ರಜೆ ತೆಗೆದುಕೊಂಡು ಪ್ರವಾಸ ಹೋಗುವುದರಿಂದ ಸ್ವಲ್ಪ ಸಮಯದವರೆಗೆ ಮನೆ, ಕೆಲಸ ಮತ್ತು ಜವಾಬ್ದಾರಿಗಳಿಂದ ನಮ್ಮನ್ನು ದೂರವಿಡಬಹುದು. ಜೊತೆಗೆ ಸಂಪೂರ್ಣವಾಗಿ ಕುಟುಂಬದೊಂದಿಗೆ ಸಮಯ ಕಳೆಯಬಹುದು. ಕಾಲಕಾಲಕ್ಕೆ ನಿಮ್ಮ ಕುಟುಂಬದೊಂದಿಗೆ ಹೊರಗೆ ಹೋಗುವುದು ಸಂಬಂಧವನ್ನು ಬಲಪಡಿಸಲು ಉತ್ತಮ ಮಾರ್ಗವಾಗಿದೆ. ಇದು ನಿಮ್ಮ ಸಂಗಾತಿಯನ್ನು, ಮಕ್ಕಳನ್ನು ನೀವು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಸಾಮಾನ್ಯವಾಗಿ ಗಂಡ-ಹೆಂಡತಿ ದೂರದಲ್ಲಿದ್ದು, ಭೇಟಿಯಾಗಲು ಸಾಧ್ಯವಾಗದಿದ್ದಾಗ ಅಥವಾ ಒಟ್ಟಿಗೆ ಸಮಯ ಕಳೆಯಲು ಅವಕಾಶ ಸಿಗದಿದ್ದಾಗ ಕಿರಿಕಿರಿಯುಂಟುಮಾಡುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಹಾಗೆಯೇ ನೀವು ಪ್ರತಿದಿನ ಸಣ್ಣ ವಿಷಯಗಳಿಗೆ ಜಗಳವಾಡುತ್ತಿದ್ದರೆ, ಹೊರಗೆ ಹೋಗಿ ಬಂದಾಗ ಮೈಂಡ್ ರಿಫ್ರೆಶ್ ಆಗುತ್ತದೆ.
ಹೊರಗೆ ಹೋದಾಗ ತಮಗೆ ಅರಿವಿಲ್ಲದೆ ಒಬ್ಬರಿಗೊಬ್ಬರು ಕಾಳಜಿ ವಹಿಸುತ್ತೀರಿ. ಪ್ರೀತಿಯಿಂದ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತೀರಿ. ಇದೆಲ್ಲಾ ಸಂಸಾರದಲ್ಲಿ ಇದ್ದದ್ದೇ. ಇಂದು ಶುಕ್ರವಾರ. ದಸರ ರಜೆಗಾಗಿ ಬಹುತೇಕರು ಗುರುವಾರದಿಂದಲೇ ರಜೆಯ ಪ್ಲಾನ್ ಮಾಡಿರುತ್ತೀರಿ. ಒಂದು ವೇಳೆ ನಿಮಗೆ ದೂರದೂರಿಗೆ ಹೋಗಲು ಸಾಧ್ಯವಾಗದಿದ್ದರೆ, ಬೆಂಗಳೂರಿನಲ್ಲಿದ್ದರೆ ಅಥವಾ ಬೆಂಗಳೂರಿಗೆ ಹೋಗುತ್ತಿದ್ದರೆ ಈ ಲೇಖನವು ನಿಮಗೆ ಉಪಯುಕ್ತವಾಗಿರುತ್ತದೆ. ಏಕೆಂದರೆ ಬೆಂಗಳೂರಿನಲ್ಲಿ ಕಡಿಮೆ ಬಜೆಟ್‌ನಲ್ಲಿ ಪ್ರವಾಸವನ್ನು ಯೋಜಿಸುವ ಬಗ್ಗೆ ಕೆಲವು ಮಾರ್ಗಗಳನ್ನು ನಾವಿಂದು ನಿಮಗೆ ತಿಳಿಸುತ್ತೇವೆ.

ರೈಲು ಪ್ರಯಾಣ ಬೆಸ್ಟ್
ನೀವು ದೇಶದ ಯಾವುದೇ ಭಾಗದಿಂದ ಬೆಂಗಳೂರಿಗೆ ಬರಲು ಯೋಜಿಸುತ್ತಿದ್ದರೆ ರೈಲು ಅಥವಾ ಬಸ್ ಮೂಲಕ ನಿಮ್ಮ ಪ್ರಯಾಣವನ್ನು ಯೋಜಿಸಬೇಕು. ಕಡಿಮೆ ಬಜೆಟ್‌ನಲ್ಲಿ ಪ್ರವಾಸ ಮಾಡಬೇಕೆನ್ನುವವರಿಗೆ ಇದು ಅತ್ಯುತ್ತಮ ಆಪ್ಷನ್ ಆಗಿದೆ. ಒಂದು ವೇಳೆ ನೀವು ಆರಾಮವಾಗಿ ಪ್ರಯಾಣಿಸಲು ಬಯಸಿದರೆ, ರೈಲಿನಲ್ಲಿ ಪ್ರಯಾಣಿಸುವುದು ಉತ್ತಮ ಆಯ್ಕೆಯಾಗಿದೆ. ಶುಕ್ರವಾರ ರಾತ್ರಿ ಕಚೇರಿಯಿಂದ ಹೊರಟ ನಂತರ ನೀವು ಈ ಪ್ರವಾಸವನ್ನು ಪ್ರಾರಂಭಿಸಬಹುದು. ರಾತ್ರಿ ರೈಲಿನಲ್ಲಿ ಮಲಗುವ ಅವಕಾಶ ಸಿಗುತ್ತದೆ. ನೀವು ಬೆಳಗ್ಗೆ ಬೆಂಗಳೂರು ತಲುಪುತ್ತೀರಿ.
ಪ್ರವಾಸದ ವೆಚ್ಚ ಕಡಿಮೆ ಮಾಡಲು
ಬೆಂಗಳೂರು ತಲುಪಿದ ನಂತರ ಮೊದಲು ನೀವು ಹೋಟೆಲ್ ಗೆ ಹೋಗಿ ಫ್ರೆಶ್ ಆಗಬೇಕು. ನಿಮ್ಮ ಬಜೆಟ್‌ಗೆ ಅನುಗುಣವಾಗಿ ನೀವು ಆನ್‌ಲೈನ್‌ನಲ್ಲಿ ಹೋಟೆಲ್ ಅನ್ನು ಆಯ್ಕೆ ಮಾಡಿಕೊಳ್ಳಿ. ಇಲ್ಲಿ ನಿಮಗೆ 2500 ರಿಂದ 3000 ರೂ.ವರೆಗೂ ಹೋಟೆಲ್‌ಗಳು ಲಭ್ಯ. ಮತ್ತೆ ಹೋಟೆಲ್‌ನಿಂದ ಹೊರಬಂದ ನಂತರ, ಮೊದಲು ಸ್ಕೂಟರ್ ಅಥವಾ ಬೈಕು ಬಾಡಿಗೆಗೆ ಪಡೆಯಿರಿ. ಕುಟುಂಬದೊಟ್ಟಿಗೆ ಇದ್ದರೆ ನೀವು ನಗರದಲ್ಲಿ ಪ್ರಯಾಣಿಸುವಾಗ ಆಟೋ ಅಥವಾ ಕ್ಯಾಬ್‌ಗೆ ಹೆಚ್ಚು ಖರ್ಚು ಮಾಡಬೇಕಾಗಿಲ್ಲ. ಎಲ್ಲ ಪ್ರವಾಸಿ ತಾಣಗಳು ಕಡಿಮೆ ದೂರದಲ್ಲಿವೆ. ಶನಿವಾರ, ಭಾನುವಾರ ಮತ್ತು ಸೋಮವಾರ ದಿನವಿಡೀ ತಿರುಗಾಡಿ. ಪುನಃ ರಾತ್ರಿ ರೈಲಿನಲ್ಲಿ ಹಿಂತಿರುಗಿ. ಈ ರೀತಿಯ ಪ್ರಯಾಣವು ನಿಮಗೆ ಹೆಚ್ಚು ವೆಚ್ಚವಾಗುವುದಿಲ್ಲ.
ಎಲ್ಲೆಲ್ಲಿ ಹೋಗಬಹುದು?
ಇಲ್ಲಿಗೆ ಬಂದಾಗ ಭೇಟಿ ನೀಡಲು ಹಲವು ಉತ್ತಮ ಸ್ಥಳಗಳಿವೆ. ಅದರಲ್ಲಿ ನಂದಿ ಹಿಲ್ಸ್ ಬೆಂಗಳೂರಿನಲ್ಲಿ ಭೇಟಿ ನೀಡಲು ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ನಗರದಲ್ಲಿ ಲಾಲ್ ಬಾಗ್ ಬೊಟಾನಿಕಲ್ ಗಾರ್ಡನ್, ಬೆಂಗಳೂರು ಅರಮನೆ, ಕಬ್ಬನ್ ಪಾರ್ಕ್, ಬೆಂಗಳೂರು ಅರಮನೆ, ವಂಡರ್ ಲಾ ಅಮ್ಯುಸ್‌ಮೆಂಟ್ ಪಾರ್ಕ್, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಕಮರ್ಷಿಯಲ್ ಸ್ಟ್ರೀಟ್, ಇಸ್ಕಾನ್ ಟೆಂಪಲ್, ವಿಧಾನಸೌಧ, ಎಂಜಿರಸ್ತೆ, ಯುಬಿ ಸಿಟಿ ಮಾಲ್, ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ, ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯ, ಜವಾಹರಲಾಲ್ ನೆಹರು ತಾರಾಲಯ, ಆರ್ಟ್ ಆಫ್ ಲೀವಿಂಗ್ ಇಂಟರ್ ನ್ಯಾಷನಲ್ ಸೆಂಟರ್, ಚರ್ಚ್ ಸ್ಟ್ರೀಟ್, ಇಂಡಿಯನ್ ಮ್ಯುಸಿಕ್ ಎಕ್ಸ್‌ಪಿರಿಯನ್ಸ್, ಇನ್ನೋವೇಟಿವ್ ಫಿಲ್ಮ್ ಸಿಟಿ, ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್, ಅಲಸೂರು ಲೇಕ್...ಹೀಗೆ ಹೇಳುತ್ತಾ ಹೋದರೆ 150 ಕ್ಕೂ ಹೆಚ್ಚು ಸ್ಥಳಗಳಿವೆ.
ಹೆಚ್ಚು ಸುತ್ತಾಡಲು ಇಷ್ಟವಿರದಿದ್ದರೆ, ಪ್ರಶಾಂತವಾಗಿ ಒಂದೇ ಸ್ಥಳದಲ್ಲಿ ಕಾಲ ಕಳೆಯಬೇಕೆನ್ನುವವರಿಗೆ ನಂದಿ ಬೆಟ್ಟ ಉತ್ತಮ ಸ್ಥಳವಾಗಿದೆ. ನಗರಕ್ಕೆ ಬಹಳ ಸಮೀಪದಲ್ಲಿರುವುದಲ್ಲದೆ, ಇದು ಗುಡ್ಡಗಾಡು ಪ್ರದೇಶವಾಗಿದೆ. ಇಲ್ಲಿ ನೀವು 3 ದಿನಗಳಲ್ಲಿ ಹಾಯಾಗಿ ಒಂದು ರಾತ್ರಿಯನ್ನು ಕಳೆಯಬಹುದು. ಇದು ಬೆಂಗಳೂರಿನ ಅತ್ಯುತ್ತಮ ಗಿರಿಧಾಮಗಳಲ್ಲಿ ಒಂದಾಗಿದೆ.


Click it and Unblock the Notifications















