Search
  • Follow NativePlanet
Share
» »ಇಲ್ಲಿವೆ ಭಾರತದ ಅತ್ಯಂತ ಶ್ರೀಮಂತ ದೇವಾಲಯಗಳು

ಇಲ್ಲಿವೆ ಭಾರತದ ಅತ್ಯಂತ ಶ್ರೀಮಂತ ದೇವಾಲಯಗಳು

ಭಾರತವು ಸಾವಿರಾರು ದೇವಾಲಯಗಳಿಗೆ ನೆಲೆಯಾಗಿದೆ. ಈ ದೇವಾಲಯಗಳು ಆಲದ ಮರದ ಕೆಳಗಿರುವ ಒಂದು ಪುಟ್ಟ ದೇಗುಲದಿಂದ ಹಿಡಿದು ದೊಡ್ಡ ದೇವಾಲಯಗಳವರೆಗೆ ಇದ್ದು, ಪ್ರತಿದಿನ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ದೇವಾಲಯಗಳು ಜನರು ತಮ್ಮ ಕಷ್ಟಗಳ ಪರಿಹಾರಕ್ಕಾಗಿ ಮತ್ತು ಶಾಂತಿಗಾಗಿ ಹೋಗುವ ಸ್ಥಳಗಳಾಗಿವೆ. ಅಷ್ಟೇ ಅಲ್ಲದೆ ದೇವಾಲಯಗಳು ಕಲೆ ಮತ್ತು ಸಂಸ್ಕೃತಿಯ ಕೇಂದ್ರಗಳಾಗಿವೆ.

ಈ ದೇವಾಲಯಗಳಲ್ಲಿರುವ ದೇವರುಗಳಿಗೆ ಅಸಂಖ್ಯಾತ ಕಾಣಿಕೆಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಈ ಕಾಣಿಕೆಗಳು ಹಣ, ವಜ್ರಗಳು ಮತ್ತು ಚಿನ್ನವೇ ಆಗಿರಬಹುದು. ಇತ್ತೀಚಿನ ವರ್ಷಗಳಲ್ಲಿ ಕೆಲವು ದೇವಾಲಯಗಳು ವಿಶ್ವದ ಕೆಲವು ದೇಶಗಳಿಗಿಂತ ಹೆಚ್ಚು ಸಂಪತ್ತನ್ನು ಹೊಂದಿರುವಷ್ಟು ಸಂಪತ್ತನ್ನು ಸಂಗ್ರಹಿಸಿವೆ.

ಇಂದು, ನಾವು ದೇಶದ ಅತ್ಯಂತ ಶ್ರೀಮಂತ ದೇವಾಲಯಗಳ ಬಗ್ಗೆ ಮಾತನಾಡುತ್ತಿದೇವೆ. ಅವುಗಳು ಕೇವಲ ಸಂಪತ್ತಿನ ವಿಷಯದಲ್ಲಿ ಮಾತ್ರವಲ್ಲದೆ ಸಂಸ್ಕೃತಿಯಲ್ಲೂ ಮತ್ತು ದೇವರನ್ನು ಆರಾಧಿಸಲು ಭೇಟಿ ನೀಡುವ ಜನರ ಸಂಖ್ಯೆಯಲ್ಲಿ ಕೂಡ ಶ್ರೀಮಂತವಾಗಿವೆ.

1. ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನ, ಕೇರಳ

1. ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನ, ಕೇರಳ

ಭಗವಾನ್ ಮಹಾ ವಿಷ್ಣುವಿಗೆ ಸಮರ್ಪಿಸಲಾಗಿರುವ ಈ ದೇವಾಲಯವು ಬಹುಶಃ ದೇಶದ ಅತ್ಯಂತ ಶ್ರೀಮಂತ ದೇವಾಲಯವಾಗಿದೆ. ದೇವಾಲಯದಲ್ಲಿನ ರಹಸ್ಯ ಕಮಾನುಗಳಲ್ಲಿನ ಸಂಪತ್ತಿನ ಮೊತ್ತವು 20,000 ಕೋಟಿಗಳಷ್ಟು ಹೆಚ್ಚಿನದಾಗಿದೆ. ಭಗವಾನ್ ಮಹಾ ವಿಷ್ಣುವಿನ ವಿಗ್ರಹವು ಅವನ ಅನಂತ ಶಾಯನ ರೂಪದಲ್ಲಿ ಪೂಜಿಸಲ್ಪಡುತ್ತದೆ; ಇದು ಜಗತ್ತಿನ ಕೆಲವೇ ದೇವಾಲಯಗಳಲ್ಲಿ ಕಂಡುಬರುವ ಒಂದು ವಿಶೇಷತೆಯಾಗಿದೆ.

2. ತಿರುಮಲ ತಿರುಪತಿ ವೆಂಕಟೇಶ್ವರ ದೇವಸ್ಥಾನ, ಆಂಧ್ರಪ್ರದೇಶ

2. ತಿರುಮಲ ತಿರುಪತಿ ವೆಂಕಟೇಶ್ವರ ದೇವಸ್ಥಾನ, ಆಂಧ್ರಪ್ರದೇಶ

ಶ್ರೀ ಪದ್ಮನಾಭಸ್ವಾಮಿ ದೇವಾಲಯದ ಕಮಾನುಗಳನ್ನು ತೆರೆಯುವವರೆಗೂ ಶ್ರೀಮಂತ ದೇವಾಲಯದ ಬಿರುದು ತಿರುಪತಿ ವೆಂಕಟೇಶ್ವರ ದೇವಸ್ಥಾನಕ್ಕೆ ಸೇರಿತ್ತು. ಆದರೆ ಇದು ಇನ್ನೂ ಭಾರತದ ಅತ್ಯಂತ ಜನನಿಬಿಡ ದೇವಾಲಯವಾಗಿದ್ದು, ಭಗವಾನ್ ಬಾಲಾಜಿಯನ್ನು ಪೂಜಿಸಲು ಪ್ರತಿದಿನ 60,000 ಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ. ಭಗವಾನ್ ವೆಂಕಟೇಶ್ವರನ ಪ್ರತಿಮೆಯು 1000 ಕಿಲೋಗಳಿಗಿಂತ ಹೆಚ್ಚು ಚಿನ್ನದಿಂದ ಅಲಂಕರಿಸಲ್ಪಟ್ಟಿದ್ದು ವಜ್ರಗಳು ಮತ್ತು ಅಮೂಲ್ಯ ರತ್ನಗಳಿಂದ ಕೂಡಿದೆ. ದೇವಾಲಯದ ಪ್ರಸಿದ್ಧ ಲಡ್ಡು ಪ್ರಸಾದದಿಂದ 1 ಕೋಟಿಗೂ ಹೆಚ್ಚು ಆದಾಯ ಬರುತ್ತದೆ. ವಿಪರ್ಯಾಸವೆಂದರೆ ಪುರಾಣಗಳ ಪ್ರಕಾರ, ಭಗವಾನ್ ವೆಂಕಟೇಶ್ವರನನ್ನು ಭಗವಾನ್ ಕುಬೇರನ ಸಾಲದಲ್ಲಿ ಪರಿಗಣಿಸಲಾಗಿದೆ.

3. ಶಿರಡಿ ಸಾಯಿಬಾಬಾ ದೇವಸ್ಥಾನ, ಶಿರಡಿ

3. ಶಿರಡಿ ಸಾಯಿಬಾಬಾ ದೇವಸ್ಥಾನ, ಶಿರಡಿ

ಈ ಪಟ್ಟಿಯಲ್ಲಿರುವ ಇತರ ದೇವಾಲಯಗಳಿಗೆ ಹೋಲಿಸಿದರೆ ತುಲನಾತ್ಮಕವಾಗಿ ಹೊಸ ದೇವಾಲಯ, ಶಿರಡಿ ಸಾಯಿಬಾಬಾ ದೇವಾಲಯವು ಪವಾಡಗಳನ್ನು ಸೃಷ್ಟಿಸುವ ದೇವಾಲಯವಾಗಿದೆ. ಪ್ರಪಂಚದಾದ್ಯಂತದ ಭಕ್ತರು ಮತ್ತು ಆಸ್ತಿಕರು ಶಿರಡಿಗೆ ಭೇಟಿ ನೀಡುತ್ತಾರೆ ಮತ್ತು ಕಾಣಿಕೆಯಾಗಿ ಸಾಕಷ್ಟು ಹಣವನ್ನು ದಾನ ಮಾಡುತ್ತಾರೆ. ವಾರ್ಷಿಕ ಆದಾಯ ಸುಮಾರು ನೂರಾರು ಕೋಟಿಗಳಷ್ಟಾಗಬಹುದು ಎಂದು ನಂಬಲಾಗಿದೆ.

4. ವೈಷ್ಣೋ ದೇವಿ ದೇವಸ್ಥಾನ

4. ವೈಷ್ಣೋ ದೇವಿ ದೇವಸ್ಥಾನ

ವೈಷ್ಣ ದೇವಿ ದೇವಾಲಯವು ಶಕ್ತಿ ಪಂಥದ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಮಾತೃ ದೇವಿಯ ಅನುಯಾಯಿಗಳು ದೀರ್ಘ ಮತ್ತು ಪ್ರಯಾಸಕರ ಪ್ರಯಾಣದ ಮೂಲಕ ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಈ ದೇವಾಲಯವು ಶ್ರೀ ವೆಂಕಟೇಶ್ವರ ದೇವಸ್ಥಾನದ ಪಕ್ಕದಲ್ಲಿಯೇ ಹೆಚ್ಚು ಭೇಟಿ ನೀಡುವ ದೇವಾಲಯವಾಗಿದೆ. ಇದು ತುಂಬಾ ಶ್ರೀಮಂತವಾಗಿದೆ ಮತ್ತು 500 ಕೋಟಿಗಿಂತ ಹೆಚ್ಚಿನ ಮೌಲ್ಯದ ದೇಣಿಗೆಗಳು ಬರುತ್ತದೆ.

5. ಸಿದ್ಧಿವಿನಾಯಕ ದೇವಸ್ಥಾನ, ಮುಂಬೈ

5. ಸಿದ್ಧಿವಿನಾಯಕ ದೇವಸ್ಥಾನ, ಮುಂಬೈ

ಪ್ರತಿದಿನ 2 ಲಕ್ಷಕ್ಕೂ ಹೆಚ್ಚು ಭಕ್ತರು ಈ ದೇವಾಲಯಕ್ಕೆ ಬರುತ್ತಾರೆ. ಈ ದೇವಾಲಯವು ಗಣೇಶನ ಸಿದ್ಧಿವಿನಾಯಕ ರೂಪಕ್ಕೆ ನೆಲೆಯಾಗಿದೆ. ಇಲ್ಲಿ ಸ್ವಾಮಿಯನ್ನು ಪೂಜಿಸುವ ಭಕ್ತನಿಗೆ ಅವರ ಎಲ್ಲಾ ಆಸೆಗಳನ್ನು ಈಡೇರುತ್ತದೆ ಎಂದು ನಂಬಲಾಗಿದೆ. ಈ ದೇವಾಲಯದಲ್ಲಿರುವ ಗಣೇಶ ವಿಗ್ರಹವು ಪವಿತ್ರ ಕಪ್ಪು ಕಲ್ಲಿನಿಂದ ಮಾಡಲ್ಪಟ್ಟಿದೆ ಮತ್ತು 200 ವರ್ಷಗಳಷ್ಟು ಹಳೆಯದು ಎಂದು ಅಂದಾಜಿಸಲಾಗಿದೆ. ಈ ದೇವಾಲಯದಿಂದ ಬರುವ ದೇಣಿಗೆಗಳು ಪ್ರತಿವರ್ಷ 125 ಕೋಟಿಗೂ ಅಧಿಕವಾಗಬಹುದು.

6. ಶ್ರೀ ಮೀನಾಕ್ಷಿ ದೇವಸ್ಥಾನ, ಮಧುರೈ

6. ಶ್ರೀ ಮೀನಾಕ್ಷಿ ದೇವಸ್ಥಾನ, ಮಧುರೈ

ಶ್ರೀ ಮೀನಾಕ್ಷಿ ದೇವಾಲಯವು ಅದ್ಭುತ ವಾಸ್ತುಶಿಲ್ಪಕ್ಕೆ ಅತ್ಯಂತ ಪ್ರಸಿದ್ಧವಾಗಿದೆ. ಪ್ರಧಾನ ದೇವತೆ ಮೀನಾಕ್ಷಿ ಪಾರ್ವತಿ ದೇವಿಯ ಒಂದು ರೂಪ ಮತ್ತು ಶಿವನನ್ನು ಮದುವೆಯಾಗಿರುವ ದೇವಿ. ಕೋಟಿ ಬೆಲೆಬಾಳುವ ಶುದ್ಧ ಚಿನ್ನದಿಂದ ಮಾಡಿದ 2 ಗೋಪುರಗಳನ್ನು ದೇವಾಲಯದ ಮೇಲ್ಭಾಗದಲ್ಲಿ ಕಾಣಬಹುದು.

7. ಗೋಲ್ಡನ್ ಟೆಂಪಲ್, ಅಮೃತಸರ

7. ಗೋಲ್ಡನ್ ಟೆಂಪಲ್, ಅಮೃತಸರ

ಈ ದೇವಾಲಯವು ಸಿಖ್ ಸಮುದಾಯದ ಪೂಜಾ ಸ್ಥಳವಾಗಿದೆ. ಈ ದೇವಾಲಯದ ಸಂಪತ್ತು ಅದರ ಹೆಸರಿನಂತೆ ಶ್ರೀಮಂತವಾಗಿದೆ. ದೇವಾಲಯದ ಗುಮ್ಮಟವನ್ನು ಶುದ್ಧ ಚಿನ್ನ ಬಳಸಿ ತಯಾರಿಸಲಾಗಿದೆಯಂತೆ. ಸಿಖ್ಖರ ಪವಿತ್ರ ಪುಸ್ತಕ ಗುರು ಗ್ರಂಥ ಸಾಹಿಬ್ ಕೂಡ ಚಿನ್ನದಿಂದ ಮಾಡಲ್ಪಟ್ಟಿದೆ ಮತ್ತು ಅಮೂಲ್ಯ ರತ್ನಗಳಿಂದ ಅಲಂಕರಿಸಲ್ಪಟ್ಟಿದೆ. ಈ ದೇವಾಲಯಕ್ಕೆ ಪ್ರತಿದಿನ ಸುಮಾರು 40,000 ಭಕ್ತಾದಿಗಳು ಭೇಟಿ ಕೊಡುತ್ತಾರೆ. ಈ ದೇವಾಲಯದ ವಿಶಿಷ್ಟ ಲಕ್ಷಣವೆಂದರೆ ಆಹಾರವನ್ನು ಬೇಯಿಸುವ ವಿಶಾಲವಾದ ಅಡುಗೆಮನೆ ಮತ್ತು ದೇವಾಲಯಕ್ಕೆ ಭೇಟಿ ನೀಡುವ ಭಕ್ತಾದಿಗಳಿಗೆ ಲಂಗಾರ್‌ನಲ್ಲಿ ಆಹಾರವನ್ನು ನೀಡುವುದು.

8. ಜಗನ್ನಾಥ ದೇವಸ್ಥಾನ, ಪುರಿ

8. ಜಗನ್ನಾಥ ದೇವಸ್ಥಾನ, ಪುರಿ

ಪುರಿಯ ಜಗನ್ನಾಥ ದೇವಾಲಯವು ಪ್ರತಿವರ್ಷ ಆಚರಿಸುವ ಪ್ರಸಿದ್ಧ ರಥಯಾತ್ರೆಗೆ ನೆಲೆಯಾಗಿದೆ. ವಾರ್ಷಿಕವಾಗಿ 30,000 ಕ್ಕೂ ಹೆಚ್ಚು ಜನರು ದೇವಾಲಯಕ್ಕೆ ಭೇಟಿ ನೀಡುತ್ತಾರೆ ಮತ್ತು ರಥಯಾತ್ರೆ ಹಬ್ಬ ಪ್ರಾರಂಭವಾದಾಗ ಈ ಸಂಖ್ಯೆ 70,000 ಕ್ಕೆ ಏರುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X