Search
  • Follow NativePlanet
Share
ಮುಖಪುಟ » ಸ್ಥಳಗಳು » ಬೇಕಲ್ » ಆಕರ್ಷಣೆಗಳು » ಚಂದ್ರಗಿರಿ ಕೋಟೆ

ಚಂದ್ರಗಿರಿ ಕೋಟೆ, ಬೇಕಲ್

1

ಚಂದ್ರಗಿರಿ ಕೋಟೆ ಚಂದ್ರಗಿರಿ ನದಿಯ ಪಕ್ಕದಲ್ಲಿಯೇ ಕಟ್ಟಲಾಗಿದೆ. ಇದೊಂದು ಪ್ರವಾಸಿಗರ ನೆಚ್ಚಿನ ತಾಣವಾಗಿದ್ದು ತೆಂಗು ಕಂಗುಗಳ ಸೊಬಗು ಸುತ್ತಲೂ ಆವರಿಸಿದೆ. ಅಲ್ಲದೇ ಅರೇಬಿಯನ್ ಸಮುದ್ರವೂ ಕೂಡಾ ಇಲ್ಲಿ ಅತ್ಯಂತ ರಮಣೀಯವಾಗಿ ಗೋಚರವಾಗುತ್ತದೆ. ಇಲ್ಲಿನ ಪಶ್ಚಿಮ ದಿಕ್ಕಿಗೆ ಬಂದರೆ ಅದ್ಭುತವಾದ ಸೂರ್ಯಾಸ್ತವನ್ನು ನೋಡಬಹುದು. ಚಂದ್ರಗಿರಿ ಕೋಟೆಯು ಶಿವಪ್ಪ ನಾಯ್ಕ ನಿಂದ 17 ನೇ ಶತಮಾನದಲ್ಲಿ ಕಟ್ಟಲಾಯಿತು. ಈ ಕೋಟೆಯು ತನ್ನದೇ ಆದ ವಿಶೇಷ ಇತಿಹಾಸವನ್ನು ಹೊಂದಿದೆ. ನೂರು ವರ್ಷಗಳ ಹಿಂದೆ, ಚಂದ್ರಗಿರಿ ನದಿಯು ಕೊಳತುನಾಡು ಹಾಗೂ ತುಳುನಾಡು ಈ ಎರಡು ಸಾಮ್ರಾಜ್ಯಗಳ ಗಡಿ ಪ್ರದೇಶವಾಗಿತ್ತು. ಈ ಎರಡು ಸಾಮ್ರಾಜ್ಯಗಳೂ ಅತ್ಯಂತ ಬಲಶಾಲಿಯಾಗಿದ್ದವು.

ಯಾವಾಗ ವಿಜಯನಗರದ ದೊರೆ ತುಳುನಾಡನ್ನು ತನ್ನ ವಶಕ್ಕೆ ತೆಗೆದುಕೊಂಡನೋ ಅಂದಿನಿಂದ ಚಂದ್ರಗಿರಿಯು ವಿಜಯವಗರಕ್ಕೆ ಸೇರಿತು.16 ನೇ ಶತಮಾನದ ಹೊತ್ತಿಗೆ ವಿಜಯನಗರದ ದೊರೆ ತನ್ನ ಶಕ್ತಿಯನ್ನು ಕಳೆದುಕೊಂಡಿದ್ದ. ನಂತರ ಚಂದ್ರಗಿರಿಯು ಸ್ವತಂತ್ರಗೊಂಡು ರಕ್ಷಣೆಗಾಗೆ ಚಂದ್ರಗಿರಿ ಕೋಟೆಯನ್ನು ನಿರ್ಮಿಸಲಾಯಿತು. ತದನಂತರ ಈ ಕೋಟೆಯು ಮೈಸೂರಿನ ಹುಲಿ ಹೈದರಲಿ (ಹೈರದ್ ಅಲಿ) ಯ ಕೈಸೇರಿತು, ಕೊನೆಗೆ ಬ್ರಿಟಿಷ್ ಇಸ್ಟ್ ಇಂಡಿಯಾ ಕಂಪನಿ ಈ ಕೋಟೆಯನ್ನು ತನ್ನದಾಗಿಸಿಕೊಂಡಿತು. ಇದೀಗ ಈ ಚಂದ್ರಗಿರಿ ಕೋಟೆ ಪ್ರಾಚ್ಯಶಾಸ್ತ್ರ ಇಲಾಖೆಯವರಿಂದ ಸಂರಕ್ಷಿಸಲ್ಪಡುತ್ತಿದೆ.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat