Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುಪತಿ » ಹವಾಮಾನ

ತಿರುಪತಿ ಹವಾಮಾನ

ಮಳೆಗಾಲ ಹಾಗೂ ಚಳಿಗಾಲದಲ್ಲಿ ಇಲ್ಲಿಗೆ ಭೇಟಿ ನೀಡುವುದು ಉತ್ತಮ. ನವೆಂಬರ್‌ನಿಂದ ಫೆಬ್ರವರಿ ನಡುವಿನ ಅವಧಿ ಭೇಟಿಗೆ ಉತ್ತಮ ಸಮಯ. ಧಾರ್ಮಿಕ ನಂಬಿಕೆ ಉಳ್ಳವರು, ಭಕ್ತರ ಪಾಲಿಗೆ ತಿರುಪತಿಗೆ ಜೂನ್‌ನಿಂದ ಸೆಪ್ಟೆಂಬರ್‌ ಅವಧಿಯೂ ಸೂಕ್ತ. ಅತ್ಯಂತ ಜನಪ್ರಿಯ ಆಚರಣೆಯಾದ ಬ್ರಹ್ಮೋತ್ಸವಂ ನಡೆಯುವುದು ಇದೇ ಸಂದರ್ಭದಲ್ಲಿ.

ಬೇಸಿಗೆಗಾಲ

ಪ್ರವಾಸಕ್ಕೆ ಯೋಗ್ಯ ವಾತಾವರಣ ಇರದ ಕಾರಣ ಈ ಸಮಯವನ್ನು ಕೈ ಬಿಡುವುದು ಒಳಿತು. ಅತಿಯಾದ ಉಷ್ಣತೆ ಇರುವುದರಿಂದ ವಾತಾವರಣ ಸಹನೀಯವಾಗಿರುವುದಿಲ್ಲ. ಈ ಸಂದರ್ಭದಲ್ಲಿ ಅತಿ ಹೆಚ್ಚು ಉಷ್ಣತೆ ದಾಖಲಾಗುತ್ತದೆ. 40 ಡಿಗ್ರಿ ಸೆಲ್ಶಿಯಸ್‌ನಿಂದ 45 ಡಿಗ್ರಿ ಸೆಲ್ಶಿಯಸ್‌ವರೆಗೂ ಇದು ತಲುಪುತ್ತದೆ. ಇದು ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಅನ್ನುವುದು ತಿಳಿದಿರಲಿ.

ಮಳೆಗಾಲ

ಮಳೆಗಾಲ ಇಲ್ಲಿ ಜುಲೈನಿಂದ ಆರಂಭವಾಗಿ ಸೆಪ್ಟೆಂಬರ್‌ಗೆ ಕೊನೆಯಾಗುತ್ತದೆ. ಇದಲ್ಲದೇ ಅಕ್ಟೋಬರ್‌ ಹಾಗೂ ನವೆಂಬರ್‌ ತಿಂಗಳಲ್ಲೂ ಕೆಲವೊಮ್ಮೆ ಮಳೆಯಾಗುವುದು ಇದೆ. ಸಣ್ಣ ಮಳೆ ಆಗುವುದರಿಂದ ತಿರುಪತಿ ಮನಸ್ಸಿಗೆ ಮುದ ನೀಡುವ ವಾತಾವರಣವನ್ನು ಹೊಂದಿರುತ್ತದೆ.

ಚಳಿಗಾಲ

ಡಿಸೆಂಬರ್‌ ತಿಂಗಳಿಂದ ಫೆಬ್ರವರಿವರೆಗೆ ಚಳಿಗಾಲ ಇರುತ್ತದೆ. ಇದು ತಿರುಪತಿಗೆ ಭೇಟಿ ನೀಡಲು ಅತ್ಯಂತ ಸಕಾಲ. ಈ ಸಂದರ್ಭದಲ್ಲಿ ವಾತಾವರಣದ ಉಷ್ಣತೆ 15 ಡಿಗ್ರಿ ಸೆಲ್ಶಿಯಸ್‌ನಿಂದ 30 ಡಿಗ್ರಿ ಸೆಲ್ಶಿಯಸ್‌ ನಡುವೆ ಇರುತ್ತದೆ. ಆಕರ್ಷಕ ವಾತಾವರಣ ಪ್ರವಾಸಿಗರಿಗೆ ಅತಿ ಉತ್ತಮ ಅನುಭವ ನೀಡುತ್ತದೆ.