Search
  • Follow NativePlanet
Share
ಮುಖಪುಟ » ಸ್ಥಳಗಳು » ಇಗತ್ಪುರಿ » ಹವಾಮಾನ

ಇಗತ್ಪುರಿ ಹವಾಮಾನ

ಇಗತ್ಪುರಿಗೆ ಭೇಟಿ ನೀಡಲು ನವೆಂಬರ್‌ನಿಂದ ಫೆಬ್ರುವರಿ ನಡುವಿನ ಅವಧಿ ಸೂಕ್ತ ಸಮಯ. ಚಳಿಗಾಲದಲ್ಲಿ ವಾತಾವರಣ ತಂಪಾಗಿರುತ್ತದೆ. ಓಡಾಟಕ್ಕೆ ಇದು ಅನುಕೂಲ. ಮಳೆಗಾಲದ ಸಂದರ್ಭದಲ್ಲಿಯೂ ಬರಬಹುದು. ಜಲಪಾತಗಳು ತುಂಬಿ ಹರಿಯುತ್ತಿರುತ್ತವೆ. ಇದನ್ನು ನೋಡುವುದು ಕೂಡ ಮನಮೋಹಕ.

ಬೇಸಿಗೆಗಾಲ

ಮಾರ್ಚ್ ನಿಂದ ಮೇ ನಡುವಿನ ಅವಧಿ ಇಲ್ಲಿ ಬೇಸಿಗೆ. ಅತ್ಯಂತ ಕಡಿಮೆ ಅವಧಿಯ ಬೇಸಿಗೆ ಕಾಲ ಇಲ್ಲಿರುತ್ತದೆ. ಆದರೆ ಈ ಸಂದರ್ಭದಲ್ಲಿ ತಾಪಮಾನ ಅತ್ಯಂತ ಹೆಚ್ಚಿರುತ್ತದೆ. ಸಹಿಸುವುದು ಕಷ್ಟ ಅನ್ನುವ ರೀತಿ. ಸೂರ್ಯನ ನೇರ ಕಿರಣಗಳು ಮೈ ಸುಡುತ್ತವೆ. ಅಲ್ಲದೇ ಈ ಸಂದರ್ಭದಲ್ಲಿ ಹೊರಗೆ ಸುತ್ತಾಡುವುದು ತುಸು ಕಷ್ಟ.

ಮಳೆಗಾಲ

ಜೂನ್‌ನಿಂದ ನವೆಂಬರ್‌ ನಡುವೆ ಇಲ್ಲಿ ಮಳೆಗಾಲವಿರುತ್ತದೆ. ಭೇಟಿ ನೀಡಲು ಸಕಾಲ. ಬೇಸಿಗೆಯಿಂದ ತತ್ತರಿಸಿ ಹೋಗಿರುವ ನಾಗರಿಕರಿಗೆ ಇದು ಕೊಂಚ ಆರಾಮ ನೀಡುತ್ತದೆ. ಮಳೆಗಾಲದಲ್ಲಿ ಇಗತ್ತಿಪುರಿಯಲ್ಲಿ ಅಪಾರ ಮಳೆ ಆಗುತ್ತದೆ.

ಚಳಿಗಾಲ

ನವೆಂಬರ್‌ನಿಂದ ಫೆಬ್ರುವರಿ ನಡುವಿನ ಅವಧಿ ಇಲ್ಲಿ ಚಳಿಗಾಲ. ಇಲ್ಲಿ ಚಳಿಯು ಸಾಕಷ್ಟಿರುತ್ತದೆ. ತಾಪಮಾನವೂ ಇಳಿದು ಗರಿಷ್ಠ 25 ಡಿಗ್ರಿ ಸೆಲ್ಶಿಯಸ್‌ನಿಂದ ಕನಿಷ್ಠ 14 ಡಿಗ್ರಿ ಸೆಲ್ಶಿಯಸ್‌ವರೆಗೆ ಇರುತ್ತದೆ.