Search
  • Follow NativePlanet
Share
» »ಏಕಾಂಗಿ ಪ್ರಯಾಣಿಕರಿಗಾಗಿ ಸೂಕ್ತವಾದ ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳು

ಏಕಾಂಗಿ ಪ್ರಯಾಣಿಕರಿಗಾಗಿ ಸೂಕ್ತವಾದ ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳು

ದೈನಂದಿನ ಜೀವನದ ಜಂಜಾಟದಿಂದಾಗಿ ಬೇಸತ್ತು ನಿಮ್ಮನ್ನು ಏಕಾಂಗಿತನವು ಕಾಡುತ್ತಿದೆಯೇ? ಹಾಗಿದ್ದಲ್ಲಿ, ನಿಮ್ಮ ಬ್ಯಾಗ್ ಗಳನ್ನು ಪ್ಯಾಕ್ ಮಾಡಿ ಮತ್ತು ನಿಮಗೆ ವಿಶ್ರಾಂತಿ ಪಡೆಯಲು ಹೆಚ್ಚು ಅರ್ಹವಾದ ಸ್ಥಳವನ್ನು ಆಯ್ಕೆಮಾಡಿಕೊಳ್ಳಿ. ಪ್ರಯಾಣವು ವಾಸ್ತವದಿಂದ ಕೇವಲ ತಪ್ಪಿಸಿಕೊಳ್ಳುವುದು ಮಾತ್ರವಲ್ಲದೆ ಆತ್ಮಕ್ಕೆ ವಿಶ್ರಾಂತಿ ನೀಡುತ್ತಾ ಸಮಯವು ನಿಮ್ಮತ್ತ ಎಸೆಯುವ ಸವಾಲುಗಳನ್ನು ಎದುರಿಸುತ್ತಾ ಹೊಸ ಉತ್ಸಾಹದೊಂದಿಗೆ ಹಿಂತಿರುಗಿ. ಇದಕ್ಕಾಗಿಯೇ ಆಧ್ಯಾತ್ಮಿಕ ಗುರು ದಲೈ ಲಾಮಾ " ವರ್ಷಕ್ಕೊಮ್ಮೆ ನೀವು ಹಿಂದೆಂದೂ ನೋಡದ ಸ್ಥಳಕ್ಕೆ ಹೋಗಿ" ಎಂದು ಹೇಳುತ್ತಾರೆ.

ಪ್ರಯಾಣವು ತುಂಬಾ ಶಕ್ತಿಶಾಲಿಯಾಗಿದ್ದು, ನೀವು ವಿಶೇಷವಾಗಿ ನೀವು ಏಕವ್ಯಕ್ತಿ ಪ್ರವಾಸಕ್ಕಾಗಿ ನಿಮ್ಮದೇ ಆದ ಸ್ಥಳಕ್ಕೆ ಹೊರಡುತ್ತಿದ್ದರೆ. ನಿಮ್ಮ ಆರಾಮ ವಲಯದಿಂದ ಹೊರಬಂದು ನಿಮ್ಮನ್ನು ನೀವು ಸವಾಲು ಮಾಡಿಕೊಳ್ಳುವುದು ಸಣ್ಣ ಸಾಧನೆಯಲ್ಲ. ನೀವು ಪಡೆಯುವ ಸಂತೋಷ ಮತ್ತು ತೃಪ್ತಿಯ ಉತ್ತೇಜನ ಮತ್ತು ಆತ್ಮ ವಿಶ್ವಾಸವನ್ನು ಏಕಾಂಗಿ ಪ್ರಯಾಣವು ನಿಮ್ಮಲ್ಲಿ ತುಂಬುವುದನ್ನು ವಿವರಿಸಲಾಗದು. ಆದ್ದರಿಂದ ನೀವು ಏಕಾಂಗಿ ಪ್ರಯಾಣಕ್ಕಾಗಿ ಸಿದ್ದರಿದ್ದಲ್ಲಿ, ನಿಮಗಾಗಿ ಕರ್ನಾಟಕದ ಪ್ರಮುಖ ಸ್ಥಳಗಳು ಇಲ್ಲಿವೆ. ಇವುಗಳನ್ನು ಅನ್ವೇಷಿಸಲು ಹೋಗಿ!

mysore palace

1) ಮೈಸೂರು

ಬೆಂಗಳೂರು ಮತ್ತು ಮಂಗಳೂರಿನಂತಹ ಜನಪ್ರಿಯ ಸ್ಥಳಗಳ ಹೊರತಾಗಿ, ಮೈಸೂರು ಕರ್ನಾಟಕದಲ್ಲಿ ಏಕಾಂಗಿಯಾಗಿ ಪ್ರಯಾಣಿಸಲು ಸುರಕ್ಷಿತ ಮತ್ತು ಆಸಕ್ತಿದಾಯಕ ನಗರಗಳಲ್ಲಿ ಒಂದಾಗಿದೆ. ಶ್ರೀಮಂತ ಐತಿಹಾಸಿಕ ಗತಕಾಲದ ವೈಭವದೊಂದಿಗೆ ಈ ನಗರವು 1300 ರ ದಶಕದ ಹಿಂದಿನ ರಾಜಧಾನಿ ಮೈಸೂರಿನಲ್ಲಿ ನಡೆದಿರುವ ವಿಚಿತ್ರ ಸಂಗತಿಗಳನ್ನು ತನ್ನಲ್ಲಿ ಒಳಗೊಂಡಿದೆ.

ಇಲ್ಲಿರುವ ಭವ್ಯವಾದ ಮೈಸೂರು ಅರಮನೆಗೆ ಭೇಟಿ ಕೊಡಿ, ಇಲ್ಲಿಯ ಸ್ವಾದಿಷ್ಟ ಸ್ಥಳೀಯ ಆಹಾರದ ಸವಿಯನ್ನು ಸವಿಯಿರಿ, ಪಾರಂಪರಿಕ ನಗರದ ಲೇನ್‌ಗಳು ಮತ್ತು ಬೈಲೇನ್ ಗಳಲ್ಲಿ ಸೈಕಲ್‌ ಓಡಿಸಿ, ಶತಮಾನಗಳಷ್ಟು ಹಳೆಯದಾದ ದೇವರಾಜ ಮಾರುಕಟ್ಟೆಯಲ್ಲಿ ಪ್ರಸಿದ್ಧ ರೇಷ್ಮೆ, ಶ್ರೀಗಂಧ ಮತ್ತು ಮಸಾಲೆಗಳನ್ನು ಖರೀದಿಸಿ ಮತ್ತು ಚಾಮುಂಡಿ ಬೆಟ್ಟದ ಮೇಲಿನಿಂದ ಸೂರ್ಯಾಸ್ತದ ಪ್ರಶಾಂತ ನೋಟವನ್ನು ನೋಡಿ ಆನಂದಿಸಿ.

belukoppe

2) ಬೈಲಕುಪ್ಪೆ

ಬೆಂಗಳೂರಿನಿಂದ ಮಡಿಕೇರಿಯ ಮಾರ್ಗವಾಗಿ ಪ್ರಯಾಣ ಮಾಡುವಾಗ ಸಿಗುವ ಕುಶಾಲ ನಗರಕ್ಕೆ ಭೇಟಿ ಕೊಡಿ ಮತ್ತು ಅಲ್ಲಿಯ ಸುಂದರವಾದ ಬೌದ್ದ ಧರ್ಮದ ವಸಾಹತುಗಳಿರುವ ಬೈಲಕುಪ್ಪೆಗೆ ಭೇಟಿಕೊಡಿ. ಬೈಲಕುಪ್ಪೆಯ ಗೋಲ್ಡನ್ ಟೆಂಪಲ್ ಎಂದೂ ಕರೆಯಲ್ಪಡುವ ನಾಮ್‌ಡ್ರೋಲಿಂಗ್ ಮಠವು ಈ ಪ್ರಶಾಂತವಾದ ಸ್ಥಳದಲ್ಲಿ ನೆಲೆಸಿದೆ. ವರ್ಷವಿಡೀ ಆಹ್ಲಾದಕರ ವಾತಾವರಣವನ್ನು ಹೊಂದಿರುವ ಈ ಸ್ಥಳವು ಏಕಾಂಗಿ ಪ್ರಯಾಣಿಕರಿಗೆ ಭೇಟಿ ನೀಡಲು ಸೂಕ್ತವಾಗಿದೆ. ಕುಶಾಲನಗರದ ಜಿಂಕೆ ಪಾರ್ಕ್, ದುಬಾರೆ ಆನೆ ಶಿಬಿರ ಮತ್ತು ನಿಸರ್ಗಧಾಮ ಬೈಲಕುಪ್ಪೆಯಲ್ಲಿ ನೀವು ಭೇಟಿ ನೀಡಬಹುದಾದ ಕೆಲವು ಪ್ರಮುಖ ಸ್ಥಳಗಳಾಗಿವೆ.

gokarna om beach

3)ಗೋಕರ್ಣಾ

ವಿಶಾಲವಾದ ಅರಬ್ಬೀ ಸಮುದ್ರದ ತೀರದಲ್ಲಿ ನೆಲೆಸಿರುವ ಗೋಕರ್ಣದಲ್ಲಿಯ ಸೂರ್ಯ ಕಿರಣ ಮತ್ತು ಮರಳುಗಳ ಮಧ್ಯೆ ಇರಲು, ಬೀಚ್ ಪಾರ್ಟಿಗಳು, ಅಲ್ಲದೆ ಕೆಲವು ಶಾಂತಿಯುತವಾದ ಸಮಯವನ್ನು ಕಳೆಯಲು ಪರಿಪೂರ್ಣವಾದ ಸ್ಥಳವಾಗಿದೆ. ಗೋವಾದಲ್ಲಿಯ ಜನಸಂದಣಿಗೆ ಹೋಲಿಸಿದರೆ ಗೋಕರ್ಣಾ ಕಡಲ ತೀರಗಳು ಕಡಿಮೆ ಜನಸಂದಣಿಯನ್ನು ಹೊಂದಿವೆ. ಹಲವಾರು ಬೆರಗುಗೊಳಿಸುವ ಕಡಲ ತೀರಗಳು, ಬೀಚ್ ಹಟ್ ಗಳು, ಉತ್ತಮ ಆಹಾರ ಮತ್ತು ಸಂಗೀತವನ್ನೊಳಗೊಂಡ ಗುಡಿಸಲುಗಳನ್ನು ಒಳಗೊಂಡ ಗೋಕರ್ಣಾ ವು ಏಕಾಂಗಿಯಾಗಿ ಪ್ರಯಾಣಿಸಬಹುದಾದ ಸ್ಥಳವಾಗಿದ್ದು ಇಲ್ಲಿನ ಪ್ರಯಾಣವು ಎಂದೂ ಬೇಸರವೆನಿಸದು.

hampi

4) ಹಂಪೆ

ಬ್ಯಾಕ್ ಪ್ಯಾಕರ್ಸ್ ಮತ್ತು ಏಕಾಂಗಿ ಪ್ರಯಾಣಿಕರಿಗಾಗಿ ಹಂಪೆಯು ಸ್ವರ್ಗವಾಗಿದೆ. ಇದು ಏಕೆ ಎಂದು ನಿಮಗೆ ಗೊತ್ತಿರಬಹುದು. ಈ ಪಟ್ಟಣದ ಐತಿಹಾಸಿಕ ಶ್ರೀಮಂತಿಕೆಯು ಜಗತ್ತಿನ ಎಲ್ಲಾ ಕಡೆಯ ಪ್ರಯಾಣಿಕರನ್ನು ಆಕರ್ಷಿಸುತ್ತದೆ.

ಈ ಸುಂದರವಾದ ಸ್ಥಳದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವಾರು ಕಲ್ಲಿನ ಬಂಡೆಗಳನ್ನು ಹೊಂದಿದ್ದು, ಇದರೊಂದಿಗೆ ಸಾಹಸಮಾಡುವ ಉತ್ಸಾಹಿಗಳಿಗೆ ಇದು ಸೂಕ್ತವಾದ ತಾಣವಾಗಿದೆ. ಇಲ್ಲಿ ರಾಕ್ ಕ್ಲೈಂಬಿಂಗ್ ಬೌಲ್ಡರಿಂಗ್, ರಾಪ್ಪೆಲಿಂಗ್ ಇತ್ಯಾದಿಗಳಿಗೆ ಇದು ಅನುಕೂಲಕರವಾದ ಸ್ಥಳವಾಗಿದೆ.
ಇಂದು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿರುವ ಹಂಪೆಯು ವಿಜಯನಗರ ಸಾಮ್ರಾಜ್ಯದ ಕಾಲದ ಅವಶೇಷಗಳನ್ನು ಹೊಂದಿದೆ. ತುಂಗಭದ್ರಾ ನದಿಯಲ್ಲಿ ಕೊರಾಕಲ್ ರೈಡ್ ಮಾಡಿ ಅಥವಾ ಐತಿಹಾಸಿಕ ಅವಶೇಷಗಳಲ್ಲಿನ ಶ್ರೀಮಂತಿಕೆಯನ್ನು ಇನ್ನೂ ಹೆಚ್ಚಾಗಿ ಅನ್ವೇಷಿಸಿ.

karwar

5)ಕಾರವಾರ

ಸುಂದರವಾದ ಮತ್ತು ಏಕಾಂತ ಕಡಲತೀರಗಳ ಹೊರತಾಗಿಯೂ, ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಬಂದರು ನಗರವಾದ ಕಾರವಾರವು ಕಡಿಮೆ ಭೇಟಿ ಕೊಡಲ್ಪಡುವ ಸ್ಥಳವಾಗಿದೆ ಮತ್ತು ಕಡಿಮೆ ಜನಸಂದಣಿಯನ್ನು ಹೊಂದಿರುತ್ತದೆ. ಇದರರ್ಥ, ಏಕಾಂಗಿ ಪ್ರಯಾಣಿಕನು ಸ್ಥಳವನ್ನು ಅನ್ವೇಷಿಸಲು ಮತ್ತು ತನ್ನದೇ ಆದ ಸ್ವರ್ಗವನ್ನು ಕಂಡುಕೊಳ್ಳಲು ಹಲವಾರು ಅವಕಾಶಗಳನ್ನು ಹೊಂದುತ್ತಾನೆ.

ರವೀಂದ್ರನಾಥ ಟಾಗೋರ್ ಬೀಚ್ ನ ಮೃದುವಾದ ಮರಳಿನ ಉದ್ದವಾದ ಹಾದಿ ಮತ್ತು ಪ್ರವಾಸಿಗರನ್ನು ಆಕರ್ಷಿಸುವ ಕಪ್ಪು ಮರಳನ್ನು ಹೊಂದಿರುವ ತಿಳ್ಮಟೀ ಬೀಚ್ ಪ್ರಮುಖವಾದವುಗಳಾಗಿದ್ದು, ಇನ್ನೂ ಹಲವಾರು ಅನ್ವೇಶಣೆಗೊಳಗಾಗಿ ಬೆಳಕಿಗೆ ಬರಬೇಕಾದ ಹಲವಾರು ಸ್ಥಳಗಳನ್ನು ಕಾರವಾರವು ಒಳಗೊಂಡಿದೆ. ಕಾರವಾರ ತೀರವು ಬೆರಗುಗೊಳಿಸುವ ಡೈವ್ ತಾಣಗಳಿಗೆ ಪ್ರಸಿದ್ದಿಯಾಗಿದ್ದು ಸ್ಕೂಬಾ ಡೈವಿಂಗ್ ಮಾಡಲು ಯಾವ ಸ್ಥಳಕ್ಕೆ ಹೋಗಬೇಕು ಎನ್ನುವುದನ್ನು ಗುರುತು ಮಾಡಿಕೊಳ್ಳಿ.

udupi sri krishna

6) ಉಡುಪಿ

ಪಶ್ಚಿಮ ಘಟ್ಟ ಮತ್ತು ಅರಬ್ಬೀ ಸಮುದ್ರದ ಮಧ್ಯೆ ಇರುವ ಉಡುಪಿಯು ಏಕಾಂಗಿಯಾಗಿ ಪ್ರಯಾಣ ಮಾಡಲು ಸೂಕ್ತವಾದ ಕಡಲತೀರದ ಸ್ಥಳವಾಗಿದೆ. ಈ ಸ್ಥಳವು ಮನಮೋಹಕ ಕಡಲತೀರಗಳು, ದ್ವೀಪಗಳು,ಆಹಾರ, ಇನ್ನೂ ಹಲವಾರು ವಿಷಯಗಳನ್ನೊಳಗೊಂಡಿದ್ದು, ರಜಾದಿನಗಳನ್ನು ಕಳೆಯಲು ಸೂಕ್ತವಾದ ಸ್ಥಳವೆನಿಸಿದೆ.

ಇಲ್ಲಿಯ ಮಲ್ಪೆ ಬೀಚ್ ಅತ್ಯಂತ ಹೆಚ್ಚು ಪ್ರಸಿದ್ದಿಯನ್ನು ಪಡೆದಿದ್ದು ಇಲ್ಲಿ ಹಲವಾರು ಸಮುದ್ರಪ್ರಿಯರನ್ನು ಎಲ್ಲಾ ಋತುಗಳಲ್ಲಿಯೂ ಕಾಣಬಹುದಾಗಿದೆ. ಸೈಟ್ ಮೇರೀಸ್ ದ್ವೀಪವು ಇಲ್ಲಿಯ ಮಲ್ಪೆಯ ಇನ್ನೊಂದು ಸುಂದರ ಆಕರ್ಷಣೆಯಾಗಿದ್ದು, ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುವಂತೆ ಮಾಡುತ್ತದೆ. ಇಲ್ಲಿಯ ಪ್ರಸಿದ್ದ ಬೀಚ್ ಗಳು ಮತ್ತು ದ್ವೀಪಗಳ ಹೊರತಾಗಿಯೂ ಇಲ್ಲಿ ಇನ್ನೂ ಅನೇಕ ಅನ್ವೇಷಣೆಗೊಳಗಾಗದೇ ಇರುವ ಹಲವಾರು ದ್ವೀಪಗಳು ಮತ್ತು ಕಡಲತೀರಗಳಿದ್ದು ಇದಕ್ಕೆ ಭೇಟಿ ಕೊಡಬಹುದಾಗಿದೆ.

jenukalgudda -sakleshpur

7) ಸಕಲೇಶಪುರ

ಕಾಫಿಯ ಇಳಿಜಾರು ಬೆಟ್ಟಗಳಿಂದ ಸುತ್ತುವರೆದಿರುವ , ಚಹಾ ಮತ್ತು ಮಸಾಲೆಗಳ ತೋಟಗಳು, ಇತ್ಯಾದಿಗಳನ್ನು ಒಳಗೊಂಡಿರುವ ಸುಂದರವಾಗಿರುವ ಸಕಲೇಶಪುರ ಗಿರಿಧಾಮ ಪಟ್ಟಣವು ಕರ್ನಾಟಕದ ಪಶ್ಚಿಮ ಘಟ್ಟದಲ್ಲಿ ನೆಲೆಸಿದೆ. ತಂಪಾದ ಹವಾಮಾನವನ್ನೊಳಗೊಂಡ ಈ ಸ್ಥಳವು ಪ್ರಸಿದ್ದ ಬೇಸಿಗೆ ತಾಣವಾಗಿದೆ.

ಈ ಸ್ಥಳವು ಬಿಸಲೆ ಅಭಯಾರಣ್ಯವನ್ನು ಹೊಂದಿದ್ದು ಇದು ಸಮೃದ್ದವಾಗಿ ವನ್ಯಜೀವಿಗಳನ್ನು ಹೊಂದಿದೆ. ಪ್ರಕೃತಿ ಪ್ರೇಮಿಗಳು ಮತ್ತು ವನ್ಯಜೀವಿ ಛಾಯಾಗ್ರಾಹಕರಿಗೆ ಈ ಸ್ಥಳವು ಸೂಕ್ತವಾದ ತಾಣವಾಗಿದೆ. ನಕ್ಷತ್ರಾಕಾರದ ಮಂಜರಬ ಕೋಟೆಯು ಇಲ್ಲಿಯ ಇನ್ನೊಂದು ಆಸಕ್ತಿದಾಯಕ ತಾಣವಾಗಿದ್ದು, ಇತಿಹಾಸ ಪ್ರಿಯರು ಮತ್ತು ವಾಸ್ತುಶಿಲ್ಪ ಉತ್ಸಾಹಿಗಳಿಗೆ ಭೇಟಿಗೆ ಯೋಗ್ಯವಾದುದಾಗಿದೆ.

8) ಮಡಿಕೇರಿ

ಸಣ್ಣ ಬೆಟ್ಟ ಪಟ್ಟಣವಾದ ಮಡಿಕೇರಿಯು ತನ್ನಲ್ಲಿ ವಿಸ್ಟಾಗಳು, ಸುಂದರ ದೃಶ್ಯಾವಳಿಗಳು, ಆಹ್ಲಾದಕರವಾದ ಹವಾಮಾನ ಮತ್ತು ಸುಲಭವಾಗಿ ಪ್ರವೇಶಿಸಬಹುದಾದಂತಹ ಸ್ಥಳ ಎಲ್ಲವನ್ನೂ ಹೊಂದಿದ್ದು , ಏಕಾಂಗಿ ಪ್ರಯಾಣಿಕರಿಗಾಗಿ ಅತ್ಯಂತ ಸೂಕ್ತವಾದ ಸ್ಥಳವಾಗಿದೆ. ಪ್ರವಾಸಿಗರಿಗಾಗಿ ಹಲವಾರು ಹಾಸ್ಟೇಲ್ ಗಳು, ಹೋಮ್ ಸ್ಟೇಗಳಂತಹ ಸೌಲಭ್ಯಗಳನ್ನು ಹೊಂದಿರುವ ಈ ಸ್ಥಳವು ಏಕಾಂಗಿ ಪ್ರವಾಸಿಗ ಸಮುದಾಯದಲ್ಲಿ ಜನಪ್ರಿಯ ತಾಣವಾಗಿದೆ.

ಕಾಡುಗಳ ನಡುವೆ ಚಿಕ್ಕದಾದ ಪಾದಯಾತ್ರೆ ಹೋಗಿ ಅಥವಾ ಮನದಲ್ಪಟ್ಟಿಯಲ್ಲಿರುವ ಪುಷ್ಪಗಿರಿ ಮೀಸಲು ಅರಣ್ಯಕ್ಕೆ ಉದ್ದನೆಯ ಪಾದಯಾತ್ರೆ ಮಾಡಿ. ಇಲ್ಲಿಯ ಸ್ಥಳೀಯ ಹಣ್ಣಿನ ವೈನ್ ಮತ್ತು ಮನೆಯಲ್ಲಿ ತಯಾರಿಸಿದ ಚಾಕೊಲೇಟ್‌ಗಳನ್ನು ಪ್ರಯತ್ನಿಸಿ ಅಥವಾ ಆರಾಮವಾಗಿ ಮಲಗಿ ಪುಸ್ತಕವನ್ನು ಓದಿ ಅಥವಾ ಪ್ರಕೃತಿಯ ಧ್ವನಿಯನ್ನು ಆಲಿಸಿ ಆನಂದಿಸಿ.

9) ಚಿಕ್ಕಮಗಳೂರು

ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ನೆಲೆಸಿರುವ ಕರ್ನಾಟಕದಲ್ಲಿಯ ಅತೀ ಎತ್ತರದ ಶಿಖರವನ್ನು ಹೊಂದಿರುವ ಚಿಕ್ಕಮಗಳೂರು ರಾಜ್ಯದ ಅತ್ಯಂತ ಜನಪ್ರಿಯ ಗಿರಿಧಾಮವಾಗಿದೆ. ಆಹ್ಲಾದಕರವಾದ ಹವಾಮಾನ, ಸುಂದರವಾದ ದೃಶ್ಯಗಳು, ಸುಂದರವಾದ ಪೊದೆಗಳು ಮತ್ತು ಹುಲ್ಲುಗಾವಲುಗಳ ಮೂಲಕ ಸುಂದರವಾದ ಹಾದಿಗಳು, ಗುಪ್ತ ಜಲಪಾತಗಳು, ಶ್ರೀಮಂತ ವನ್ಯಜೀವಿಗಳು, ಕಾಫಿ ಎಸ್ಟೇಟ್ ಗಳು - ಚಿಕ್ಕಮಗಳೂರು ನಿಮ್ಮ ಹೃದಯವನ್ನು ಕದಿಯಲು ಎಲ್ಲವನ್ನೂ ಹೊಂದಿದೆ.

ಹೆಬ್ಬೆ ಜಲಪಾತಗಳು ಮತ್ತು ಝರೀ ಜಲಪಾತಗಳು ಅಥವಾ ಬಾಬಾ ಬುಡಾನ್ ಗಿರಿ ಮತ್ತು ಮುಳ್ಳಯ್ಯನಗಿರಿಗೆ ಟ್ರಕ್ಕಿಂಗ್ , ಅಥವಾ ಮುತ್ತೋಡಿ ಅರಣ್ಯಗಳು ಮತ್ತು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ನೈಜತೆಯನ್ನು ಅನ್ವೇಷಿಸುವುದರ ಜೊತೆಗೆ ಇಲ್ಲಿ ಮಾಡಲು ತುಂಬಾ ಇದೆ!

10) ಬಾದಾಮಿ

ಐತಿಹಾಸಿಕವಾಗಿ ವಾತಾಪಿ ಎಂದು ಕರೆಯಲ್ಪಡುವ ಬಾದಾಮಿಯು ಚಾಲುಕ್ಯರ ಆಡಳಿತ ರಾಜಧಾನಿಯಾಗಿತ್ತು. ಈ ಪ್ರದೇಶದಲ್ಲಿ ಹೇರಳವಾಗಿ ಕಂಡುಬರುವ ಕೆಂಪು ಮರಳುಗಲ್ಲುಗಳಿಂದ ಕತ್ತರಿಸಿದ ಪ್ರಭಾವಶಾಲಿ ಕಲ್ಲಿನ ಗುಹೆಗಳು ಮತ್ತು ದೇವಾಲಯಗಳನ್ನು ನೋಡಲು ಇಲ್ಲಿಗೆ ಭೇಟಿ ಕೊಡಿ.

ಶತಮಾನಗಳಿಂದ ಇಲ್ಲಿಯ ವೈಭವಕ್ಕೆ ಸಾಕ್ಷಿಯಾಗಿರುವ ಶ್ರೀಮಂತ ಇತಿಹಾಸದ ಕುರುಹುಗಳು ಈ ಪಟ್ಟಣದ ಪ್ರತಿಯೊಂದು ಮೂಲೆ ಮೂಲೆಗಳಲ್ಲಿಯೂ ತುಂಬಿದೆ ಹಾಗೂ ಇದು ಮುಖ್ಯವಾಗಿ ಭಾರತದ ಪುರಾತತ್ವ ಸಮೀಕ್ಷೆಯ (ಎ ಎಸ್ ಐ) ತಾಣವಾಗಿದ್ದು, ಹಿಂದಿನ ಕಾಲದ ವೈಭವವನ್ನು ಬಹಿರಂಗಪಡಿಸುವ ಈ ಪ್ರದೇಶ ಮತ್ತು ಅದರ ಸುತ್ತಮುತ್ತಲಿನ ಹಲವಾರು ಉತ್ಖನನಕ್ಕೆ ಒಳಪಟ್ಟ ಸ್ಥಳಗಳನ್ನು ಇಲ್ಲಿ ಕಾಣಬಹುದಾಗಿದೆ.

11) ಆಗುಂಬೆ

ಪ್ರೀತಿಯಿಂದ 'ದಕ್ಷಿಣದ ಚಿರಾಪುಂಜಿ' ಎಂದು ಕರೆಯಲ್ಪಡುವ ಸಣ್ಣ ಹಳ್ಳಿಯಾದ ಆಗುಂಬೆಯು ಅಪರೂಪವಾದ ಮಳೆಕಾಡುಗಳು ಮತ್ತು ವನ್ಯಜೀವಿಗಳನ್ನು ತನ್ನಲ್ಲಿ ಹೊಂದಿದೆ. ನೀವು ರೋಚಕ ಸಾಹಸಕ್ಕೆ ತಯಾರಾಗಿರುವಿರಿ ಎಂದಾದಲ್ಲಿ, ಆಗುಂಬೆಯಲ್ಲಿ ಅವಿಸ್ಮರಣೀಯ ಅನುಭವವನ್ನು ಪಡೆಯಲು ಸಿದ್ದರಾಗಿ. ಈ ಕಾಡು ನಾಗರಹಾವು ಮತ್ತು ಹಲವಾರು ಇತರ ಜಾತಿಯ ಹಾವುಗಳಿಗೆ ನೆಲೆಯಾಗಿದೆ.
ಇಲ್ಲಿಯ ರಹಸ್ಯ ಹಾದಿಗಳನ್ನು ಅನ್ವೇಷಿಸಿ, ಕಾಡಿನ ಒಳಭಾಗದಲ್ಲಿ ಬೀಳುವ ಗುಪ್ತ ಜಲಪಾತಗಳ ಕಡೆಗೆ ಪಾದಯಾತ್ರೆ ಮಾಡಿ. ಮತ್ತು ನೀವು ನಿಜವಾಗಿಯೂ ವನ್ಯಜೀವಿಗಳ ಬಗ್ಗೆ ಒಲವು ಹೊಂದಿದ್ದರೆ, ನೀವು ಆಗುಂಬೆಯ ಮಳೆಕಾಡು ಸಂಶೋಧನಾ ಕೇಂದ್ರದಲ್ಲಿ (ಎ ಆರ್ ಆರ್ ಎಸ್) ಸ್ವಯಂಸೇವಕರಾಗಬಹುದು.

12) ಚನ್ನಪಟ್ಟಣ

ಆಟಿಕೆಗಳ ಪಟ್ಟಣವೆನಿಸಿರುವ ಚನ್ನಪಟ್ಟಣವು ವಿಶ್ರಾಂತಿ ಪಡೆಯಲು ಭೇಟಿ ಕೊಡುವ ಸ್ಥಳವಾಗಿದೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ಕೇವಲ 60 ಕಿ.ಮೀ ದೂರದಲ್ಲಿದ್ದು, ಏಕಾಂಗಿ ಪ್ರಯಾಣಿಕರೂ ಕೂಡಾ ಚನ್ನಪಟ್ಟಣವನ್ನು ಸುಲಭವಾಗಿ ತಲುಪಬಹುದಾಗಿದೆ. ಈ ಸ್ಥಳದ ಸಾಂಪ್ರದಾಯಿಕ ಕರಕುಶಲ ಕಲೆಯಾದ ಆಟಿಕೆ ತಯಾರಿಕೆಯು ತಲೆ ತಲಾಂತರದಿಂದ ವಾಡಿಕೆಯಲ್ಲಿದ್ದು ಇಂದಿನ ಪೀಳಿಗೆಯವರೂ ಸಹ ಅನುಸರಿಸಿಕೊಂಡು ಬಂದಿದ್ದಾರೆ. ಇಲ್ಲಿ ತಯಾರಿಸಿದ ಮರದ ಆಟಿಕೆಗಳು ಈಗ ಪ್ರಪಂಚದ ಅನೇಕ ಭಾಗಗಳಿಗೆ ರಫ್ತು ಮಾಡಲ್ಪಡುತ್ತವೆ.

ಇಲ್ಲಿಯ ಸಾವಿರಾರು ಆಟಿಕೆಗಳನ್ನು ನೋಡಿ ನಿಮ್ಮ ಮನಸ್ಸಿನ ಮಗುವು ಜಾಗೃತಗೊಳ್ಳುವುದರಲ್ಲಿ ಸಂಶಯವಿಲ್ಲ ನುರಿತ ಕುಶಲಕರ್ಮಿಗಳನ್ನು ಹೆಚ್ಚುವರಿಯಾಗಿ ಬೆಂಬಲಿಸುವ ಸಲುವಾಗಿ ಕೆಲವನ್ನು ಆಟಿಕೆಗಳನ್ನು ಖರೀದಿಸುವ ಮೂಲಕ ನಿಮ್ಮನ್ನು ನೀವು ತೃಪ್ತಿ ಪಡಿಸಿಕೊಳ್ಳಿ.

13) ಮುರುಡೇಶ್ವರ

ವಿಸ್ತಾರವಾದ ಪಶ್ಚಿಮ ಘಟ್ಟಗಳು ಮತ್ತು ವಿಸ್ತಾರವಾದ ಅರಬ್ಬೀ ಸಮುದ್ರದಿಂದ ಸುತ್ತುವರೆದಿರುವ , ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಪಟ್ಟಣವಾದ ಮುರುಡೇಶ್ವರವು ವಿಶೇಷವಾಗಿ ಶಾಂತವಾದ ವಿರಾಮವನ್ನು ಬಯಸುವವರಿಗೆ ಸೂಕ್ತವಾದ ಸ್ಥಳವಾಗಿದೆ. . ಸುಂದರವಾದ ಮುರುಡೇಶ್ವರ ದೇವಾಲಯ ಮತ್ತುಇಲ್ಲಿನ ಶಿವನ ಪ್ರತಿಮೆಯನ್ನು ಹೊಂದಿದ್ದು ಇದು ಪ್ರಪಂಚದಲ್ಲೇ ಎರಡನೇ ಅತಿ ಎತ್ತರದ ಪ್ರತಿಮೆ ಎಂದು ಪ್ರಸಿದ್ಧವಾಗಿದೆ, ನೀವು ಈ ಪಟ್ಟಣದಲ್ಲಿರುವಾಗ ಇಲ್ಲಿಗೆ ಭೇಟಿ ನೀಡಲು ತಪ್ಪಿಸಿಕೊಳ್ಳಬಾರದು.

ನೀಲಿ ಸಮುದ್ರದ ಹಿನ್ನೆಲೆಯಲ್ಲಿ ಪ್ರತಿಮೆಯ ನೋಟವು ನೋಡಬೇಕಾದ ದೃಶ್ಯವಾಗಿದೆ. ಕಡಲತೀರದಲ್ಲಿರುವವರಿಗಾಗಿ ಸಮೀಪದ ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್ ಸೇರಿದಂತೆ ಹಲವಾರು ಚಟುವಟಿಕೆಗಳಿವೆ

14) ಕಾರ್ಕಳ

ಪಶ್ಚಿಮ ಘಟ್ಟಗಳು ಮತ್ತು ಅರಬ್ಬೀ ಸಮುದ್ರದಿಂದ ಸುತ್ತುವರೆದಿರುವ ಈ ಪಟ್ಟಣವು ಪ್ರವಾಸಿ ಹಾಟ್‌ಸ್ಪಾಟ್‌ಗಳ ಪಟ್ಟಿಯಲ್ಲಿ ಸಾಕಷ್ಟು ಇಲ್ಲ. ಅಂದರೆ ಈ ಸ್ಥಳವು ಕಡಿಮೆ ಅನ್ವೇಷಣೆಗೊಳಗಾದ ಸ್ಥಳಗಳ ಪಟ್ಟಿಯಲ್ಲಿ ಬರುತ್ತದೆ ಹಾಗೂ ಇಲ್ಲಿ ಅನ್ವೇಷಿಸಲು ಮತ್ತು ಅನುಭವಿಸಲು ಬಹಳಷ್ಟು ಇದೆ. ಪಶ್ಚಿಮ ಘಟ್ಟಗಳ ಸಾಮೀಪ್ಯದಿಂದಾಗಿ, ಈ ಪ್ರದೇಶವು ವರ್ಷವಿಡೀ ಆಹ್ಲಾದಕರ ಹವಾಮಾನವನ್ನು ಅನುಭವಿಸುತ್ತದೆ, ಇದು ವರ್ಷಪೂರ್ತಿ ಭೇಟಿ ನೀಡುವ ತಾಣವಾಗಿದೆ. ಇಲ್ಲಿಯ ಪ್ರಮುಖ ಆಕರ್ಷಣೆಯಾಗಿರುವ ಎತ್ತರದ ಏಕಶಿಲಾ ಬಾಹುಬಲಿ ಗೋಮಟೇಶ್ವರ ಪ್ರತಿಮೆಯನ್ನು ನೋಡುವುದನ್ನು ತಪ್ಪಿಸಿಕೊಳ್ಳಬಾರದು.

15) ಶಿರಸಿ

ಕರ್ನಾಟಕದ ಉತ್ತರಕನ್ನಡ ಜಿಲ್ಲೆಯಲ್ಲಿರುವ ಇನ್ನೊಂದು ಗುಪ್ತ ರತ್ನವೆಂದರೆ ಅದು ಶಿರಸಿಯ ಪ್ರಶಾಂತವಾದ ಗಿರಿಧಾಮ. ಇದು ದಟ್ಟವಾದ ಸುಂದರ ಅರಣ್ಯಗಳಿಂದ ಆವೃತ್ತವಾಗಿದ್ದು, ಗುಪ್ತ ಜಲಪಾತಗಳು ಮತ್ತು ಶ್ರೀಮಂತ ವನ್ಯಜೀವಿಗಳನ್ನು ಹೊಂದಿದೆ ಅಲ್ಲದೆ ಇದು ರಮಣೀಯವದ ದೃಶ್ಯ ಸೌಂದರ್ಯತೆಯನ್ನು ಹೊಂದಿದೆ.ಈ ಕಾಡುಗಳು ಹಲವಾರು ಆನೆಗಳು ಮತ್ತು ಚಿರತೆಗಳು, ಹುಲಿಗಳು ಮತ್ತು ಬಹುಕಾಂತೀಯ ಕಪ್ಪು ಪ್ಯಾಂಥರ್‌ನಂತಹ ದೊಡ್ಡ ಬೆಕ್ಕುಗಳಿಗೆ ನೆಲೆಯಾಗಿದೆ. ಯಾನಾ ಗುಹೆಗಳು ಅಥವಾ ಯಾನಾ ರಾಕ್ಸ್ ಎಂದು ಕರೆಯಲ್ಪಡುವ ಸುಣ್ಣದ ಕಲ್ಲುಗಳ ಕಾರ್ಸ್ಟ್ ರಚನೆಗಳು ಈ ಸ್ಥಳದ ವಿಶಿಷ್ಟ ಆಕರ್ಷಣೆಗಳಲ್ಲಿ ಒಂದಾಗಿದೆ. ಹಸಿರು ಎಲೆಗಳ ಮೂಲಕ ಪಾದಯಾತ್ರೆ ಮತ್ತು ಗುಹೆಗಳಲ್ಲಿ ನಡೆಯುವುದು ಖಂಡಿತವಾಗಿಯೂ ನಿಮ್ಮನ್ನು ಇನ್ನೊಂದು ಜಗತ್ತಿಗೆ ಕರೆದೊಯ್ಯುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X