ಸದಾ ಮನೆಯಲ್ಲಿ ಕೂರುವ ಬದಲು ರಜಾ ಸಿಕ್ಕಾಗಲೆಲ್ಲಾ ಪ್ರವಾಸ ಹಮ್ಮಿಕೊಳ್ಳುವುದು ಒಳ್ಳೆಯದು. ಇದರಿಂದ ಮನಸ್ಸು ಉಲ್ಲಾಸದಿಂದ ಕೂಡಿರುತ್ತದೆಯಲ್ಲದೆ, ಮೈಂಡ್ ರಿಫ್ರೆಶ್ ಆಗುತ್ತದೆ. ಕೆಲಸ ಮಾಡಲು ಮತ್ತಷ್ಟು ಹುಮ್ಮಸ್ಸು ಬರುತ್ತದೆ. ಹಾಗಾಗಿ ಪ್ರಯಾಣ ಅಥವಾ ಪ್ರವಾಸ ಜೀವನದಲ್ಲಿ ಆಯೋಜಿಸಬಹುದಾದ ಅತ್ಯುತ್ತಮ ಕೆಲಸಗಳಲ್ಲಿ ಒಂದಾಗಿದೆ. ನೀವು ಹೊರಗೆ ಹೋದಾಗ ಮತ್ತು ಹೊಸ ಸ್ಥಳಗಳನ್ನು ಅನ್ವೇಷಿಸಿದಾಗ ನಿಮ್ಮ ಜ್ಞಾನವು ಹೆಚ್ಚಾಗುವುದಲ್ಲದೆ, ಅನೇಕ ಹೊಸ ನೆನಪುಗಳನ್ನು ನಿಮ್ಮೊಂದಿಗೆ ಶಾಶ್ವತವಾಗಿ ಉಳಿಸಿಕೊಳ್ಳಬಹುದು. ಇದೆಲ್ಲಾ ಓಕೆ, ಆದರೆ ಹೊಸ ಸ್ಥಳಕ್ಕೆ ಪ್ರಯಾಣಿಸುವುದು ನಿಮಗೆ ಸ್ವಲ್ಪ ದುಬಾರಿಯಾಗಬಹುದು. ಅಷ್ಟೇ ಏಕೆ ಈ ವೇಳೆ ಪ್ರಯಾಣ, ವಸತಿ ಮತ್ತು ಆಹಾರಕ್ಕಾಗಿ ನೀವು ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ.
ಹೌದು, ಬಹುತೇಕರು ಪ್ರವಾಸ ಹಮ್ಮಿಕೊಂಡಾಗ ವಸತಿ, ಪ್ರಯಾಣ ಬಿಡಿ ಆಹಾರದ ವೆಚ್ಚವನ್ನು ಸೇರಿಸುವುದಿಲ್ಲ. ಒಂದು ವೇಳೆ ಸೇರಿಸದಿದ್ದರೆ ಪ್ರವಾಸ ಮುಗಿಯುವ ಹೊತ್ತಿಗೆ ಓವರ್‌ಬಡ್ಜೆಟ್ ಆಗುತ್ತದೆ. ಸಾಮಾನ್ಯವಾಗಿ ನಾವೆಲ್ಲರೂ ಒಂದಲ್ಲ ಒಂದು ಬಾರಿ ಈ ಪರಿಸ್ಥಿತಿಯನ್ನು ಎದುರಿಸಿರುತ್ತೇವೆ. ಆದರೆ ನೀವು ಸ್ವಲ್ಪ ಬುದ್ಧಿವಂತಿಕೆಯಿಂದ ಪ್ರಯಾಣಿಸಿದರೆ ತುಂಬಾ ಟೇಸ್ಟಿ ಮತ್ತು ಸ್ಥಳೀಯ ಆಹಾರವನ್ನು ಆನಂದಿಸುವುದರೊಂದಿಗೆ ಸಾಕಷ್ಟು ಹಣವನ್ನು ಉಳಿಸಬಹುದು. ಅಷ್ಟೇ ಅಲ್ಲ, ಹೊಸ ಸ್ಥಳಕ್ಕೆ ಭೇಟಿ ನೀಡಿದಾಗ, ಅಲ್ಲಿನ ಆಹಾರದ ಅನುಭವವನ್ನು ನೀವು ಶಾಶ್ವತವಾಗಿ ನೆನಪಿಸಿಕೊಳ್ಳುತ್ತೀರಿ. ಆದ್ದರಿಂದ ಇಂದು ಈ ಲೇಖನದಲ್ಲಿ ನಾವು ಜರ್ನಿಯ ಸಮಯದಲ್ಲಿ ಆಹಾರ ಸೇವಿಸುವಾಗ ಅಳವಡಿಸಿಕೊಳ್ಳಬೇಕಾದ ಕೆಲವು ಸಲಹೆಗಳನ್ನು ಕೊಡುತ್ತಿದ್ದೇವೆ. ಈ ಮೂಲಕ ನೀವು ಪ್ರಯಾಣದ ಸಮಯದಲ್ಲಿ ಸಾಕಷ್ಟು ಹಣವನ್ನು ಉಳಿಸಬಹುದು.

ಇವನ್ನು ಜೊತೆಗೆ ಒಯ್ಯಬಹುದು....
ನೀವು ಪ್ರಯಾಣ ಮಾಡುವಾಗ ಸ್ವಲ್ಪ ಹಸಿವು ಹೆಚ್ಚಾಗಿಯೇ ಆಗುತ್ತದೆ. ಆದರೆ ವಿಶೇಷವಾಗಿ ವಿಮಾನ ನಿಲ್ದಾಣಗಳಲ್ಲಿರುವ ಜಾಗಗಳಲ್ಲಿ ಆಹಾರ ದುಬಾರಿ. ಮತ್ತೆ ಇಲ್ಲಿನ ರೆಸ್ಟೋರೆಂಟ್‌ಗಳಲ್ಲಿಯೂ ಹಣವನ್ನು ಖರ್ಚು ಮಾಡುವುದು ಬುದ್ಧಿವಂತರ ಲಕ್ಷಣವಲ್ಲ ಬಿಡಿ. ಹಾಗಾಗಿ ನಿಮ್ಮೊಂದಿಗೆ ಕೆಲವು ತಿಂಡಿಗಳನ್ನು ಅಥವಾ ಹಣ್ಣುಗಳನ್ನು ತೆಗೆದುಕೊಂಡು ಹೋಗಲು ಪ್ರಯತ್ನಿಸಿ. ಉದಾಹರಣೆಗೆ, ನೀವು ಗ್ರಾನೋಲಾ ಬಾರ್‌ಗಳು (ಡ್ರೈ ಫ್ರೂಟ್ಸ್‌ನಿಂದ ಮಾಡಿದ ಸಿಹಿ ತಿನಿಸು). ಒಂದು ರೀತಿಯ ಎನರ್ಜಿ ಬಾರ್ ಎಂದೇ ಹೇಳಬಹುದು. ಹಾಗೆಯೇ ಹಣ್ಣುಗಳು, ನಟ್ಸ್ ಮತ್ತು ಮನೆಯಲ್ಲಿ ತಯಾರಿಸಿದ ಸ್ಯಾಂಡ್‌ವಿಚ್‌ಗಳನ್ನು ಸಹ ಪ್ಯಾಕ್ ಮಾಡಬಹುದು. ನಿಮಗೆ ಸ್ವಲ್ಪ ಹಸಿವಾದಾಗ ಅಥವಾ ಮಕ್ಕಳು ತಿಂಡಿ ತಿನ್ನಲು ಹಂಬಲಿಸಿದಾಗ ಇವುಗಳನ್ನು ಕೊಡುವುದು ಅಥವಾ ತಿನ್ನುವುದು ಖಂಡಿತವಾಗಿಯೂ ಒಳ್ಳೆಯದು. ಇದು ಹೆಚ್ಚುವರಿ ಹಣವನ್ನು ಖರ್ಚು ಮಾಡುವುದನ್ನು ತಡೆಯುತ್ತದೆ.
ಲೋಕಲ್ ಫುಡ್ ಅನ್ವೇಷಿಸಿ
ಹೊಸ ಸ್ಥಳದಲ್ಲಿ ಆಹಾರವನ್ನು ಪ್ರಯತ್ನಿಸುವಾಗ ನೀವು ಹಣವನ್ನು ಉಳಿಸಲು ಬಯಸಿದರೆ ಸ್ಥಳೀಯ ಸ್ಥಳಗಳನ್ನು ಅನ್ವೇಷಿಸಲು ಪ್ರಯತ್ನಿಸಿ. ಏಕೆಂದರೆ ಪ್ರವಾಸಿ ಸ್ಥಳಗಳಲ್ಲಿ ಆಹಾರಕ್ಕಾಗಿ ನೀವು ಹೆಚ್ಚುವರಿ ಹಣವನ್ನು ಖರ್ಚು ಮಾಡಬೇಕಾಗಬಹುದು. ಇಷ್ಟೇ ಅಲ್ಲ, ಅಲ್ಲಿನ ಆಹಾರದ ಗುಣಮಟ್ಟವೂ ಉತ್ತಮವಾಗಿರುವುದಿಲ್ಲ. ಆದ್ದರಿಂದ, ಸ್ಥಳೀಯ ಜನರು ತಿನ್ನಲು ಇಷ್ಟಪಡುವ ಸ್ಥಳಗಳಲ್ಲಿ ನೀವು ತಿನ್ನಲು ಪ್ರಯತ್ನಿಸಬೇಕು. ನೀವು ಸ್ಥಳೀಯ ಮಾರುಕಟ್ಟೆಗಳು, ಆಹಾರ ಮಳಿಗೆಗಳು ಇತ್ಯಾದಿಗಳೆಡೆ ತಿನ್ನಲು ಪ್ರಯತ್ನಿಸಿ. ಇಲ್ಲಿ ನೀವು ಬಜೆಟ್ ಸ್ನೇಹಿ, ಹಾಗೆಯೇ ತುಂಬಾ ಟೇಸ್ಟಿ ಮತ್ತು ಅಲ್ಲಿನ ಸಿಗ್ನೇಚರ್ ಆಹಾರವನ್ನು ಪಡೆಯುತ್ತೀರಿ.

ಬೀದಿ ಬದಿ ಆಹಾರ
ನೀವು ಪ್ರಯಾಣಿಸುವಾಗ ಖಂಡಿತವಾಗಿಯೂ ಬೀದಿ ಬದಿ ಲಭ್ಯವಿರುವ ಆಹಾರವನ್ನು ಆನಂದಿಸಬಹುದು. ಸ್ಟ್ರೀಟ್ ಫುಡ್ ಟೇಸ್ಟಿ ಮಾತ್ರವಲ್ಲ, ಇದು ರೆಸ್ಟೋರೆಂಟ್‌ಗಳಿಗಿಂತ ಅಗ್ಗವಾಗಿರುತ್ತದೆ. ಅಷ್ಟೇ ಅಲ್ಲ, ನೀವು ಹೊಸ ಸ್ಥಳದಲ್ಲಿದ್ದಾಗ ಮತ್ತು ಅಲ್ಲಿನ ಪ್ರಸಿದ್ಧ ಸ್ಟ್ರೀಟ್ ಫುಡ್ ಅನ್ನು ಸವಿಯುವಾಗ, ಆ ಸ್ಥಳದ ಆಹಾರ ಸಂಸ್ಕೃತಿಯನ್ನು ಅನುಭವಿಸುವ ಅವಕಾಶವನ್ನೂ ಪಡೆಯಬಹುದು.
ಆಫರ್‌ಗಳು
ಆಹಾರದ ಮೇಲೆ ಹಣವನ್ನು ಉಳಿಸಲು ಇದು ಅದ್ಭುತ ಮಾರ್ಗವಾಗಿದೆ. ನೀವು ಆ ಪ್ರದೇಶಕ್ಕೆ ಹೊಸಬರಾಗಿದ್ದರೆ ವಿವಿಧ ರೆಸ್ಟೋರೆಂಟ್‌ಗಳನ್ನು ಅನ್ವೇಷಿಸಿ ಮತ್ತು ಯಾವ ಸಮಯದಲ್ಲಿ ನಿಮಗೆ ಆಫರ್ ಸಿಗಬಹುದು ಎಂಬುದನ್ನು ನೋಡಿ. ಅನೇಕ ಸ್ಥಳಗಳು ಉಪಹಾರದ ಮೇಲೆ ಉತ್ತಮ ರಿಯಾಯಿತಿಗಳನ್ನು ನೀಡುತ್ತವೆ. ಮತ್ತೆ ಕೆಲವು ಸ್ಥಳಗಳಲ್ಲಿ ಮಧ್ಯಾಹ್ನದ ಊಟ ಅಥವಾ ರಾತ್ರಿಯ ಊಟದ ಮೇಲೆ ಆಫರ್ ನೀಡುತ್ತವೆ. ಆಗ ನಿಮ್ಮ ನೆಚ್ಚಿನ ಖಾದ್ಯವನ್ನು ನೀವು ಕಡಿಮೆ ಬೆಲೆಗೆ ಸವಿಯಲು ಸಾಧ್ಯವಾಗುತ್ತದೆ. ನೀವು ಬಯಸಿದರೆ, ಇದಕ್ಕಾಗಿ ನೀವು ಸ್ಥಳೀಯ ಜನರ ಸಹಾಯವನ್ನು ಸಹ ತೆಗೆದುಕೊಳ್ಳಬಹುದು. a


Click it and Unblock the Notifications

















