Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಲ್ಲಂ » ಹವಾಮಾನ

ಕೊಲ್ಲಂ ಹವಾಮಾನ

ಪ್ರವಾಸ ಋತು ನವೆಂಬರ್‌ನಿಂದ ಆರಂಭವಾಗಿ ಮಾರ್ಚ್ ವರೆಗೂ ಇರುತ್ತದೆ. ಈ ಸಮಯ ಕೊಲ್ಲಂಗೆ ಭೇಟಿ ನೀಡಲು ಕೂಡ ಸಕಾಲ. ಇದೇ ಸಂದರ್ಭದಲ್ಲೇ ಇಲ್ಲಿ ಉತ್ಸವಗಳು ನಡೆಯುತ್ತಿರುತ್ತವೆ. ಏಪ್ರಿಲ್‌ ಹಾಗೂ ಮೇ ತಿಂಗಳ ಬೇಸಿಗೆ ಹಾಗೂ ಜೂನ್‌ ಮತ್ತು ಜುಲೈ ತಿಂಗಳ ಮಳೆಗಾಲದ ಅವಧಿಯಲ್ಲಿ ಇತ್ತ ಬರದಿರುವುದು ಉತ್ತಮ.

ಬೇಸಿಗೆಗಾಲ

ಕೊಲ್ಲಂ ಉತ್ತಮ ವಾತಾವರಣವನ್ನು ಹೊಂದಿದೆ. ಅರೇಬಿಯನ್‌ ಸಮುದ್ರ ತೀರವಾಗಿದ್ದರಿಂದ ಇದು ವಿಶಿಷ್ಟ ವಾತಾವರಣ ಪಡೆದಿದೆ. ಮಾರ್ಚ್ ನಿಂದ ಬೇಸಿಗೆ ಆರಂಭವಾಗುತ್ತದೆ. ಮೇ ಕೊನೆಯವರೆಗೂ ಇರುತ್ತದೆ. ಕೊಂಚ ಹೆಚ್ಚೇ ಬಿಸಿ ಈ ಸಂದರ್ಭದಲ್ಲಿ ಇರುತ್ತದೆ. ತಾಪಮಾನ ಹೆಚ್ಚೆಂದರೆ 34 ಡಿಗ್ರಿ ಸೆಲ್ಶಿಯಸ್‌ವರೆಗೂ ತಲುಪುತ್ತದೆ. ಬೇಸಿಗೆಯಲ್ಲಿ ಪ್ರವಾಸ ಬರುವುದಾದರೆ ಹತ್ತಿ ಬಟ್ಟೆ ಹಾಗೂ ಸನ್‌ಗ್ಲಾಸ್‌ ತರಲು ಮರೆಯಬೇಡಿ.

ಮಳೆಗಾಲ

ಜೂನ್‌ ಮತ್ತು ಜುಲೈ ತಿಂಗಳಲ್ಲಿ ಇಲ್ಲಿ ಅಪಾರ ಪ್ರಮಾಣದ ಮಳೆ ಆಗುತ್ತದೆ. ಸೌತ್‌ವೆಸ್ಟ್‌ ಮಾರುತ ಇಲ್ಲಿ ವ್ಯಾಪಕ ಮಳೆಯಾಗುವಂತೆ ಮಾಡುತ್ತದೆ. ಸೆಪ್ಟೆಂಬರ್‌ ಕೊನೆಯವರೆಗೂ ಮಳೆಗಾಲ ಇರುತ್ತದೆ. ಕೆಲವೊಮ್ಮೆ ಅಕ್ಟೋಬರ್‌ ಹಾಗೂ ನವೆಂಬರ್‌ನಲ್ಲಿ ಮಳೆಯಾಗುವುದೂ ಉಂಟು. ವಿಪರೀತ ಮಳೆಯಾದ ಸಂದರ್ಭದಲ್ಲಿ ಹಿನ್ನೀರಿನಲ್ಲಿ ಬೋಟಿಂಗ್‌ ಹೋಗುವುದು ಹಾಗೂ ಸಮುದ್ರ ತೀರದ ವೀಕ್ಷಣೆಗೆ ತೆರಳುವುದು ಉತ್ತಮವಲ್ಲ.

ಚಳಿಗಾಲ

ಡಿಸೆಂಬರ್‌ನಲ್ಲಿ ಚಳಿಗಾಲ ಆರಂಭವಾಗುತ್ತದೆ. ನಂತರದ ದಿನಗಳಲ್ಲಿ ವಾತಾವರಣ ಕೊಂಚ ಡ್ರೈ ಆಗಿ ಇರುತ್ತದೆ. ಫೆಬ್ರವರಿ ಕೊನೆಯವರೆಗೂ ಘಾಡವಾಗಿ ಚಳಿಗಾಲ ಇರುತ್ತದೆ. ಚಳಿಗಾಳಿ ಬೀಸುವುದು ಇಲ್ಲಿ ಸಾಮಾನ್ಯ. ಡಿಸೆಂಬರ್‌ನಿಂದ ಫೆಬ್ರವರಿ ನಡುವಿನ ಅವಧಿ ಇಲ್ಲಿಗೆ ಭೇಟಿ ನೀಡಲು ಪ್ರಶಸ್ತ ಸಮಯ. ಎಲ್ಲಾ ವಿಧದ ಚಟುವಟಿಕೆಗೆ ಇದು ಉತ್ತಮ ಸಮಯ.