ಒಡಿಶಾ ಪ್ರವಾಸೋದ್ಯಮ : ಭಾರತದ ಆತ್ಮ

ಸಂಸ್ಕೃತಿ ಮತ್ತು ಪರಂಪರೆಯಲ್ಲಿ ವಿಭಿನ್ನವಾಗಿರುವ ಪ್ರದೇಶಗಳು ಭಾರತದಲ್ಲಿ ಕೆಲವೇ ಕೆಲವು ಇವೆ. ಅವುಗಳಲ್ಲೊಂದು ಒಡಿಶಾ ರಾಜ್ಯ. ತನ್ನ ಸಂಪಧ್ಭರಿತ ಸಂಪ್ರದಾಯ, ನೈಸರ್ಗಿಕ ಸಂಪತ್ತುಗಳಿಂದ ಒಡಿಶಾ ಈ ಮೊದಲು ಒರಿಸ್ಸಾ ಎಂದು ಕರೆಯಲ್ಪಡುತ್ತಿತ್ತು. ಒಡಿಶಾವನ್ನು ಭಾರತದ ಆತ್ಮ ಎಂದೇ ಕರೆಯಲಾಗುತ್ತದೆ.

ಒಡಿಶಾದ ಸ್ವರ್ಣ ತ್ರಿಕೋನ

ಸ್ವರ್ಣ ತ್ರಿಕೋನವನ್ನು ಪ್ರತಿಬಿಂಬಿಸುವ ಮೂರು ದೇವಸ್ಥಾನಗಳು ಓಡಿಶಾದಲ್ಲಿ ಪ್ರಸಿದ್ದ. ಮೊದಲನೇಯದು ಭುವನೇಶ್ವರದ ಲಿಂಗರಾಜ ದೇವಸ್ಥಾನ, ಪುರಿ ಜಗನ್ನಾಥ ದೇವಸ್ಥಾನ ಮತ್ತು ಕೋಣಾರ್ಕದ ಸೂರ್ಯ ದೇವಸ್ಥಾನ. ಭುವನೇಶ್ವರದಿಂದ ಪ್ರಾರಂಭಿಸಿದರೆ ಒಡಿಶಾದ ಪ್ರವಾಸಕ್ಕೆ ಪರಿಪೂರ್ಣತೆ ಸಿಗುತ್ತದೆ.ನಗರದಲ್ಲಿ ನೂರಕ್ಕಿಂತಲೂ ಹೆಚ್ಚು ದೇವಸ್ಥಾನಗಳಿದ್ದು ಅವುಗಳಲ್ಲಿ ಬಹಳಷ್ಟು ದೇವಸ್ಥಾನಗಳಿಗೆ ಐತಿಹಾಸಿಕ ಮಹತ್ವವಿದೆ.

ಭಾರತದ ನಾಲ್ಕು ಧಾಮಗಳಲ್ಲೊಂದು ಪುರಿ. ದ್ವಾರಕಾ, ಬದ್ರಿನಾಥ ಮತ್ತು ರಾಮೇಶ್ವರಂ ಮತ್ತುಳಿದ ಮೂರು ಧಾಮಗಳು. ಈ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿದರೆ ಕಡಿಮೆ ಪ್ರಯತ್ನದಲ್ಲಿ ಹೆಚ್ಚಿನ ವರ ದೊರೆಯುತ್ತದೆ ಎಂಬ ನಂಬಿಕೆ ಭಕ್ತರದ್ದು. ಕೋಣಾರ್ಕದಲ್ಲಿರುವ ಸೂರ್ಯ ದೇವಾಲಯ ಒಡಿಶಾದ ವಾಸ್ತು ಶೈಲಿಗೆ ಸೂಕ್ತ ಉದಾಹರಣೆ. ಕೆಲವು ಭಾಗಗಳು ಇಲ್ಲಿ ನಾಶವಾಗುತ್ತಿದ್ದರೂ ದೇವಸ್ಥಾನದ ರಚನೆಗಳು ಹಾಗೂ ಕೆತ್ತನೆಗಳು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿದೆ.

ಒಡಿಶಾ ಪ್ರವಾಸೋದ್ಯಮದ ಇತರೆ ಕೋನಗಳು

ಒಡಿಶಾದಲ್ಲಿ ಕೇವಲ ವಾಸ್ತುಶಿಲ್ಪ ರಚನೆಗಳು ಮಾತ್ರವಲ್ಲ- ಇನ್ನಿತರ ಹಲವಾರು ಸಂಗತಿಗಳು ಹೆಮ್ಮೆ ಪಡುವಂತಿವೆ. ಜೈನ ಸ್ಮಾರಕಗಳು, ಬೌದ್ಧ ಕೇಂದ್ರಗಳು ಮತ್ತು ಅಭಯಾರಣ್ಯಗಳು ಒಡಿಶಾದ ಕಣಜವನ್ನು ತೆರೆದಿಡುತ್ತವೆ.

ಒಡಿಶಾದ ಜನತೆ

ನಗರ ಮತ್ತು ಗ್ರಾಮೀಣ ಸಮುದಾಯಗಳ ಕೂಡುವಿಕೆಗೆ ಒಡಿಶಾ ಸರಿಯಾದ ಉದಾಹರಣೆ. ಇಲ್ಲಿನ ಬಹುತೇಕ ಮಂದಿ ಕೃಷಿ ಹಾಗು ಕೂಲಿ ಕಾರ್ಮಿಕರು. ನಗರಗಳಿಗಿಂತ ಹೆಚ್ಚು ಗ್ರಾಮಗಳಲ್ಲಿ ವಾಸಿಸುವವರ ಸಂಖ್ಯೆಯೇ ಅಧಿಕ. ಒಡಿಶಾ ರಾಜ್ಯದ ಒಟ್ಟೂ ಜನಸಂಖ್ಯೆಯಲ್ಲಿ ಕಾಲು ಭಾಗದಷ್ಟು ಬುಡಕಟ್ಟು ಸಮುದಾಯದ ಮಂದಿಯೇ ಸೇರಿದ್ದಾರೆ. ಈ ಸಮುದಾಯಗಳು ಇವತ್ತಿಗೂ ತಮ್ಮ ಶ್ರೀಮಂತ ಸಂಪ್ರದಾಯವನ್ನು ಸಂಸ್ಕ್ರತಿಯನ್ನು ಪಾಲಿಸಿ ಉಳಿಸಿಕೊಂಡು ಬಂದಿದ್ದಾರೆ. ಒರಿಯಾ ಇಲ್ಲಿನ ಅಧಿಕ್ರತ ಭಾಷೆ. ಹಿಂದಿ ಮತ್ತು ಇಂಗ್ಲೀಷ್ ಭಾಷೆಯ ಬಳಕೆಯೂ ಇಲ್ಲಿದೆ.

ಸಂಸ್ಕೃತಿ ಮತ್ತು ಆಹಾರ ಪದ್ದತಿ

ಗಳುಒಡಿಶಾದ ಜನತೆ ತಮ್ಮ ಸಂಸ್ಕೃತಿಯ ವಿಚಾರದಲ್ಲಿ ಕಟ್ಟುನಿಟ್ಟು. ಒಡಿಸ್ಸಿ, ಒಡಿಶಾದ ನೃತ್ಯ ಪ್ರಕಾರ ಇನ್ನೂ ಜೀವಂತವಾಗಿದೆ. ಮದುವೆ ಮತ್ತು ಉಳಿದ ಶುಭ ಸಂದರ್ಭಗಳಲ್ಲಿ ಒಡಿಸ್ಸಿ ನೃತ್ಯ ಮಾಡಲಾಗುತ್ತದೆ.ಒಡಿಶಾದ ಮೂಲ ನಿವಾಸಿಗರು ಸಮೃದ್ದ ಮತ್ತು ನೈಸರ್ಗಿಕ ಆಹಾರವನ್ನೇ ಇಷ್ಟ ಪಡುತ್ತಾರೆ. ಅನ್ನ ಪ್ರಿಯರಿಗೆ ಒಡಿಶಾದ ಅಡುಗೆ ಸ್ವಲ್ಪ ಮೃದು. ದಾಲ್ಮಾ, ಬೆಸರ, ದಹಿ ಬೈಗನಾ ಮತ್ತು ಆಲೂ ಪರೋಟ ರುಚಿ ನೋಡಬಹುದಾದ ಅಡುಗೆಗಳು. ಇಲ್ಲಿನ ಉಪ್ಪಿನಕಾಯಿಗಳು ಬಾಯಿ ಚಪ್ಪರಿಸುವಂತಹ ರುಚಿಯನ್ನು ಹೊಂದಿರುತ್ತದೆ.

ಹಬ್ಬ ಹರಿದಿನ ಆಚರಣೆಗಳು

ಇಲ್ಲಿನ ಬಹುತೇಕರು ಕೃಷಿಕರಾಗಿದ್ದು ಹಲವಾರು ಹಬ್ಬಗಳು ಸುಗ್ಗಿಯ ಕಾಲದಲ್ಲಿಯೇ ಇರುತ್ತವೆ. ಒಡಿಶಾದಲ್ಲಿ ದ್ರಾವಿಡಿಯನ್, ಆರ್ಯನ್ ಮತ್ತು ಇತರ ಪುರಾತನ ಸಂಸ್ಕ್ರತಿಗಳ ಮಿಲನವಾಗಿದೆ. ಮಕರ ಮೇಳ, ಮಾಘ ಸಪ್ತಮಿ, ರಥಯಾತ್ರಾ, ದುರ್ಗಾ ಪೂಜಾ ಇತ್ಯಾದಿ ಹಬ್ಬಗಳನ್ನು ಬಹಳ ಸಡಗರದಿಂದ ಆಚರಿಸಲಾಗುತ್ತದೆ.ಹಬ್ಬ ಹರಿದಿನಗಳ ಹೊರತಾಗಿ ಕೋಣಾರ್ಕ ಹಬ್ಬ, ರಾಜರಾಣಿ ಸಂಗೀಥ ಮಹೋತ್ಸವ, ಮುಕ್ತೇಶ್ವರ ನೃತ್ಯ ಮಹೋತ್ಸವಗಳನ್ನೂ ಇಲ್ಲಿ ಆಚರಿಸಲಾಗುತ್ತದೆ.

ಒಡಿಶಾಕ್ಕೆ ಸಂಪರ್ಕ

ಉತ್ತಮ ಸಂಪರ್ಕ ಹೊಂದಿರುವ ರಸ್ತೆಗಳು, ರೈಲ್ವೇ ಹಳಿಗಳು ಮತ್ತು ವಿಮಾನನಿಲ್ದಾಣಗಳು ಒಡಿಶಾಕ್ಕೆ ಪ್ರಯಾಣ ಸುಲಭಗೊಳಿಸಿವೆ. ಬೇಸಿಗೆ, ಮಳೆ ಮತ್ತು ಚಳಿಗಾಲದಿಂದ ಕೂಡಿದ ಸಮಶೀತೋಷ್ಣ ವಾತಾವರಣ ಇಲ್ಲಿದೆ. ಹಾಗಾದರೆ ಇನ್ನೇಕೆ ತಡ ಒಡಿಶಾ ಪ್ರವಾಸಕ್ಕೆ ಸಮಗ್ರವಾದ ಯೋಜನೆಯನ್ನು ಇಂದೆ ರೂಪಿಸಿಕೊಳ್ಳಿ.

ಒಡಿಶಾ ಸ್ಥಳಗಳು

 • ಭುವನೇಶ್ವರ 94
 • ಜೆಪೋರ್ 7
 • ಕೆಯೊಂಝಾರ 1
 • ಚಿಲ್ಕಾ 36
 • ಕಂಧಮಲ್ 12
One Way
Return
From (Departure City)
To (Destination City)
Depart On
18 Mar,Sun
Return On
19 Mar,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
18 Mar,Sun
Check Out
19 Mar,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
18 Mar,Sun
Return On
19 Mar,Mon