Search
  • Follow NativePlanet
Share
ಮುಖಪುಟ » ಸ್ಥಳಗಳು » ಲೋಣಾವಲಾ » ಹವಾಮಾನ

ಲೋಣಾವಲಾ ಹವಾಮಾನ

ಲೋಣಾವಲದ ಬೆಟ್ಟ ಗುಡ್ಡಗಳು ಪ್ರವಾಸಿಗರಲ್ಲಿ ಹಲವು ಕಾರಣಗಳಿಗೆ ಜನಪ್ರಿಯವಾಗಿದೆ. ಮುಂಬೈಕರ್ ರಿಗೆ ಈ ಪ್ರದೇಶ ಒಂದು ರಿಲ್ಯಾಕ್ಸ್ ಸೆಂಟರ್ ಆಗಿ ಕೆಲಸ ಮಾಡುತ್ತದೆ. ವಾರದ ರಜೆಯನ್ನು ಕಳೆಯಲು ಇಲ್ಲಿಗೆ ಬರಬಹುದು. ನಗರದ ಗಿಜಿಗುಡುವ ರಸ್ತೆಗಳಿಂದ ಹೊರತಾದ ಆಸ್ವಾದ ಇಲ್ಲಿದೆ. ಲೋಣಾವಲದ ವಾತಾವರಣವಂತೂ ವರ್ಷವಿಡೀ ಪ್ರವಾಸಿಗರನ್ನು ಆಹ್ವಾನಿಸುತ್ತದೆ, ಒಂದು ಸುಂದರ ರಜೆಯನ್ನು ಕಳೆಯವುದಕ್ಕೆ ಬೇಕಾದ ಎಲ್ಲಾ ಅವಶ್ಯಕತೆಗಳೂ ಇಲ್ಲಿವೆ. ಸುಂದರ ಪರಿಸರ, ಖುಷಿಯಿಂದ ಸಮಯ ಕಳೆಯಲು ಅನುವು ಮಾಡಿಕೊಡುವ ದಟ್ಟ ಹಸಿರು, ಎತ್ತರೆತ್ತರದ ಮರಗಳು, ಆಟಕ್ಕೆ, ವಿಹಾರಕ್ಕೆ ಸಾಕಷ್ಟು ಜಾಗ... ಎಲ್ಲವೂ ಇದೆ. ವರ್ಷದ ಯಾವುದೇ ಕಾಲದಲ್ಲೂ ಲೋಣಾವಲಕ್ಕೆ ಭೇಟಿ ನೀಡಬಹುದು. ಅದರಲ್ಲೂ ಅತ್ಯುತ್ತಮ ಕಾಲವೆಂದರೆ ಅಕ್ಟೋಬರಿನಿಂದ ಮೇ ಅವಧಿ. ಈ ಸಂದರ್ಭದಲ್ಲಂತೂ ಪ್ರವಾಸಿಗರಿಗೆ ಹೇಳಿ ಮಾಡಿಸಿದ ವಾತಾವರಣವಿಲ್ಲಿರುತ್ತದೆ.

ಬೇಸಿಗೆಗಾಲ

ಲೋಣಾವಲದಲ್ಲಿ ಬೇಸಗೆಗಾಲ ಸಾಮಾನ್ಯವಾಗಿ 30-35 ಡಿಗ್ರಿ ಸೆಲ್ಷಿಯಸ್‌ ಮಧ್ಯೆಯೇ ಇರುತ್ತದೆ. ಅಪರೂಪಕ್ಕೊಮ್ಮೆ ಬೀಳುವ ಮಳೆ ಮತ್ತು ಶೀತಗಾಳಿ ಇಲ್ಲಿನ ವಾತಾವರಣವನ್ನು ಪ್ರವಾಸಿಗರಿಗೆ ಹಿತವಾಗಿಸಿದೆ.

ಮಳೆಗಾಲ

ಇಲ್ಲಿನ ಮಳೆಗಾಲವೇ ಒಂದು ಸ್ವರ್ಗ. ಜೂನ್‌ ತಿಂಗಳ ಮಧ್ಯದಿಂದ ಸಪ್ಟೆಂಬರಿನ ಅವಧಿಯಲ್ಲಿ ಇಲ್ಲಿನ ಬೆಟ್ಟ ಪ್ರದೇಶವು ಅತ್ಯಂತ ಹೆಚ್ಚಿನ ಪ್ರಮಾಣದ ಮಳೆಯನ್ನು ಸ್ವೀಕರಿಸುತ್ತದೆ, ಈ ಅವಧಿಯಲ್ಲಿ ಸುಮಾರು 450 ಸೆಂ.ಮೀನಷ್ಟು ವಾರ್ಷಿಕ ಮಳೆಯಾಗುತ್ತದೆ. ಈ ಅಮೋಘ ಕ್ಷಣವನ್ನು ಸವಿಯಲು ದೇಶದ ವಿವಿಧೆಡೆಯಿಂದ ಪ್ರವಾಸಿಗರು ಬರುತ್ತಾರೆ ಎಂದು ಬೇರೆ ಹೇಳಬೇಕಿಲ್ಲ. ಜೂನ್‌ನಿಂದ ಸಪ್ಟೆಂಬರಿನ ಅವಧಿಯಲ್ಲಿ ಲೋಣಾವಲ ಪ್ರವಾಸಕ್ಕೆ ಅತ್ಯಂತ ಸೂಕ್ತ ಕಾಲ.

ಚಳಿಗಾಲ

ಈ ಅವಧಿಯಲ್ಲಿ ತಾಪಮಾನ ಅತಿ ಹೆಚ್ಚು ಕುಸಿಯುತ್ತದೆ. ಸಾಮಾನ್ಯವಾಗಿ ಕನಿಷ್ಟ ತಾಪಮಾನ 12 ಡಿಗ್ರಿ ಸೆಲ್ಷಿಯಸ್‌ ಇರುತ್ತದೆ, ಹಗಲಿನಲ್ಲಿ ಬೆಚ್ಚಗಿನ ವಾತಾವರಣವಿದ್ದು, ರಾತ್ರಿ ಮಾತ್ರ ಅತ್ಯಂತ ಚಳಿಯಾಗಿರುತ್ತದೆ. ಲೋಣಾವಲಕ್ಕೆ ಕ್ರಿಸ್‌ಮಸ್‌ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಹೆಚ್ಚು ಪ್ರವಾಸಿಗರು ಬರುತ್ತಾರೆ.