ಕಾಪ್ಪಾಡ್ ಕಡಲ ತೀರ, ಕ್ಯಾಲಿಕಟ್

ಕ್ಯಾಲಿಕಟ್‌ನಿಂದ 18 ಕಿ.ಮೀ. ದೂರದಲ್ಲಿದೆ ಕಾಪ್ಪಾಡ್ ಕಡಲ ತೀರ. ಮರಳ ತೀರವು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿರುವ ಜತೆಗೆ ಐತಿಹಾಸಿಕ ಹಿನ್ನೆಲೆಯನ್ನೂ ಹೊಂದಿದೆ. ಕ್ಯಾಲಿಕಟ್‌ ಬ್ರಿಟೀಷ್ ಈಸ್ಟ್‌ ಇಂಡಿಯಾ ಕಂಪನಿ ಆಡಳಿತದ ಅಡಿ ಇದ್ದ ಸಂದರ್ಭದಲ್ಲಿ ಇದರ ನಿರ್ವಹಣೆ ಮದ್ರಾಸ್‌ ಅಧ್ಯಕ್ಷರ ಅಧೀನದಲ್ಲಿತ್ತು. ಕ್ಯಾಲಿಕಟ್‌ ವಿಶ್ವ ಇತಿಹಾಸದಲ್ಲಿ ಪ್ರಮುಖ ಸ್ಥಾನ ಪಡೆದಿದೆ. 'ಕಾಪ್ಪಾಡ್‌' ಎಂಬ ಹೆಸರಿನಿಂದ (ಈಗ ಕ್ಯಾಲಿಕಟ್‌ನಿಂದ 18 ಕಿ.ಮೀ. ದೂರದಲ್ಲಿರುವ ಪ್ರದೇಶ) ಕರೆಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಅಂದರೆ 1498 ರಲ್ಲಿ ಪೋರ್ಚುಗೀಸ್‌ ನಾವಿಕ ವಾಸ್ಕೋಡಗಾಮ ಇಲ್ಲಿಗೆ ಬಂದಿಳಿದ.

ಅಂದು ಈತ ಬಂದಿಳಿದ ನೆನಪಿಗೆ ನಿರ್ಮಿಸಿದ ಸ್ಮಾರಕ ಇಂದು ಕ್ಯಾಲಿಕಟ್‌ನ ಅತ್ಯಂತ ಜನಪ್ರಿಯ ಪ್ರವಾಸಿ ತಾಣ. ಜನ ಹುಡುಕಿ ಬರುವ ಸ್ಥಳವೆಂದು ಇದು ಹೆಸರುವಾಸಿಯಾಗಿದೆ. ಇದೆ ಸ್ಥಳದಲ್ಲಿ ವಾಸ್ಕೋಡಗಾಮ ಬಂದಿಳಿದ ಕುರುಹಾಗಿ ಒಂದು ಲಿಪಿ ಕಾಣಸಿಗುತ್ತದೆ. ಕೆತ್ತನೆಯಲ್ಲಿ ಸ್ಪಷ್ಟವಾಗಿ 'ವಾಸ್ಕೋಡಗಾಮ ಲ್ಯಾಂಡೆಡ್‌ ಹಿಯರ್‌, ಕಪ್ಪಕಡವು, ಇನ್‌ ದಿ ಇಯರ್‌ 1498' ಎಂದಿದೆ. ಕಲ್ಲಿನ ಬಂಡೆಯಿಂದ ಈ ಕಡಲ ತೀರಾವೃತ್ತವಾಗಿದೆ. ಕಲ್ಲಿನಿಂದಲೇ ನಿರ್ಮಿಸಿದ ಚಿಕ್ಕ ಗುಡಿ ಇದೆ. ಇದು 800 ವರ್ಷ ಹಳೆಯ ದೇವಾಲಯ ಎನ್ನಲಾಗುತ್ತಿದೆ. ಕಾಪ್ಪಾಡ್ ಕಡಲ ತೀರದ ಪ್ರಮುಖ ಆಕರ್ಷಣೆಯಲ್ಲಿ ಇದೂ ಒಂದು.

ಕಾಪ್ಪಾಡ್ ಗೆ ಪ್ರವಾಸಕ್ಕಾಗಿ ಮಾತ್ರವಲ್ಲ ಆಯುರ್ವೇದ ಚಿಕಿತ್ಸೆಗಾಗಿಯೂ ಬರುತ್ತಾರೆ. ಇಲ್ಲಿ ಸಾಕಷ್ಟು ರೆಸಾರ್ಟ್ ಗಳಿದ್ದು, ಉತ್ತಮ ಪ್ರದೇಶದಲ್ಲಿವೆ. ಬೇಸಿಗೆ ರಜೆ ಕಳೆಯಲು ಇದು ಪ್ರಶಸ್ತ ತಾಣ. ಮಳೆಗಾಲದಲ್ಲಿ ಬರುವುದನ್ನು ತಪ್ಪಿಸಿಕೊಂಡರೆ ಒಳಿತು.

Please Wait while comments are loading...