Search
 • Follow NativePlanet
Share
ಮುಖಪುಟ » ಸ್ಥಳಗಳು» ನಿಲಂಬೂರ್

ನಿಲಂಬೂರ್ - ಸಾಗವಾನಿಯ ನೆಡುತೋಪು

26

ಕೇರಳದ ಸಾಗವಾನಿ ನೆಡುತೋಪು ಎಂದೇ ಹೆಸರುವಾಸಿಯಾಗಿರುವ ಊರು ನಿಲಂಬೂರ್, ಇದು ಕೇರಳದ ಮಲಪ್ಪುರಂ ಜಿಲ್ಲೆಯ ಪ್ರಮುಖ ಪಟ್ಟಣಗಳಲ್ಲಿ ಒಂದಾಗಿದೆ. ಇಲ್ಲಿ ವಿಶಾಲವಾದ ಕಾಡುಗಳ ನೈಸರ್ಗಿಕ ಸೌಂದರ್ಯವು ಹೃದಯಸ್ಪರ್ಶಿಯಾಗಿರುವುದಲ್ಲದೆ, ಅನನ್ಯ ವನ್ಯಜೀವಿ, ಆಕರ್ಷಕ ಮತ್ತು ರೋಮಾಂಚಕ ನೀರಿನ ಜಲಧಾರೆಯನ್ನೂ ಹೊಂದಿದೆ.  ಮಲಬಾರ್ ವಸಾಹತು ಇತಿಹಾಸದಲ್ಲಿ ಒಂದು ವಿಶೇಷ ಸ್ಥಾನವನ್ನು ಕಲ್ಪಿಸಿಕೊಟ್ಟಿದೆ. ನೀಲಗಿರಿ ಬೆಟ್ಟಗಳು, ಎರ್ನಾಡು, ಪಾಲಕ್ಕಾಡ್ ಮತ್ತು ಕ್ಯಾಲಿಕಟ್ ಪಟ್ಟಣಗಳು ನೀಲಾಂಬುರ್ ನಗರದ ಗಡಿಗಳಾಗಿದ್ದು, ಚಲಿಯಾರ್ ನದಿಯ ದಡದಲ್ಲಿದೆ, ಹಿತಕರವಾದ ಹಸಿರು ಮತ್ತು ಫಲವತ್ತಾದ ಭೂಮಿ ಹೊಂದಿದೆ. ಉತ್ತಮ ಸಂಪರ್ಕವಿದ್ದು ಇದರ ಹತ್ತಿರದ ಪಟ್ಟಣಗಳೆಂದರೆ ಮಲಪ್ಪುರಂ ಪಟ್ಟಣ (40 ಕಿ.ಮೀ), ಕೋಯಿಕೋಡ್ (72 ಕಿ.ಮೀ), ತ್ರಿಶೂರ್ (120 ಕಿ.ಮೀ), ಗುದಲುರ್(50 ಕಿ.ಮೀ) ಮತ್ತು ಊಟಿ (100 ಕಿ.ಮೀ). ನೆರೆಯ ಪಟ್ಟಣಗಳಿಗೆ ಮತ್ತು ಜಿಲ್ಲೆಗಳಿಗೆ ಈ ಮೂಲಕವೂ ಪ್ರವೇಶಿಸಬಹುದು.

ವಿಶಿಷ್ಟ ಸಂಸ್ಕೃತಿ ಮತ್ತು ವಿಭಿನ್ನವಾದ ಕಲಾಪ್ರಕಾರಗಳು

ನಿಲಂಬೂರ್ ವಿಚಿತ್ರವೆನಿಸುವ ಭೌಗೋಳಿಕ ಸ್ಥಾನದ ಕಾರಣದಿಂದ ಒಂದು ಅನನ್ಯ ಸಂಸ್ಕೃತಿ ಹೊಂದಿದ್ದು, ಬ್ರಿಟಿಷ್ ಮತ್ತು ಮದ್ರಾಸಿಗರ ರಾಯಲ್ ಕಿಂಗ್ಡಮ್ ಆಡಳಿತದ ಅಡಿಯಲ್ಲಿ  ಅನೇಕ ಬದಲಾವಣೆಗಳನ್ನು, ವಿಶಿಷ್ಟ ಸಾಂಸ್ಕೃತಿಕ ಲಕ್ಷಣಗಳನ್ನು ಪಡೆಯಿತು ಹಾಗೂ ನಿಲಂಬೂರ್ ವೆಟ್ಟೆಕ್ಕೊರು ಮಕಾನ್ ಪಾಟ್ಟು (ಜನಪ್ರಿಯವಾಗಿ ನಿಲಂಬೂರ್ ಪಾಟ್ಟು ಎಂದು ಕರೆಯಲಾಗುತ್ತದೆ) ಎಂಬ ಕಲಾತ್ಮಕ ರೂಪಕ್ಕೆ ಪ್ರಸಿದ್ಧಿಯಾಯಿತು. ಈ ಕಲೆಯನ್ನು ನಿಲಂಬೂರ್ ಕೊವಿಲಕಮ್ ದೇವಾಲಯದಲ್ಲಿ  ವರ್ಷಕ್ಕೊಮ್ಮೆ ನಡೆಸಲಾಗುತ್ತದೆ. ನಿಲಂಬೂರ್ ವಾಸ್ತುಶಿಲ್ಪದ ಪರಂಪರೆಯಲ್ಲಿ ತನ್ನ ಬಹುದೊಡ್ಡ ಪಾಲನ್ನು ಹೊಂದಿದೆ. ಪಟ್ಟಣವನ್ನು ಕೊವಿಲಕಮ್ ಹೆಸರಿನಲ್ಲಿ ಕರೆಯಲಾಗುತ್ತಿದ್ದು, ಹಿಂದಿನ ಕಾಲದ ರಾಜರು ಐಶಾರಾಮಿಯಾಗಿ  ವಾಸಿಸುವ ಸ್ಥಳವಾಗಿತ್ತು. ಇಲ್ಲಿ ಭವ್ಯವಾದ ಗೋಡೆ ವರ್ಣಚಿತ್ರಗಳು, ವಿಸ್ಮಯಕರ ಮರದ ಕೃತಿಗಳು ಗಮನ ಸೆಳೆಯಲು ಮಹತ್ವದ ಪಾತ್ರವಹಿಸಿವೆ.

ಸಸ್ಯಸಂಪತ್ತು ಮತ್ತು ಆಕರ್ಷಕ ನೆಡುತೋಪು

ವಿಶ್ವದ ಅತ್ಯಂತ ಪ್ರಖ್ಯಾತ ಮತ್ತು  ಹಳೆಯ ಸಾಗವಾನಿ ನೆಡುತೋಪು ಎಂದು ನಿಲಂಬೂರ್ ಪ್ರಖ್ಯಾತಿ ಹೊಂದಿದೆ. ಇದು ಪ್ರತಿ ವರ್ಷ ಸಾವಿರಾರು ಜನರನ್ನು ಆಕರ್ಷಿಸುವ ಭಾರತದ ಮೊದಲ ಸಾಗವಾನಿ ಮ್ಯೂಸಿಯಂ ಆಗಿದೆ. ಸಸ್ಯ ಪ್ರೇಮಿ ಹಾಗೂ ತೇಗದ ಮರದ ಬಗ್ಗೆ ತಿಳಿಯಲು ಬಯಸುವ ಪ್ರವಾಸಿಗರಿಗೆ  ಮ್ಯೂಸಿಯಂನ ಸಿಬ್ಬಂದಿಗಳು ಎಲ್ಲ ವಿವರಣೆಗಳನ್ನು ಕೊಡುತ್ತಾರೆ.

ಇಲ್ಲಿ ವಿಶ್ವದ ಅತಿ ಎತ್ತರದ ಮತ್ತು ದೊಡ್ಡ ತೇಗದ ಮರವನ್ನು ಕಾಣಬಹುದಾಗಿದ್ದು, ಸಾಗವಾನಿ ಸಂರಕ್ಷಣೆ ಮತ್ತೊಂದು ವಿಶ್ವ ದಾಖಲೆಯನ್ನು ಈ ಪಟ್ಟಣದ ಹೆಸರಿನಲ್ಲಿ ದೃಢೀಕರಿಸಲಾಗಿದೆ. ಇದು ಸಮೃದ್ಧವಾದ ಬಿದಿರಿಗೂ ಪ್ರಸಿದ್ಧಿಯಾಗಿದೆ. ನಿಲಿಂಬಾ (ಬಿದಿರು) ಎನ್ನುವ ಪದ ಈ ಊರಿಗೆ ನಿಲಂಬೂರ್  ಎಂದು ಹೆಸರಿಸಲು ಕಾರಣವಾಯಿತು. ಕರ್ನಾಟಕದ ಬಂಡಿಪುರ ಅಭಯಾರಣ್ಯ, ತಮಿಳುನಾಡಿನ  ಮುತುಮಲೈ ಅಭಯಾರಣ್ಯ, ಕೇರಳದದ ವಾಯನಾಡ್ ಅಭಯಾರಣ್ಯಗಳ ಸಾಲಿನಲ್ಲಿ ಇದು ಕೂಡ ಸೆರ್ಪಡೆಯಾಗುತ್ತದೆ. ತೇಗದಿಂದಾಗಿ  ನಿಲಂಬೂರ್ ಅರಣ್ಯಗಳು ರೋಸ್ ವುಡ್ಸ್, ಮಹೋಗಾನಿ ಮತ್ತು ವೆಂಟೀಕ್ ಮರಗಳ ಬೆಳವಣಿಗೆಗೆ ಸಹಕಾರಿಯಾಗಿದೆ. ಕೇರಳದ ಪ್ರಾಚೀನ ಬುಡಕಟ್ಟಿನ ಗುಂಪುಗಳಾದ ಚೊಲಯ್ನಿಕನ್ಸ ಜನಾಂಗದವರು ಇಲ್ಲಿ ನೆಲೆಸಿದ್ದಾರೆ.

ನೋಡುಗನ ನಿಜವಾದ ತೃಪ್ತಿಗೆ...

ನಿಲಂಬೂರ್ ನಲ್ಲಿ ನೋಡಬಹುದಾದಂತಹ ಸ್ಥಳಗಳು ಸಾಕಷ್ಟಿವೆ. ಕೊನೊಲ್ಲಿ ಕಥಾವಸ್ತು ಮತ್ತು ತೇಗದ ಮ್ಯೂಸಿಯಂ ಪಟ್ಟಣದ ಅತ್ಯಧಿಕ ಭೇಟಿ ನೀಡಲ್ಪಡುವ ಪ್ರವಾಸೀ ಆಕರ್ಷಣೆಯ ತಾಣವಾಗಿದ್ದಲ್ಲದೆ, ಅದ್ಯಂಪಾರಾ ಫಾಲ್ಸ್ ಮತ್ತು ವೆಲ್ಲಂತೊಡೆ ಫಾಲ್ಸ್ ಕೂಡ ಪ್ರವಾಸಿಗರನ್ನು ಆಕರ್ಷಿಸುತ್ತವೆ. ನೆಡುನಾಯಕಮ್  ನಿಲಂಬೂರ್ ನ ಇನ್ನೊಂದು ಪ್ರಮುಖ ಸ್ಥಾನಗಳಲ್ಲಿ ಒಂದಾಗಿದೆ. ಅದರ ಮಳೆಕಾಡು, ಆನೆ ಶಿಬಿರಗಳು ಮತ್ತು ಮರದ ಮನೆಗಳು ಹೆಸರುವಾಸಿಯಾಗಿದೆ. ಬಯೋ ರಿಸೌರ್ಸಸ್ ಪಾರ್ಕ್ ಆಫ್ ನಿಲಂಬೂರ್, ನಿಸರ್ಗ ಪ್ರೇಮಿಗಳನ್ನು ಇನ್ನೂ ಆಕರ್ಷಿಸುತ್ತದೆ  ಹಾಗೂ ಇಲ್ಲಿರುವ ಬಟರ್ಫ್ಲೈ ಪಾರ್ಕ್ ಕೂಡ ಪ್ರಸಿದ್ದಿಯಾಗಿದೆ. ಹೊಸ ಅಮರಾಂಬಲಮ್ ಸಂರಕ್ಷಿತ ಅರಣ್ಯ, ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಪಾರ್ಕ್  ಪಕ್ಷಿಗಳ ಅಪರೂಪದ ತಳಿಗಳಿಗೆ ವಾಸಸ್ಥಾನವಾಗಿದೆ. ನಿಲಂಬೂರ್ ನ ಕೊವಿಲಕಮ್ ಹಾಗೂ ವೆಟ್ಟಕ್ಕೊರುಮಕನ್ ಪ್ರಮುಖ ದೇವಸ್ಥಾನವಾಗಿದ್ದು ವರ್ಷವಿಡೀ ಭಕ್ತರನ್ನು ಮತ್ತು ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಮಹತ್ವದ ಪಾತ್ರವಹಿಸಿದೆ. ಸುಂದರ ಪರಿಸರ ಹಾಗೂ ಪ್ರಶಾಂತತೆ ಪ್ರವಾಸಿಗನನ್ನು ಮಂತ್ರಮುಗ್ಧನನ್ನಾಗಿಸುತ್ತದೆ. ಇಲ್ಲಿ ಉತ್ತಮ ರೆಸಾರ್ಟುಗಳು ಮತ್ತು ಹೋಮ್ ಸ್ಟೆಗಳು ಲಭ್ಯವಿದ್ದು ಆಹ್ಲಾದಕರ ಸಾಂಪ್ರದಾಯಿಕ ಮಲಬಾರ್  ಭೋಜನಕ್ಕೆ ಮನಸೋಲುವುದರಲ್ಲಿ ಸಂದೇಹವಿಲ್ಲ. 

ನಿಲಂಬೂರ್ ಪ್ರಸಿದ್ಧವಾಗಿದೆ

ನಿಲಂಬೂರ್ ಹವಾಮಾನ

ಉತ್ತಮ ಸಮಯ ನಿಲಂಬೂರ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ನಿಲಂಬೂರ್

 • ರಸ್ತೆಯ ಮೂಲಕ
  ನಿಲಂಬೂರ್ ಗೆ ಬಸ್ ಸಂಪರ್ಕ ಬೆಂಗಳೂರು, ಮೈಸೂರು, ಸುಲ್ತಾನ್ ಬಥೆರಿ, ಕೋಳಿಕೋಡ್, ತ್ರಿಶೂರ್, ಪಾಲಕ್ಕಾಡ್ ಮತ್ತು ಕೊಟ್ಟಾಯಂನಿಂದ ಲಭ್ಯವಿದೆ. ಕೇರಳ ರಾಜ್ಯ ಸಾರಿಗೆ ಸಂಸ್ಠೆ(ಕೆಎಸ್ಆರ್ಟಿಸಿ) ಅನೇಕ ಬಸ್ ಸೇವೆಗಳನ್ನು ಒದಗಿಸುತ್ತದೆ. ನಿಲಂಬೂರ್ ಎಲ್ಲಾ ನೆರೆಯ ಸ್ಥಳಗಳಿಗೆ ಬಸ್ ಸಂಪರ್ಕ ಹೊಂದಿದೆ. ಪ್ರಯಾಣಿಕರು ಈ ಸ್ಥಳವನ್ನು ತಲುಪಲು ಹಾಗೂ ಖಾಸಗಿ ಬಸ್ಸುಗಳನ್ನು ಕೂಡ ತೆಗೆದುಕೊಳ್ಳಬಹುದು.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ನಿಲಂಬೂರ್ ರೈಲ್ವೆ ನಿಲ್ದಾಣದಿಂದ ಉದಾಹರಣೆಗೆ ಪಾಲಕ್ಕಾಡ್, ಶೊರ್ನುರ್, ಚೆನೈ ಮತ್ತು ಕೊಚ್ಚಿ ಕೆಲವು ಸ್ಥಳಗಳಿಗೆ ಹಾಗೂ ಭಾರತದ ಎಲ್ಲಾ ಪ್ರಮುಖ ನಗರಗಳಿಗೆ ರಲ್ವೆ ಸಂಪರ್ಕ ಲಭ್ಯವಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ನೀಲಾಂಬುರ್ ನಿಂದ 45 ಕಿಮೀ ದೂರದಲ್ಲಿ ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ, ಕ್ಯಾಲಿಕಟ್ ವಿಮಾನ ನಿಲ್ದಾಣವು ಭಾರತದ ಎಲ್ಲಾ ಪ್ರಮುಖ ನಗರಗಳಿಗೆ ಮತ್ತು ಮಧ್ಯಪ್ರಾಚ್ಯದಲ್ಲಿ ಕೆಲವು ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ವಿಮಾನ ನಿಲ್ದಾಣದಿಂದ ನಿಲಂಬೂರ್ ಗೆ 600 ರೂಪಾಯಿ ಅಂದಾಜು ವೆಚ್ಚದಲ್ಲಿ ಟ್ಯಾಕ್ಸಿ ಸೇವೆಗಳನ್ನು ಕೂಡ ಪಡೆಯಬಹುದು. ವಿಮಾನ ನಿಲ್ದಾಣದಿಂದ ನಿಲಂಬೂರ್ ಗೆ ತಲುಪಲು 60 ನಿಮಿಷ ಸಮಯ ಬೇಕಾಗುತ್ತದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
20 May,Fri
Return On
21 May,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
20 May,Fri
Check Out
21 May,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
20 May,Fri
Return On
21 May,Sat