Search
 • Follow NativePlanet
Share
ಮುಖಪುಟ » ಸ್ಥಳಗಳು» ಕೊಟ್ಟಾರಕ್ಕರ

ಕೊಟ್ಟಾರಕ್ಕರ: ಕಥಕ್ಕಳಿಯ ತೊಟ್ಟಿಲು

12

ಕೊಲ್ಲಂ ಜಿಲ್ಲೆಯ ಒಂದು ಚಿಕ್ಕ ಪಟ್ಟಣ ಕೊಟ್ಟಾರಕ್ಕರ. ಇದು ಪ್ರಾಥಮಿಕವಾಗಿ ತನ್ನ ಸುಂದರ ತಾಣಗಳು ಹಾಗೂ ದೇವಾಲಯಗಳಿಂದಾಗಿ ಹೆಸರುವಾಸಿಯಾಗಿದೆ. ಈ ಪಟ್ಟಣಕ್ಕೆ ಹೆಸರು ಬಂದಿರುವುದು ಕೂಡ ಮಲಯಾಳಂನ ಎರಡು ಶಬ್ದಗಳಿಂದಾಗಿ. "ಕೊಟ್ಟಾರಂ' (ಸ್ಥಳ) ಹಾಗೂ "ಕರ' (ಭೂಮಿ). ಇವೆರಡೂ ಸರಿ ಆದ ಶಬ್ದ 'ಕೊಟ್ಟಾರಕ್ಕರ'. ಹೀಗಾಗಿ ಇದರ ಅರ್ಥ ತಾಣಗಳ ಭೂಮಿ. ಇದರ ಐತಿಹಾಸಿಕ ಹಿನ್ನೆಲೆ ಇದನ್ನು ಪುಷ್ಟಿಕರಿಸುತ್ತದೆ. ಹಿಂದಿನ ದಿನಗಳಲ್ಲಿ ಕೊಟ್ಟಾರಕ್ಕರವು 'ಎಲೆಯಂದತ್ತು ಸ್ವರೂಪಂ' ಎಂಬ ಹೆಸರಿನಿಂದ ಗುರುತಾಗಿತ್ತು. ತಿರುವನಂತಪುರದ ರಾಯಲ್‌ ಕುಟುಂಬದ ಅಡಿ ಇದರ ಕಾರ್ಯ ಚಟುವಟಿಕೆ ನಡೆಯುತ್ತಿತ್ತು. ಲಭ್ಯ ಐತಿಹಾಸಿಕ ಮಾಹಿತಿಯ ಪ್ರಕಾರ ಈ ಭಾಗದಲ್ಲಿ ಏಳು ಐಶಾರಾಮಿ ಪ್ಯಾಲೇಸ್‌ಗಳು ನಿರ್ಮಾಣಗೊಂಡಿದ್ದು, ಇದರಲ್ಲಿ ಮೊದಲ ಪ್ಯಾಲೇಸ್‌ ನಿರ್ಮಾಣಗೊಂಡಿದ್ದು 14ನೇ ಶತಮಾನದಲ್ಲಿ.

ಕಥಕ್ಕಳಿಯ ಜನ್ಮಸ್ಥಳ

ಕೇರಳದ ಕೊಟ್ಟಾರಕ್ಕರ ಸಮಕಾಲೀನ ಅತ್ಯುತ್ತಮ ಆಧುನಿಕ ಸಂಸ್ಕೃತಿಯ ಇತಿಹಾಸದಲ್ಲಿ ಹೋಲಿಕೆ ಮಾಡಲಾಗದ ಅತ್ಯುತ್ತಮ ಕಲೆಯೊಂದನ್ನು ತನ್ನದಾಗಿಸಿಕೊಂಡಿದೆ. ಕೊಟ್ಟಾರಕ್ಕರ ಇಲ್ಲಿಯ ವಿಶ್ವಪ್ರಸಿದ್ಧ ಕಲೆಯಾದ ಕಥಕ್ಕಳಿಯ ಜನ್ಮಸ್ಥಳ. ಈ ನೃತ್ಯ ಪ್ರಕಾರದ ಆವಿಷ್ಕಾರದ ಹಿನ್ನೆಲೆ ಅವಲೋಕಿಸಿದಾಗ ಅರಿವಿಗೆ ಬರುವ ಅಂಶವೆಂದರೆ ಒಂದು ವೈರತ್ವದ ವಿಷಯ ಗಮನಕ್ಕೆ ಬರುತ್ತದೆ. ಈ ವೈರತ್ವವು ಕೊಟ್ಟಾರಕ್ಕರ ರಾಜಾ ಹಾಗೂ ಕೋಳಿಕೋಡ್‌ನ ರಾಜನ ನಡುವೆ ಇತ್ತು ಎಂದು ತಿಳಿದು ಬರುತ್ತದೆ.

ಇದು "ರಾಮನಾತ್ತಮ್‌' ಹೆಸರಿನಲ್ಲಿ ಆರಂಭಿಕ ರೂಪ ಪಡೆಯಿತು. ಕೊಟ್ಟಾರಕ್ಕರ ತಂಪೂರನ್‌ ಎಂಬುವರು ಈ ಹೆಸರಿಟ್ಟರು. ಇದು ಮುಂದೆ ಆಧುನಿಕರಣಗೊಂಡು ಈಗಿನ ರೂಪ ಪಡೆದಿದೆ. ಈ ವ್ಯಕ್ತಿಯೇ ಕಥಕ್ಕಳಿಯನ್ನು ಸಾಮಾನ್ಯ ನಾಗರಿಕ ವರ್ಗದಲ್ಲಿ ಜನಪ್ರಿಯಗೊಳಿಸಲು ಕೂಡ ಶ್ರಮಿಸಿದ್ದಾರೆ. ಕೊಟ್ಟಾರಕ್ಕರ ಅತ್ಯಂತ ಶ್ರೀಮಂತ ಸಾಂಸ್ಕೃತಿಕ ಇತಿಹಾಸ ಹೊಂದಿದ್ದು, ಇಲ್ಲಿನ ಸಂಸ್ಕೃತಿ ಹಾಗೂ ಜನರ ಮೇಲೆ ಗಾಢವಾದ ಪ್ರಭಾವ ಬೀರಿದೆ.

ಅತ್ಯಾಕರ್ಷಕ ಆಕರ್ಷಣೆಗಳ ಮಿಶ್ರಣ

ಕೊಟ್ಟಾರಕ್ಕರದ ಪ್ರವಾಸಿ ತಾಣಗಳು ಭಾವೈಕ್ಯತೆಯ ಮಿಶ್ರಣವಾಗಿದೆ. ಇಲ್ಲಿ ದೇವಾಲಯ, ಚರ್ಚ್, ತಾಣಗಳು, ಮಾರಾಟ ಕೇಂದ್ರಗಳು ಹೇರಳ ಸಂಖ್ಯೆಯಲ್ಲಿವೆ.  ಕೊಟ್ಟಾರಕ್ಕರ ಶ್ರೀ ಮಹಾಗಣಪತಿ ದೇವಾಲಯ ಹಾಗೂ ಶ್ರೀ ಮಣಿಕಂಠೇಶ್ವರ ಮಹಾದೇವ ದೇವಸ್ಥಾನ ಅಪಾರ ಸಂಖ್ಯೆಯ ಭಕ್ತರನ್ನು ಇತ್ತ ಸೆಳೆಯುತ್ತವೆ. ಭಕ್ತರು ಮಾತ್ರವಲ್ಲ, ಸಾಕಷ್ಟು ಸಂಖ್ಯೆಯ ಪ್ರವಾಸಿಗರೂ ಇಲ್ಲಿಗೆ ಆಗಮಿಸುತ್ತಾರೆ. ಈ ಭಾಗದ ಇತರೆ ಗಮನಾರ್ಹ ಆಕರ್ಷಣೆಗಳೆಂದರೆ ಪಥಾನಪುರಂ, ಕೊಟ್ಟಾರಕ್ಕರ ಪ್ಯಾಲೇಸ್‌, ಕಿಳಾಹಕ್ಕೆತ್ತೆರುವು ಆರ್ಥೋಡಕ್ಸ್‌ ವಲಿಯಪಳ್ಳಿ.

ಕೊಟ್ಟಾರಕ್ಕರವು ಕೊಲ್ಲಂನಿಂದ 27 ಕಿ.ಮೀ. ದೂರದಲ್ಲಿದೆ. ಅದೇ ರೀತಿ ಕೇರಳದ ರಾಜಧಾನಿಯಿಂದ 60 ಕಿ.ಮೀ. ದೂರದಲ್ಲಿದೆ. ಇಲ್ಲಿಗೆ ತಲುಪಲು ರೈಲು ಹಾಗೂ ರಸ್ತೆ ಮಾರ್ಗ ಅತ್ಯುತ್ತಮವಾಗಿದೆ. ವರ್ಷದ ಎಲ್ಲಾ ಸಮಯದಲ್ಲೂ ಸಹನೀಯ ವಾತಾವರಣ ಇಲ್ಲಿರುತ್ತದೆ. ಎಲ್ಲಾ ಋತುಮಾನದಲ್ಲಿಯೂ ಈ ತಾಣಕ್ಕೆ ಜನ ಭೇಟಿ ನೀಡಬಹುದು. ಕೊಲ್ಲಂ ಜಿಲ್ಲೆಯ ಇತರೆ ಪ್ರವಾಸಿ ತಾಣಗಳ ವೀಕ್ಷಣೆಯ ಜತೆಗೆ ಕೊಟ್ಟಾರಕ್ಕರಕ್ಕೂ ಭೇಟಿ ನೀಡುವುದು ಉತ್ತಮ.

ಕೊಟ್ಟಾರಕ್ಕರ ಪ್ರಸಿದ್ಧವಾಗಿದೆ

ಕೊಟ್ಟಾರಕ್ಕರ ಹವಾಮಾನ

ಕೊಟ್ಟಾರಕ್ಕರ
31oC / 88oF
 • Haze
 • Wind: WNW 11 km/h

ಉತ್ತಮ ಸಮಯ ಕೊಟ್ಟಾರಕ್ಕರ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಕೊಟ್ಟಾರಕ್ಕರ

 • ರಸ್ತೆಯ ಮೂಲಕ
  ಕೊಟ್ಟಾರಕ್ಕರಕ್ಕೆ ಸಾಕಷ್ಟು ಉತ್ತಮ ರಸ್ತೆ ಸಂಪರ್ಕ ಇದೆ. ಬಸ್‌ಗಳು ಇಲ್ಲಿನ ಪ್ರಮುಖ ಸಾಗಾಣಿಕಾ ಸೌಲಭ್ಯವಾಗಿದೆ. ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಸ್‌ಗಳು ಹೇರಳವಾಗಿ ಸಿಗುತ್ತವೆ. ಕೊಟ್ಟಾರಕ್ಕರದಿಂದ ಸಮೀಪದ ಎಲ್ಲಾ ಪಟ್ಟಣಕ್ಕೂ ಬಸ್‌ ಸಂಪರ್ಕ ಉತ್ತಮವಾಗಿದೆ. ತಿರುವನಂತಪುರಂ, ಕೊಲ್ಲಂ, ಪತನಾಂತಿಟ್ಟ, ಕೊಯಮತ್ತೂರು, ತೇಂಕಸಿ ಹಾಗೂ ಶೇನಕೊಟ್ಟಾಗಳಿಗೆ ಸಂಪರ್ಕ ಇದೆ. ಖಾಸಗಿ ಲಗ್ಜುರಿ ಬಸ್‌ಗಳು ಬೆಂಗಳೂರು, ಕುಮಲಿ, ಊಟಿ, ಮುನ್ನಾರ್‌ಗಳಿಂದ ಸಿಗುತ್ತವೆ. ನಗರದೊಳಗೆ ಓಡಾಡಲು ಟ್ಯಾಕ್ಸಿ ಹಾಗೂ ಆಟೊರಿಕ್ಷಾಗಳ ಸೇವೆಯೂ ಉತ್ತಮವಾಗಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಕೊಟ್ಟಾರಕ್ಕರ ಪಟ್ಟಣದ ಕೇಂದ್ರ ಭಾಗದಿಂದ ಎರಡು ಕಿ.ಮೀ. ದೂರದಲ್ಲಿ ಸ್ವಂತ ರೈಲು ನಿಲ್ದಾಣವನ್ನು ಈ ಪಟ್ಟಣ ಹೊಂದಿದೆ. ಇದು ಕೊಲ್ಲಂ- ಮಧುರೈ ಮಾರ್ಗವಾಗಿದ್ದು, ಈ ನಿಲ್ದಾಣದಿಂದ ಕೊಲ್ಲಂ ಅಥವಾ ಪುನಲೂರುವರೆಗೆ ತಲುಪಬಹುದು. ಇದಕ್ಕೆ ಸಮೀಪದ ಮುಖ್ಯ ರೈಲು ನಿಲ್ದಾಣ ಕೊಲ್ಲಂ. ಇಲ್ಲಿಂದ 23 ಕಿ.ಮೀ. ದೂರದಲ್ಲಿದೆ. ಕೊಲ್ಲಂನಿಂದ ರಾಷ್ಟ್ರದ ಎಲ್ಲಾ ಭಾಗಕ್ಕೂ ಕೇರಳದ ಇತರೆ ಭಾಗಕ್ಕೂ ಸಾಕಷ್ಟು ಉತ್ತಮ ರೈಲು ಸಂಪರ್ಕ ಇದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಕೊಟ್ಟಾರಕ್ಕರಕ್ಕೆ ತನ್ನದೇ ಆದ ವಿಮಾನ ನಿಲ್ದಾಣ ಇಲ್ಲ. ಈ ಚಿಕ್ಕ ಪಟ್ಟಣಕ್ಕೆ ಸಮೀಪದ ವಿಮಾನ ನಿಲ್ದಾಣ ತಿರುವನಂತಪುರಂ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್. ಇಲ್ಲಿಂದ 70 ಕಿ.ಮೀ. ದೂರದಲ್ಲಿದೆ. ದೇಶದ ಎಲ್ಲಾ ಪ್ರಮುಖ ನಗರಗಳಿಂದ ಇಲ್ಲಿಗೆ ವಿಮಾನ ಸಂಪರ್ಕ ಇದೆ. ಬೆಂಗಳೂರು, ದಿಲ್ಲಿ, ಚೆನ್ನೈ, ಮುಂಬಯಿ, ಹೈದ್ರಾಬಾದ್‌ಗಳಿಂದ ವಿಮಾನಗಳು ನಿರಂತರವಾಗಿ ಆಗಮಿಸುತ್ತವೆ. ವಿಮಾನದಲ್ಲಿ ಬಂದವರು ನಂತರದ ಪ್ರಯಾಣಕ್ಕೆ ಟ್ಯಾಕ್ಸಿಗಳನ್ನು ಪಡೆದು ಕೊಟ್ಟಾರಕ್ಕರವನ್ನು ತಲುಪಬಹುದು.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
17 Aug,Sat
Return On
18 Aug,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
17 Aug,Sat
Check Out
18 Aug,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
17 Aug,Sat
Return On
18 Aug,Sun
 • Today
  Kottarakkara
  31 OC
  88 OF
  UV Index: 7
  Haze
 • Tomorrow
  Kottarakkara
  27 OC
  81 OF
  UV Index: 6
  Light rain shower
 • Day After
  Kottarakkara
  26 OC
  79 OF
  UV Index: 6
  Patchy rain possible