Search
  • Follow NativePlanet
Share
» »ಮಹಾರಾಷ್ಟ್ರದ ಮೈನವಿರೇಳಿಸುವ ಗಿರಿಧಾಮಗಳು

ಮಹಾರಾಷ್ಟ್ರದ ಮೈನವಿರೇಳಿಸುವ ಗಿರಿಧಾಮಗಳು

By Vijay

ಭಾರತ ದೇಶದ ಪಶ್ಚಿಮ ಭಾಗದಲ್ಲಿ ಬರುವ ಮಹಾರಾಷ್ಟ್ರ ರಾಜ್ಯವು ಉತ್ತರ ಪ್ರದೇಶದ ನಂತರ ಹೆಚ್ಚು ಜನಸಂಖ್ಯೆಯುಳ್ಳ ರಾಜ್ಯವಾಗಿದೆ. ದೇಶದ ಪಶ್ಚಿಮ ಕೇಂದ್ರ ಭಾಗದಲ್ಲಿ ಸ್ಥಿತವಿರುವ ಈ ರಾಜ್ಯವು ಭೌಗೋಳಿಕವಾಗಿ ಮೂರನೆಯ ದೊಡ್ಡ ರಾಜ್ಯವಾಗಿದೆ. ಮಹಾರಾಷ್ಟ್ರ ರಾಜ್ಯವು ತನ್ನ ಗಡಿಯನ್ನು ವಾಯವ್ಯ ದಿಕ್ಕಿನಲ್ಲಿ ಗುಜರಾತ್, ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರ ಹವೇಲಿ, ಪಶ್ಚಿಮಕ್ಕೆ ಅರಬ್ಬಿ ಸಮುದ್ರ, ಈಶಾನ್ಯ ದಿಕ್ಕಿಗೆ ಮಧ್ಯ ಪ್ರದೇಶ, ಪೂರ್ವಕ್ಕೆ ಛತ್ತೀಸಗಡ್, ನೈರುತ್ಯ ಭಾಗಕ್ಕೆ ಗೋವಾ ಹಾಗು ದಕ್ಷಿಣ ದಿಕ್ಕಿಗೆ ಕರ್ನಾಟಕ ರಾಜ್ಯಗಳೊಂದಿಗೆ ಹಂಚಿಕೊಂಡಿದೆ.

ಉತ್ತರದಿಂದ ದಕ್ಷಿಣದವರೆಗೆ ವಿಶಾಲವಾಗಿ ಚಾಚಿರುವ ರಾಜ್ಯದ ಅಂಚು ದಟ್ಟವಾದ ಪಶ್ಚಿಮ ಘಟ್ಟಗಳ ವನ್ಯ ಸಂಪತ್ತಿನಿಂದ ಮುಚ್ಚಿಹೋಗಿದೆ. ಈ ದಟ್ಟ ಪರ್ವತ ಶ್ರೇಣಿಗಳು ತನ್ನ ಉದ್ದನೆಯ ಪಥದಲ್ಲಿ ಒಂದೊಮ್ಮೆ ಅರಬ್ಬಿ ಸಮುದ್ರದ ಸನಿಹ ಬರುತ್ತ ಮಗದೊಮ್ಮೆ ಸುಮಾರು 40 ರಿಂದ 50 ಕಿ.ಮೀ ದೂರ ಹೋಗುತ್ತ ಸಮುದ್ರದೊಂದಿಗೆ ಕಣ್ಣು ಮುಚ್ಚಾಲೆ ಆಟ ಆಡುತ್ತಿದೆಯೇನೊ ಎಂಬಂತೆ ಆಭಾಸ ಮೂಡಿಸುತ್ತದೆ. ಭಾರತದ ಪ್ರವಾಸೋದ್ಯಮಕ್ಕೂ ಮಹಾರಾಷ್ಟ್ರ ರಾಜ್ಯ ಅನನ್ಯ ಕೊಡುಗೆ ನೀಡಿದೆ. ಇಲ್ಲಿರುವ ಗಿರಿಧಾಮಗಳಂತೂ ರೋಮಾಂಚನ ಹಾಗು ಅಷ್ಟೆ ರೋಚಕವಾದ ಅನುಭವವನ್ನು ಪ್ರವಾಸಿಗರಿಗೆ ಒದಗಿಸುತ್ತದೆ. ಪ್ರಸಕ್ತ ಬರುವ ಬೇಸಿಗೆಯಲ್ಲಿ ನಿಮಗೇನಾದರೂ ಗಿರಿಧಾಮಗಳಿಗೆ ಭೇಟಿ ನೀಡುವ ಯೋಜನೆ ಹಾಕಿಕೊಂಡಿದ್ದರೆ ಈ ಕೆಳಗೆ ನೀಡಲಾಗಿರುವ ಗಿರಿಧಾಮಗಳಿಗೊಮ್ಮೆ ಭೇಟಿ ನೀಡಲು ಯೋಚಿಸಿ.

ಪಂಚಗಣಿ:

ಪಂಚಗಣಿ:

"ತಾರೆ ಜಮೀನ್ ಪರ್" ಎಂಬ ಯಶಸ್ವಿ ಹಿಂದಿ ಚಿತ್ರ ಚಿತ್ರೀಕರಣಗೊಂಡ ಅದ್ಭುತ ಗಿರಿಧಾಮ ಪ್ರದೇಶ ಇದಾಗಿದೆ. ಈ ಪ್ರದೇಶವು ಐದು ಗುಡ್ಡಗಳಿಂದ ಸುತ್ತುವರೆದಿರುವುದರಿಂದ ಪಂಚಗಣಿ ಎಂಬ ಹೆಸರನ್ನು ಪಡೆದಿದೆ. "ಪಂಚ" ಎಂದರೆ ಐದು ಎಂಬರ್ಥವಿದೆ. ಪ್ರಶಾಂತವಾದ ನಿರ್ಮಲ ಪರಿಸರವನ್ನು ಹೊಂದಿರುವ ಈ ತಾಣವು ಮನಸ್ಸಿಗೆ ತಾಜಾತನದ ಅಮೋಘ ಅನುಭೂತಿಯನ್ನು ಕರುಣಿಸುತ್ತದೆ. ಮಹಾರಾಷ್ಟ್ರ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಈ ತಾಣಕ್ಕೆ ಪ್ರವಾಸಿ ಸೌಲಭ್ಯ ಲಭ್ಯವಿದೆ. ಪಂಚಗಣಿಯನ್ನು ಬಸ್ಸುಗಳ ಮೂಲಕ ಮುಂಬೈ, ಪುಣೆ, ಸತಾರಾ, ಮಹಾಬಲೇಶ್ವರ ಮುಂತಾದ ತಾಣಗಳಿಂದ ಸುಲಭವಾಗಿ ತಲುಪಬಹುದು. ಇದಕ್ಕೆ ಹತ್ತಿರದಲ್ಲಿರುವ ವಿಮಾನ ನಿಲ್ದಾಣ ಪುಣೆಯಲ್ಲಿದ್ದು, ಹತ್ತಿರದ ರೈಲು ನಿಲ್ದಾಣ ಮೀರಜ್-ಕೊಲ್ಹಾಪುರ ಮಾರ್ಗದಲ್ಲಿರುವ ವಾತಾರ್ ಎಂಬಲ್ಲಿದೆ.

ಪಂಚಗಣಿಯ ಕೆಲವು ಸುಂದರ ಚಿತ್ರಗಳು

ಕುದುರೆ ಸವಾರಿ ಸೌಲಭ್ಯ ಅನುಭವಿಸುತ್ತ ಪ್ರದೇಶದ ಅಂದ ಚೆಂದವನ್ನು ಸವಿಯುವುದು ಒಂದು ವಿಶೀಷ್ಟವಾದ ಅನುಭವವಾಗಿದೆ.

ಚಿತ್ರಕೃಪೆ: Ramnath Bhat

ಕೆಲವು ಸುಂದರ ಚಿತ್ರಗಳು

ಕೆಲವು ಸುಂದರ ಚಿತ್ರಗಳು

ಸ್ಟ್ರಾಬೆರಿ ಹಣ್ಣುಗಳನ್ನು ಬೆಳೆಯಲಾಗುವ ತೋಟದ ಒಂದು ನೋಟ

ಚಿತ್ರಕೃಪೆ: Ekabhishek

ಕೆಲವು ಸುಂದರ ಚಿತ್ರಗಳು

ಕೆಲವು ಸುಂದರ ಚಿತ್ರಗಳು

ಎಲ್ಲೆಡೆ ಹಸಿರು ಚಾಚಿರುವ ಪಂಚಗಣಿಯ ಉಲ್ಲಸಭರಿತ ನೋಟ.

ಚಿತ್ರಕೃಪೆ: Akhilesh Dasgupta

ಕೆಲವು ಸುಂದರ ಚಿತ್ರಗಳು

ಕೆಲವು ಸುಂದರ ಚಿತ್ರಗಳು

ಪಂಚಗಣಿಯಲ್ಲಿರುವ ಸಿಡ್ನಿ ವೀಕ್ಷಣಾ ಸ್ಥಳದಿಂದ ಕಂಡುಬರುವ ಒಂದು ಸುಂದರ ನೋಟ.

ಚಿತ್ರಕೃಪೆ: Akhilesh Dasgupta

ಮಹಾಬಲೇಶ್ವರ:

ಮಹಾಬಲೇಶ್ವರ:

ಮಹಾರಾಷ್ಟ್ರದಲ್ಲಿ ಕಂಡುಬರುವ ಮತ್ತೊಂದು ಅಮೋಘವಾದ ರಮಣೀಯ ಗಿರಿಧಾಮವೆಂದರೆ ಮಹಾಬಲೇಶ್ವರ. ಸಂಸ್ಕೃತದಲ್ಲಿ "ಮಹಾ ಶಕ್ತಿಯ ದೇವ" ಎಂಬರ್ಥ ಕೊಡುವ ಈ ಗಿರಿಧಾಮವು ಒಂದು ಸುಂದರ ಗಿರಿಧಾಮವಾಗಿದ್ದು ಹತ್ತು ಹಲವು ವೀಕ್ಷಣಾ ಸ್ಥಳಗಳನ್ನು ಹೊಂದಿದೆ. ಕುಟುಂಬ ಸಮೇತವಾಗಿ ವಿರಾಮ ವೇಳೆಯನ್ನು ಅತಿ ಮಧುರವಾಗಿ ಈ ತಾಣದಲ್ಲಿ ಕಳೆಯಬಹುದು. ಈ ಗಿರಿಧಾಮದ ಅಣತೆ ದೂರದಲ್ಲೆ ಸುಂದರವಾದ ವೆನ್ನಾ ಕೆರೆಯನ್ನು ಕಾಣಬಹುದು. ಇಲ್ಲಿ ಮೀನು ಹಿದೀಯುವ ಚಟುವಟಿಕೆ, ಕುದುರೆ ಸವಾರಿ ಹಾಗು ದೋಣಿ ಸವಾರಿಗಳ ಆನಂದವನ್ನು ಪಡೆಯಬಹುದು. ನಿಮಗೆ ಇತಿಹಾಸದಲ್ಲಿ ಕೊಂಚ ಆಸಕ್ತಿ ಇದ್ದರೆ ಇಲ್ಲಿಂದ ಕೇವಲ 24 ಕಿ.ಮೀ ದೂರದಲ್ಲಿಒರುವ ಮರಾಠಾ ಆಡಳಿತದಲ್ಲಿ ನಿರ್ಮಾಣವಾದ ಪ್ರತಾಪ್‍ಗಡ್ ಕೋಟೆಗೆ ಭೇಟಿ ನೀಡಬಹುದು. ಸತಾರಾ ಜಿಲ್ಲೆಯಲ್ಲಿರುವ ಈ ಗಿರಿಧಾಮವನ್ನು ಬಸ್ಸುಗಳ ಮೂಲಕ ಮುಂಬೈ, ಪುಣೆ, ಸತಾರಾ ಮುಂತಾದ ಸ್ಥಳಗಳಿಂದ ಸುಲಭವಾಗಿ ತಲುಪಬಹುದು. ಪಂಚಗಣಿಯಿಂದ ಕೇವಲ ಅರ್ಧ ಘಂಟೆಯಷ್ಟು ದೂರದಲ್ಲಿದೆ ಮಹಾಬಲೇಶ್ವರ.

ಚಿತ್ರಕೃಪೆ: Tropicana

ಮಹಾಬಲೇಶ್ವರ:

ಮಹಾಬಲೇಶ್ವರ:

ಸುಂದರವಾದ ವೆನ್ನಾ ಕೆರೆಯಲ್ಲಿ ದೋಣಿ ಸವಾರಿ

ಚಿತ್ರಕೃಪೆ: Ganesh G

ಮಹಾಬಲೇಶ್ವರ:

ಮಹಾಬಲೇಶ್ವರ:

ದೋಣಿ ಸವಾರಿಯ ಮತ್ತೊಂದು ಸುಂದರ ನೋಟ.

ಚಿತ್ರಕೃಪೆ: Pramodkumartk

ಭಂಡಾರಧಾರಾ:

ಭಂಡಾರಧಾರಾ:

ಪ್ರಕೃತಿಯ ಮಡಿಲಿನಲ್ಲಿ ಸುಂದರವಾಗಿ ರಚಿಸಬಹುದಾದ ರಿಸಾರ್ಟಿಗೆ ಬೇಕಾಗುವಂತಹ ಹಿನ್ನಿಲೆ ಹಾಗು ನಿಸರ್ಗ ಸೌಂದರ್ಯವುಳ್ಳ ಅದ್ಭುತ ಗಿರಿಧಾಮ ಭಂಡಾರಧಾರಾ ಇರುವುದು ಮಹಾರಾಷ್ಟ್ರದ ಅಹಮದ್ ನಗರ ಜಿಲ್ಲೆಯಲ್ಲಿ. ಆಣೆಕಟ್ಟು, ಧಬ ಧಬ ಸುರಿಯುವ ಜಲಪಾತಗಳು, ಹಸಿರು ವನರಾಶಿ ಎಲ್ಲವೂ ಇದೆ ಈ ಸುಂದರ ತಾಣದಲ್ಲಿ. ವಿಲ್ಸನ್ ಜಲಾಶಯದಿಂದ ಹಿಡಿದು ಅರ್ಥರ್ ಕೆರೆಯವರೆಗೆ ಸಾಕಷ್ಟು ಪ್ರವಾಸಿ ಆಕರ್ಷಣೆಗಳನ್ನು ಹೊತ್ತು ಈ ಗಿರಿಧಾಮ ಕಂಗೊಳಿಸುತ್ತದೆ. ಇಲ್ಲಿಂದ ಭಾರತದ ಪ್ರಖ್ಯಾತ ಯಾತ್ರಾ ಕ್ಷೇತ್ರವಾದ ಶಿರಡಿಯು 90 ಕಿ.ಮೀ ಹಾಗು ಹನ್ನೆರಡು ಜ್ಯೋತಿರ್ಲಿಂಗಗಳ ಪೈಕಿ ಒಂದಾದ ತ್ರಿಯಂಬಕೇಶ್ವರವು ಕೇವಲ 30 ಗಳ ಅಂತರದಲ್ಲಿದೆ.

ಚಿತ್ರಕೃಪೆ: Truptis Sudhakar Sarode

ಭಂಡಾರಧಾರಾ:

ಭಂಡಾರಧಾರಾ:

ಭಂಡಾರಧಾರಾದಲ್ಲಿರುವ ಅಂಬ್ರೆಲ್ಲಾ ಜಲಪಾತದ ನೋಟ.

ಚಿತ್ರಕೃಪೆ: Desktopwallpapers

ಭಂಡಾರಧಾರಾ:

ಭಂಡಾರಧಾರಾ:

ಭಂಡಾರಧಾರಾದಲ್ಲಿರುವ ವಿಲ್ಸನ್ ಜಲಾಶಯದ ವಿಹಂಗಮ ನೋಟ.

ಚಿತ್ರಕೃಪೆ: yogesh kurhe

ತೋರಣಮಲ್:

ತೋರಣಮಲ್:

ಮಹಾರಾಷ್ಟ್ರದ ನಂದುರ್ಬಾರ್ ಜಿಲ್ಲೆಯಲ್ಲಿದೆ ಈ ಸುಂದರ ಗಿರಿಧಾಮ. ಸಾತ್ಪುರಾ ಗಿರಿ ಶ್ರೇಣಿಯಲ್ಲಿ ನೆಲೆಸಿರುವ ಈ ಗಿರಿಧಾಮವು ತನ್ನಲ್ಲಿರುವ ಗೋರಕನಾಥ ದೇವಾಲಯದಿಂದಾಗಿ ಹೆಸರುವಾಸಿಯಾಗಿದೆ. ಅಲ್ಲದೆ ಈ ಗಿರಿಧಾಮದಲ್ಲಿ ಖಡ್ಕಿ ವೀಕ್ಷಣಾ ಸ್ಥಳ ಹಾಗು ಸುಂದರವಾದ ಯಶವಂತ ಕೆರೆಯನ್ನು ಕಾಣಬಹುದು.

ಚಿತ್ರಕೃಪೆ: KuwarOnline

ಮಾಥೇರಾನ್:

ಮಾಥೇರಾನ್:

ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯಲ್ಲಿರುವ ಈ ಭವ್ಯ ಗಿರಿಧಾಮವು ರುದ್ರಮಯ ಪ್ರಪಾತಗಳನ್ನು ಹಾಗು ಚೂಪಾದ ಗುಡ್ಡಗಳನ್ನು ಹೊಂದಿದೆ. ವರ್ಷದ ಎಲ್ಲಾ ಕಾಲದಲ್ಲೂ ಈ ಪ್ರದೇಶಕ್ಕೆ ಭೇಟಿ ನೀಡಬಹುದಾಗಿದೆ. ಇದು ಏಷಿಯಾ ಖಂಡದ ಏಕೈಕ ವಾಹನ ಸಂಚಾರ ಮುಕ್ತವಾದ ಗಿರಿಧಾಮವಾಗಿದೆ. ಮಾಥೇರಾನಿನ ವಿಹಂಗಮ ನೋಟಗಳನ್ನು ಒದಗಿಸುವ 38 ಅಧಿಕೃತ ವೀಕ್ಷಣಾ ಸ್ಥಳಗಳನ್ನು ಕಾಣಬಹುದು. ಮಾಥೇರಾನ್ ಟಾಯ್ ಟ್ರೈನು ಕೂಡ ಒಂದು ಪ್ರಮುಖ ಆಕರ್ಷಣೆಯಾಗಿದ್ದು ಇದರಲ್ಲಿ ಪಯಣಿಸುತ್ತ ಉತ್ಕೃಷ್ಟ ಮಟ್ಟದ ಪ್ರಯಾಣದ ಆನಂದವನ್ನು ಪಡೆಯಬಹುದು.

ಚಿತ್ರಕೃಪೆ: Arne Hückelheim

ಮಾಥೇರಾನ್:

ಮಾಥೇರಾನ್:

ಮಾಥೇರಾನ್ ತಲುಪುವಾಗ ಹಾದು ಹೋಗಬೇಕಾಗಿರುವ ಮೈನವಿರೇಳಿಸುವ ಸುರುಳಿ ಮಾರ್ಗ.

ಚಿತ್ರಕೃಪೆ: Marwada

ಮಾಥೇರಾನ್:

ಮಾಥೇರಾನ್:

ಮಾಥೇರಾನಿನ ಪ್ರಸಿದ್ಧ ಟಾಯ್ ಟ್ರೈನ್.

ಚಿತ್ರಕೃಪೆ: Kuldeep Thind

ಪನ್ಹಾಲಾ:

ಪನ್ಹಾಲಾ:

ಕೋಲಾಪುರ್ ನಿಂದ ಕೇವಲ 18 ಕಿ.ಮೀ ದೂರದಲ್ಲಿರುವ ಪನ್ಹಾಲಾ ಒಂದು ಸುಂದರ ಗಿರಿಧಾಮ ನಗರವಾಗಿದೆ. ಇದು ಮಹಾರಾಷ್ಟ್ರದ ಅತಿ ಚಿಕ್ಕ ನಗರವಾಗಿದೆ. ಈ ಗಿರಿಧಾಮದ ಪ್ರಮುಖ ಐತಿಹಾಸಿಕ ಆಕರ್ಷಣೆ ಎಂದರೆ ಪನ್ಹಾಲಾ ಕೋಟೆ. ಈ ಗಿರಿಧಾಮ ಪ್ರದೇಶದಿಂದ ಕಣಿವೆಯ ಗಮ್ಯ ನೋಟಗಳನ್ನು ಕಾಣಬಹುದಾಗಿದೆ. ಕೋಲಾಪುರ ನಗರವನ್ನು ದೇಶದ ಎಲ್ಲ ಮೂಲೆಗಳಿಂದ ಬಸ್ಸು, ರೈಲು ಹಾಗು ವಿಮಾನದ ಮೂಲಕ ಸುಲಭವಾಗಿ ತಲುಪಬಹುದಾಗಿರುವುದರಿಂದ ಪನ್ಹಾಲಾ ಗಿರಿಧಾಮಕ್ಕೆ ತೆರಳಲು ಅಷ್ಟೊಂದು ಕಷ್ಟ ಪಡಬೇಕಾಗಿಲ್ಲ.

ಚಿತ್ರಕೃಪೆ: Nilesh2 str

ಪನ್ಹಾಲಾ:

ಪನ್ಹಾಲಾ:

ಪನ್ಹಾಲಾ ಗಿರಿಧಾಮದ ಒಂದು ನೋಟ.

ಚಿತ್ರಕೃಪೆ: Nilesh2 str

ಪನ್ಹಾಲಾ:

ಪನ್ಹಾಲಾ:

ಪನ್ಹಾಲಾ ಗಿರಿಧಾಮದ ಒಂದು ನೋಟ.

ಚಿತ್ರಕೃಪೆ: Nilesh2 str

ಇಗತ್ಪುರಿ:

ಇಗತ್ಪುರಿ:

ಇಗತ್ಪುರಿ ಗಿರಿಧಾಮವು ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯಲ್ಲಿದೆ. ಈ ಗಿರಿಧಾಮವು ಚುಂಬಕದಂತೆ ಸೆಳೆಯುವ ಸುಂದರ ಪ್ರಾಕೃತಿಕ ದೃಶ್ಯಗಳನ್ನು ಹೊಂದಿದೆ. ಇಗತ್ಪುರಿ ವಿಶೇಷವಾಗಿ ವಿಪಾಸನಾ ಧ್ಯಾನ ವಿದ್ಯಾಲಯಕ್ಕೆ ಹೆಚ್ಚು ಹೆಸರುವಾಸಿಯಾಗಿದೆ. ವಿಪಾಸನಾ ಎಂಬುದು ಒಂದು ಅತಿ ಪುರಾತನವಾದ ಧ್ಯಾನ ಕ್ರಿಯೆಯಾಗಿದೆ.

ಚಿತ್ರಕೃಪೆ: Superfast1111

ಇಗತ್ಪುರಿ:

ಇಗತ್ಪುರಿ:

ಇಗತ್ಪುರಿಯಲ್ಲಿರುವ ಮೈಯನ್ಮಾರ್ ಗೇಟ್ ನ ಒಂದು ಸುಂದರ ನೋಟ.

ಲೋಣಾವಲಾ ಹಾಗು ಖಂಡಾಲಾ:

ಲೋಣಾವಲಾ ಹಾಗು ಖಂಡಾಲಾ:

ಪುಣೆ ಜಿಲ್ಲೆಯಲ್ಲಿರುವ ಲೋಣಾವಲಾ ಒಂದು ಸುಂದರ ಗಿರಿಧಾಮ ಪಟ್ಟಣವಾಗಿದೆ. ಇದು ಪುಣೆ ನಗರದಿಂದ 64 ಕಿ.ಮೀ ಹಾಗು ಮುಂಬೈ ನಗರದಿಂದ 90 ಕಿ.ಮೀ ದೂರದಲ್ಲಿದೆ. ಈ ಪಟ್ಟಣವು ವಿಶೇಷವಾಗಿ ಕಡಲೆ ಬೀಜದಿಂದ ತಯಾರಿಸಲಾಗುವ ಚಿಕ್ಕಿ ಎಂಬ ಮಿಠಾಯಿಗೆ ಅತಿ ಪ್ರಖ್ಯಾತವಾಗಿದೆ. ಹಲವು ವೀಕ್ಷಣಾ ಸ್ಥಳಗಳು ಹಾಗು ಜಲಪಾತ ಹೊಂದಿರುವ ಈ ಗಿರಿಧಾಮ ಪ್ರದೇಶವು ತನ್ನ ನಿಸರ್ಗ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇಲ್ಲಿಂದ ಮೂರು ಕಿ.ಮೀ ದೂರ ಚಲಿಸಿದರೆ ಸಾಕು ನಿಮಗೆ ಸಿಗುವ ಮತ್ತೊಂದು ಸುಂದರ ಪ್ರದೇಶ ಖಂಡಾಲಾ. ಈ ಎರಡೂ ಗಿರಿಧಾಮ ಪ್ರದೇಶಗಳು ಮುಂಬೈ ಹಾಗು ಪುಣೆ ನಗರವಾಸಿಗಳಿಗೆ ವಾರಾಂತ್ಯದ ಜನಪ್ರಿಯ ರಜಾ ತಾಣಗಳಾಗಿವೆ.

ಲೋಣಾವಲಾ ಹಾಗು ಖಂಡಾಲಾ:

ಲೋಣಾವಲಾ ಹಾಗು ಖಂಡಾಲಾ:

ಲೋಣಾವಲಾದ ಒಂದು ಸುಂದರ ನೋಟ.

ಚಿತ್ರಕೃಪೆ: Ravinder Singh Gill

ಲೋಣಾವಲಾ ಹಾಗು ಖಂಡಾಲಾ:

ಲೋಣಾವಲಾ ಹಾಗು ಖಂಡಾಲಾ:

ಮೈಮನ ಪುಳಕಿತಗೊಳಿಸುವ ಲೊಣಾವಲಾದ ಬುಶಿ ಜಲಾಶಯದ ಹಿನ್ನೀರು.

ಚಿತ್ರಕೃಪೆ: Lucky vivs

ಲೋಣಾವಲಾ ಹಾಗು ಖಂಡಾಲಾ:

ಲೋಣಾವಲಾ ಹಾಗು ಖಂಡಾಲಾ:

ಲೋಣಾವಲಾ ಕೆರೆಯ ಒಂದು ವಿಹಂಗಮ ನೋಟ.

ಚಿತ್ರಕೃಪೆ: سبأ

ಲೋಣಾವಲಾ ಹಾಗು ಖಂಡಾಲಾ:

ಲೋಣಾವಲಾ ಹಾಗು ಖಂಡಾಲಾ:

ಖಂಡಾಲಾದಲ್ಲಿರುವ "ಡ್ಯೂಕ್ ನೋಸ್" ಎಂಬ ಸುಂದರ ವೀಕ್ಷಣಾ ಸ್ಥಳ.

ಚಿತ್ರಕೃಪೆ: Alewis2388

ಲೋಣಾವಲಾ ಹಾಗು ಖಂಡಾಲಾ:

ಲೋಣಾವಲಾ ಹಾಗು ಖಂಡಾಲಾ:

ಖಂಡಾಲಾ ಘಟ್ಟದಲ್ಲಿ ಕಂಡುಬರುವ ಸುಂದರ ದಾರಿ.

ಚಿತ್ರಕೃಪೆ: Vishalsdhumal

ಅಂಬೋಲಿ:

ಅಂಬೋಲಿ:

ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿರುವ ಮನೋಹರ ಗಿರಿಧಾಮವೆ ಅಂಬೋಲಿ. ಕರ್ನಾಟಕದ ಬೆಳಗಾವಿ ನಗರದಿಂದ ಕೇವಲ 65 ಕಿ.ಮೀ ದೂರದಲ್ಲಿರುವ ಈ ಗಿರಿಧಾಮವು ಗೋವಾಗೂ ಕೂಡ ಅತಿ ಹತ್ತಿರದಲ್ಲಿದೆ. ಸೂರ್ಯಾಸ್ತದ ನೋಟ, ಕೆರೆ ಹಾಗು ಮಳೆಗಾಲದ ಸಮಯದಲ್ಲಿ ಅಲ್ಲಲ್ಲಿ ಉದ್ಭವವಾಗುವ ಜಲಪಾತಗಳಿಂದಾಗಿ ಈ ಗಿರಿಧಾಮ ಜನಪ್ರಿಯವಾಗಿದೆ.

ಅಂಬೋಲಿ:

ಅಂಬೋಲಿ:

ಅಂಬೋಲಿ ಕೆರೆಯ ಒಂದು ಸುಂದರ ನೋಟ.

ಚಿತ್ರಕೃಪೆ: Amol.Gaitonde

ಅಂಬೋಲಿ:

ಅಂಬೋಲಿ:

ಅಂಬೋಲಿ ಘಟ್ಟದಲ್ಲಿರುವ ಒಂದು ಪುಟ್ಟ ದೇಗುಲ.

ಚಿತ್ರಕೃಪೆ: Nilesh2 str

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X