Search
  • Follow NativePlanet
Share
» »ದುರ್ಗಾ ದೇವಿಯ ಈ ಪುರಾತನ ದೇವಾಲಯವನ್ನು ನವರಾತ್ರಿ ಸಮಯದಲ್ಲಿ ಮಾತ್ರ ತೆರೆಯಲಾಗುತ್ತದೆ!

ದುರ್ಗಾ ದೇವಿಯ ಈ ಪುರಾತನ ದೇವಾಲಯವನ್ನು ನವರಾತ್ರಿ ಸಮಯದಲ್ಲಿ ಮಾತ್ರ ತೆರೆಯಲಾಗುತ್ತದೆ!

ಶರದೀಯ ನವರಾತ್ರಿ ಅಕ್ಟೋಬರ್‌ 3 ರಿಂದ ಆರಂಭವಾಗಿದೆ. ಇದು ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದ್ದು, ಇದನ್ನು ಪ್ರತಿ ವರ್ಷ ಅಶ್ವಿನಿ ಅಥವಾ ಆಶ್ವೀಜ ಮಾಸದಲ್ಲಿ ಆಚರಿಸಲಾಗುತ್ತದೆ. ಈ ಸಮಯದಲ್ಲಿ, ದುರ್ಗಾದೇವಿಯ ಒಂಬತ್ತು ರೂಪಗಳನ್ನು ಪೂಜಿಸಲಾಗುತ್ತದೆ ಮತ್ತು ಉಪವಾಸವನ್ನು ಸಹ ಆಚರಿಸಲಾಗುತ್ತದೆ. ಇದಲ್ಲದೇ ಈ ದಿನಗಳಲ್ಲಿ ದೇವಸ್ಥಾನಗಳಲ್ಲಿ ಮಾತೆಯ ದರ್ಶನ ಪಡೆಯಲು ಭಕ್ತರ ದಂಡೇ ಇರುತ್ತದೆ. ಭಾರತವು ದೇವಾಲಯಗಳ ದೇಶವಾಗಿದೆ. ಇಲ್ಲಿ, ಅನೇಕ ಸಣ್ಣ ಮತ್ತು ದೊಡ್ಡ ದೇವಾಲಯಗಳು ಪ್ರತಿ ಹಂತದಲ್ಲೂ ಕಂಡುಬರುತ್ತವೆ. ಇವುಗಳು ತಮ್ಮದೇ ಆದ ಸಾಂಸ್ಕೃತಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿವೆ.

ಅಂತಹ ಒಂದು ದೇವಾಲಯವು ಒಡಿಶಾದಲ್ಲಿದೆ. ಇದು ಅನೇಕ ಕಾರಣಗಳಿಗಾಗಿ ವಿಶಿಷ್ಟವಾದ ದೇವಾಲಯವೆಂದು ಪರಿಗಣಿಸಲ್ಪಟ್ಟಿದೆ. ಸಾಮಾನ್ಯವಾಗಿ ಒಡಿಶಾದ ಹೆಸರನ್ನು ಕೇಳಿದಾಗ, ಮೊದಲು ಮನಸ್ಸಿಗೆ ಬರುವುದು ಜಗನ್ನಾಥ ದೇವಾಲಯ, ಆದರೆ ಒಡಿಶಾದಲ್ಲಿ ದುರ್ಗಾ ಮಾತೆಗೆ ಸಂಬಂಧಿಸಿದ ವಿಶಿಷ್ಟ ದೇವಾಲಯವೂ ಇದೆ. ಇದು ನವರಾತ್ರಿಯ ಸಮಯದಲ್ಲಿ ಮಾತ್ರ ತೆರೆಯುತ್ತದೆ. ಗಜಪತಿ ಜಿಲ್ಲೆಯ ಪರಲಖೆಮುಂಡಿಯಲ್ಲಿ ಒಂದು ಚಿಕ್ಕ ದುರ್ಗೆಯ ದೇವಸ್ಥಾನವಿದ್ದು, ಅದರ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ. ಈ ಸ್ಥಳವು ಆಂಧ್ರಪ್ರದೇಶದ ಗಡಿಯಲ್ಲಿದೆ ಎಂಬುದು ವಿಶೇಷ. ಹಾಗಾಗಿ ಇಂದು ನವರಾತ್ರಿಯ ಸಂದರ್ಭದಲ್ಲಿ ನಾವು ಈ ವಿಶಿಷ್ಟ ದೇವಾಲಯದ ಬಗ್ಗೆ ನೋಡೋಣ ಬನ್ನಿ...

durgatemples

ವರ್ಷವಿಡೀ ಮುಚ್ಚಿರುತ್ತದೆ ಬಾಗಿಲು

ಹೆಚ್ಚೇನು ಪ್ರಸಿದ್ಧವಾಗದ ಈ ದೇವಾಲಯವು ನವರಾತ್ರಿಯ ಸಮಯದಲ್ಲಿ ವರ್ಷದಲ್ಲಿ ಒಂಬತ್ತು ದಿನ ಮಾತ್ರ ತೆರೆದಿರುತ್ತದೆ. ಒಡಿಶಾದಲ್ಲಿ ಈ ದೇವಾಲಯವನ್ನು ದಂಡು ಮಾ ಎಂದು ಕರೆಯಲಾಗುತ್ತದೆ. ಇದು ಅತ್ಯಂತ ಹಳೆಯ ದೇವಾಲಯವಾಗಿದ್ದು, ನವರಾತ್ರಿಯ ಸಮಯದಲ್ಲಿ ಒಡಿಶಾ ಮತ್ತು ಆಂಧ್ರಪ್ರದೇಶದಿಂದ ಹೆಚ್ಚಿನ ಸಂಖ್ಯೆಯ ಜನರು ಭೇಟಿ ನೀಡುತ್ತಾರೆ. ವಿಶೇಷವೆಂದರೆ ಇತರ ದೇವಾಲಯಗಳಿಗಿಂತ ಭಿನ್ನವಾಗಿ, ಈ ದೇವಾಲಯವು ವರ್ಷದ ಉಳಿದ ಸಮಯದಲ್ಲಿ ಮುಚ್ಚಿರುತ್ತದೆ ಮತ್ತು ನವರಾತ್ರಿಯ ಒಂಬತ್ತು ದಿನಗಳಲ್ಲಿ ಮಾತ್ರ ತೆರೆದಿರುತ್ತದೆ. ವರ್ಷದಲ್ಲಿ ಒಂಬತ್ತು ದಿನ ಮಾತ್ರ ದೇವಸ್ಥಾನವನ್ನು ತೆರೆಯುವ ಈ ಸಂಪ್ರದಾಯ ಅಜ್ಞಾತ ಕಾಲದಿಂದ ನಡೆದುಕೊಂಡು ಬಂದಿದೆ. ಇದಕ್ಕೆ ಕಾರಣವೂ ತಿಳಿದಿಲ್ಲ.

9 ದಿನಗಳವರೆಗೆ ಮಾತ್ರ ತೆರೆಯುತ್ತದೆ ದೇವಾಲಯ

ನವರಾತ್ರಿಯ ಮೊದಲ ದಿನದಂದು ಈ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ಆ ನಂತರ, ಇಲ್ಲಿ ಅನೇಕ ಆಚರಣೆಗಳು ನಡೆಯುತ್ತವೆ. ಹೆಚ್ಚು ಕಡಿಮೆ ಆಚರಣೆಗಳು ನವರಾತ್ರಿಯ ಕೊನೆಯ ದಿನದ ಮಧ್ಯರಾತ್ರಿಯವರೆಗೆ ಮುಂದುವರಿಯುತ್ತದೆ. ಇದಾದ ನಂತರ, ಮಣ್ಣಿನ ಪಾತ್ರೆಯಲ್ಲಿ ತೆಂಗಿನ ಪ್ರಸಾದದ ಜೊತೆಗೆ, ದೇವಾಲಯದ ಬಾಗಿಲನ್ನು ಮುಂದಿನ ವರ್ಷದವರೆಗೆ ಮುಚ್ಚಲಾಗುತ್ತದೆ. ವಿಶೇಷವೆಂದರೆ ಮುಂದಿನ ವರ್ಷ ದೇವಾಲಯದ ಬಾಗಿಲು ತೆರೆದಾಗ ಅದು ಹಾಗೆಯೇ ಉಳಿದಿರುತ್ತದೆ. ನಂತರ ಅದನ್ನು ನವರಾತ್ರಿಯಲ್ಲಿ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ನೀಡಲಾಗುತ್ತದೆ.

durgatemples Hyderabad

ದೂರದ ಊರುಗಳಿಂದೆಲ್ಲಾ ಬರುತ್ತಾರೆ

ನಗರದ ಅನೇಕ ಪುರಾತನ ದೇವಾಲಯಗಳಲ್ಲಿ ಒಂದಾದ ಈ ದುರ್ಗಾ ದೇವಾಲಯವು ಸಾಂಸ್ಕೃತಿಕ ಸೌಂದರ್ಯದಲ್ಲಿ ಸಹ ವಿಶೇಷ ಸ್ಥಾನವನ್ನು ಹೊಂದಿದೆ. ನವರಾತ್ರಿಯ ಪುಣ್ಯಕಾಲದಲ್ಲಿ ಜನರು ದೂರದೂರುಗಳಿಂದ ಇಲ್ಲಿಗೆ ಬರುತ್ತಾರೆ. ತೆಲುಗಿನಲ್ಲಿ ದಂಡಮಾರಮ್ಮ ಮತ್ತು ಒರಿಯಾದಲ್ಲಿ ದಂಡು ಮಾ ಎಂದು ಕರೆಯಲ್ಪಡುವ ಮಾತೃದೇವತೆಯ ದರ್ಶನವನ್ನು ಭಕ್ತರು ಈ ವರ್ಷವೂ ಪಡೆಯುತ್ತಿದ್ದಾರೆ. ಈ ನಗರದ ಬಗ್ಗೆ ಹೇಳುವುದಾದರೆ ಪರಲಖೆಮುಂಡಿ ಅಥವಾ ಪರಾಲಾ 1885 ರಲ್ಲಿ ಸ್ಥಾಪಿಸಲಾದ ಒಡಿಶಾದ ಅತ್ಯಂತ ಹಳೆಯ ಪುರಸಭೆಗಳಲ್ಲಿ ಒಂದಾಗಿದೆ. ಈ ನಗರದ ಜನರು ಹೆಚ್ಚಾಗಿ ತೆಲುಗು ಮತ್ತು ಒರಿಯಾ ಮಾತನಾಡುತ್ತಾರೆ.

More News

Read more about: navratri festival andhra pradesh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+