ದೇಶದ ಅತಿ ದೊಡ್ಡ ಅಣೆಕಟ್ಟುಗಳಲ್ಲಿ ಕರಪೂಳಾ ಅಣೆಕಟ್ಟು ಒಂದು. ಕಲ್ಪೆಟ್ಟಾದಿಂದ 16 ಕಿ.ಮೀ. ದೂರದಲ್ಲಿದೆ. ಇಲ್ಲಿನ ಕರಪೂಳಾ ಕೆರೆಗೆ ಈ ಅಣೆಕಟ್ಟನ್ನು ಕಟ್ಟಲಾಗಿದೆ. ಈ ಕೆರೆ ಬೃಹತ್ ಬಂಡೆಗಳಿಂದ ಆವೃತ್ತವಾಗಿ ವಿಶಾಲ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. ಸಾಲು ಸಾಲು ಗುಡ್ಡಗಳ ನಡುವೆ ಇಲ್ಲಿ ಕೆರೆಗಳಿವೆ. ಈ ಭೂಮಿಯು ಸಾಕಷ್ಟು ಅಪರೂಪದ ಪಕ್ಷಿ ಸಂಕುಲದ ಆವಾಸ ತಾಣವಾಗಿದೆ. ಅಣೆಕಟ್ಟಿನಿಂದ ಇಳಿದು ಹೋಗುವಾಗ ಉಂಟಾಗುವ ನೀರಿನ ಸದ್ದು, ಸುತ್ತಲೂ ವ್ಯಾಪಿಸಿರುವ ಹಸಿರು ಕಾಡಿನ ಛಾಯೆ ಕಣ್ಣನ್ನು ಸೆಳೆಯುತ್ತದೆ. ಛಾಯಾಗ್ರಹಣವನ್ನು ಇಷ್ಟಪಡುವವರಿಗೆ ಇದು ಸಂದರ್ಶಿಸಲೇಬೇಕಾದ ತಾಣ.