Search
 • Follow NativePlanet
Share
ಮುಖಪುಟ » ಸ್ಥಳಗಳು» ಅಹ್ಮದ್ ನಗರ್

ಅಹ್ಮದ್ ನಗರ - ಇತಿಹಾಸದ ಗರ್ಭದಲ್ಲೊಂದು ಪಯಣ

23

ಅಹ್ಮದ್ ನಗರವು ಮಹಾರಾಷ್ಟ್ರ ರಾಜ್ಯದ ಅಹ್ಮದ್ನಗರ್ ಜಿಲ್ಲೆಯಲ್ಲಿನ ಒಂದು ನಗರವಾಗಿದೆ. ಸಿನಾ ನದಿಯ ಪಶ್ಚಿಮ ದಂಡೆಯ ಮೇಲಿರುವ ಈ ಪ್ರದೇಶವು ಸ್ವತಃ ಮಹಾರಾಷ್ಟ್ರದ ಅತಿದೊಡ್ಡ ಜಿಲ್ಲೆಯಾಗಿದೆ.

ಅಹ್ಮದ್ನಗರವು ಮಹಾರಾಷ್ಟ್ರದ ಕೇಂದ್ರಸ್ಥಾನದಲ್ಲಿದ್ದುದರಿಂದ ಪುಣೆ ಮತ್ತು ಔರಂಗಾಬಾದ್ ನಿಂದ ಸಮಾನ ಅಂತರದಲ್ಲಿದೆ. ಅಹ್ಮದ್ ನಗರಕ್ಕೆ ಔರಂಗಾಬಾದ್, ನಾಸಿಕ್ ಗಳು ಉತ್ತರದಲ್ಲಿದ್ದರೆ , ಸೋಲಾಪುರ ಜಿಲ್ಲೆಯ ಜೊತೆಗೆ ಪುಣೆಯು ಅದರ ದಕ್ಷಿಣಕ್ಕೆ ಸ್ಥಿತವಾಗಿದೆ. ಠಾಣೆ ಪಶ್ಚಿಮ ದಿಕ್ಕಿನಲ್ಲಿದೆ ಮತ್ತು ಪೂರ್ವಕ್ಕೆ ಬೀಡ್ ಮತ್ತು ಒಸ್ಮನಾಬಾದ್ ಜಿಲ್ಲೆಗಳಿವೆ.

ಐತಿಹಾಸಿಕ ಪ್ರಾಮುಖ್ಯತೆಗಳು

ಅಹ್ಮದ್ನಗರವು ಸುಮಾರು ಅರ್ಧ ಸಹಸ್ರಮಾನಕ್ಕಿಂತಲೂ ಹೆಚ್ಚಿನ ಅಮೂಲ್ಯ ಐತಿಹಾಸಿಕ ದಾಖಲೆಗಳನ್ನು ಹೊಂದಿದ್ದು ಇದರ ಇತಿಹಾಸ 1490 ಕ್ಕಿಂತಲೂ ಮೊದಲಿನಿಂದಲೇ ಪ್ರಾರಂಭವಾಗುತ್ತದೆ. ಅಹ್ಮದ್ ನಿಜಾಮ್ ಷಾ ನಿಂದ 1494 ರಷ್ಟು ಹಿಂದೆಯೇ ಅಹ್ಮದ್ನಗರ ಪಟ್ಟಣವು ಸ್ಥಾಪಿತವಾಯಿತು. ಆದ್ದರಿಂದ ಈ ಜಿಲ್ಲೆಯು ಅದರ ಸಂಸ್ಥಾಪಕನ ಹೆಸರನ್ನು ಪಡೆದುಕೊಂಡಿದೆ. ಪ್ರಸ್ತುತ ಪ್ರದೇಶದ ಇತಿಹಾಸವು ನಿಜಾಮಿ ಷಾಹಿ ರಾಜವಂಶದ ಅಹ್ಮದ್ ನಿಜಾಮ್ ಷಾ ಸ್ಥಾಪಿಸಿದ ಕಾಲದಿಂದಲೇ ಪ್ರಾರಂಭವಾಗುತ್ತದೆ. ಸುಮಾರು 150 ವರ್ಷಗಳ ನಂತರ 1636 ರಲ್ಲಿ ಶ್ರೇಷ್ಠ ಮುಘಲ್ ದೊರೆ, ಷಾ ಜಹಾನನು ಈ ಪ್ರದೇಶವನ್ನು ಆಕ್ರಮಿಸಿಕೊಂಡನು.

ನಂತರದಲ್ಲಿ ಅಹ್ಮದ್ನಗರವು ಪೇಶ್ವೇಗಳ ಮತ್ತು ಮರಾಠಾರ ಕೈಯಲ್ಲಿ ಹೋಯಿತು, 1759 ರ ಆಸು-ಪಾಸಿನಲ್ಲಿ ಇದನ್ನು ಮರಾಠಾ ಮುಖ್ಯಸ್ಥ ದೌಲತ್ ರಾವ್ ಸಿಂಧ್ಯರಿಗೆ ಹಸ್ತಾಂತರಿಸಲಾಯಿತು. 1817 ರ ಪುಣಾ ಒಪ್ಪಂದದ ಪ್ರಕಾರ ಬ್ರಿಟಿಷರು ಲಾರ್ಡ್ ವೆಲ್ಲೆಸ್ಲಿ ನೇತೃತ್ವದಲ್ಲಿ, ಅಹ್ಮದ್ನಗರವನ್ನು ತಮ್ಮ ಕೊನೆಯ ದಿಗ್ವಿಜಯವನ್ನಾಗಿಸಿದರು.

ಮೊಘಲ್ ಸಾಮ್ರಾಜ್ಯದ ರಾಜ ದೊಡ್ಡ ವಂಶಾವಳಿಯ ಕೊನೆಯ ರಾಜ ಔರಂಗಜೇಬನು ಈ ಸ್ಥಳದಲ್ಲಿ ತನ್ನ ಕೊನೆಯ ವರ್ಷಗಳನ್ನು ಕಳೆದನು. ಅಹ್ಮದ್ನಗರದಲ್ಲಿನ ಸಣ್ಣ ಸ್ಮಾರಕ ಅವನ ಗಮನಾರ್ಹ ಆಳ್ವಿಕೆಯನ್ನು ನೆನಪಿಸುತ್ತದೆ.

ಅಹ್ಮದ್ನಗರದ ಪ್ರವಾಸಿ ಆಕರ್ಷಣೆಗಳು

ಅಹ್ಮದ್ನಗರ ಕೋಟೆ ನಗರದ ಪ್ರಮುಖ ಆಕರ್ಷಣೆಯ ತಾಣವಾಗಿದೆ. ಇದು ಅಹ್ಮದ್ ನಿಜಾಮ್ ಶಾನ ದೌಲತಾಬಾದ್ ಕೋಟೆಯನ್ನು ವಶಪಡಿಸಿ ಕೊಂಡಿರುವದರ ವಿಜಯದ ಸಂಕೇತವಾಗಿದೆ. ಕುತೂಹಲಕಾರಿ ವಿಷಯವೆಂದರೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ನಮ್ಮ ಹೆಸರಾಂತ ರಾಷ್ಟ್ರೀಯ ನಾಯಕರಿಗೆ ಈ ಕೋಟೆ ಒಂದು ಜೈಲಾಗಿ ಕಾರ್ಯನಿರ್ವಹಿಸಿದೆ. ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ, ಜವಾಹರಲಾಲ್ ನೆಹರು ಸೇರಿದಂತೆ ಹಲವಾರು ಗಮನಾರ್ಹ ವ್ಯಕ್ತಿಗಳನ್ನು ಇಲ್ಲಿ ಖೈದಿಗಳಂತೆ ಇರಿಸಲಾಗಿತ್ತು.

ಸಲಬತ್ ಖಾನ್ ಸಮಾಧಿ, ಬಾಗ್ ರೋಜಾ ಮತ್ತು ಕೋಟ್ ಬಾಗ್ ನಿಜಾಮ್ ಗಳು ಇಲ್ಲಿರುವ ಇನ್ನೂ ಕೆಲವು ಐತಿಹಾಸಿಕ ತಾಣಗಳಾಗಿದ್ದು ಭೇಟಿಗೆ ಯೋಗ್ಯವಾಗಿವೆ.

ಅಹ್ಮದ್ನಗರ ಕೂಡ ಅತ್ಯುತ್ತಮ ಧಾರ್ಮಿಕ ಗಮ್ಯ ಸ್ಥಾನವಾಗಿದೆ. ಮೊಹತ ದೇವಿ ದೇವಸ್ಥಾನ, ಸಿದ್ದೇಶ್ವರ ದೇವಾಲಯ, ಶ್ರೀ ವಿಶಾಲ್ ಗಣಪತಿ ದೇವಸ್ಥಾನ ಮತ್ತು ಸಂತ ಧ್ಯಾನೇಶ್ವರ ದೇವಾಲಯ ಇವು ಕೆಲವು ಯಾತ್ರಾ ತಾಣಗಳಾಗಿದ್ದು ನಿಮ್ಮಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಭಾವನೆಯನ್ನು ಮೂಡಿಸುತ್ತವೆ. ಶನಿ ಶಿಂಗನಪುರ ಗ್ರಾಮವು ಹತ್ತಿರದ ಸಾಯಿ ಬಾಬಾ ವಾಸಸ್ಥಾನವಾಗಿರುವ ಶಿರಡಿ ಗ್ರಾಮದಿಂದಾಗಿ ಒಂದು ಪ್ರಮುಖ ಆಕರ್ಷಣೆಯಾಗಿದೆ. ಇದು ನಗರದಿಂದ ಕೆಲವೇ ಕಿ.ಮೀ ದೂರದಲ್ಲಿದೆ.

ನೀಮಗೇನಾದರೂ ವಾಸ್ತುಶಿಲ್ಪದಲ್ಲಿ ಆಸಕ್ತಿಯಿದ್ದರೆ, ಐತಿಹಾಸಿಕ ವಸ್ತುಸಂಗ್ರಹಾಲಯ ಮತ್ತು ಅನ್ವೇಷಣಾ ಕೇಂದ್ರವನ್ನು ಸಂದರ್ಶಿಸಬಹುದು. ಟ್ಯಾಂಕ್ ಮ್ಯೂಸಿಯಂ ವಿಶ್ವದ ಇತಿಹಾಸದ ಅಧ್ಯಾಯಗಳ ಮೂಲಕ ವಿವಿಧ ಸಾಂಪ್ರದಾಯಿಕ ಯುದ್ಧಗಳ ಸಂದರ್ಭದಲ್ಲಿ ಬಳಸಲಾಗುತ್ತಿದ್ದ ವಿವಿಧ ರೀತಿಯ ಟ್ಯಾಂಕ್ ಗಳ ಬಗ್ಗೆ ಹೆಚ್ಚು ತಿಳಿಯಲು ಒಂದು ಅದ್ಭುತ ತಾಣವಾಗಿದೆ.

ನಿಮ್ಮ ಇಂದ್ರಿಯಗಳ ದಣಿವನ್ನು ಶಮನಗೊಳಿಸಲು ಮತ್ತು ನಿಮ್ಮ ಐಷಾರಾಮಿ ಬಯಕೆಗಳನ್ನು ಹಿಮ್ಮೆಟ್ಟಿಸುವಲ್ಲಿ ಸಹಾಯಮಾಡುವಂತಹ ಎರಡು ರಮಣೀಯ ಸ್ಥಳಗಳಾದ ಮುಲ್ಲಾ ಆಣೆಕಟ್ಟು ಮತ್ತು ಭಂಡಾರ್ಧಾರಾ ಆಣೆಕಟ್ಟುಗಳು ಪ್ರಕೃತಿ ಪ್ರೇಮಿಗಳನ್ನು ಖಂಡಿತವಾಗಿಯೂ ಪುಳಕಗೊಳಿಸದೆ ಇರದು. ನೀವು ಏಕಾಂಗಿಯಾಗಿ ಬಂದಿದ್ದರೂ ಅಥವಾ ನಿಮ್ಮ ಕುಟುಂಬದೊಂದಿಗೆ ಬಂದಿದ್ದರೂ ಈ ಸ್ಥಳವು ನಿಮಗೆ ಎಳ್ಳಷ್ಟಾದರೂ ವಿಶ್ರಾಂತಿಕೊಡುವುದರಲ್ಲಿ ಸಫಲವಾಗುವದಂತೂ ಖಂಡಿತ.

ಕೆಲವು ನಿಶ್ಚಿತಗಳು

ಅಹ್ಮದ್ನಗರದಲ್ಲಿ ವಾತಾವರಣ ವರ್ಷದ ಬಹುತೇಕ ಭಾಗ ಮಧ್ಯಮ ಆಹ್ಲಾದಕರವಾಗಿರುತ್ತದೆ. ಹವಾಮಾನ ಪ್ರಧಾನವಾಗಿ ಒಣ ಹಾಗೂ ಬಿಸಿಯಾಗಿರುತ್ತದೆ - ಬೇಸಿಗೆಯಲ್ಲಿ ಸ್ಥಳಕ್ಕೆ ಭೇಟಿ ನೀಡುವುದು ಅಷ್ಟೇನೂ ಉತ್ತಮ ಯೊಚನೆಯಾಗಿರುವುದಿಲ್ಲ. ಇದಕ್ಕೆ ಒಂದು ಕಾರಣ, ಮೇಲಕ್ಕೇರುವ ತಾಪಮಾನ ನಿಮ್ಮನ್ನು ಅಸಂತುಷ್ಟವಾಗಿಸುವದಲ್ಲದೇ ಇದು ಹೆಚ್ಚು ಪ್ರವಾಸಿ ಚಟುವಟಿಕೆಗಳು ನಡೆಯದೇ ಅಥವಾ ವೀಕ್ಷಣೆ ಸಾಧ್ಯವಾಗದೇ ನಿಮ್ಮನ್ನು ಹೋಟೆಲ್ ಕೋಣೆಯಲ್ಲಿ ಬಂಧಿಯನ್ನಾಗಿಸುತ್ತದೆ. ಮಳೆಗಾಲದಲ್ಲಿ ಮಳೆ ವಿರಳ ಆದ್ದರಿಂದ ಭೇಟಿಗೆ ಯೋಗ್ಯವಾಗಿದೆ. ಆದಾಗ್ಯೂ, ಚಳಿಗಾಲದಲ್ಲಿ - ಅಕ್ಟೋಬರ್ನಿಂದ ಮಾರ್ಚ್ ಅವಧಿಯಲ್ಲಿ ತಂಪಾದ ಮತ್ತು ಆಹ್ವಾನಿಸುವ ವಾತಾವರಣವಿರುವದರಿಂದ ನಗರದ ಭೇಟಿಗೆ ಅತ್ಯಂತ ಉತ್ಕೃಷ್ಟವಾದ ಕಾಲ.

ಅಹ್ಮದ್ನಗರಕ್ಕೆ ವಾಯುಯಾನ, ರೈಲು ಮತ್ತು ರಸ್ತೆಗಳಿಂದ ಉತ್ತಮ ಸಂಪರ್ಕವಿದೆ. ಮಹಾರಾಷ್ಟ್ರ ರಾಜ್ಯದ ಒಳಗೆ ಹಾಗೂ ಹೊರಗಿನ ಎಲ್ಲಾ ಪ್ರಮುಖ ನಗರಗಳು ಮತ್ತು ಪಟ್ಟಣಗಳ ಸಂಪರ್ಕ ಕಲ್ಪಿಸುತ್ತದೆ. ಎಲ್ಲ ನಗರಗಳು ಸಮೀಪ ಇರುವದರಿಂದ ಪ್ರಯಾಣ ಸಮಯ ಸಹನೀಯವಾಗಿದೆ. ನೀವು ವಿಮಾನದ ಮೂಲಕ ಹಾರಲು ಯೋಚಿಸಿದ್ದರೆ ಪುಣೆ ವಿಮಾನ ನಿಲ್ದಾಣವೇ ಹತ್ತಿರದ ದೇಶೀಯ ವಿಮಾನ ನಿಲ್ದಾಣವಾಗಿದ್ದು ಅನುಕೂಲಕರವಾಗಿದೆ. ಅಹ್ಮದ್ನಗರ್ ರೈಲ್ವೆ ನಿಲ್ದಾಣವು ನಿಯಮಿತ ಮತ್ತು ದೈನಂದಿನ ರೈಲು ಸೇವೆಗಳ ಮೂಲಕ ಎಲ್ಲಾ ನಗರಗಳಿಗೂ ಸಂಪರ್ಕ ಸಾಧಿಸಿದೆ. ಪುಣೆ ಅಥವಾ ಮುಂಬೈ ನಿಂದ ಆರಾಮವಾಗಿ ಮತ್ತು ಕೈಗೆಟುಕುವ ದರದಲ್ಲಿ 4-5 ಗಂಟೆ ಪ್ರಯಾಣದಲ್ಲಿ ಅಹ್ಮದ್ನಗರಕ್ಕೆ ತಲುಪಿಸುವ ರಸ್ತೆ ಸಾರಿಗೆಗಳು ಲಭ್ಯವಿದೆ.

ಅಹ್ಮದ್ನಗರವು 500 ಕ್ಕಿಂತಲೂ ಹೆಚ್ಚು ವರ್ಷಗಳ ಹಿಂದಿನ ಪ್ರಭಾವ ಪೂರ್ಣ ಇತಿಹಾಸವನ್ನು ಹೊಂದಿದೆ. ಈ ನಗರವು ಹಳ್ಳಿಗಾಡಿನಂತಿದ್ದು, ಸ್ಮಾರಕಗಳು, ಪ್ರಾಚೀನ ಕೋಟೆಗಳು ಮತ್ತು ಸರೋವರಗಳು ಮತ್ತು ಜಲಪಾತಗಳು ಮತ್ತು ಆಣೆಕಟ್ಟುಗಳಿಂದ ತುಂಬಿದೆ. ನೀವು ಪುಣೆ ಅಥವಾ ಔರಂಗಾಬಾದ್ ಗೆ ಪ್ರವಾಸದ ಯೋಜನೆ ಹಾಕಿದರೆ ಅಹ್ಮದ್ನಗರ್ ವು ನಿಮ್ಮ ಪಟ್ಟಿಯಲ್ಲಿ ತಂತಾನೇ ಸೇರಿಕೊಳ್ಳುವಂತಹ ಸ್ಥಳವಾಗಿದೆ. ನಗರವು ಶುದ್ಧ ಸತ್ವ ಹಾಗೂ ಉತ್ಸಾಹಿ ಪ್ರವಾಸಿಗರಿಗೆ ಸ್ವಯಂ ತಪ್ಪೊಪ್ಪಿಗೆಯ ಇತಿಹಾಸ ಮತ್ತು ವಾಸ್ತುಶಿಲ್ಪದ ಉತ್ಕೃಷ್ಟತೆಯ ಅನುಭವವನ್ನು ನೀಡುತ್ತದೆ. ನಗರವು ತನ್ನ ಅದ್ಭುತ ಇತಿಹಾಸವನ್ನು ವೀಕ್ಷಿಸಿ ಅದರ ಭರವಸೆಯ ಭವಿಷ್ಯದಲ್ಲಿ ಭಾಗವಹಿಸಲು ಆಹ್ವಾನಿಸುವಂತೆ ಗೋಚರಿಸುತ್ತದೆ. ಈ ಅದ್ಭುತ ನಗರವನ್ನು ವೀಕ್ಷಿಸುವ ಅವಕಾಶವನ್ನು ತಪ್ಪಿಸಿಕೊಳ್ಳದಿರಿ.

ಅಹ್ಮದ್ ನಗರ್ ಪ್ರಸಿದ್ಧವಾಗಿದೆ

ಅಹ್ಮದ್ ನಗರ್ ಹವಾಮಾನ

ಉತ್ತಮ ಸಮಯ ಅಹ್ಮದ್ ನಗರ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಅಹ್ಮದ್ ನಗರ್

 • ರಸ್ತೆಯ ಮೂಲಕ
  ವಿವಿಧ ರಾಜ್ಯಗಳ ರಸ್ತೆ ಸಾರಿಗೆ ಮತ್ತು ಖಾಸಗಿ ಪ್ರವಾಸ ಬಸ್ ಗಳು ಮಹಾರಾಷ್ಟ್ರದ ರಾಜ್ಯದೊಳಗೆ ಅಹ್ಮದ್ ನಗರದ ರವರೆಗೆ ಲಭ್ಯವಿವೆ. ನೀವು ಮುಂಬೈ ನಿಂದ ಅಹ್ಮದ್ ನಗರಕ್ಕೆ ತೆರಳಲು ಯೋಚಿಸಿದ್ದರೆ, 240 ಕಿ . ಮೀ . ದೂರ ಕ್ರಮಿಸ ಬೇಕಾಗುವದು ಮತ್ತು ಪ್ರಯಾಣ ಸುಮಾರು ನಾಲ್ಕು ಗಂಟೆಗಳ ಕಾಲವನ್ನು ತೆಗೆದುಕೊಳ್ಳುತ್ತದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಅಹ್ಮದ್ ನಗರವು, ಮಹಾರಾಷ್ಟ್ರದ ಒಳಗೆ ಮತ್ತು ಹೊರಗಿನ ಎಲ್ಲಾ ಪ್ರಮುಖ ನಗರಗಳೊಂದಿಗೆ ರೈಲು ಸಂಪರ್ಕ ಹೊಂದಿದೆ. ನೀವು ಆರಾಮವಾಗಿ ಅಹ್ಮದ್ ನಗರ ತಲುಪಲು ಸಹಾಯಾರ್ಥವಾಗಿ ಶಿರಡಿ, ಮುಂಬೈ (ದಾದರ್), ಪುಣೆ, ಮತ್ತು ಅನೇಕ ನಗರಗಳಲ್ಲಿ ಸಾಮಾನ್ಯ ದೈನಂದಿನ ರೈಲುಗಳಿವೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  113 ಕಿಮೀ ದೂರದಲ್ಲಿರುವ ಪುಣೆಯ ಲೋಹೆಗಾಂವ್ ವಿಮಾನ ನಿಲ್ದಾಣ, ಅಹ್ಮದ್ ನಗರದ ಹತ್ತಿರದ ದೇಶೀಯ ವಿಮಾನ ನಿಲ್ದಾಣವಾಗಿದೆ. ಮುಂಬೈ ನಲ್ಲಿನ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣ ಹತ್ತಿರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
24 Jan,Mon
Return On
25 Jan,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
24 Jan,Mon
Check Out
25 Jan,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
24 Jan,Mon
Return On
25 Jan,Tue