Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಲ್ಲಂ » ಆಕರ್ಷಣೆಗಳು » ಮಯ್ಯನಾಡ್

ಮಯ್ಯನಾಡ್, ಕೊಲ್ಲಂ

2

ಮಯ್ಯನಾಡ್ ಒಂದು ಸಣ್ಣ ಹಳ್ಳಿಯಾಗಿದೆ. ಕೊಲ್ಲಂ ಜಿಲ್ಲೆಯ ಒಂದು ಭಾಗವಾಗಿದ್ದು, ಪಟ್ಟಣದಿಂದ 10 ಕಿ.ಮೀ. ದೂರದಲ್ಲಿದೆ. ಈ ಭಾಗವು ಉತ್ತಮ ರಸ್ತೆ ಸಂಪರ್ಕ ಹೊಂದಿದ್ದು, ನಿರಂತರ ಬಸ್‌ ಸೇವೆಯನ್ನು ಕೊಲ್ಲಂ ಹಾಗೂ ಕೊಟ್ಟಾಯಂನಿಂದ ಹೊಂದಿದೆ. ಈ ಸುಂದರ ತಾಣವು ಪರಾವೂರು ಕೆರೆಯನ್ನು ಒಳಗೊಂಡು ಅತ್ಯಂತ ಶ್ರೀಮಂತವಾಗಿ ಕಂಗೊಳಿಸುತ್ತಿದೆ. ಅಲ್ಲದೇ ಮಯ್ಯನಾಡ್ ವು ಇದರೊಂದಿಗೆ ಅರೇಬಿಯನ್‌ ಸಮುದ್ರದ ದೀರ್ಘ ಕರಾವಳಿ ತೀರವನ್ನು ಹೊಂದಿದ್ದು, ಮೀನುಗಾರಿಕೆ ಹಾಗೂ ಕಡಲ ತೀರದ ಎಲ್ಲಾ ಮನರಂಜನಾ ಚಟುವಟಿಕೆಯನ್ನೂ ಒಳಗೊಂಡಿದೆ.

ಇದರೊಂದಿಗೆ ಸಾಕಷ್ಟು ಸಂಖ್ಯೆಯ ದೇವಾಲಯಗಳು, ಬಸದಿಗಳನ್ನು ಒಳಗೊಂಡಿದೆ. ಈ ಮೂಲಕ ಸಾಂಸ್ಕೃತಿಕ ಕೇಂದ್ರವಾಗಿಯೂ ಇದು ಬೆಳೆದಿದೆ. ಉಮಾಯನ್ನಲೂರಿನ ಸುಬ್ರಹ್ಮಣ್ಯ ದೇವಾಲಯ ಅತ್ಯಂತ ಪ್ರಸಿದ್ಧ ಸ್ಥಳ. ಇದನ್ನು ಕೆಳದಿ ಶ್ರೀ ಶಂಕರಾಚಾರ್ಯರು ಕಂಡುಹಿಡಿದಿದ್ದಾರೆಂದು ನಂಬಲಾಗಿದೆ. ಇದು ಮಯ್ಯನಾಡ್ ನ ಜನಪ್ರಿಯ ಹಾಗೂ ಸ್ಥಿರ ಧಾರ್ಮಿಕ ತಾಣವಾಗಿ ಜನಪ್ರಿಯವಾಗಿದೆ. ವಲ್ಲಿಯಾವಲಾ ಮದನ ನಾದ ಕೂಡ ಈ ಭಾಗದ ಒಂದು ಜನಪ್ರಿಯ ದೇವಾಲಯವಾಗಿದೆ. ಮಯ್ಯಾನಂದವು ಕೇರಳದ ಇತಿಹಾಸ ಪ್ರಸಿದ್ಧ ತಾಣವಾಗಿ ಜನಪ್ರಿಯವಾಗಿದೆ. ಮಾಧ್ಯಮ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮೂಡಿಸಿರುವ 'ಕೇರಳ ಕೌಮುದಿ' ಪತ್ರಿಕೆಯ ಹುಟ್ಟು ಸ್ಥಳವೂ ಇದಾಗಿದೆ. ಇಂದು ಈ ಪತ್ರಿಕೆ ಕೇರಳದ ಮನೆ ಮಾತಾಗಿ ಬೆಳೆದಿರುವ ಜನಪ್ರಿಯ ಮಲಯಾಳಂ  ದೈನಿಕ ಅನ್ನಿಸಿಕೊಂಡಿದೆ.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon