಾವುದೇ ಕಾರಣಗಳು ನಮಗೆ ದೊರೆಯಲಾರವು. ಒಮ್ಮೆಯಾದರು ನೀವು ವಯನಾಡನ್ನು ಮತ್ತು ಅದರ ವನಸಿರಿಯ ಚೆಲುವನ್ನು ನೋಡಿದರೆ ಸಾಕು, ಖಂಡಿತವಾಗಿಯು ನೀವು ಈ ಸ್ಥಳವನ್ನು ಬಿಟ್ಟು ಹೋಗಲು ನಿಮಗೆ ಮನಸ್ಸು ಬರುವುದಿಲ್ಲ.

ವಯನಾಡ್ ತನ್ನ ಸಮೀಪದಲ್ಲಿರುವ ಗುಹೆಗಳಲ್ಲಿ ಪೂರ್ವ ಇತಿಹಾಸ ಕಾಲದ ಅವಧಿಯಿಂದ ಇತ್ತೀಚೆಗಿನ ಕಾಲದವರೆಗಿನ ಕೆತ್ತನೆಗಳನ್ನು ಕಾಣಬಹುದು. ಇಲ್ಲಿನ ಕೆತ್ತನೆಗಳು ಶಿಲಾಯುಗದಲ್ಲಿ ಕಾಲದಲ್ಲಿಯೆ ವಯನಾಡ್ ಒಂದು ಸಂಪನ್ನತೆಯಿಂದ ಕೂಡಿದ ಪಟ್ಟಣವಾಗಿತ್ತು ಎಂಬುದಕ್ಕೆ ಸಾಕ್ಷ್ಯವನ್ನು ಒದಗಿಸುತ್ತದೆ.

ಇಂದು ಈ ಸ್ಥಳವು ಸುಂದರವಾದ ಸ್ಥಳಗಳಿಗೆ, ಕಣ್ಮನ ತಣಿಸುವ ಪರ್ವತಗಳಿಗೆ, ಅರೆ ಸಮಶೀತೋಷ್ಣ ವಲಯದ ಹುಲ್ಲುಗಾವಲುಗಳಿಗೆ, ಸದಾ ಪರಿಮಳವನ್ನು ಪಸರಿಸುವ ತೋಟಗಳಿಗೆ, ದಟ್ಟ ಕಾಡುಗಳಿಗೆ ಹೆಸರುವಾಸಿಯಾಗಿದ್ದು ಗತಕಾಲದ ಶ್ರೀಮಂತ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಇದರ ಜೊತೆಗೆ ವಯನಾಡ್ ಆಧುನಿಕತೆಯನ್ನು ತೆರೆದ ಬಾಹುಗಳಿಂದ ಸ್ವಾಗತಿಸಲು ಹಿಂದೇಟು ಹಾಕಿಲ್ಲ. ಇಲ್ಲಿನ ದಟ್ಟ ಕಾಡುಗಳ ನಡುವೆ ನೆಲೆಗೊಂಡಿರುವ ಐಶಾರಾಮಿ ರೆಸಾರ್ಟುಗಳು ಇಲ್ಲಿಗೆ ಭೇಟಿ ಕೊಡುವ ಪ್ರವಾಸಿಗರಿಗೆ ಆಯುರ್ವೇದಿಕ್ ಮಸಾಜ್ ಮತ್ತು ಆರಾಮದಾಯಕವಾದ ಸ್ಪಾ ಸೌಲಭ್ಯಗಳನ್ನು ಒದಗಿಸುತ್ತವೆ. ವಯಾನಾಡಿಗೆ ಹೋದರೆ ಸಂಪ್ರದಾಯವು ಆಧುನಿಕತೆಯೊಂದಿಗೆ ಹೇಗೆ ಬೆರೆತು ಹೋಗಿದೆ ಎಂಬುದನ್ನು ನೋಡಬಹುದು. ಯಾರೇ ಆಗಲಿ ಇಲ್ಲಿಗೆ ಭೇಟಿ ಕೊಟ್ಟರೆ ಅದು ಅವರ ಜೀವನದ ಮರೆಯಲಾಗದ ಅನುಭವವಾಗುವುದರಲ್ಲಿ ಸಂಶಯವಿಲ್ಲ.

ವಯನಾಡ್ ಪ್ರಸಿದ್ಧವಾಗಿದೆ

ವಯನಾಡ್ ಹವಾಮಾನ

ಉತ್ತಮ ಸಮಯ ವಯನಾಡ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ವಯನಾಡ್

 • ರಸ್ತೆಯ ಮೂಲಕ
  ಕೋಳಿಕೋಡ್ ವಯನಾಡಿಗೆ ಸಮೀಪದ ರೈಲು ನಿಲ್ದಾಣವನ್ನು ಹೊಂದಿದೆ. ಕೇರಳದ ಇತರ ಜಿಲ್ಲೆಗಳಿಗೆ ಸಾಗುವ ರೈಲುಗಳು ಕೋಳಿಕೋಡಿನಲ್ಲಿ ನಿಲ್ಲುತ್ತವೆ. ಅಲ್ಲದೆ ಈ ನಿಲ್ದಾಣವು ದೇಶದ ಇತರ ಭಾಗಗಳೊಂದಿಗೆ ಉತ್ತಮ ರೈಲು ಸಂಪರ್ಕವನ್ನು ಹೊಂದಿವೆ. ಕೋಳಿಕೋಡ್ ನಿಲ್ದಾಣದಿಂದ ವಯನಾಡ್ ತಲುಪಲು ಟ್ಯಾಕ್ಸಿಗಳು ಅಥವಾ ಕೇರಳ ರಸ್ತೆ ಸಾರಿಗೆ ನಿಗಮದ ಬಸ್ಸುಗಳು ದೊರೆಯುತ್ತವೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ವಯನಾಡ್ ರಾಷ್ಟ್ರೀಯ ಹೆದ್ದಾರಿಗಳ ಮೂಲಕ ಇತರ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಕೋಳಿಕೋಡ್, ಕಣ್ಣೂರ್, ಊಟಿ ಮತ್ತು ಮೈಸೂರುಗಳಿಂದ ವಯನಾಡಿಗೆ ರಸ್ತೆ ಮಾರ್ಗಗಳು ಇವೆ. ವಯನಾಡಿನಿಂದ 100 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಉತ್ತಮ ಉಪಾಹಾರಗೃಹಗಳು ನಿಮಗೆ ದೊರೆಯುವುದಿಲ್ಲ. ಹಾಗಾಗಿ ಇಲ್ಲಿಗೆ ಭೇಟಿ ಕೊಡುವವರು ಆಹಾರ ಮತ್ತು ನೀರಿನ ಸಂಗ್ರಹವನ್ನು ಅಗತ್ಯ ಪ್ರಮಾಣದಲ್ಲಿ ಸಂಗ್ರಹಿಸಿಕೊಂಡು ಬರುವುದು ಉತ್ತಮ ಮತ್ತು ಅತ್ಯಾವಶ್ಯಕ. ಅಲ್ಲದೆ ಸ್ವಂತ ವಾಹನಗಳಲ್ಲಿ ವಯನಾಡಿಗೆ ಬರುವವರು ತಮ್ಮ ವಾಹನಗಳ ಟ್ಯಾಂಕನ್ನು ಪೂರ್ತಿ ತುಂಬಿಸಿಕೊಂಡು ಬರುವುದು ಉತ್ತಮ. ಏಕೆಂದರೆ ಮಾರ್ಗಮಧ್ಯದಲ್ಲಿ ನಿಮಗೆ ಯಾವುದೇ ಪೆಟ್ರೊಲ್ ಬಂಕುಗಳು ದೊರೆಯುವುದಿಲ್ಲ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ವಯನಾಡಿಗೆ ಹತ್ತಿರದ ವಿಮಾನ ನಿಲ್ದಾಣವು ಕೋಳಿಕೋಡ್ ನಲ್ಲಿ ನೆಲೆಗೊಂಡಿದೆ. ಕೋಳಿಕೋಡ್ ಕಲ್ಪೆಟ್ಟದಿಂದ 75 ಕಿ.ಮೀ ಮತ್ತು ವಯನಾಡಿನಿಂದ 100 ಕಿ.ಮೀ ದೂರದಲ್ಲಿ ನೆಲೆಸಿದೆ. ಈ ವಿಮಾನ ನಿಲ್ದಾಣಕ್ಕೆ ತಲುಪಿದ ಮೇಲೆ ಟ್ಯಾಕ್ಸಿಗಳನ್ನು ಬಾಡಿಗೆ ಪಡೆದು ವಯನಾಡಿಗೆ ತಲುಪಬಹುದು. ಟ್ಯಾಕ್ಸಿಗಳ ಬಾಡಿಗೆಯು 1000-1500 ರೂಪಾಯಿಗಳ ಒಳಗೆ ಇರುತ್ತದೆ. ಅಲ್ಲದೆ ನೀವು ಅಂತರ ರಾಜ್ಯ ಬಸ್ಸುಗಳ ಮೂಲಕವು ವಯನಾಡಿಗೆ ತಲುಪಬಹುದು.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
22 Jan,Sat
Return On
23 Jan,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
22 Jan,Sat
Check Out
23 Jan,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
22 Jan,Sat
Return On
23 Jan,Sun