Search
 • Follow NativePlanet
Share
ಮುಖಪುಟ » ಸ್ಥಳಗಳು» ತಲಸ್ಸೆರಿ

ತಲಸ್ಸೆರಿ: ಸರ್ಕಸ್‌, ಕೇಕ್‌ ಹಾಗೂ ಕ್ರಿಕೆಟ್‌ನ ಭೂಮಿ

28

ಕೇರಳದ ಕಣ್ಣೂರು ಜಿಲ್ಲೆಯ ಜನಪ್ರಿಯ ನಗರಿ ತಲಸ್ಸೆರಿ. ಉತ್ತರ ಕೇರಳ ರಾಜ್ಯದ ಡೈನಾಮಿಕ್‌ ನಗರಿ.  ಇದು ತೆಲ್ಲಿಚ್ಚೆರ್ರಿ ಅನ್ನುವ ಹೆಸರಿನಿಂದಲೂ ಪರಿಚಿತವಾಗಿದೆ. ಈ ನಗರಿಯು ಮಲಬಾರ್‌ ಕಡಲ ತೀರದ ಚಿನ್ನದ ಹೊದಿಕೆಯನ್ನೇ ಹೊದ್ದು ಕುಳಿತಿದೆ. ಅತ್ಯಾಕರ್ಷಕ ನಿಸರ್ಗ ಸೌಂದರ್ಯ ಒಳಗೊಂಡಿರುವ ಜತೆಗೆ ಈ ನಗರಿಯು ವಿಶಿಷ್ಟ ಹಾಗೂ ಮಹತ್ವದ ಇತಿಹಾಸವನ್ನು ಹೊಂದಿದೆ.

ಇದಕ್ಕೊಂದು ಸಾಂಸ್ಕೃತಿಕ ಇತಿಹಾಸ ಇದೆ. ಅದೇನೆಂದರೆ ಕೇಕ್‌, ಕ್ರಿಕೆಟ್‌ ಹಾಗೂ ಸರ್ಕಸ್‌ನ ಉಗಮ ಇಲ್ಲಾಗಿದೆ. ಇದೆಲ್ಲದರ ಜತೆ ಬ್ರಿಟಿಷರ ಆಳ್ವಕೆಯಿಂದಲೂ ಇದು ವಾಣಿಜ್ಯ ದೃಷ್ಟಿಯಿಂದ ಉತ್ತಮ ಬೆಳವಣಿಗೆ ಸಾಧಿಸಿದೆ. ಬ್ರಿಟೀಷರು ಈ ನೆಲಕ್ಕೆ ಕಾಲಿರಿಸಿದ್ದು, 1682ರಲ್ಲಿ. ಕಡಲ ತೀರವಾಗಿದ್ದರಿಂದ ಇದೊಂದು ಪ್ರಮುಖ ವಾಣಿಜ್ಯ ಕೇಂದ್ರವಾಗಿ ಬೆಳೆದಿದೆ. ತಲಸ್ಸೆರಿಯನ್ನು ಮಲಬಾರ್‌ ಸಂಸ್ಕೃತಿಯ ರಾಜಧಾನಿ ಅಂತಲೂ ಕರೆಯಲಾಗುತ್ತದೆ. ಇದು ದೊಡ್ಡ ಪ್ರಮಾಣದ ಬರವಣಿಗೆ ಹಾಗೂ ರಾಜಕೀಯ ವಿದ್ಯಮಾನಗಳು ಘಟಿಸಲು ಮೂಲ ಅನ್ನಿಸಿಕೊಂಡಿದೆ. ಪ್ರಥಮ ಮಲಯಾಳಂ ಪತ್ರಿಕೆ ಹಾಗೂ ಕಾದಂಬರಿಯ ಜನಕ ಅನ್ನುವ ಕೀರ್ತಿಗೂ ಭಾಜನವಾಗಿದೆ.

ಇತಿಹಾಸಗಳ ನಗರಿ

ಪ್ರಮುಖ ಪ್ರವಾಸಿ ತಾಣ ಅನ್ನಿಸಿಕೊಂಡಿರುವ ತಲಸ್ಸೆರಿ ಆಂಗ್ಲ ಚರ್ಚ್, ಮೀನುಗಾರರ ದೇವಸ್ಥಾನ (ಫಿಶರ್‌ಪೋಕ್‌ ಟೆಂಪಲ್‌), ಕಡಲ ತೀರದ ಉದ್ಯಾನ, ತಲಸ್ಸೆರಿ ಬಂದರು, ಜಾಮಾ ಮಸೀದಿಗಳನ್ನು ಕೂಡ ಹೊಂದಿದೆ. ಜರ್ಮನಿ ಧಾರ್ಮಿಕ ಮುಖಂಡ ಹೆರ್ಮನ್‌ ಗುಂಡೆರ್ಟ್‌ ಅವರ ಬಂಗಲೆಯೂ ಇಲ್ಲಿದೆ. ಇವರಿಂದಲೇ ಮೊದಲ ಮಲಯಾಳಂ- ಇಂಗ್ಲಿಷ್‌ ಪದಕೋಶ ಪೂರ್ಣಗೊಂಡಿದೆ. ಈ ಸಂಗತಿ ಇತಿಹಾಸ ಪ್ರೇಮಿಗಳಿಗೆ ಅತಿ ಇಷ್ಟವಾದುದಾಗಿದೆ. ಮಾಹೆ ಎಂಬುದು ದೇಶದ ಖಾಯಂ ಫ್ರೆಂಚರ ವಾಸಸ್ಥಳವಾಗಿದೆ. ಇದು ತಲಸ್ಸೆರಿಯಿಂದ 15 ಕಿ.ಮೀ. ದೂರದಲ್ಲಿದೆ. ಇದು ಪ್ರತಿಯೊಬ್ಬರೂ ನೋಡಲೇಬೇಕಾದ ಸ್ಥಳ.ವೆಲ್ಲೆಸ್ಲಿಯ ಬಂಗ್ಲೆ, ರಂದತ್ತಾರಾ ಚಿನ್ನಮೋನ್‌ ಎಸ್ಟೇಟ್‌, ಕ್ಯಾಥೋಲಿಕ್‌ ರೋಸರಿ ಚರ್ಚ್, ವಮಿಲಿ ದೇವಸ್ಥಾನ, ಟ್ಯಾಗೋರ್‌ ಪಾರ್ಕ್, ಉದಯ ಕಾಲರಿ ಸಂಗಮ, ಸರ್ಕಾರಿ ಗೃಹ ಹಾಗೂ ಒಡತ್ತಿಲಿ ಪಲ್ಲಿಗಳು ನಿತ್ಯ ನೂರಾರು ಮಂದಿಯನ್ನು ಆಕರ್ಷಿಸುತ್ತವೆ. ಈ ಮೂಲಕ  ಐತಿಹಾಸಿಕ ನಗರಿಯ ಜನಪ್ರಿಯತೆಯು ಉತ್ತುಂಗಕ್ಕೇರಿದೆ. ಮುಜಾಪಿಲ್ಲಾಂಗಡ್‌ ಕಡಲ ತೀರ ಕೇರಳದ ಏಕೈಕ "ಡ್ರೈವ್‌ ಇನ್‌' ಕಡಲ ತೀರ ಎಂಬ ಹೆಮ್ಮೆಗೆ ಪಾತ್ರವಾಗಿದೆ. ಇದು ತಲಸ್ಸೆರಿಯಿಂದ ಕೇವಲ 9 ಕಿ.ಮೀ. ದೂರದಲ್ಲಿದೆ.

ಇದು ನಾಗರಿಕರು ನಿತ್ಯ ಬಾಯಿ ಚಪ್ಪರಿಸಿ ತಿನ್ನುವ ಬೇಕರಿ ತಿನಿಸು ಹಾಗೂ ಕೇಕ್‌ನ ಉಗಮ ಸ್ಥಾನ ಅನ್ನುವುದು ಇನ್ನೊಂದು ವಿಶೇಷ. ತಲಸ್ಸೆರಿ ತಿನಿಸುಗಳ ವಿಶೇಷ ಸಂಸ್ಕೃತಿಯನ್ನು ಹೊಂದಿದೆ. ಅತ್ಯುತ್ತಮ ವಾತಾವರಣವನ್ನು ಹೊಂದಿರುವ ನಗರಿಯು ಉತ್ತಮ ರೈಲು ಹಾಗೂ ರಸ್ತೆ ಮಾರ್ಗದ ಸಂಪರ್ಕ ಹೊಂದಿದೆ. ಶ್ರೀಮಂತ ಸಂಸ್ಕೃತಿ, ನಿಸರ್ಗ, ಹೂವುಗಳು ಹಾಗೂ ಇತಿಹಾಸವನ್ನು ಕಾಣಲು ಇಚ್ಛಿಸುವವರಿಗೆ ಇದೊಂದು ಮಾದರಿ ತಾಣ ಅನ್ನಿಸಿಕೊಳ್ಳುವಲ್ಲಿ ಸಂಶಯವಿಲ್ಲ.

ತಲಸ್ಸೆರಿ ಪ್ರಸಿದ್ಧವಾಗಿದೆ

ತಲಸ್ಸೆರಿ ಹವಾಮಾನ

ತಲಸ್ಸೆರಿ
30oC / 85oF
 • Partly cloudy
 • Wind: NNW 8 km/h

ಉತ್ತಮ ಸಮಯ ತಲಸ್ಸೆರಿ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ತಲಸ್ಸೆರಿ

 • ರಸ್ತೆಯ ಮೂಲಕ
  ತಲಸ್ಸೆರಿಗೆ ರಸ್ತೆ ಸಂಪರ್ಕ ಅತ್ಯುತ್ತಮವಾಗಿದೆ. ಸುತ್ತಲಿನ ಪ್ರಮುಖ ನಗರಗಳು ಈ ಜಿಲ್ಲೆಯನ್ನು ಸಂಪರ್ಕಿಸುತ್ತವೆ. ನಿರಂತರ ಬಸ್‌ ಸೌಲಭ್ಯ ತಲಸ್ಸೆರಿಯ ಸಮೀಪದ ಕಣ್ಣೂರು, ಕೊಚ್ಚಿ, ತಿರುವನಂತಪುರ, ಕೋಳಿಕೋಡ್‌, ಪಾಲಕ್ಕಾಡ್‌, ಮಂಗಳೂರು, ಮೈಸೂರು ಮತ್ತಿತರ ಭಾಗದಿಂದ ಖಾಸಗಿ ಲಗ್ಜುರಿ ಬಸ್‌ಗಳು ಸಿಗುತ್ತವೆ. ಬೆಂಗಳೂರು, ಚೆನ್ನೈನಿಂದಲೂ ಉತ್ತಮ ಸಂಪರ್ಕ ಇದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ತಲಸ್ಸೆರಿ ರೈಲು ನಿಲ್ದಾಣ ಎಲ್ಲೆಡೆಯಿಂದ ಉತ್ತಮ ರೈಲು ಸಂಪರ್ಕ ಹೊಂದಿದೆ. ಕೇರಳದ ಎಲ್ಲೆಡೆಯಿಂದ ಉತ್ತಮ ಸಂಪರ್ಕ ಜಾಲವನ್ನೂ ಹೊಂದಿದೆ. ಕಣ್ಣೂರು, ಕೊಚ್ಚಿ, ತಿರುವನಂತಪುರ, ಕೋಳಿಕೋಡ್‌, ಪಾಲಕ್ಕಾಡ್‌ ಮತ್ತಿತರ ಪ್ರಮುಖ ನಗರದಿಂದ ಇಲ್ಲಿಗೆ ಸಂಪರ್ಕ ಇದೆ. ಇದಲ್ಲದೇ ದೇಶದ ಪ್ರಮುಖ ನಗರಗಳಾದ ಮಂಗಳೂರು, ಬೆಂಗಳೂರು, ಚೆನ್ನೈ ಇತ್ಯಾದಿ ಭಾಗದಿಂದಲೂ ಸಂಪರ್ಕ ಚೆನ್ನಾಗಿದೆ. ಆಟೊ ರಿಕ್ಷಾ ಹಾಗೂ ಟ್ಯಾಕ್ಸಿ ಸೌಲಭ್ಯ ಈ ನಿಲ್ದಾಣದಿಂದ ಸದಾ ಲಭ್ಯವಿರುತ್ತದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ತಲಸ್ಸೆರಿಗೆ ಅತ್ಯಂತ ಸಮೀಪದ ವಿಮಾನ ನಿಲ್ದಾಣ ಕ್ಯಾಲಿಕಟ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಕರಿಪುರ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಂತಲೂ ಜನಪ್ರಿಯವಾಗಿದೆ. ತಲಸ್ಸೆರಿಯಿಂದ 93 ಕಿ.ಮೀ. ದೂರದಲ್ಲಿದೆ. ರಾಷ್ಟ್ರದ ಎಲ್ಲಾ ಪ್ರಮುಖ ನಗರ ಹಾಗೂ ಕೆಲ ಅನ್ಯ ರಾಷ್ಟ್ರಗಳಿಂದಲೂ ಸಂಪರ್ಕ ಹೊಂದಿದೆ. ವಿಮಾನ ಮೂಲಕ ಬಂದವರು, ಅಲ್ಲಿಂದ ತಲಸ್ಸೆರಿಗೆ ಬಸ್‌ ಹಾಗೂ ಟ್ಯಾಕ್ಸಿ ಮೂಲಕ ಆಗಮಿಸಬಹುದು.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
15 Oct,Tue
Return On
16 Oct,Wed
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
15 Oct,Tue
Check Out
16 Oct,Wed
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
15 Oct,Tue
Return On
16 Oct,Wed
 • Today
  Thalassery
  30 OC
  85 OF
  UV Index: 8
  Partly cloudy
 • Tomorrow
  Thalassery
  28 OC
  82 OF
  UV Index: 7
  Light rain shower
 • Day After
  Thalassery
  28 OC
  82 OF
  UV Index: 6
  Light rain shower