Search
  • Follow NativePlanet
Share
» »ಕಾವೇರಿ ನೀರು ಬಿಡುಗಡೆ: ಬೆಂಗಳೂರು-ಮೈಸೂರು ಪ್ರಯಾಣಿಕರೇ ಎಚ್ಚರ, ಈ ಮಾರ್ಗಗಳನ್ನು ತಪ್ಪಿಸಿ!

ಕಾವೇರಿ ನೀರು ಬಿಡುಗಡೆ: ಬೆಂಗಳೂರು-ಮೈಸೂರು ಪ್ರಯಾಣಿಕರೇ ಎಚ್ಚರ, ಈ ಮಾರ್ಗಗಳನ್ನು ತಪ್ಪಿಸಿ!

ಇಂದಿನಿಂದ (ಸೆಪ್ಟೆಂಬರ್ 9) ಬೆಳಿಗ್ಗೆ 8 ಗಂಟೆಯಿಂದ 6,000 ಕ್ಯೂಸೆಕ್ ನೀರು ಹರಿಸುವಂತೆ ಆದೇಶ ಜಾರಿಯಾಗಿದೆ. ಈ ನಿರ್ದೇಶನ ಜಾರಿಗೆ ಬರುತ್ತಿದ್ದಂತೆಯೇ, ಕರ್ನಾಟಕ ಸರ್ಕಾರ ಕಾನೂನು ಹೋರಾಟ ನಡೆಸಲು ಸಿದ್ಧತೆ ನಡೆಸುತ್ತಿದೆ. ಈ ಬೆಳವಣಿಗೆಯಿಂದಾಗಿ ಬೆಂಗಳೂರು ಮತ್ತು ಮೈಸೂರು ನಡುವೆ ಪ್ರಯಾಣಿಸುವವರ ಮೇಲೆ ನೇರ ಪರಿಣಾಮ ಬೀರಲಿದೆ. ಪೊಲೀಸರು ಮುನ್ನೆಚ್ಚರಿಕೆಯಾಗಿ ಮಾರ್ಗ ಬದಲಾವಣೆ (ಡೈವರ್ಷನ್) ಮಾಡುವ ಸಾಧ್ಯತೆಯಿದೆ. ಹಾಗಾಗಿ ಪ್ರಯಾಣ ಬೆಳೆಸುವ ಮುನ್ನ ಅಧಿಕೃತ ಟ್ರಾಫಿಕ್‌ ಅಪ್‌ಡೇಟ್‌ಗಳನ್ನು ಪರಿಶೀಲಿಸಿ, ನಿಮ್ಮ ಪ್ಲಾನ್‌ಗಳನ್ನು ಕೊಂಚ ಫ್ಲೆಕ್ಸಿಬಲ್ ಆಗಿಟ್ಟುಕೊಳ್ಳಿ.

ನೀರು ಹರಿಸಲು ಆರಂಭಿಸುತ್ತಿದ್ದಂತೆಯೇ ಮಂಡ್ಯ, ಮದ್ದೂರು ಮತ್ತು ಶ್ರೀರಂಗಪಟ್ಟಣ ಸುತ್ತಮುತ್ತ ಪ್ರತಿಭಟನೆಗಳು ಭುಗಿಲೆೇಳುವ ಸಾಧ್ಯತೆಯಿದೆ. ಪ್ರಮುಖ ಹೆದ್ದಾರಿಗಳಲ್ಲಿ ಸಂಚರಿಸುವಾಗ ಕನಿಷ್ಠ 45 ರಿಂದ 90 ನಿಮಿಷಗಳ ಹೆಚ್ಚುವರಿ ಸಮಯವನ್ನು ಕೈಯಲ್ಲಿಟ್ಟುಕೊಳ್ಳುವುದು ಒಳಿತು. ವಾಹನಕ್ಕೆ ಮುಂಚಿತವಾಗಿಯೇ ಇಂಧನ ತುಂಬಿಸಿಕೊಳ್ಳಿ, ತಿಂಡಿ-ತಿನಿಸು, ನೀರು ಹಾಗೂ ಟೋಲ್‌ ಅಥವಾ ಸಣ್ಣಪುಟ್ಟ ಅಂಗಡಿಗಳಿಗಾಗಿ ನಗದು ಹಣ ಜೊತೆಯಲ್ಲಿಟ್ಟುಕೊಳ್ಳಿ. ರಸ್ತೆ ಸಂಚಾರ ಗೊಂದಲಮಯ ಎನಿಸಿದರೆ ಮೈಸೂರಿಗೆ ರೈಲು ಪ್ರಯಾಣ ಬೆಳೆಸುವುದು ಸುರಕ್ಷಿತ. ಜೊತೆಗೆ ಕೆಎಸ್‌ಆರ್‌ಟಿಸಿ (KSRTC) ಬಸ್‌ಗಳ ಮಾರ್ಗ ಬದಲಾವಣೆಯ ಅಪ್‌ಡೇಟ್‌ಗಳ ಮೇಲೆಯೂ ಕಣ್ಣಿಟ್ಟಿರಿ.

Cauvery Water Release 2026: Impact on Bengaluru-Mysuru Travel, Traffic Updates, and Safety Tips

ಕಾವೇರಿ 6,000 ಕ್ಯೂಸೆಕ್ ನೀರು ಬಿಡುಗಡೆ ಆದೇಶ: ಬೆಂಗಳೂರು-ಮೈಸೂರು ಪ್ರಯಾಣದ ಮೇಲೇನು ಪರಿಣಾಮ?

ಮೈಸೂರು ಕಡೆ ಹೊರಡುವವರು ನೈಸ್ ರಸ್ತೆಯಿಂದ ಕೆಂಗೇರಿ ಪ್ರವೇಶಿಸುವಾಗ ರಸ್ತೆ ಬ್ಲಾಕ್ ತಪ್ಪಿಸಲು ಪರ್ಯಾಯ ಪ್ಲಾನ್ ಇಟ್ಟುಕೊಳ್ಳಿ. ಇನ್ನು ಶಿವನಸಮುದ್ರ ಅಥವಾ ತಲಕಾಡಿಗೆ ಹೋಗುವವರಿದ್ದರೆ, ಕನಕಪುರ ಮತ್ತು ಮಳವಳ್ಳಿ ಮಾರ್ಗದ ರಾಷ್ಟ್ರೀಯ ಹೆದ್ದಾರಿ 948 ಅನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ. ಈ ಮಾರ್ಗಗಳಲ್ಲಿ ಪ್ರತಿಭಟನೆಯ ಬಿಸಿ ಕೊಂಚ ಕಡಿಮೆ ಇರಲಿದೆ. ಸಾಧ್ಯವಾದಷ್ಟು ಬೆಳಿಗ್ಗೆ 7 ಗಂಟೆಗಿಂತ ಮೊದಲು ಅಥವಾ ರಾತ್ರಿ 9 ಗಂಟೆಯ ನಂತರ ಪ್ರಯಾಣಿಸಿ. ಕುಟುಂಬದವರ ಜೊತೆ ನಿಮ್ಮ ಲೈವ್ ಲೊಕೇಶನ್ ಹಂಚಿಕೊಳ್ಳಿ ಮತ್ತು ಪೊಲೀಸರ ಅಧಿಕೃತ ಟ್ರಾಫಿಕ್ ಸೂಚನೆಗಳನ್ನು ಗಮನಿಸುತ್ತಿರಿ.

ಮಂಡ್ಯದಲ್ಲಿ ಪ್ರತಿಭಟನೆ ಮತ್ತು ಶಿವನಸಮುದ್ರದಲ್ಲಿ ಸುರಕ್ಷತೆ

ನೀರು ಬಿಡುಗಡೆ ಹಿನ್ನೆಲೆಯಲ್ಲಿ ಶಿವನಸಮುದ್ರದಲ್ಲಿ ನೀರಿನ ಹರಿವು ಹೆಚ್ಚಾಗಲಿದೆ. ಹಾಗಾಗಿ ಪ್ರವಾಸಿಗರು ತಡೆಗೋಡೆಗಳ ಹಿಂಭಾಗದಲ್ಲೇ ನಿಲ್ಲಿ, ಜಾರುವ ಬಂಡೆಗಳ ಬಳಿ ಹೋಗಬೇಡಿ ಮತ್ತು ಮಕ್ಕಳ ಬಗ್ಗೆ ಹೆಚ್ಚಿನ ನಿಗಾ ವಹಿಸಿ. ಯಾವುದೇ ಮುನ್ಸೂಚನೆ ಇಲ್ಲದೆ ತೆಪ್ಪ (ಕೊರಕಲ್) ಸಂಚಾರ ಸ್ಥಗಿತಗೊಳ್ಳಬಹುದು. ಕಿರಿದಾದ ತಿರುವುಗಳಲ್ಲಿ ಪಾರ್ಕಿಂಗ್ ಸಮಸ್ಯೆ ಎದುರಾಗಬಹುದು, ಕಾರು ರಿವರ್ಸ್ ತೆಗೆಯುವಾಗ ಎಚ್ಚರವಿರಲಿ. ಸೆಲ್ಫಿಗಾಗಿ ನೀರಿಗಿಳಿಯುವ ಸಾಹಸಕ್ಕೆ ಕೈಹಾಕಬೇಡಿ. ಸ್ಥಳೀಯ ಟೀ ಅಂಗಡಿಗಳು ಬೇಗನೇ ಬಂದ್ ಆಗುವ ಸಾಧ್ಯತೆಯಿರುವುದರಿಂದ ಕುಡಿಯುವ ನೀರು ಮತ್ತು ಅಗತ್ಯ ಔಷಧಗಳನ್ನು ಜೊತೆಯಲ್ಲೇ ತಂದಿರಿ.

ಸಾಧ್ಯವಿದ್ದರೆ ಬೆಳಗಿನ ರೈಲಿನಲ್ಲಿ ಟಿಕೆಟ್ ಬುಕ್ ಮಾಡಿ, ಆಪ್‌ಗಳಲ್ಲಿ ಸೀಟ್ ಅಲರ್ಟ್ ಇಟ್ಟುಕೊಳ್ಳಿ. ರಸ್ತೆ ಮಾರ್ಗವಾಗಿ ಪ್ರಯಾಣಿಸುವವರು ಮಂಡ್ಯ, ಶ್ರೀರಂಗಪಟ್ಟಣದ ಅಪ್‌ಡೇಟ್‌ಗಳು ಮತ್ತು ಕೆಎಸ್‌ಆರ್‌ಟಿಸಿ ಬುಲೆಟಿನ್‌ಗಳನ್ನು ಗಮನಿಸುತ್ತಿರಿ. ಕೆಆರ್‌ಎಸ್ (KRS) ಹಾಗೂ ಕಬಿನಿ ಜಲಾಶಯಗಳಿಂದ ಹೊರಬಿಡುತ್ತಿರುವ ನೀರಿನ ಪ್ರಮಾಣದ ಮೇಲೆಯೂ ನಿಗಾ ಇಡಿ. ಪ್ರಯಾಣಕ್ಕೆ ಸಾಕಷ್ಟು ಸಮಯ ಮೀಸಲಿಡಿ. ತಡವಾಗಿ ತಲುಪುವ ಅಥವಾ ಮಾರ್ಗ ಬದಲಾವಣೆಯ ಸುಳಿವು ಸಿಕ್ಕರೆ, ನೀವು ತಂಗುವ ಹೋಟೆಲ್ ಅಥವಾ ರೆಸಾರ್ಟ್‌ನವರಿಗೆ ಮುಂಚಿತವಾಗಿಯೇ ಮಾಹಿತಿ ನೀಡಿ.

More News

Read more about: travel guide
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+