Search
  • Follow NativePlanet
Share
ಮುಖಪುಟ » ಸ್ಥಳಗಳು » ಅಡೂರ್ » ಹವಾಮಾನ

ಅಡೂರ್ ಹವಾಮಾನ

ಉಷ್ಣವಲಯ ಹವಾಮಾನದಿಂದಾಗಿ ಅಡೂರ್ ವಾತಾವರಣವು ತೀವ್ರತೆವಾಗಿರುತ್ತದೆ. ಬೇಸಿಗೆಯಲ್ಲಿ ಭಾರೀ ಉಷ್ಣತೆ ಮತ್ತು ಮಳೆಗಾಲದಲ್ಲಿ ಭಾರೀ ಮಳೆಯಾಗುತ್ತದೆ. ಈ ಎರಡು ಋತುಗಳು ಭೇಟಿಗೆ ಯೋಗ್ಯವಲ್ಲ. ಅಕ್ಟೋಬರ್ ನಿಂದ ಜನವರಿ ತನಕ ಅಡೂರ್ ಭೇಟಿಗೆ ಯೋಗ್ಯ ಸಮಯ.

ಬೇಸಿಗೆಗಾಲ

ಫೆಬ್ರವರಿ ತಿಂಗಳಲ್ಲಿ ಆರಂಭವಾಗುವ ಬೇಸಿಗೆ ತಿಂಗಳು ಮೇಯಲ್ಲಿ ಅಂತ್ಯಗೊಳ್ಳುತ್ತದೆ. ಋತು ತುಂಬಾ ಉಷ್ಣತೆಯಿಂದ ಕೂಡಿದ್ದು, ಉಷ್ಣತೆಯು 31 ಡಿಗ್ರಿ ಸೆಲ್ಸಿಯಸ್ ತನಕ ಏರುತ್ತದೆ. ಅತಿಯಾದ ಉಷ್ಣತೆಯಿಂದ ಬೇಸಿಗೆಯಲ್ಲಿ ಭೇಟಿ ಯೋಗ್ಯವಲ್ಲ.

ಮಳೆಗಾಲ

ಜೂನ್ ನಿಂದ ಆರಂಭವಾಗುವ ಮಾನ್ಸೂನ್ ಸೆಪ್ಟಂಬರ್ ತನಕ ಮುಂದುವರಿಯುತ್ತದೆ. ನೈಋತ್ಯ ಮಾನ್ಸೂನ್ ನ ನೇರ ಪ್ರಭಾವದಿಂದಾಗಿ ನಗರದಲ್ಲಿ ಭಾರೀ ಮಳೆಯಾಗುತ್ತದೆ. ನಾಲ್ಕು ತಿಂಗಳ ಕಾಲ ಭಾರೀ ಮಳೆಯಾಗುತ್ತದೆ. ಜೂನ್ ಮತ್ತು ಜುಲೈ ತಿಂಗಳಲ್ಲಿ ಭಾರೀ ಮಳೆಯಾಗುವ ಕಾರಣ ಭೇಟಿಗೆ ಯೋಗ್ಯವಲ್ಲ.

ಚಳಿಗಾಲ

ಅಕ್ಟೋಬರ್ ನಲ್ಲಿ ಅಡೂರ್ ನಲ್ಲಿ ಚಳಿಗಾಲವು ಆರಂಭವಾಗುತ್ತದೆ ಮತ್ತು ಇದು ಜನವರಿ ತನಕ ಮುಂದುವರಿಯುತ್ತದೆ. ಈ ಅವಧಿಯಲ್ಲಿ ತಾಪಮಾನವು 25 ಡಿಗ್ರಿ ಸೆಲ್ಸಿಯಸ್ ನಿಂದ 28 ಡಿಗ್ರಿ ಸೆಲ್ಸಿಯಸ್ ತನಕವಿರುತ್ತದೆ. ಚಳಿಗಾಲದಲ್ಲೂ ಈಶಾನ್ಯ ಮಾನ್ಸೂನ್ ಪ್ರಭಾವದಿಂದ ಕೆಲವೊಮ್ಮೆ ಮಳೆಯಾಗುತ್ತದೆ. ಚಳಿಗಾಲದಲ್ಲಿ ಹವಾಮಾನವು ಹಿತಕರ ಹಾಗೂ ತಂಪಾಗಿರುತ್ತದೆ.