Search
  • Follow NativePlanet
Share
ಮುಖಪುಟ » ಸ್ಥಳಗಳು » ಕ್ಯಾಲಿಕಟ್ » ಆಕರ್ಷಣೆಗಳು » ಬೈಪೊರೆ

ಬೈಪೊರೆ, ಕ್ಯಾಲಿಕಟ್

3

ಕ್ಯಾಲಿಕಟ್‌ ನಗರದಿಂದ 10 ಕಿ.ಮೀ. ದೂರದಲ್ಲಿದೆ ಬೈಪೊರೆ. ಐತಿಹಾಸಿಕ ತಾಣವಾಗಿರುವ ಜತೆಗೆ ಪ್ರಮುಖ ಬಂದರು ಕೂಡ ಆಗಿದೆ. ಇದೊಂದು ಮುಖ್ಯ ಪ್ರದೇಶವಲ್ಲದೇ ವಾಣಿಜ್ಯ ಹಬ್‌ ಆಗಿ ಜನಪ್ರಿಯವಾಗಿದೆ. ಇದು ಅರಬ್‌, ಏಷ್ಯನ್‌, ಯುರೋಪಿಯನ್‌ ಖಂಡದ ಹಲವು ನಗರಗಳ ಜತೆ ವಾಣಿಜ್ಯ ವ್ಯಾಪಾರ ಸಂಪರ್ಕ ಹೊಂದಿದೆ. ಇದರ ಇತಿಹಾಸ ಗಮನಿಸಿದಾಗ ರೇಷ್ಮೆ ಎಳೆ ವ್ಯಾಪಾರದ ಪ್ರಮುಖ ತಾಣ ಇದಾಗಿತ್ತು ಎಂದು ಅರಿವಾಗುತ್ತದೆ. ಈ ಕಾರಣದಿಂದಲೇ ಮೆಸಪೋಟಮಿಯಾ ಜತೆ ವಾಣಿಜ್ಯ ಸಂಪರ್ಕವನ್ನೂ ಹೊಂದಿತ್ತು ಎಂದು ತಿಳಿದುಬರುತ್ತದೆ.

ಚಾಲಿಯಾರ್‌ ನದಿ ದಡದಲ್ಲಿರುವ ಈ ಬಂದರು ನಗರಿಯು ಹಡಗು ನಿರ್ಮಾಣ ಕಾರ್ಯದಲ್ಲಿ ಹೆಸರುವಾಸಿಯಾಗಿದೆ. ಕೈಗಾರಿಕೆಗಳೂ ಇವೆ. "ಉರು' ಹೆಸರಿನಿಂದ ಜನಪ್ರಿಯವಾಗಿರುವ ಮರದ ಹಡಗುಗಳು ಬೈಪೊರೆಯಲ್ಲಿಯೇ ನಿರ್ಮಾಣಗೊಂಡಿವೆ. ಹಿಂದಿನ ದಿನಗಳಲ್ಲಿ ಇವು ಅತ್ಯಂತ ಜನಪ್ರಿಯ ಹಾಗೂ ಭರವಸೆದಾಯಕ ಹಡಗುಗಳೆಂದು ಹೆಸರಾಗಿದ್ದವು. ಹಡಗು ಕಟ್ಟುವ ಇಲ್ಲಿನವರ ಕಾಯಕಕ್ಕೆ 1500 ವರ್ಷಗಳ ಇತಿಹಾಸವಿದೆ. ಇದರಿಂದ ಇಲ್ಲಿ ಅತ್ಯಂತ ನುರಿತ ಹಾಗೂ ಜಾಣ್ಮೆಯ ಕೆಲಸ ಮಾಡುವ ಕಾರ್ಮಿಕರು ಕಾಣಸಿಗುತ್ತಾರೆ.

ಇಂದು ಬೈಪೊರೆ ಬಂದರು ಕೊಚ್ಚಿ ನಂತರ ಕೇರಳದ ಅತಿದೊಡ್ಡ ಬಂದರು ಅನ್ನುವ ಕೀರ್ತಿಗೆ ಪಾತ್ರವಾಗಿದೆ. ಮಲಯಾಳಂ ಬರಹ ಕ್ಷೇತ್ರದ ದಂತಕತೆ ವೈಕೋಮ್‌ ಮೊಹಮ್ಮದ್‌ ಬಶೀರ್‌ ಅವರ ಹುಟ್ಟೂರು. ಇವರು ಬೈಪೊರೆ ಸುಲ್ತಾನ್‌ ಅಂತಲೇ ಗುರುತಾಗಿದ್ದರು. ಬಂದರಿನ ಜತೆಗೆ ಬೈಪೊರೆ ಹೆಸರುವಾಸಿಯಾಗಿರುವುದು ಹಡಗು ನಿರ್ಮಾಣ ಕೇಂದ್ರವಾಗಿ. ಸಮುದ್ರದುದ್ದಕ್ಕೂ ನಿರ್ಮಾಣವಾಗಿರುವ ಕಲ್ಲಿನ ಸೇತುವೆ, ಲೈಟ್‌ಹೌಸ್‌, ಮೀನುಗಾರಿಕೆ ತಾಣ ಹಾಗೂ ಪಕ್ಷಿಧಾಮ (ಇಲ್ಲಿಂದ ಏಳು ಕಿ.ಮೀ. ದೂರದಲ್ಲಿರುವ ಕಡಲುಂದಿ ಎಂಬಲ್ಲಿದೆ)ಕ್ಕೆ ಹೆಸರಾಗಿದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue