Search
  • Follow NativePlanet
Share
ಮುಖಪುಟ » ಸ್ಥಳಗಳು » ತ್ರಿಶ್ಶುರ್ » ಆಕರ್ಷಣೆಗಳು » ತಿರುವಾಂಬಾಡಿ ಕೃಷ್ಣ ದೇವಾಲಯ

ತಿರುವಾಂಬಾಡಿ ಕೃಷ್ಣ ದೇವಾಲಯ, ತ್ರಿಶ್ಶುರ್

1

ತಿರುವಾಂಬಾಡಿ ಕೃಷ್ಣ ದೇವಾಲಯವು ಕೃಷ್ಣನ ಭಕ್ತರಿಗೆ ಸ್ವರ್ಗ ಸದೃಶ್ಯವಾದ ಧಾರ್ಮಿಕ ಕೇಂದ್ರವಾಗಿದೆ. ಇದು ಹಲವಾರು ಶತಮಾನಗಳಷ್ಟು ಹಿಂದಿನ ಇತಿಹಾಸವನ್ನು ಹೊಂದಿದೆ. ಈ ದೇವಾಲಯವು ಸ್ಥಳಪುರಾಣಗಳಿಂದ ಮತ್ತು ದಂತಕಥೆಗಳಿಂದಾಗಿ ಜನಪ್ರಿಯತೆಯನ್ನು ಕಾಪಾಡಿಕೊಂಡು ಬಂದಿದೆ. ಇದು ಸ್ವರಾಜ್ ರೌಂಡ್ ಬಳಿಯಲ್ಲಿ ನೆಲೆಗೊಂಡಿದೆ. ಬೆಳಗ್ಗೆ 5 ರಿಂದ 11 ಗಂಟೆಯವರೆಗು ಮತ್ತು ಸಂಜೆ 5 ರಿಂದ 8.30 ರವರೆಗೆ ತೆರೆದಿರುತ್ತದೆ.

ತ್ರಿಶ್ಶೂರಿನ ಎರಡು ವಿಭಾಗಗಳ ನಡುವೆ ನಡೆಯುವ ಕೇರಳದ ಪ್ರಸಿದ್ಧ ಪೂರಂ ಉತ್ಸವದಲ್ಲಿ ಪಾಲ್ಗೊಳ್ಳುವ ಎರಡು ಪ್ರತಿಷ್ಠಿತ ದೇವಾಲಯಗಳಲ್ಲಿ ಈ ದೇವಾಲಯವು ಒಂದಾಗಿದೆ. ಈ ಉತ್ಸವವು ಈ ನಗರದ ನಿರ್ಮಾತೃಗಳ 2000 ವರ್ಷಗಳಷ್ಟು ಹಿಂದಿನ ಪರಂಪರೆಯನ್ನು ಹೊಂದಿದೆ. ಈ ಉತ್ಸವದಲ್ಲಿ ಚಿನ್ನದ ಶೃಂಗಾರಾಭರಣಗಳಿಂದ ಅಲಂಕೃತಗೊಂಡ ಆನೆಗಳನ್ನು ಮತ್ತು ಬಾಣಬಿರುಸುಗಳ ಪ್ರದರ್ಶನವನ್ನು ನೋಡಬಹುದಾಗಿದೆ. ಯುನೆಸ್ಕೊದಿಂದ " ಜಗತ್ತಿನ ಅತ್ಯಂತ ನಯನಮನೋಹರವಾದ ಉತ್ಸವ"ವೆಂಬ ಅಭಿಧಾನಕ್ಕೆ ಪಾತ್ರವಾಗಿರುವ ಈ ಉತ್ಸವವು ಎಪ್ರಿಲ್- ಮೇ ತಿಂಗಳಿನ ನಡುವೆ ಆಚರಿಸಲ್ಪಡುತ್ತದೆ. ಇಲ್ಲಿನ ಬಿಸಿಲು ಮತ್ತು ಆರ್ದ್ರತೆಯನ್ನು ಸಹಿಸಿಕೊಳ್ಳುವಿರಾದರೆ, ನೀವು ಸಹ ಈ ಉತ್ಸವವನ್ನು ಕಣ್ತುಂಬಿಕೊಳ್ಳಬಹುದು. ಹಾಗೆ ಮಾಡಿದಲ್ಲಿ ಒಂದು ಮರೆಯಲಾಗದ ಅನುಭವವನ್ನು ನಿಮ್ಮದಾಗಿಸಿಕೊಳ್ಳುವಿರಿ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat