Search
  • Follow NativePlanet
Share
ಮುಖಪುಟ » ಸ್ಥಳಗಳು » ತೆನ್ಮಲ » ಆಕರ್ಷಣೆಗಳು » ಜೈವಿಕ ಪ್ರವಾಸಿ ಯೋಜನೆ

ಜೈವಿಕ ಪ್ರವಾಸಿ ಯೋಜನೆ, ತೆನ್ಮಲ

1

ತೇನ್‍ಮಲದ ಜೈವಿಕ ಪ್ರವಾಸಿ ಯೋಜನೆಯು ಭಾರತದ ಪ್ರಪ್ರಥಮ ಜೈವಿಕ ಪ್ರವಾಸಿ ಯೋಜನೆಯೆಂಬ ಖ್ಯಾತಿಗೆ ಪಾತ್ರವಾಗಿದೆ. ಈ ಸ್ಥಳವು ಈ ಯೋಜನೆಗೆ ಪಾತ್ರವಾಗಲು ಇಲ್ಲಿರುವ ವಿಹಂಗಮ ಪರಿಸರ, ಜೀವ ವೈವಿಧ್ಯ ಮತ್ತು ಇಲ್ಲಿ ನಡೆಸಬಹುದಾದ ಕಾರ್ಯ ಚಟುವಟಿಕೆಗಳೆ ಕಾರಣವಾಗಿವೆ. ಈ ಸ್ಥಳವನ್ನು 5 ವಲಯಗಳನ್ನಾಗಿ ವಿಭಾಗಿಸಲಾಗಿದೆ. ಪ್ರತಿ ವಲಯವು ತನ್ನದೆ ಆದ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ಪರಿಸರ ಪ್ರೇಮಿಗಳಿಗೆ ಹಾಗು ಸಾಹಸಿಗಳಿಗೆ ಪ್ರತ್ಯೇಕವಾದ ಚಟುವಟಿಕೆಗಳನ್ನು ಕೈಗೊಳ್ಳುವ ಅವಕಾಶವನ್ನು ಒದಗಿಸುತ್ತವೆ.

ಸಾಂಸ್ಕೃತಿಕ ವಲಯವು ಒಂದು ಬಯಲು ರಂಗಮಂದಿರ, ಸ್ಥಳೀಯ ಹೆಂಗಸರು ನಡೆಸುವ ಅಂಗಡಿಗಳು ಮತ್ತು ಸಂಗೀತ ಕಾರಂಜಿಯನ್ನು ಹೊಂದಿದೆ. ಸಾಹಸ ವಲಯವು ಎಲ್ಲಾದಿನಗಳಲ್ಲು ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ತೆರೆದಿರುತ್ತದೆ. ಇಲ್ಲಿ ಪರಿಸರ ನಡಿಗೆ, ಕೆನೊಪಿ ನಡಿಗೆ ಹಾದಿ , ಕಮಲ ಕೊಳ, ಪರ್ವತಗಳಲ್ಲಿ ಸೈಕಲ್ ಚಾಲಾಯಿಸುವುದು, ಮೋಜಿಗಾಗಿ ಶಿಲಾರೋಹಣ ಮತ್ತು ನದಿ ದಾಟುವಂತಹ ಹಲವಾರು ಚಟುವಟಿಕೆಗಳನ್ನು ಕೈಗೊಳ್ಳಬಹುದಾಗಿದೆ. ವಿರಾಮ ವಲಯವು ಕಾಲು ಹಾದಿಗಳು, ಅಗಲವಾದ ಕಾಲು ಹಾದಿಗಳು, ತೂಗು ಸೇತುವೆ, ಶಿಲ್ಪ ಉದ್ಯಾನವನ, ವಿಶ್ರಾಂತಿ ತೆಗೆದುಗೊಳ್ಳುವ ಸ್ಥಳಗಳು ಮತ್ತು ಡೀಪ್ ವುಡ್‍ಗಳಂತಹ ಸ್ಥಳಗಳನ್ನು ಹೊಂದಿದೆ. ಇಲ್ಲಿರುವ ಜಿಂಕೆ ಪುನರ್ವಸತಿ ಕೇಂದ್ರವು ಹಲವಾರು ಜಾತಿಯ ಕಾಡು ಜಿಂಕೆಗಳಿಗೆ ಆಶ್ರಯವನ್ನು ಒದಗಿಸಿದೆ. ಅಲ್ಲದೆ ಇಲ್ಲಿ ಮಕ್ಕಳಿಗಾಗಿ ಒಂದು ಜೈವಿಕ ಉದ್ಯಾನವನ ಸಹ ಇದೆ.

ಪ್ರವಾಸಿಗರಿಗಾಗಿ  ಇಲ್ಲಿನ ಸಿಬ್ಬಂದಿಗಳು ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಾರೆ. ಇವರೆಲ್ಲರು ಪ್ರವಾಸಿಗರ ಯೋಗ ಕ್ಷೇಮವನ್ನು ನೋಡಿಕೊಳ್ಳುವುದರ ಜೊತೆಗೆ, ಅವರ ಕುತೂಹಲ ತಣಿಸಲು ಮಾಹಿತಿಯನ್ನು ಮತ್ತು ಚಟುವಟಿಕೆಗಳನ್ನು ಕೈಗೊಳ್ಳಲು ಮಾರ್ಗದರ್ಶನವನ್ನು ನೀಡುತ್ತಿರುತ್ತಾರೆ. ಇಡೀ ಯೋಜನೆಯ ಉದ್ದೇಶವೆ ಪ್ರವಾಸಿಗರನ್ನು ಸಂತೋಷಪಡಿಸುವುದಾಗಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat