Search
  • Follow NativePlanet
Share
ಮುಖಪುಟ » ಸ್ಥಳಗಳು » ತೆನ್ಮಲ » ಆಕರ್ಷಣೆಗಳು » ಕುಲತುಪುಳ

ಕುಲತುಪುಳ, ತೆನ್ಮಲ

1

ಕುಲತುಪುಳ ಎಂಬುದು ಕೊಲ್ಲಂ ಜಿಲ್ಲೆಯಲ್ಲಿರುವ ಒಂದು ಸುಂದರವಾದ ಹಳ್ಳಿಯಾಗಿದೆ. ಇದು ತೇನ್‍ಮಲ ಬೆಟ್ಟಗಾಡು ಪ್ರದೇಶಕ್ಕೆ ಸಮೀಪದಲ್ಲಿದೆ. ತಿರುವನಂತಪುರಂ - ಶೆಂಕೊಟ್ಟೈ ರಸ್ತೆಯಲ್ಲಿರುವ ಈ ಸುಂದರವಾದ ಹಳ್ಳಿಗೆ ತಿರುವನಂತಪುರಂ ಮತ್ತು ಕೊಲ್ಲಂಗಳಿಂದ ಸುಲಭವಾಗಿ ತಲುಪಬಹುದು. ಇವೆರಡು ನಗರಗಳು ಕ್ರಮವಾಗಿ 62 ಮತ್ತು 64 ಕಿ.ಮೀ ದೂರದಲ್ಲಿವೆ.

ಕುಲತುಪುಳವು ತನ್ನಲ್ಲಿರುವ ಸಸ್ತ ದೇವಾಲಯಕ್ಕೆ ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿ ಬಾಲ ಸಸ್ತ ( ಹರಿಹರ ಪುತ್ರ - ಅಯ್ಯಪ್ಪ) ದೇವರನ್ನು ಪೂಜಿಸ್ಲಲಾಗುತ್ತದೆ. ಈ ದೇವಾಲಯವು ಕಲ್ಲಡ ನದಿಯ ದಂಡೆಯ ಮೇಲೆ ನೆಲೆಗೊಂಡಿದ್ದು, ಪ್ರವಾಸಿಗರಿಗೆ ಪ್ರಶಾಂತವಾದ ವಾತಾವರಣದ ಅನುಭವವನ್ನು ಒದಗಿಸುತ್ತದೆ. ಎಪ್ರಿಲ್‍ನಲ್ಲಿ ಬರುವ ವಿಶು ಮಹೋತ್ಸವಂ ಹಬ್ಬದಂದು ಇಲ್ಲಿ ಒಂದು ಮುಖ್ಯ ಉತ್ಸವವು ಜರುಗುತ್ತದೆ. ಈ ಹಬ್ಬವು ಹಲವಾರು ಪ್ರವಾಸಿಗರನ್ನು ಮತ್ತು ಭಕ್ತಾಧಿಗಳನ್ನು ತನ್ನತ್ತ ಆಕರ್ಷಿಸುತ್ತದೆ. ಈ ಹಳ್ಳಿಯು ಒಂದು ಮೀಸಲು ಅರಣ್ಯವನ್ನು ಹೊಂದಿದೆ. ಇದು ಸುಮಾರ 1000 ಕಿ.ಮೀ ಗಳಷ್ಟು ವಿಸ್ತೀರ್ಣವನ್ನು ಹೊಂದಿದೆ. ರಾಕ್ ವುಡ್ ಎಸ್ಟೇಟ್ ಮತ್ತು ಶೆಂಡುರ್ನಿ ವನ್ಯಜೀವಿಧಾಮಗಳು ಕುಲತುಪುಳ ಹಳ್ಳಿಗೆ ಸಮೀಪವಿರುವ ಮತ್ತೆರಡು ಪ್ರಮುಖ ಆಕರ್ಷಣೆಗಳಾಗಿವೆ. ಈ ಹಳ್ಳಿಯು ಜೈವಿಕ ಪ್ರವಾಸೋದ್ಯಮ ಯೋಜನೆಯ ಒಂದು ಅಂಗವಾಗಿದೆ. ಈ ಯೋಜನೆಯು ಕುಲತುಪುಳ, ಅರ್ಯಂಕವು ಮತ್ತು ಅಚನ್‍ಕೋವಿಲ್ ಎಂಬ ಮೂರು ಅಯ್ಯಪ್ಪ ದೇವಾಲಯಗಳನ್ನು ಸಂಪರ್ಕಿಸುತ್ತದೆ.

ಈ ಸಣ್ಣ ಹಳ್ಳಿಯು ಬೆಟ್ಟಗುಡ್ಡಗಳ ಶ್ರೇಣಿಯ ನಡುವೆ ಇರುವ ವಿಸ್ತಾರವಾದ ಕಾಡಿನ ಅಂಚಿನಲ್ಲಿ ನೆಲೆಸಿದೆ. ದೈನಂದಿನ ಜಂಜಡಗಳಿಂದ ಮತ್ತು ಪ್ರತಿನಿತ್ಯದ ಚರ್ವಿತ ಚರ್ವಣಗಳಿಂದ ಬದಲಾವಣೆಗಳನ್ನು ಬಯಸುವವರಿಗೆ ಈ ಸ್ಥಳವು ಹೇಳಿ ಮಾಡಿಸಿದ ತಾಣವಾಗಿದೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri