Search
  • Follow NativePlanet
Share
ಮುಖಪುಟ » ಸ್ಥಳಗಳು » ತಂಜಾವೂರು » ಹವಾಮಾನ

ತಂಜಾವೂರು ಹವಾಮಾನ

ತಂಜಾವೂರಿನಲ್ಲಿ ಅಕ್ಟೋಬರ್ ನಿಂದ ಮಾರ್ಚ್ ವರೆಗೆ ಸೆಖೆ ಕಡಿಮೆಯಿದ್ದು, ಈ ಸಮಯದಲ್ಲಿ  ಭೇಟಿ ನೀಡುವುದು ಉತ್ತಮ. ಜೂನ್ ನಿಂದ ಸೆಪ್ಟೆಂಬರ್ ವರೆಗೆ ಶೈತ್ಯವಿದ್ದರೂ ವಾತಾವರಣ ಹಿತಕರವಾಗಿರುವುದರಿಂದ, ಈ ಸಮಯದಲ್ಲೂ ಭೇಟಿ ನೀಡಬಹುದು.

ಬೇಸಿಗೆಗಾಲ

ತಂಜಾವೂರಿನಲ್ಲಿ ಬೇಸಿಗೆಗಾಲ ತೀಕ್ಷ್ಣವಾಗಿದ್ದು, ಉಷ್ಣತೆ 25 ರಿಂದ 40 ಡಿಗ್ರಿ ಸೆಲ್ಷಿಯಸ್ ವರೆಗೆ ತಾಪಮಾನ ಇರುತ್ತದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಇಲ್ಲಿಗೆ ಭೇಟಿ ನೀಡುವುದನ್ನು ದೂರವಿರಿಸುವುದು ಒಳಿತು. ಟೀ-ಶರ್ಟ್ ಮತ್ತೆ ಶಾರ್ಟ್ಸ್ ಬೇಸಗೆಗಾಲದಲ್ಲಿ ಧರಿಸಲು ಉತ್ತಮ.

ಮಳೆಗಾಲ

ತಂಜಾವೂರಿನಲ್ಲಿ ಮಳೆಗಾಲದಲ್ಲಿ ಸಣ್ಣಗೆ ಮಳೆ ಸುರಿಯುತ್ತದೆ. ಇದು ಪ್ರಕೃತಿ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ, ಹಗಲಿನ ಬಿಸಿ ವಾತಾವರಣವನ್ನು ತಂಪುಗೊಳಿಸುತ್ತದೆ. ನೀವು ಜೂನ್-ಸೆಪ್ಟೆಂಬರ್ ತಿಂಗಳಲ್ಲಿ ಭೇಟಿ ನೀಡುವುದಿದ್ದಲ್ಲಿ ಛತ್ರಿ ತೆಗೆದುಕೊಂಡು ಹೋಗಲು ಮರೆಯದಿರಿ.

ಚಳಿಗಾಲ

ತಂಜಾವೂರಿನಲ್ಲಿ ಚಳಿಗಾಲದಲ್ಲಿ ಉಷ್ಣತೆ ಸಾಮಾನ್ಯವಾಗಿ 20 ರಿಂದ 30 ಡಿಗ್ರಿ ಸೆಲ್ಶಿಯಸ್ ವರೆಗೆ ಇರುತ್ತದೆ. ತಮಿಳುನಾಡಿನಲ್ಲಿ, ಡಿಸೆಂಬರ್ ಮತ್ತು ಜನವರಿ ತಿಂಗಳಿನಲ್ಲಿ ಮಳೆ ಸಂಭವವಿರುವ ಕಾರಣ, ಚಳಿಗಾಲದಲ್ಲಿ ಭೇಟಿ ನೀಡುವವರು ಛತ್ರಿ ಅಥವಾ ರೈನ್ ಕೋಟ್ ಕೊಂಡು ಹೋಗುವುದು ಉತ್ತಮ.