Search
 • Follow NativePlanet
Share
ಮುಖಪುಟ » ಸ್ಥಳಗಳು » ತೆನ್ಮಲ » ಆಕರ್ಷಣೆಗಳು » ಚಾರಣ

ಚಾರಣ, ತೆನ್ಮಲ

1

ಸುತ್ತಾಡಲು ಬಯಸುವ ಉತ್ಸಾಹಿಗಳಿಗೆ ಚಾರಣವು ಒಂದು ಚೇತೋಹಾರಿಯಾದ ಚಟುವಟಿಕೆಯಾಗಿದೆ.  ಈ ಗುಡ್ಡಾಗಾಡು ಪ್ರಾಂತ್ಯದಲ್ಲಿ ಅಂತಹವರಿಗಾಗಿ ಒಂದರಿಂದ ಮೂರು ದಿನಗಳ ಅವಧಿಯವರೆಗಿನ ಮಾರ್ಗದರ್ಶಿತ ಚಾರಣ ಪ್ರವಾಸಗಳು ಲಭ್ಯವಿವೆ. ಈ ಚಾರಣಗಳು ಚಾರಣಿಗರನ್ನು ಸಮ್ಮೋಹನಗೊಳಿಸುವಂತಿರುತ್ತವೆ. ಅಲ್ಲದೆ ಪಕ್ಷಿ ವೀಕ್ಷಣೆಯ ಹವ್ಯಾಸ ಹೊಂದಿರುವವರಿಗೆ ಚೆಂಡುರುನಿ ವನ್ಯಜೀವಿಧಾಮ ಪಕ್ಷಿ ವೀಕ್ಷಣೆಯ ಕಾಲ್ನಡಿಗೆ ಯಾತ್ರೆಗಳು ಸಹ ಲಭ್ಯವಿದೆ.

ತೇನ್‍ಮಲದಲ್ಲಿರುವ ತೇನ್‍ಮಲ ರಾಷ್ಟ್ರೀಯ ಸಾಹಸ ಪ್ರತಿಷ್ಟಾನವು ಜೈವಿಕ ಪ್ರವಾಸೋದ್ಯಮ ಯೋಜನೆಯ ಅಂಗಭಾಗವಾಗಿ  ಪ್ರವಾಸಿಗರಿಗೆ ಹಗುರವಾದ ಚಾರಣದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುತ್ತದೆ. ಇಲ್ಲಿ ವಿವಿಧ ಬಗೆಯ ಮತ್ತು ಅವಧಿಯವರೆಗಿನ ಚಾರಣದ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿರುತ್ತದೆ, ಅವುಗಳಲ್ಲಿ ಪ್ರವಾಸಿಗರು ತಮಗೆ ಇಷ್ಟವಾದುದನ್ನು ಆಯ್ಕೆ ಮಾಡಿಕೊಳ್ಳಬಹುದು. ಮಿರಿಸ್ಟಿಕ ಸ್ವಾಂಪ್ ಕಾಡಿನಿಂದ ಆರಂಭವಾಗುವ ಹಗುರವಾದ ಚಾರಣವು ಪ್ರವಾಸಿಗರಿಗೆ ಸ್ಫೂರ್ತಿಯನ್ನು ಮತ್ತು ಶಿಕ್ಷಣವನ್ನು ಏಕಕಾಲಕ್ಕೆ ಒದಗಿಸುತ್ತದೆ.

ಸೈಕಲ್ ಸವಾರರು ತಮ್ಮ ಸಾಹಸದ ಸ್ಫೂರ್ತಿಯ ಚಿಲುಮೆಯನ್ನು ಹರಿಸಲು ಈ ಸ್ಥಳವು ಹೇಳಿ ಮಾಡಿಸಿದ ತಾಣವಾಗಿದೆ. ಮಿರಿಸ್ಟಿಕ ಸ್ವಾಂಪ್ ಕಾಡಿನ ಮೂಲಕ ಸಾಗುವ ಸೈಕಲ್ ಸವಾರಿಯ ಹಾದಿಯು ಪಕ್ಷಿ ವೀಕ್ಷಣೆಯನ್ನು ಸಹ ಮಾಡುವ ಅವಕಾಶವನ್ನು ಒದಗಿಸುತ್ತದೆ. ಇಲ್ಲಿ ಸೈಕಲ್ ಸವಾರಿ ಮಾಡುವಾಗ ವಿವಿಧ ಜಾತಿಯ  ಅಪರೂಪದ ಪಕ್ಷಿಗಳನ್ನು ನೋಡುವ ಅವಕಾಶವನ್ನು ಪಡೆಯಬಹುದು.

One Way
Return
From (Departure City)
To (Destination City)
Depart On
23 Sep,Mon
Return On
24 Sep,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
23 Sep,Mon
Check Out
24 Sep,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
23 Sep,Mon
Return On
24 Sep,Tue
 • Today
  Thenmala
  31 OC
  88 OF
  UV Index: 7
  Haze
 • Tomorrow
  Thenmala
  27 OC
  81 OF
  UV Index: 6
  Light rain shower
 • Day After
  Thenmala
  26 OC
  79 OF
  UV Index: 6
  Patchy rain possible