Search
  • Follow NativePlanet
Share
ಮುಖಪುಟ » ಸ್ಥಳಗಳು» ಮಹಾರಾಷ್ಟ್ರ

ಮಹಾರಾಷ್ಟ್ರ ಪ್ರವಾಸೋದ್ಯಮ - ಒಂದು ಕಿರು ಪರಿಚಯ

ಭಾರತದ ಎರಡನೆ ಅತಿ ದೊಡ್ಡ ಜನಸಂಖ್ಯೆ ಹೊಂದಿರುವ ಮಹಾರಾಷ್ಟ್ರ ರಾಜ್ಯವು ಬಾನೆತ್ತರಕ್ಕೆ ಚಾಚಿರುವ ಪರ್ವತಗಳು, ವಿಹಂಗಮ ಕಡಲ ತೀರಗಳು, ಮೂಕವಿಸ್ಮಿತರನ್ನಾಗಿಸುವ ಸಿನಿಮೀಯ ದೃಶ್ಯಾವಳಿಗಳು, ಅಗಾಧ ಸಂಖ್ಯೆಯಲ್ಲಿರುವ ಸಂಗ್ರಹಾಲಯಗಳು ಮತ್ತು ಐತಿಹಾಸಿಕ ಕೋಟೆಗಳಿಂದ ತನ್ನನ್ನು ತಾನು ಗುರುತಿಸಿಕೊಂಡಿದ್ದು, ಭಾರತದ ಶ್ರೀಮಂತ ಐತಿಹಾಸಿಕ ಹಿನ್ನಿಲೆಗೆ ಅಪಾರವಾದ ಕೊಡುಗೆ ನೀಡಿದೆ.ಕೆಲವು ಸಿದ್ಧಾಂತಗಳ ಪ್ರಕಾರ, ಮಹಾರಾಷ್ಟ್ರವು 'ಮಹಾ' ಮತ್ತು 'ರಾಷ್ಟ್ರ' ಎಂಬ ಎರಡು ಪದಗಳ ಸಂಯೋಗದಿಂದ ರೂಪಿತವಾಗಿದ್ದು, ಸಂಕೃತ ಭಾಷೆಯು ಮಹಾ ಪದಕ್ಕೆ ಮಹಾನ್, ಉತ್ತಮ, ಶ್ರೇಷ್ಠ ಎಂಬೆಲ್ಲ ಅರ್ಥ ಕೊಟ್ಟರೆ, ರಾಷ್ಟ್ರ ಪದದ ಮೂಲವನ್ನು ರಾಷ್ಟ್ರಕೂಟರ ಆಡಳಿತದಲ್ಲಿ ಕಾಣಬಹುದಾಗಿದೆ. ಇನ್ನು ಕೆಲವರ ಪ್ರಕಾರ, ರಾಷ್ಟ್ರ ಪದವು ಸಂಸ್ಕೃತದಲ್ಲಿ ದೇಶ, ನಾಡು ಎಂಬ ಅರ್ಥವನ್ನು ಕೊಡುತ್ತದೆ.

ಸುಪ್ರಸಿದ್ಧ ಇತಿಹಾಸ

ಮಹಾರಾಷ್ಟ್ರದ ಇತಿಹಾಸವು ಸುಮಾರು ಕ್ರಿ.ಪೂ 2 ನೇ ಶತಮಾನ ಅಂದರೆ ಬೌದ್ಧ ಗುಹೆಗಳು ಆಗತಾನೆ ನೆಲೆಕಂಡ ಸಮಯಕ್ಕೆ ಕೊಂಡೊಯ್ಯುತ್ತದೆ. ಪ್ರಸಿದ್ಧ ಚೀನಾ ಯಾತ್ರಿಕ ಹೂವಾನ್ ತ್ಸಾಂಗ್ 7 ನೇ ಶತಮಾನದಲ್ಲಿ ಮಹಾರಾಷ್ಟ್ರದ ಬಗ್ಗೆ ದಾಖಲಿಸಿದ ಮೊದಲನೆ ವ್ಯಕ್ತಿಯಾಗಿದ್ದಾನೆ. ಇತಿಹಾಸದ ಪ್ರಕಾರ, ಈ ರಾಜ್ಯವು ತನ್ನ ಮೊದಲನೆ ಹಿಂದು ಅರಸನನ್ನು 6 ನೇ ಶತಮಾನಕ್ಕೆ ಹೊಂದಿತ್ತು.ಈ ರಾಜ್ಯವನ್ನಾಳಿದ ಹಲವು ಆಡಳಿತಗಾರರಲ್ಲಿ ಅತ್ಯಂತ ಪ್ರಮುಖವಾಗಿರುವ ವ್ಯಕ್ತಿ ಎಂದರೆ ಛತ್ರಪತಿ ಶಿವಾಜಿ ಮಹಾರಾಜ. ಮರಾಠಾ ಸಾಮ್ರಾಜ್ಯದ ಸಂಸ್ಥಾಪಕನಾದ ಶಿವಾಜಿಯು ಮುಘಲರೊಡನೆ ವೀರಾವೇಶದಿಂದ ಹೋರಾಡಿದ ಸಮರ್ಥ ರಾಜ ಮತ್ತು ಹಲವು ಕೋಟೆಗಳನ್ನು ರಾಜ್ಯಾದ್ಯಂತ ನಿರ್ಮಿಸಿದ ದಕ್ಷ ಆಡಳಿತಗಾರ. ಶಿವಾಜಿಯ ಮರಣಾನಂತರ ಅವನ ಮಗನಾದ ಸಂಭಾಜಿಯು ಮಹಾರಷ್ಟ್ರವನ್ನು ಆಳಿದ್ದು ತದನಂತರ ಪೇಶ್ವೆ ಆಡಳಿತಗಾರರು ಇದರ ಚುಕ್ಕಾಣಿಯನ್ನು ಹಿಡಿದರು.ಆದರೆ, 1804 ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಜನರಲ್ ವೆಲ್ಲೆಸ್ಲಿ ಮಹಾರಾಷ್ಟ್ರ ಹಾಗು ಡೆಕ್ಕನ್ ಪ್ರದೇಶಗಳಲ್ಲಿ ಮಿಲಿಟರಿ ಆಡಳಿತವನ್ನು ಸ್ಥಾಪಿಸಿದ ಮತ್ತು ಪೇಶ್ವೆಗಳು ಈ ಪ್ರದೇಶದಲ್ಲಿ ಹೆಸರಿಗೆ ಮಾತ್ರ ಆಡಳಿತಗಾರರಾಗಿ ಉಳಿದುಕೊಂಡರು. ಇಂದು ಮಹಾರಾಷ್ಟ್ರ ಎಂದು ಗುರುತಿಸಿಕೊಳ್ಳುವ ಈ ರಾಜ್ಯವು ರೂಪ ತಳೆದಿದ್ದು 1960 ರಲ್ಲಿ ಮತ್ತು ಬಾಂಬೆ (ಈಗಿನ ಮುಂಬೈ) ಯನ್ನು ಇದರ ರಾಜಧಾನಿಯನ್ನಾಗಿ ಮಾಡಲಾಯಿತು.

ಮಹಾರಾಷ್ಟ್ರ - ಐತಿಹಾಸಿಕ ಕೋಟೆಗಳು, ಗಿರಿಧಾಮಗಳು ಮತ್ತು ಇನ್ನೂ ಅನೇಕ ಕೌತುಕಗಳನ್ನೊಳಗೊಂಡ ಭೂಮಿ

ಮಹಾರಾಷ್ಟ್ರವು ತನ್ನ ಒಡಲಲ್ಲಿ ನಿಬ್ಬೆರಗಾಗಿಸುವಂತಹ ವೈವಿಧ್ಯತೆಗಳನ್ನು ಹೊತ್ತಿದ್ದು, ಮಂಜಿನಿಂದ ಕೂಡಿರುವ ಪರ್ವತಗಳು, ಥಳಥಳಿಸುವ ದಟ್ಟ ಕಾಡುಗಳು, ಹುಬ್ಬೇರಿಸುವ ಬೃಹದಾಕಾರದ ಕೋಟೆಗಳು ಮತ್ತು ಪವಿತ್ರ ಯಾತ್ರಾ ಕ್ಷೇತ್ರಗಳು ಈ ವೈವಿಧ್ಯತೆಯನ್ನು ಸಂತೃಪ್ತವಾಗಿ ಪುಷ್ಟಿಕರಿಸುವ ಉದಾಹರಣೆಗಳಾಗಿ ಕಂಡುಬರುವುದರಲ್ಲಿ ಯಾವುದೆ ಅನುಮಾನವಿಲ್ಲ.ಈ ರಾಜ್ಯದಲ್ಲಿರುವ ಸುಮಾರು ೩೫೦ ಕೋಟೆಗಳು ಮರಾಠಾ ಆಡಳಿತಗಾರರ ಅಂದಿನ ವೈಭವದ ಕಾಲಕ್ಕೆ ಇಂದಿಗೂ ಸಾಕ್ಷಿಗಳಾಗಿ ನಿಂತಿವೆ. ಈ ಕೋಟೆಗಳಲ್ಲಿ ಬಹುತೇಕವು ಛತ್ರಪತಿ ಶಿವಾಜಿಗೆ ಸಂಬಂಧಿಸಿದ್ದು, ಅವುಗಳಲ್ಲಿ ಶಿವಾಜಿಯು 13 ಕೋಟೆಗಳಿಗೆ ಒಡೆಯನಾಗಿದ್ದನೆಂದು ತಿಳಿಯಲಾಗಿದೆ. ಅವಳಿ ಕೋಟೆಗಳಾದ ಸಿಂಧುದುರ್ಗ ಮತ್ತು ವಿಜಯದುರ್ಗ ಗಳನ್ನು ರಾಜ್ಯದ ಅತ್ಯುತ್ತಮ ಕಡಲ ತೀರದ ಕೋಟೆಗಳೆಂದು ಪರಿಗಣಿಸಲಾಗಿದೆ.

ಪುಣೆಯಿಂದ 120 ಕಿ.ಮೀ ದೂರದಲ್ಲಿರುವ ಶಿವನೇರಿ ಕೋಟೆಯು ಮತ್ತೊಂದು ಮಾದರಿಯ (ಆದರ್ಶ) ಕೋಟೆಯಾಗಿದ್ದು ಶಿವಾಜಿಯ ಜನ್ಮ ಸ್ಥಳವಾಗಿದೆ. ಪ್ರತಾಪಗಡ್ ಕೋಟೆಯು ಶಿವಾಜಿ ಹಾಗು ಅಫ್ಜಲ್ ಖಾನ್ ರ ನಡುವಿನ ಯುದ್ಧಕ್ಕೆ ಸಾಕ್ಷಿಯಾಗಿ ನಿಂತಿದೆ. ಇನ್ನುಳಿದ ಇತರೆ ಕೆಲವು ಪ್ರಮುಖ ಕೋಟೆಗಳಾದ ಅಜಿಂಕ್ಯತಾರಾ ಕೋಟೆ, ಮುರುದ್ ಜಂಜೀರಾ ಕೋಟೆ, ಹರಿಶ್ಚಂದ್ರಗಡ್ ಕೋಟೆ, ಲೋಹ್ಗಡ್ ಮತ್ತು ವಿಸಾಪುರ್ ಕೋಟೆಗಳು ಉತ್ತಮ ಚಾರಣಯೋಗ್ಯ ಪ್ರದೇಶಗಳಾಗಿ ಮನ ಸೆಳೆಯುತ್ತವೆ.ಸಹ್ಯಾದ್ರಿ ಪರ್ವತ ಶ್ರೇಣಿಯ ಹಾದಿಯಲ್ಲಿ ಹಲವಾರು ವಿಹಂಗಮ ಗಿರಿಧಾಮಗಳನ್ನು ಹೊಂದಿರುವ ಮಹಾರಾಷ್ಟ್ರವನ್ನು ಪ್ರವಾಸಿಗರು ಭೇಟಿ ಮಾಡದೆ ಇರಲಾರರು.

ಇಲ್ಲಿರುವ ಕೆಲವು ಗಿರಿಧಾಮಗಳು ಉತ್ಕೃಷ್ಟಮಟ್ಟದ ಪ್ರಾಕೃತಿಕ ಸೊಬಗಿನಿಂದ ಆವೃತವಾಗಿದ್ದು, ಮೂಕವಿಸ್ಮಿತರನ್ನಾಗಿಸುವ ಅದ್ಭುತವಾದ ದೃಶ್ಯಾವಳಿಗಳನ್ನು ಹೊಂದಿವೆ. ಇವುಗಳಲ್ಲಿ ಬಹುತೇಕ ಗಿರಿಧಾಮಗಳು ಬ್ರಿಟೀಷರಿಂದ ಶೋಧಿಸಲ್ಪಟ್ಟಿದ್ದು ಅವರು ಅವುಗಳನ್ನು ತಮ್ಮ ರಜಾತಾಣಗಳನ್ನಾಗಿ ಮಾಡಿಕೊಂಡಿದ್ದರು.ಇಲ್ಲಿ ಕಾಣಸಿಗುವ ಕೆಲವು ಪ್ರಮುಖ ಗಿರಿಧಾಮಗಳೆಂದರೆ, ಲೋನಾವಲಾ, ಖಂಡಾಲಾ, ಮಾಥೇರಾನ್, ಪಂಚಗಣಿ, ಮಹಾಬಲೇಶ್ವರ, ಸಾವಂತವಾಡಿ, ಜವಾಹರ ಮತ್ತು ತೋರಣಮಲ್. ಈ ಎಲ್ಲ ಗಿರಿಧಾಮಗಳು ಮುಂಬೈ, ಪುಣೆನಂತಹ ಪ್ರಮುಖ ಶಹರುಗಳಿಗೆ ಹತ್ತಿರವಾಗಿರುವುದರಿಂದ ಪ್ರವಾಸಿ ಆಕರ್ಷಣೆಯಾಗಿರುವುದಲ್ಲದೆ, ನಗರದ ಜನರಿಗೆ ಪ್ರಮುಖ ವಿಕೆಂಡ್ ತಾಣಗಳಾಗಿಯೂ ಸೆಳೆಯುತ್ತವೆ.

ಇತಿಹಾಸ ಪ್ರಿಯರು ಅಧಿಕ ಪ್ರಮಾಣದಲ್ಲಿ ಸಂಗ್ರಹಾಲಯಗಳನ್ನು ಮಹಾರಾಷ್ಟ್ರದಲ್ಲಿ ನೋಡಬಹುದು. ರಾಜ್ಯದಲ್ಲಿರುವ 13 ಸಂಗ್ರಹಾಲಯಗಳಲ್ಲಿ ಪ್ರಮುಖವಾದವುಗಳೆಂದರೆ ಪುಣೆಯ ಟ್ರೈಬಲ್ ಮ್ಯೂಸಿಯಂ, ಮುಂಬೈನ ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಂ ಮತ್ತು ಜಹಾಂಗೀರ್ ಆರ್ಟ್ ಗ್ಯಾಲರಿ. ನಾಶಿಕ್ ನಲ್ಲಿರುವ ಕಾಯಿನ್(Coin) ಮ್ಯೂಸಿಯಂ ತನ್ನದೆ ಪ್ರಕಾರದ ಒಂದು ವಿಶೀಷ್ಟ ಸಂಗ್ರಹಾಲಯವಾಗಿದ್ದು ಭಾರತದ ನಾಣ್ಯಗಳ ಇತಿಹಾಸ ಕುರಿತು ಬೆಳಕನ್ನು ಚೆಲ್ಲುತ್ತದೆ. ಇಲ್ಲಿರುವ ಇತರೆ ಸಂಗ್ರಹಾಲಯಗಳೆಂದರೆ ದಿ ನ್ಯಾಷನಲ್ ಮರಿಟೈಮ್ ಮ್ಯೂಸಿಯಂ, ಶಹಾಜಿ ಛತ್ರಪತಿ ಮ್ಯೂಸಿಯಂ ಮತ್ತು ಮಣಿ ಭವನ್ ಮಹಾತ್ಮಾ ಗಾಂಧಿ ಮ್ಯೂಸಿಯಂ.

ಅರೇಬಿಯನ್ ಸಮುದ್ರದೊಡನೆ ಚಾಚಿಕೊಂಡಿರುವ ಮಹಾರಾಷ್ಟ್ರದ ಉದ್ದನೆಯ ಕರಾವಳಿ ತೀರವು ಅನೇಕ ಮನೋಹರವಾದ ಕಡಲ ತೀರಗಳನ್ನು ಹೊಂದಿದೆ. ಮೃದುವಾದ ಮುಂಬೈಮರೀನ್ ಡ್ರೈವ್ ಚೌಪಾಟಿ ತೀರವೆ ಆಗಿರಲಿ ಅಥವಾ ಜಡವಾದ ಬಸ್ಸೇನ್ ತೀರವೇ ಆಗಿರಲಿ ಪ್ರವಾಸಿಗರನ್ನು ಮೋಹಗೊಳಿಸದೆ ಇರಲಾರವು. ವೆಲ್ನೇಶ್ವರ್ ಮತ್ತು ಶ್ರೀವರ್ಧನ-ಹರಿಹರೇಶ್ವರ ಕಡಲ ತೀರಗಳು ಸಾಹಸ ಪ್ರಿಯರಿಗೆ ನೆಚ್ಚಿನ ತಾಣವಾಗಿದ್ದು ಜಲಕ್ರೀಡೆಗೆ ಅವಕಾಶಗಳನ್ನು ಹೊಂದಿವೆ. ದಹಾನು-ಬೊರ್ಡಿ ಮತ್ತು ವಿಜಯ-ಸಿಂಧುದುರ್ಗ ಕಡಲ ತೀರಗಳು ಪ್ರಶಾಂತಮಯ ವಾತಾವರಣವನ್ನು ಹೊಂದಿದ್ದು ವಿಶ್ರಾಂತಿಗಾಗಿ ಹೇಳಿ ಮಾಡಿಸಿದ ತಾಣಗಳಾಗಿವೆ.

ಮಹಾರಾಷ್ಟ್ರವು ಒಂದು ಪ್ರಮುಖ ಧಾರ್ಮಿಕ ತಾಣ. ಇಲ್ಲಿ ಹಲವಾರು ಪುಣ್ಯ ಕ್ಷೇತ್ರಗಳಿವೆ. ಪ್ರಸಿದ್ಧ ಕುಂಭ ಮೇಳವನ್ನು ಪ್ರತಿ 3 ವರ್ಷಕ್ಕೊಮ್ಮೆ ನಾಶಿಕ್ ನಲ್ಲಿ ಆಚರಿಸಲಾದರೆ, ಮುಂಬೈನಲ್ಲಿರುವ ಮುಂಬಾದೇವಿ ದೇವಸ್ಥಾನವು ಪ್ರಸಿದ್ಧ ದೇವಾಲಯಗಳಲ್ಲೊಂದಾಗಿದೆ. ಔರಂಗಾಬಾದ್ ನಲ್ಲಿರುವ ಕೈಲಾಶ್ ದೇವಸ್ಥಾನ, ಶಿರಡಿ ಕ್ಷೇತ್ರ, ಪಂಢರಾಪುರ್ ಮತ್ತು ಬಾಹುಬಲಿಗಳು ಕೂಡ ಹೆಸರುವಾಸಿಯಾಗಿದ್ದು ಭಕ್ತ ಸಮೂಹದಲ್ಲಿ ಪ್ರಸಿದ್ಧವಾಗಿವೆ.

ಇಲ್ಲಿರುವ ಹಾಜಿ ಅಲಿ ಸಮಾಧಿಯು ಸುಮಾರು 800 ವರ್ಷಗಳಷ್ಟು ಹಳೆಯದಾಗಿದ್ದರೆ, ನಾಂದೇಡಿನ ತಖ್ತ್ ಸಚಖಂಡ್ ಶ್ರೀ ಹಜೂರ್ ಅಬಚಲ್ ನಗರ್ ಸಾಹೀಬ್ ರಾಜ್ಯದ ಪ್ರಮುಖ ಗುರುದ್ವಾರಾಗಳಲ್ಲೊಂದಾಗಿದೆ. ಪುಣೆಯಲ್ಲಿರುವ ಒಶೊ ಆಶ್ರಮವು ಒಂದು ಆಧ್ಯಾತ್ಮಿಕ ಕೇಂದ್ರವಾಗಿದ್ದು ಧ್ಯಾನ ಹಾಗು ಯೋಗಗಳಿಗೆ ತರಬೇತಿಯನ್ನು ನೀಡಲಾಗುತ್ತದೆ. ಮುಂಬೈನಲ್ಲಿರುವ ಮೌಂಟ್ ಮೇರಿ ಒಂದು ಸುಪ್ರಸಿದ್ಧ ಚರ್ಚ್ ಆಗಿದ್ದು ಪ್ರತಿ ವರ್ಷ ಜನಸಾಗರದಿಂದ ತುಂಬಿರುವ ಬಾಂದ್ರಾ ಫೇರ್ ಅನ್ನು ಆಚರಿಸಲಾಗುತ್ತದೆ.

ಅಜಂತಾ ಮತ್ತು ಎಲ್ಲೋರಾ, ಎಲಿಫಂಟಾ ಗುಹೆಗಳು, ಮಹಾಲಕ್ಷ್ಮಿ ದೇವಸ್ಥಾನ ಮತ್ತು ಗೇಟ್ ವೇ ಆಫ್ ಇಂಡಿಯಾ ಮಹಾರಾಷ್ಟ್ರದ ಆದರ್ಶಮಯ ಸ್ಥಳಗಳಾಗಿದ್ದು, ಖಂಡಿತವಾಗಿಯು ಭೇಟಿ ನೀಡಲೆ ಬೇಕಾದ ತಾಣಗಳಾಗಿವೆ.ಮಹಾರಾಷ್ಟ್ರವು ಭಾರತದ ಪ್ರಕಾಶಿಸುತ್ತಿರುವ ರಾಜ್ಯವಾಗಿದೆ. ಇಲ್ಲಿನ ವೈವಿಧ್ಯಮಯ ಸಂಸ್ಕೃತಿಯು ಇಲ್ಲಿರುವ ವಾಸ್ತುಶಿಲ್ಪ ಹಾಗು ಪ್ರಾಕೃತಿಕ ಸೊಬಗಿಗೆ ಅನುಗುಣವಾಗಿದೆ. ವಿವಿಧ ಭಾಷೆ, ಸಂಸ್ಕೃತಿ, ಖಾದ್ಯ, ಆಚಾರ-ವಿಚಾರಗಳು ಈ ರಾಜ್ಯದಲ್ಲಿ ಹದವಾಗಿ ಬೆರೆತಿದ್ದು ಇತರೆ ರಾಜ್ಯಗಳ ಹಾಗೆ ಭಾರತೀಯತೆಯನ್ನು ಪ್ರತಿಬಿಂಬಿಸುತ್ತದೆ. ಖಂಡಿತವಾಗಿಯೂ ಭೇಟಿ ನೀಡಲೆ ಬೇಕಾದ ರಾಜ್ಯಗಳಲ್ಲಿ ಮಹಾರಾಷ್ಟ್ರವು ಒಂದಾಗಿದ್ದು, ಇಲ್ಲಿನ ನೆನಪುಗಳು ಸದಾ ನಿಮ್ಮ ಜೀವನದಲ್ಲಿ ಹಾಸುಹೊಕ್ಕಾಗಿರುತ್ತವೆ!

ಮಹಾರಾಷ್ಟ್ರ ಸ್ಥಳಗಳು

  • ಗಣಪತಿಪುಲೆ 17
  • ಸಿಂಧುದುರ್ಗ 14
  • ಚಿಪ್ಲುನ್ 11
  • ಮುರುದ್ ಜಂಜೀರಾ 29
  • ಬೋರ್ಡಿ 10
One Way
Return
From (Departure City)
To (Destination City)
Depart On
19 Mar,Tue
Return On
20 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Mar,Tue
Check Out
20 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Mar,Tue
Return On
20 Mar,Wed