Search
 • Follow NativePlanet
Share
ಮುಖಪುಟ » ಸ್ಥಳಗಳು» ಪೂವಾರ್

ಪೂವಾರ್ - ಹುಚ್ಚು ಹಿಡಿಸುವ ಗದ್ದಲದಿಂದ ಅನತಿ ದೂರ

12

ಕೇರಳ ರಾಜ್ಯದ ತ್ರಿವೆಂಡ್ರಮ್ ಜಿಲ್ಲೆಯ ಕಡಲತಡಿಯಲ್ಲಿರುವ ಚಿಕ್ಕ ಹಳ್ಳಿ ಪೂವಾರ್. ಪೂವಾರ್ ಗ್ರಾಮ ಕೇರಳದ ಗಡಿಪ್ರದೇಶಗಳಲ್ಲಿ ಒಂದಾದ ಭಾಗ. ಈ ಗ್ರಾಮ ನೈಸರ್ಗಿಕ ಬಂದರಾದ ವಿಳಿನಮ್ ಗೆ ಅತ್ಯಂತ ಹತ್ತಿರದಲ್ಲಿದೆ. ಪೂವಾರ್ ಹಳ್ಳಿಯಲ್ಲಿಯೇ ನೆಯ್ಯಾರ್ ನದಿಯು ಸಮುದ್ರವನ್ನು ಸೇರುವ ಅಳಿವೆ ಭಾಗವಿದೆ. ಇದು ಪುರಾತನ ಕಾಲದಲ್ಲಿ ಮರಮುಟ್ಟು ಸಾಮಾಗ್ರಿ, ಸಾಂಬಾರು ಪದಾರ್ಥ, ಶ್ರೀಗಂಧ ಮತ್ತು ಆನೆಯ ದಂತದ ಪ್ರಮುಖ ಮಾರಾಟ ಕೇಂದ್ರವಾಗಿತ್ತು. ಇಲ್ಲಿರುವ ಸಮುದ್ರ ದಂಡೆ ಪ್ರಶಾಂತ ಸ್ಥಳವಾಗಿದ್ದು ನಗರ ಜೀವನದ ಗೌಜು ಗದ್ದಲಗಳಿಂದ, ಹಲವಾರು ಪ್ರವಾಸಿ ತಾಣಗಳಲ್ಲಿರುವಂತಹ ಗಲಾಟೆಗಳಿಂದ ಮರೆಯಾಗಿ ದೂರದಲ್ಲಿದ್ದು ಶಾಂತವಾಗಿದೆ. ಪೂವಾರ್ ಹಳ್ಳಿ ಅತ್ಯಂತ ಸಣ್ಣ ಊರಾದ ಕಾರಣ ಇಲ್ಲಿ ವಾಸಿಸುವವರ ಸಂಖ್ಯೆಯೂ ಕಡಿಮೆ. ಇದು ನಗರದಿಂದ ಪ್ರತ್ಯೇಕವಾಗಿರುವ ಕಾರಣದಿಂದ ಪೂವಾರ್ ಬೀಚ್ ಏಕಾಂತ ಮತ್ತು ಪ್ರಶಾಂತತೆಯ ಅಧ್ಬುತವಾದ ತಾಣ. ಹಿನ್ನೀರಿನಲ್ಲಿರುವ ಉತ್ತಮ ರೆಸಾರ್ಟ್ ಗಳು ಮತ್ತು ಚಿಕ್ಕೆ ಜೋಪಡಿಗಳು ಸೂರ್ಯೋದಯ, ಸೂರ್ಯಾಸ್ತ ಮತ್ತು ಮನಕ್ಕೆ ಮುದ ನೀಡುವ ವಾತಾವರಣದ ದರ್ಶನೀಯ ಅನುಭವವನ್ನು ಕಟ್ಟಿಕೊಡುತ್ತವೆ. ಬಂಗಾರದ ಬಣ್ಣದ ಮರಳಿಗೆ ಮುತ್ತಿಕ್ಕುವ ಸೂರ್ಯ, ಎರಡೂ ಬದಿಯಲ್ಲಿ ಆಳೆತ್ತರಕ್ಕೆ ನಿಂತಿರುವ ಹಚ್ಚ ಹಸಿರು ತೆಂಗು ಮತ್ತು ಪಾಮ್ ಮರಗಳು ಮಾಯಾಜಾಲವನ್ನೇ ಸ್ರಷ್ಟಿಸಿ ಮರೆಯಲಾರದ ಅನುಭೂತಿ ನೀಡುತ್ತವೆ. ಪೂವಾರ್ ನ ಹಿನ್ನೀರಿನಲ್ಲಿ ನೌಕೆಯೊಂದನ್ನು ನೀವು ಆಸ್ವಾದಿಸಬಹುದು.

ಭಾರತದ ಅತಿ ಪುರಾತನ ಮುಸ್ಲಿಂ ವಸಾಹತು ಇಲ್ಲಿತ್ತು ಎಂಬುದು ಪೂವಾರ್ ನ ಹೆಮ್ಮೆ. ಇಲ್ಲಿನ ಮುಸ್ಲಿಂ ವಸಾಹತು ಆಚೀಚೆ 1,400 ವರ್ಷಗಳಷ್ಟು ಹಳೆಯದು. ಇಲ್ಲಿನ ಪ್ರಮುಖ ಮಸೀದಿಯನ್ನು ಮಧ್ಯಪೂರ್ವ ರಾಷ್ಟ್ರದಿಂದ ಭಾರತಕ್ಕೆ ಬಂದ ಮುಸಲ್ಮಾನ್ ವಿದ್ವಾಂಸ ಮಲಿಕ್ ಐಬಿನ್ ದಿನಾರ್ ಕಟ್ಟಿಸಿದನೆಂದು ಹೇಳಲಾಗುತ್ತದೆ. ಮೊಘಲ್ ಸಂಸ್ಥಾನದ ಆಳ್ವಿಕೆಗೂ ಮೊದಲು ಕೇರಳದಲ್ಲಿ ಇಸ್ಲಾಂ ಧರ್ಮಬೋಧನೆ ನಡೆದ ಕಾರಣಕ್ಕೆ ಪೂವಾರ್ ಇತಿಹಾಸದ ಪುಟಗಳಲ್ಲಿ ವಿಶೇಷ ಸ್ಥಾನ ಪಡೆದುಕೊಳ್ಳುತ್ತದೆ. ಪೂವಾರ್ ನ ಈ ಪುರಾತನ ವಸಾಹತು ಕೇರಳದ ಪಶ್ಚಿಮ ಕರಾವಳಿಯಲ್ಲಿ ನೆಲೆ ನಿಂತ ಹಲವಾರು ಮುಸ್ಲಿಂ ವಸಾಹತುಗಳಲ್ಲಿನ ಒಂದು ಭಾಗ. ಚಳಿಗಾಲದಲ್ಲಿ ಪೂವಾರ್ ಗೆ ಭೇಟಿ ನೀಡಿ. ರೈಲು, ಬಸ್ ಅಥವಾ ಹತ್ತಿರದ ವಿಮಾನನಿಲ್ದಾಣದ ಮೂಲಕ ಪೂವಾರ್ ಗೆ ಬನ್ನಿ ಹಾಗು ಸರಳವಾಗಿ ಮರೆಯಲಾಗದಂತಹ ಒಂದು ಅನುಭವವನ್ನು ನಿಮ್ಮದಾಗಿಸಿಕೊಳ್ಳಿ.

ಪೂವಾರ್ ಪ್ರಸಿದ್ಧವಾಗಿದೆ

ಪೂವಾರ್ ಹವಾಮಾನ

ಪೂವಾರ್
31oC / 88oF
 • Haze
 • Wind: WNW 11 km/h

ಉತ್ತಮ ಸಮಯ ಪೂವಾರ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಪೂವಾರ್

 • ರಸ್ತೆಯ ಮೂಲಕ
  ರಸ್ತೆಯ ಮೂಲಕ ತ್ರಿವೆಂಡ್ರಮ್ ನಿಂದ 45 ನಿಮಿಷ 32 ಕಿಲೋಮೀಟರ್ ಪ್ರಯಾಣಿಸಿದರೆ ಪೂವಾರ್ ಹಳ್ಳಿ ಸಿಗುತ್ತದೆ. ಪೂವಾರ್ ಗ್ರಾಮಕ್ಕೆ ಹತ್ತಾರು ಭಾಗಗಳಿಂದ ರಸ್ತೆ ಸಂಪರ್ಕವಿದೆ. ಪೂವಾರ್ ಬಸ್ ನಿಲ್ದಾಣದಿಂದ ಸಾಕಷ್ಟು ಬಸ್ ಹಾಗೂ ಟ್ಯಾಕ್ಸಿ ಸೌಲಭ್ಯಗಳಿವೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ತ್ರಿವೆಂಡ್ರಮ್ ಸೆಂಟ್ರಲ್ ರೈಲ್ವೇ ನಿಲ್ದಾಣ ಪೂವಾರ್ ಗ್ರಾಮಕ್ಕೆ ಅತಿ ಹತ್ತಿರದಲ್ಲಿದೆ. ಹತ್ತಿರದ ರೈಲ್ವೇ ನಿಲ್ದಾಣದಿಂದ ಟ್ಯಾಕ್ಸಿ ಬಾಡಿಗೆಗೆ ಪಡೆದು ಅಥವಾ ಬಸ್ಸಿನ ಮೂಲಕ ಪೂವಾರ್ ಗೆ ಬರಬಹುದು.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ತ್ರಿವೆಂಡ್ರಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೂವಾರ್ ನಿಂದ ಕೇವಲ 38 ಕಿಲೋಮೀಟರ್ ದೂರದಲ್ಲಿ. ತ್ರಿವೆಂಡ್ರಮ್ ನಿಂದ ಟ್ಯಾಕ್ಸಿ ಅಥವಾ ಬಸ್ ಮೂಲಕ ಪೂವಾರ್ ತಲುಪಬಹುದು.
  ಮಾರ್ಗಗಳ ಹುಡುಕಾಟ

ಪೂವಾರ್ ಲೇಖನಗಳು

One Way
Return
From (Departure City)
To (Destination City)
Depart On
16 Oct,Wed
Return On
17 Oct,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
16 Oct,Wed
Check Out
17 Oct,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
16 Oct,Wed
Return On
17 Oct,Thu
 • Today
  Poovar
  31 OC
  88 OF
  UV Index: 7
  Haze
 • Tomorrow
  Poovar
  27 OC
  81 OF
  UV Index: 6
  Light rain shower
 • Day After
  Poovar
  26 OC
  79 OF
  UV Index: 6
  Patchy rain possible