Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಟ್ಟಾರಕ್ಕರ » ಹವಾಮಾನ

ಕೊಟ್ಟಾರಕ್ಕರ ಹವಾಮಾನ

ವಿಚಿತ್ರ ಹವಾಮಾನ ಸ್ಥಿತಿ ಇಲ್ಲಿಯದು. ವರ್ಷದ ಎಲ್ಲಾ ಕಾಲದಲ್ಲೂ ಪ್ರವಾಸಿಗರು ಭೇಟಿ ನೀಡಬಹುದಾದಿಗದೆ. ಆದಾಗ್ಯೂ ಮಳೆಗಾಲದಲ್ಲಿ ವಿಪರೀತ ಮಳೆಯಾಗುತ್ತದೆ. ಬೇಸಿಗೆ ಬಿಸಿಲು ಹೆಚ್ಚಿರುತ್ತದೆ. ಹೀಗಾಗಿ ಮಳೆಗಾಲ ಮುಗಿಯುತ್ತಿದ್ದಂತೆ ಅಂದರೆ ಸೆಪ್ಟೆಂಬರ್‌ ಹಾಗೂ ಬೇಸಿಗೆಯ ಆರಂಭದ ದಿನವಾದ ಮಾರ್ಚ್ ಒಳಗೆ ಭೇಟಿ ನೀಡುವುದು, ಪ್ರವಾಸಕ್ಕಾಗಿ ಆಯ್ಕೆ ಮಾಡಿಕೊಳ್ಳದಿರುವುದು ಉತ್ತಮ. ಆಗಸ್ಟ್‌, ಸೆಪ್ಟೆಂಬರ್‌ನಲ್ಲಿ ಓಣಂ ಆಚರಣೆ ವಿಜ್ರಂಭಣೆಯಿಂದ ನಡೆಯುತ್ತದೆ. ಆ ಸಮಯದಲ್ಲಿ ಭೇಟಿ ನೀಡುವುದು ಪ್ರಶಸ್ತ. ಸಾಲು ಸಾಲು ಹಬ್ಬಗಳು ಗಮನ ಸೆಳೆಯುತ್ತವೆ.

ಬೇಸಿಗೆಗಾಲ

ಕೊಟ್ಟಾರಕ್ಕರದಲ್ಲಿ ಬೇಸಿಗೆ ಮಾರ್ಚ್ ನಲ್ಲಿ ಆರಂಭವಾಗಿ ಮೇ ವರೆಗೂ ಇರುತ್ತದೆ. ಇದು ವಿಚಿತ್ರ ಹವಾಮಾನ ಸ್ಥಿತಿಯನ್ನು ಹೊಂದಿದೆ. ಬೇಸಿಗೆ ಕಾಲ ಇಲ್ಲಿ ಬಿಸಿ ಹಾಗೂ ಒಣವಾಗಿರುತ್ತದೆ. ವರ್ಷದಲ್ಲೇ ಏಪ್ರಿಲ್‌ ಹಾಗೂ ಮೇ ತಿಂಗಳು ಇಲ್ಲಿ ಅತಿ ಹೆಚ್ಚು ಬಿಸಿಲು, ಸೆಕೆಯಿಂದ ಕೂಡಿರುವ ತಿಂಗಳುಗಳು. ಅತಿ ಹೆಚ್ಚು ಉಷ್ಣಾಂಶ ಈ ಸಮಯದಲ್ಲಿ ಹೆಚ್ಚೆಂದರೆ 35 ಡಿಗ್ರಿ ಸೆಲ್ಶಿಯಸ್‌ವರೆಗೂ ತಲುಪುತ್ತದೆ. ಬೇಸಿಗೆಯಲ್ಲಿ ಪ್ರವಾಸಕ್ಕೆ ಇದು ಯೋಗ್ಯ ಸ್ಥಳವಲ್ಲ.

ಮಳೆಗಾಲ

ಈ ಭಾಗವು ನೈಋತ್ಯ ಮಾರುತಗಳ ವ್ಯಾಪ್ತಿಗೆ ಒಳಪಡುತ್ತದೆ. ಇದರಿಂದ ಮಳೆಗಾಲದಲ್ಲಿ ಇಲ್ಲಿ ವಿಪರೀತ ಮಳೆ ಸುರಿಯುತ್ತದೆ. ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಮಳೆಯಾಗುತ್ತದೆ.  ಈಶಾನ್ಯ ಮುಂಗಾರು ಕಾರಣದಿಂದ ಅಕ್ಟೋಬರ್‌ನಿಂದ ನವೆಂಬರ್‌ನಲ್ಲೂ ಒಂದಿಷ್ಟು ಮಳೆ ಆಗುತ್ತದೆ. ಜೂನ್‌ ಹಾಗೂ ಜುಲೈನಲ್ಲಿ ವಿಪರೀತ ಮಳೆ ಆಗುವುದರಿಂದ ಮಳೆಗಾಲದಲ್ಲಿ ಅಪಾರ ಮಳೆ ಸುರಿಯುವುದರಿಂದ ಪ್ರವಾಸಿಗರಿಗೆ ಈ ಕಾಲ ಬರುವುದಕ್ಕೆ ಉಚಿತವಲ್ಲ.

ಚಳಿಗಾಲ

ಡಿಸೆಂಬರ್‌ನಲ್ಲಿ ಆರಂಭವಾಗುವ ಚಳಿ ಜನವರಿ, ಫೆಬ್ರವರಿವರೆಗೂ ಇರುತ್ತದೆ. ಡಿಸೆಂಬರ್‌ ಅತಿ ಹೆಚ್ಚು ಚಳಿ ಇರುವ ತಿಂಗಳು. ತಾಪಮಾನ ಈ ಸಮಯದಲ್ಲಿ ಸರಾಸರಿ  ತಾಪಮಾನ 20 ಡಿಗ್ರಿ ಸೆಲ್ಶಿಯಸ್‌ ಇರುತ್ತದೆ. ಸ್ಥಳ ವೀಕ್ಷಣೆಗೆ ಈ ಸಮಯ ಸೂಕ್ತ. ವಾತಾವರಣವೂ ಕೊಂಚ ಒಣವಾಗಿರುತ್ತದೆ.