ವಂದೇ ಭಾರತ್ ರೈಲಿನ ಟಿಕೆಟ್ ಎಷ್ಟೇ ದುಬಾರಿಯಾಗಿದ್ದರೂ ಜನರು ಅದರಲ್ಲೇ ಪ್ರಯಾಣಿಸಲು ಇಷ್ಟಪಡುತ್ತಾರೆ, ಇಷ್ಟಪಡುತ್ತಿದ್ದಾರೆ. ದೇಶಾದ್ಯಂತ ವಂದೇ ಭಾರತ್ ರೈಲಿನ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಒಂದೆಡೆ ವಂದೇ ಭಾರತ್ ರೈಲುಗಳು ದೇಶದ ಮೂಲೆ ಮೂಲೆಗಳಲ್ಲಿ ಸಂಚರಿಸುತ್ತಿದ್ದರೆ, ಮತ್ತೊಂದೆಡೆ ವಂದೇ ಭಾರತ್ ಸ್ಲೀಪರ್ ರೈಲು ಪರಿಚಯಿಸುವ ಸಿದ್ಧತೆಯೂ ಭರದಿಂದ ಸಾಗಿದೆ. ಆದರೆ ಇಷ್ಟೊಂದು ರೈಲುಗಳು ಬಂದ ನಂತರವೂ ಪ್ರಯಾಣಿಕರಿಗೆ ಕನ್ಫರ್ಮ್ ಟಿಕೆಟ್ ಸಿಗುವುದು ಕಷ್ಟವಾಗಿದೆ. ಈಗ ಇತರ ರೈಲುಗಳಿಗಿಂತ ದುಬಾರಿ ಟಿಕೆಟ್ ಹೊಂದಿರುವ ವಂದೇ ಭಾರತ್ ರೈಲಿನಲ್ಲೂ ವೇಟಿಂಗ್ ಲಿಸ್ಟ್‌ನಲ್ಲಿ ಕಾಯಬೇಕಿದೆ ಜನರು.
ಪ್ರಸ್ತುತ ವಂದೇ ಭಾರತ್ ವೇಟಿಂಗ್ ಟಿಕೆಟ್ ಕನ್ಫರ್ಮೇಷನ್‌ಗಾಗಿ ಸಾಕಷ್ಟು ಮಂದಿ ಕಾಯುತ್ತಿದ್ದಾರೆ. ಆದರೆ ವೇಟಿಂಗ್ ಟಿಕೆಟ್ ಹಿಡಿದು ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸಲು ಸಾಧ್ಯವೇ ಎಂಬ ಪ್ರಶ್ನೆ ಅವರ ಮನದಲ್ಲಿ ಕಾಡುತ್ತಿದೆ. ಇತರ ರೈಲುಗಳಲ್ಲಿ, ಪ್ರಯಾಣಿಕರು ಈಗಲೂ ಸಾಮಾನ್ಯವಾಗಿ ವೇಟಿಂಗ್ ಟಿಕೆಟ್‌ಗಳೊಂದಿಗೆ ಪ್ರಯಾಣಿಸುವುದನ್ನು ಕಾಣಬಹುದು. ಆದರೆ ಕನ್ಫರ್ಮ್ ಟಿಕೆಟ್ ಇಲ್ಲದೆ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸಿದರೆ ಏನಾಗುತ್ತದೆ. ಇದಕ್ಕೆ ಸಂಬಂಧಿಸಿದ ವಿವರವಾದ ಮಾಹಿತಿಯನ್ನು ಇಂದಿನ ಲೇಖನದಲ್ಲಿ ನೋಡೋಣ...
ರೈಲ್ವೆ ನಿಯಮಗಳ ಉಲ್ಲಂಘನೆ
ನಿಯಮ ಉಲ್ಲಂಘಿಸಿ ಯಾವುದೇ ರೈಲಿನಲ್ಲಿ ಉತ್ತಮ ಸೌಲಭ್ಯಗಳನ್ನು ಪಡೆಯುತ್ತಿದ್ದರೆ ಭಾರೀ ದಂಡ ತೆರಬೇಕಾಗುತ್ತದೆ ಎಂಬುದನ್ನು ಗಮನಿಸಬೇಕು. ವೇಟಿಂಗ್ ಲಿಸ್ಟ್‌ನಲ್ಲಿದ್ದು ಕನ್ಫರ್ಮ್ ಟಿಕೆಟ್‌ಗಾಗಿ ಕಾಯುತ್ತಿದ್ದರೆ, ರೈಲಿನಲ್ಲಿ ಪ್ರಯಾಣಿಸಲು ನಿಮಗೆ ಆಸನವಿಲ್ಲ ಎಂದು ಅರ್ಥ. ವೇಟಿಂಗ್ ಟಿಕೆಟ್ ಹೊಂದಿರುವ ಪ್ರಯಾಣಿಕರು ಯಾವುದೇ ಸೀಟ್ ಸಂಖ್ಯೆಯನ್ನು ಪಡೆಯುವುದಿಲ್ಲ. ನೀವು ವಂದೇ ಭಾರತ್ ರೈಲಿನಲ್ಲಿ ಅಥವಾ ಇತರ ಯಾವುದೇ ರೈಲಿನಲ್ಲಿ ಪ್ರಯಾಣಿಸುತ್ತಿರಲಿ, ವೇಟಿಂಗ್ ಟಿಕೆಟ್‌ನೊಂದಿಗೆ ಪ್ರಯಾಣಿಸುವುದನ್ನು ರೈಲ್ವೆ ನಿಯಮಗಳ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ.

ಹೀಗಿದೆ...ವೇಟಿಂಗ್ ಟಿಕೆಟ್ ನಿಯಮ
ಪ್ರಯಾಣಿಕರು ತಮ್ಮ ಟಿಕೆಟ್‌ಗಾಗಿ ಕಾಯುತ್ತಿದ್ದು, ಕೊನೆಗೂ ಸೀಟ್ ಕನ್ಫರ್ಮ್ ಆಗದಿದ್ದರೆ ಹಣವನ್ನು ಹಿಂತಿರುಗಿಸುತ್ತಾರೆ. ಆದ್ದರಿಂದ ನೀವು ಪ್ರಯಾಣಿಸಿದರೆ, ನೀವು ಯಾವುದೇ ಆಸನವಿಲ್ಲದೆ ಪ್ರಯಾಣಿಸುತ್ತಿದ್ದೀರಿ ಎಂದು ಅರ್ಥ. ಇತರ ಪ್ರಯಾಣಿಕರಿಗೆ ತೊಂದರೆಯಾಗದಂತೆ ಈ ನಿಯಮಗಳನ್ನು ಮಾಡಲಾಗಿದೆ. ಆದ್ದರಿಂದ ನೀವು ಪ್ರಯಾಣಿಸುತ್ತಿದ್ದರೆ, ನೀವು ವೇಟಿಂಗ್ ಟಿಕೆಟ್ ನಿಯಮದ ಬಗ್ಗೆ ತಿಳಿದಿರಬೇಕು.
ವಂದೇ ಭಾರತ್ ರೈಲಿನಲ್ಲಿ ನಿಯಮವೇನು?
ವಂದೇ ಭಾರತ್ ರೈಲಿನಲ್ಲಿ ವೇಟಿಂಗ್ ಟಿಕೆಟ್ ಹಿಡಿದು ಪ್ರಯಾಣಿಸಿದರೆ ಇದಕ್ಕಾಗಿ ಭಾರೀ ದಂಡ ತೆರಬೇಕಾಗುತ್ತದೆ ಅಥವಾ ಮುಂದಿನ ನಿಲ್ದಾಣದಲ್ಲಿಯೂ ಬಿಡಬಹುದು. ಟಿಟಿ ನಿಮ್ಮಿಂದ 500 ರೂಪಾಯಿ ದಂಡವನ್ನು ವಿಧಿಸಬಹುದು. ನೀವು ವೇಟಿಂಗ್ ಟಿಕೆಟ್‌ನೊಂದಿಗೆ ದೂರ ಪ್ರಯಾಣ ಮಾಡಿದರೆ ದಂಡವು ಹೆಚ್ಚಾಗಬಹುದು.

ರಿವೀಲ್ ಆದ ಸ್ಲೀಪರ್ ಕೋಚ್‌ನ ಕ್ಲಾಸಿ ಲುಕ್
ಅಂದಹಾಗೆ ಶೀಘ್ರದಲ್ಲೇ ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಪ್ರಯಾಣಿಸಲು ಜನರಿಗೆ ಅವಕಾಶ ಸಿಗಲಿದೆ. ಆದರೆ ಇದಕ್ಕೂ ಮುನ್ನ ಸ್ಲೀಪರ್ ಕೋಚ್‌ನ ಕ್ಲಾಸಿ ಲುಕ್ ರಿವೀಲ್ ಆಗಿದೆ. ವಂದೇ ಭಾರತ್ ರೈಲಿನ ಸ್ಲೀಪರ್ ಆವೃತ್ತಿ ನೋಡುತ್ತಿದ್ದರೆ ಐಷಾರಾಮಿ ಹೋಟೆಲ್‌ನ ಅನುಭವವನ್ನು ಪಡೆಯಬಹುದು. ಇದರ ಫಸ್ಟ್ ಲುಕ್ ನೋಡಿಯೇ ಇದರಲ್ಲಿ ಕುಳಿತರೆ ಐಷಾರಾಮಿ ಹೋಟೆಲ್ ಅನಿಸುತ್ತದೆ ಎಂದು ಊಹಿಸಬಹುದು. ಸ್ಲೀಪರ್ ಬರ್ತ್‌ನ ವಿನ್ಯಾಸವು ರಾಜಧಾನಿ ಅಥವಾ ಇತರ ಪ್ರೀಮಿಯಂ ರೈಲುಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ.
ವಂದೇ ಭಾರತ್ ಸ್ಲೀಪರ್ ಕೋಚ್‌ನ ಲುಕ್ ನೋಡಿದರೆ ಸಾಮಾನ್ಯ ರೈಲಿನಂತೆ 3 ಆಸನಗಳನ್ನು ಮಾಡಲಾಗಿದೆ. ಹಾಗೆಯೇ ಇದನ್ನು ಅತ್ಯಂತ ವಿಶಿಷ್ಟ ರೀತಿಯಲ್ಲಿ ವಿನ್ಯಾಸಗೊಳಿಸಲು ಸಿದ್ಧತೆಗಳನ್ನು ಮಾಡಲಾಗಿದೆ ಎಂದು ತೋರುತ್ತದೆ. ವಂದೇ ಭಾರತ್ ಸ್ಲೀಪರ್ ಕೋಚ್‌ನ ಫೋಟೋಗಳನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು.
ವಂದೇ ಭಾರತ್ ಸ್ಲೀಪರ್ ರೈಲು ಪರಿಚಯಿಸಿದ ನಂತರ ರಾತ್ರಿಯಲ್ಲಿ ದೂರದವರೆಗೆ ಪ್ರಯಾಣಿಸಲು ಸಾಧ್ಯವಾಗುತ್ತದೆ ಪ್ರಸ್ತುತ, ವಂದೇ ಭಾರತ್ ರೈಲಿನಲ್ಲಿ ಕುಳಿತುಕೊಳ್ಳುವ ಸೀಟುಗಳನ್ನು ಮಾತ್ರ ನೀಡಲಾಗುತ್ತಿದೆ. ಆದ್ದರಿಂದ ಈ ರೈಲಿನಲ್ಲಿ ದೂರದ ಪ್ರಯಾಣ ಸಾಧ್ಯವಿಲ್ಲ. ವಂದೇ ಭಾರತ್ ಸ್ಲೀಪರ್ ರೈಲು 20 ರಿಂದ 22 ಕೋಚ್‌ಗಳನ್ನು ಹೊಂದಿರಬಹುದು ಎಂದು ಹೇಳಲಾಗಿದೆ. ಈ ರೈಲಿನಲ್ಲಿ ಅಂಗವಿಕಲ ಪ್ರಯಾಣಿಕರಿಗೆ ರಾಂಪ್ ಮತ್ತು ವೀಲ್ ಚೇರ್ ಸೌಲಭ್ಯವೂ ಇರುತ್ತದೆ.
ವಂದೇ ಭಾರತ್ ರೈಲು ಯಾವಾಗ ಪ್ರಾರಂಭವಾಯಿತು?
ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ನವದೆಹಲಿಯಿಂದ ಪ್ರಾರಂಭವಾಯಿತು. ದೆಹಲಿ ಮತ್ತು ವಾರಣಾಸಿ ನಡುವೆ ಸಂಚರಿಸುವ ಮೊದಲ ವಂದೇ ಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 15, 2019 ರಂದು ಚಾಲನೆ ನೀಡಿದರು.


Click it and Unblock the Notifications

















