Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಟ್ಟಾರಕ್ಕರ » ಆಕರ್ಷಣೆಗಳು » ಕೊಟ್ಟಾರಕ್ಕರ ಶ್ರೀ ಮಹಾಗಣಪತಿ ದೇವಸ್ಥಾನ

ಕೊಟ್ಟಾರಕ್ಕರ ಶ್ರೀ ಮಹಾಗಣಪತಿ ದೇವಸ್ಥಾನ, ಕೊಟ್ಟಾರಕ್ಕರ

2

ಕೊಟ್ಟಾರಕ್ಕರಕ್ಕೆ ಭೇಟಿ ನೀಡಿದಾಗ ಸಂದರ್ಶಿಸಲೇ ಬೇಕಾದ ತಾಣ ಹಾಗೂ ಇಲ್ಲಿನ ಮುಖ್ಯ ಆಕರ್ಷಣೆ ಶ್ರೀ ಮಹಾಗಣಪತಿ ದೇವಸ್ಥಾನ. ಕೇರಳದಲ್ಲೇ ಅತಿ ಹೆಚ್ಚು ಸಂಖ್ಯೆಯ ಭಕ್ತರು ಭೇಟಿ ನೀಡುವ ದೇವಾಲಯಗಳಲ್ಲಿ ಇದೂ ಒಂದು. ಕೊಲ್ಲಂ ಜಿಲ್ಲೆಯ ಕೇಂದ್ರ ಭಾಗದಿಂದ ಇದು ಕೇವಲ 25 ಕಿ.ಮೀ. ದೂರದಲ್ಲಿದೆ. ರಸ್ತೆ ಮಾರ್ಗದಲ್ಲಿ ಇಲ್ಲಿಗೆ ಆರಾಮವಾಗಿ ತಲುಪಬಹುದು.

ಈ ದೇವಾಲಯವು ಮೂಲವಾಗಿ ಗುರುತಿಸಿಕೊಂಡಿದ್ದು ಕಿಳಾಕ್ಕೇಕ್ಕರಾ ಶಿವ ದೇವಾಲಯ ಎಂದು. ಇದು ಶಿವನ ಆಲಯವಾಗಿತ್ತು. ಆದರೆ ಕಾಲಕ್ರಮೇಣ ಇದು ಗಣೇಶನ ದೇವಾಲಯ ಅಂತಲೇ ಜನಪ್ರಿಯವಾಗುತ್ತಾ ಹೋಯ್ತು. ಉಪ ದೇವರಾಗಿ ಇಲ್ಲಿ ಪ್ರತಿಷ್ಠಾಪಿತವಾಗಿದ್ದ ಗಣೇಶನೇ ಇಂದು ಪ್ರಮುಖವಾಗಿ ಆರಾಧಿಸಲ್ಪಡುತ್ತಿದ್ದಾನೆ. ವಿನಾಯಕ ಚತುರ್ಥಿ, ನವರಾತ್ರಿ ಹಾಗೂ ಆಯ್ಲಿಮ್‌- ಮಾಕಂಗಳು ಇಲ್ಲಿನ ಪ್ರಮುಖ ಆಚರಣೆಗಳು. ಈ ಸಂದರ್ಭದಲ್ಲಿ ದೇವಾಲಯಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ದಕ್ಷಿಣ ಭಾರತದ ಎಲ್ಲಾ ಭಾಗದಿಂದಲೂ ಇಲ್ಲಿಗೆ ಭಕ್ತರು ಆಗಮಿಸುತ್ತಾರೆ.

ಈ ದೇವಾಲಯದಲ್ಲಿ ಗಣೇಶನಲ್ಲದೇ ಶಿವ, ಪಾರ್ವತಿ, ಮುರುಘ ಹಾಗೂ ಅಯ್ಯಪ್ಪನ ಮೂರ್ತಿಗಳು ಇವೆ. ಪ್ರತಿಯೊಬ್ಬ ಭಕ್ತರಿಗೂ ಇಲ್ಲಿ ಮುಕ್ತ ಪ್ರವೇಶ ಇದೆ. ಬಯಸಿ ಬಂದ ಭಕ್ತರ ಇಷ್ಟಾರ್ಥ ಈಡೇರುತ್ತದೆ ಎಂಬ ನಂಬಿಕೆ ಇದೆ.

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri