Search
  • Follow NativePlanet
Share
» »ಭಾರತದಲ್ಲಿ 2022 ರ ಗಣೇಶ ಚತುರ್ಥಿಯ ಪ್ರಯುಕ್ತ ವಿವಿಧ ಸ್ಥಳಗಳಲ್ಲಿಯ ವೈಭವ ನೋಡೋಣ ಬನ್ನಿ

ಭಾರತದಲ್ಲಿ 2022 ರ ಗಣೇಶ ಚತುರ್ಥಿಯ ಪ್ರಯುಕ್ತ ವಿವಿಧ ಸ್ಥಳಗಳಲ್ಲಿಯ ವೈಭವ ನೋಡೋಣ ಬನ್ನಿ

ಭಾರತದಲ್ಲಿ ಗಣೇಶ ಚತುರ್ಥಿಯನ್ನು ಹೇಗೆ ಆಚರಿಸುತ್ತಾರೆ ಎಂದು ನೋಡೋಣ

ಗಣೇಶ ಚತುರ್ಥಿ ಭಾರತದಲ್ಲಿ ಬಹು ನಿರೀಕ್ಷಿತ ಹಬ್ಬಗಳಲ್ಲಿ ಒಂದೆನಿಸಿದ್ದು, ಬಹಳ ಉತ್ಸಾಹ ಮತ್ತು ಬೃಹತ್ ಆಡಂಬರದಿಂದ ಹಾಗೂ ಆನಂದದಿಂದ ಆಚರಿಸಲಾಗುತ್ತದೆ. ಈ ಹಿಂದೂ ಹಬ್ಬವನ್ನು ಆಚರಿಸಲು ರಾಷ್ಟ್ರದಾದ್ಯಂತ ಜನರು ಸಾಕಷ್ಟು ಉತ್ಸಾಹ, ಚೈತನ್ಯ ಮತ್ತು ಉತ್ಸಾಹದಿಂದ ಭಾಗವಹಿಸುತ್ತಾರೆ.

ಗಣೇಶನ ಜನ್ಮದಿನವನ್ನು ಬಹುದೊಡ್ಡ ಆಚರಣೆಗಳು, ಜಾತ್ರೆಗಳು ಮತ್ತು ವೈಭವ ಹಾಗೂ ಉತ್ಸವಗಳೊಂದಿಗೆ ಸ್ಮರಿಸಲಾಗುತ್ತದೆ. ಭಾರತದಲ್ಲಿ ಮಾತ್ರವಲ್ಲದೆ ಗಣೇಶ ಚತುರ್ಥಿಯನ್ನು ಪ್ರಪಂಚದಾದ್ಯಂತ ಅದರಲ್ಲೂ ವಿಶೇಷವಾಗಿ ನೇಪಾಳ, ಕೆನಡಾ, ಮಾರಿಷಿಯಸ್ ಸಿಂಗಾಪುರ ಮತ್ತು ಮಲೇಶ್ಯಾ ಮುಂತಾದ ಕಡೆಗಳಲ್ಲಿಯೂ ಸಂಭ್ರಮಾಚರಣೆಗಳಿಂದ ಆಚರಿಸಲಾಗುತ್ತದೆ.

ಭಾರತ ರಾಷ್ಟ್ರದ ಮೂಲೆ ಮೂಲೆಗಳಲ್ಲಿಯೂ ಗಣೇಶ ಚತುರ್ಥಿಯು ವಿಭಿನ್ನ ರೀತಿಯಲ್ಲಿ ಆಚರಿಸಲ್ಪಡುತ್ತದೆ. ಇದು ಗಣೇಶನ ಪ್ರತಿಮೆಯನ್ನು ಅಲಂಕರಿಸುವುದರಿಂದ ಹಿಡಿದು ಭಕ್ತರು ಪೂಜೆಮಾಡುವವರೆಗೆ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ನೀವು ಪ್ರಯಾಣಿಸಿ ನೋಡಿದಲ್ಲಿ , ಒಂದು ಕಡೆಯಿಂದ ಇನ್ನೊಂದು ಕಡೆಗೆ ವಿಭಿನ್ನವಾಗಿದೆ. ಗಣೇಶ ಚತುರ್ಥಿಯನ್ನು ಕನ್ನಡದಲ್ಲಿ ಗಣೇಶ ವಿಸರ್ಜನೆ, ತೆಲುಗಿನಲ್ಲಿ ವಿನಾಯಕ ನಿಮಾರ್ಜನ ಅಥವಾ ವಿನಾಯಕ ನಿಮಜ್ಜನಂ, ಮರಾಠಿಯಲ್ಲಿ ಗಣೇಶ ವಿಸರ್ಜನ ಮತ್ತು ತಮಿಳಿನಲ್ಲಿ ವಿನಾಯಗ ಚತುರ್ಥಿ ಮುಂತಾದ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ.

ಈ ವೈಭವೋಪೇತ ಗಣೇಶ ಚತುರ್ಥಿಯ ಆಚರಣೆಗಳಲ್ಲಿ ಪಾಲ್ಗೊಳ್ಳಲು ಜಗತ್ತಿನಾದ್ಯಂತದ ಪ್ರವಾಸಿಗರು ಭೇಟಿ ಕೊಡುತ್ತಾರೆ. ಈ ಹಬ್ಬವು ಮಹಾರಾಷ್ಟ್ರದ ಪ್ರಮುಖ ಹಬ್ಬವಾಗಿದ್ದರೂ ಸಹ ರಾಷ್ಟ್ರದ ಎಲ್ಲಾ ಭಾಗಗಳಲ್ಲಿಯೂ ಇದನ್ನು ರಾಷ್ಟ್ರದಾದ್ಯಂತ ನಿಷ್ಪಕ್ಷಪಾತವಾಗಿ ಆಚರಿಸಲಾಗುತ್ತದೆ. ವಿದೇಶಿ ಪ್ರವಾಸಿಗರು ಆಚರಣೆಯ ಸಮಯದಲ್ಲಿ ನಡೆಯುವ ಮೆರವಣಿಗೆಗಳನ್ನು ಆನಂದಿಸುತ್ತಾರೆ.

ಈ ಗಣೇಶ ಚತುರ್ಥಿ 2022 ರಲ್ಲಿ ಭಾರತದಾದ್ಯಂತ ನಮ್ಮೊಂದಿಗೆ ಪ್ರಯಾಣಿಸಿ. ಭಾರತದ ಈ ಅಸಮಾನ್ಯ 'ವಿವಿಧತೆಯಲ್ಲಿ ಏಕತೆ' ಎಂಬ ಅಂಶವನ್ನು ಸಾರುವ ಈ ಹಬ್ಬದಲ್ಲಿ ಪಾಲ್ಲ್ಗೊಳ್ಳಿ.

ಮುಂಬೈ

ಮುಂಬೈ

ಗಣೇಶ ಚತುರ್ಥಿ ಮುಂಬೈಯಲ್ಲಿ ಅತ್ಯಂತ ಪ್ರಮುಖವಾಗಿ ಆಚರಿಸಲಾಗುವ ಹಬ್ಬವಾಗಿದೆ. ಇತ್ತೀಚಿನ ದಿನಗಳಲ್ಲಿ ಇದು ಕೇವಲ ಪ್ರಸಿದ್ದ ಹಬ್ಬ ಮಾತ್ರವಾಗಿರದೆ ಕಲಾವಿದರಿಗೆ, ಉದ್ಯಮಿಗಳು ಮತ್ತು ಆಚರಣೆಗಳಿಗಾಗಿ ಮೆಗಾ ಕಾರ್ಯಕ್ರಮಗಳನ್ನು ಆಯೋಜಿಸುವ ಕಂಪನಿಗಳಿಗೆ ಆರ್ಥಿಕತೆಯ ಪ್ರಮುಖ ಸಾಧನಗಳಲ್ಲಿ ಒಂದಾಗಿದೆ. ಮೋದಕವು "ಗಣಪತಿ ಬಪ್ಪಾ ಮೋರ್ಯ, ಪುಢಾಚ್ಯ ವರ್ಷಿ ಲೌಕರ್ ಯಾ" ಎಂಬ ಪಠಣದೊಂದಿಗೆ ಸಾಗುವ ಹಬ್ಬದ ಪ್ರಮುಖ ಭಕ್ಷ್ಯವಾಗಿದೆ.

ಪೂಣೆ

ಪೂಣೆ

ಶಿವಾಜಿಯ ಕಾಲದಿಂದಲೂ ಗಣೇಶ ಚತುರ್ಥಿಯು ಪೂಣೆಯಲ್ಲಿ ವಾಸಿಸುವವರ ಅತ್ಯಂತ ಪ್ರಮುಖ ಭಾಗವಾಗಿದೆ. ಯಾವುದೇ ತಾರತಮ್ಯವಿಲ್ಲದೆ, ಹಿಂದೂಗಳನ್ನು ಹೊರತುಪಡಿಸಿ ಜೈನರು, ಕ್ರಿಶ್ಚಿಯನ್ನರು ಸಹ ಈ ಹಬ್ಬದಲ್ಲಿ ಉತ್ಸಾಹದಿಂದ ಭಾಗವಹಿಸುತ್ತಾರೆ. ಬೆಳೆಯುತ್ತಿರುವ ಕಲಾವಿದರಿಗೆ ತಮ್ಮ ಕಲೆಯನ್ನು ಪ್ರಸ್ತುತಪಡಿಸಲು ಈ ಆಚರಣೆಯು ಒಂದು ವೇದಿಕೆಯನ್ನು ಒದಗಿಸಿಕೊಡುತ್ತದೆ. ಇಂದು ಜನರು ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ಮತ್ತು ಮುತುವರ್ಜಿ ತೋರಿಸುತ್ತಿರುವ ಪರಿಣಾಮವಾಗಿ ಮಾಲಿನ್ಯ ರಹಿತ ಪರಿಸರ ಸ್ನೇಹಿ ವಸ್ತುಗಳಿಂದ ಗಣೇಶನ ಪ್ರತಿಮೆಯಗಳನ್ನು ಮಾಡುತ್ತಾರೆ.

ಕರ್ನಾಟಕ

ಕರ್ನಾಟಕ

ಕರ್ನಾಟಕದಲ್ಲಿಯೂ ಗಣೇಶ ಚತುರ್ಥಿಯು ಒಂದು ಅತ್ಯಂತ ಪ್ರಮುಖ ಹಬ್ಬಗಳಲ್ಲೊಂದಾಗಿದ್ದು ಇಲ್ಲಿ ಇದನ್ನು ವಿನಾಯಕ ಚತುರ್ಥಿ ಅಥವಾ ವಿನಾಯಕ ಚೌತಿ ಎಂದೂ ಕರೆಯಲಾಗುತ್ತದೆ. ಇಲ್ಲಿ ವಿನಾಯಕ ದೇವಾಲಯಗಳಲ್ಲಿಯೂ ಹಬ್ಬವನ್ನು ಪೂಜಿಸುವುದರ ಜೊತೆಗೆ ವಿಗ್ರಹಗಳನ್ನಿಟ್ಟೂ ಪೂಜಿಸಲಾಗುತ್ತದೆ. ಕರ್ನಾಟಕದಾದ್ಯಂತ ಹಲವಾರು ಗಣೇಶ ದೇವಾಲಯಗಳಿದ್ದು, ಈ ಹಬ್ಬದ ಸಮಯದಲ್ಲಿ ಅತ್ಯಂತ ಸುಂದರವಾಗಿ ಅಲಂಕರಿಸಲ್ಪಡುತ್ತವೆ. ಮತ್ತು ದೇವಾಲಯಗಳಲ್ಲಿಯೂ ಮೋದಕವನ್ನು ಭಕ್ತರಿಗೆ ಪ್ರಸಾದದ ರೂಪದಲ್ಲಿ ಹಂಚಲಾಗುತ್ತದೆ.

ಚತ್ತಿಸ್ಗಢ

ಚತ್ತಿಸ್ಗಢ

ಗಣೇಶ ಚತುರ್ಥಿಯು ಚತ್ತಿಸ್ಗಡದ ರಾಜ್ ನಂದಾಗಾಂವ್ ಜಿಲ್ಲೆಯಲ್ಲಿ ಹೆಚ್ಚಾಗಿ ಆಚರಿಸಲಾಗುತ್ತದೆ. ರಾಜ್ ನಂದಾಗಾಂವ್ ನ ಬೀದಿ ಬೀದಿಗಳಲ್ಲಿ ಗಣೇಶನ ಪ್ರತಿಮೆಯು ಇಲ್ಲಿ ಕಾಣಸಿಗುತ್ತದೆ. ಇಲ್ಲಿ ಜನರು ಪೆಂಡಾಲ್ ಮತ್ತು ಮನೆಗಳನ್ನು ಸುಂದರವಾದ ಹೂವುಗಳಿಂದ ಮತ್ತು ದೀಪಗಳಿಂದ ಅಲಂಕಾರ ಮಾಡುತ್ತಾರೆ. ಗಣೇಶನ ಮೂರ್ತಿಯ ವಿಸರ್ಜನೆಯು ಇಲ್ಲಿ ಅತ್ಯಂತ ಜನಪ್ರಿಯವಾಗಿದ್ದು, ಇಲ್ಲಿ ವಾಸಿಸುವ ಪ್ರತೀಯೊಬ್ಬರಲ್ಲೂ ಈ ಸಮಯದಲ್ಲಿ ಜೀವಂತಿಕೆ ಎದ್ದು ಕಾಣುತ್ತದೆ. ಮೊಹರ ಮೇಳ, ಗೂಳಿಗಳ ಓಟ ಮತ್ತು ಮಿನಾ ಬಜಾರ್ ಈ ಪ್ರದೇಶದ ಜಾತ್ರೆಗಳು ಮತ್ತು ಉತ್ಸವಗಳು, ಇದು ಗಣೇಶ ಚತುರ್ಥಿಯ ಸಮಯದಲ್ಲಿ ನಡೆಯುತ್ತದೆ.

ಚೆನ್ನೈ

ಚೆನ್ನೈ

ಚೆನ್ನೈನಲ್ಲಿ ವಿನಾಯಕ ಚತುರ್ಥಿಯೋರ್ ಗಣೇಶ ಚತುರ್ಥಿ ಚೆನ್ನೈ ನ ದೊಡ್ಡ ಹಬ್ಬವಾಗಿದೆ ಈ ಸಮಯದಲ್ಲಿ 40 ಅಡಿ ಎತ್ತರದ ಗಣೇಶನ ಪ್ರತಿಮೆಯನ್ನು ಇಟ್ಟು ಪೂಜಿಸಲಾಗುತ್ತದೆ. ಮಂತ್ರೋಚ್ಚಾರಣೆ ಮತ್ತು ಪ್ರಾರ್ಥನೆಯ ಸ್ತೋತ್ರಗಳು ಸುತ್ತಮುತ್ತಲಿನವರನ್ನು ಪವಿತ್ರ ಮತ್ತು ಧರ್ಮನಿಷ್ಠರನ್ನಾಗಿ ಮಾಡುತ್ತವೆ. ಚೆನ್ನೈನಲ್ಲಿ ಮೊದಲು ಈ ಆಚರಣೆಯು ಕೇವಲ ದೇವಾಲಯಗಳು ಮತ್ತು ಮನೆಗಳಿಗೆ ಮಾತ್ರ ಸೀಮಿತವಾಗಿದ್ದರೂ, ಇಂದು ಈ ನಗರದ ವಿವಿಧ ಮೂಲೆ ಮೂಲೆಗಳಲ್ಲಿಯೂ ವಿಗ್ರಹಗಳನ್ನು ಇರಿಸಿ ಮನೋರಂಜನಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು ಇವುಗಳು ಜನಸೇರುವ ಕೇಂದ್ರಬಿಂದುವಾಗಿದೆ.

ಅಸ್ಸಾಂ

ಅಸ್ಸಾಂ

ಅಸ್ಸಾಂ ನಲ್ಲಿ ಗಣೇಶ ಚತುರ್ಥಿಯು ವೈಭವೋಪೇತವಾಗಿ ಆಚರಿಸಲ್ಪಡುತ್ತದೆ. ಮಾನವ ಗಾತ್ರದ ಮಣ್ಣಿನಿಂದ ನಿರ್ಮಿಸಲ್ಪಟ್ಟ ಗಣಪತಿಯ ಪ್ರತಿಮೆಯನ್ನು ವಿವಿಧ ಹೂವುಗಳು ಮತ್ತು ಕೊಡುಗೆಗಳನ್ನು ಅರ್ಪಿಸುವುದರ ಮೂಲಕ ಪೂಜಿಸಲಾಗುತ್ತದೆ. ಲತಾಶಿಲ್ ಮತ್ತು ಗಣೇಶಗುರಿಯ ಗಣೇಶ ದೇವಸ್ಥಾನಗಳ ಮುಂದೆ ಸರ್ಪ ಸರತಿಯಲ್ಲಿ ಜನರ ಸಾಲುಗಳು ಕಂಡುಬರುತ್ತವೆ. ಮಂತ್ರಗಳ ಪಠಣದ ನಡುವೆ ಗಣೇಶನನ್ನು ಆರತಿ, ಕೀರ್ತನೆಯೊಂದಿಗೆ ಪ್ರಾರ್ಥಿಸಲಾಗುತ್ತದೆ. ತೆಂಗಿನಕಾಯಿ, ಬೆಲ್ಲ, ಮೋದಕಗಳು, ದೂರ್ವ ಮುಂತಾದ ಇವು ಪೂಜೆಯ ಕೆಲವು ಅಗತ್ಯ ವಸ್ತುಗಳೊಂದಿಗೆ ಗಣೇಶನನ್ನು ಪೂಜಿಸಲಾಗುತ್ತದೆ. ರಕ್ತದಾನ ಶಿಬಿರಗಳು, ಬಡವರಿಗೆ ದತ್ತಿ, ಉಚಿತ ವೈದ್ಯಕೀಯ ತಪಾಸಣೆ ಮತ್ತು ನಾಟಕ ಪ್ರದರ್ಶನಗಳು ಸಹ ಈ ಸ್ಥಳಗಳ ಒಂದು ಭಾಗವಾಗಿದೆ.

ಗುಜರಾತ್

ಗುಜರಾತ್

ಅಹಮದಾಬಾದ್, ವಡೋದರ, ಸೂರತ್ ಮತ್ತು ರಾಜ್ ಕೋಟ್ ಇವು ಗಣೇಶ ಚತುರ್ಥಿ ಅಥವಾ ಗಣೇಶೋತ್ಸವ ನಡೆಸುವ ಗುಜರಾತ್ ನ ಪ್ರಮುಖ ಸ್ಥಳಗಳು. ಭಜನ್, ಗರ್ಬಾ, ಕಥಾವೃತಾ, ಲೋಕ್ ದಾಯ್ರೋ, ಲಕ್ಕೀ ಡ್ರಾ, ಗಾಯನ ಮತ್ತು ಇನ್ನಿತರ ಸಾಂಪ್ರದಾಯಿಕ ಸ್ಪರ್ಧೆಗಳನ್ನು ಈ ಹಬ್ಬದ ಸಮಯದಲ್ಲಿ ನಡೆಸಲಾಗುತ್ತದೆ ಹಾಗೂ ಇವು ಗಣೇಶ ಚತುರ್ಥಿಯ ಆಚರಣೆಯ ಒಂದು ಭಾಗವೆನಿಸಿವೆ. 'ಗಣೇಶ್ ರಾಜಾ' ಎಂದೂ ಕರೆಸಿಕೊಳ್ಳುವ ಗಣೇಶನ ವಿಗ್ರಹಗಳನ್ನು ರಾಜ್ ಕೋಟ್ ನಗರದ ಪ್ರತೀ ಮೂಲೆಯಲ್ಲಿಯೂ ಇರಿಸಲಾಗುತ್ತದೆ. ಗಣೇಶ ವಿಸರ್ಜನೆಯ ಸಮಯದಲ್ಲಿ ಮೆರವಣಿಗೆಗೆ ಕೆಂಪು ಬಣ್ಣದ ಗುಲಾಲ್ ಮತ್ತು ಸಂಗೀತ ವಾದ್ಯಗಳು ಮೋಡಿ ಮಾಡುತ್ತದೆ.

ಗಿರ್ಗಾಮ್ ಚೌಪಾಟಿ

ಗಿರ್ಗಾಮ್ ಚೌಪಾಟಿ

ಮುಂಬೈ ನ ಸಾರ್ವಜನಿಕ ಬೀಚ್ ಗಳಲ್ಲಿ ಒಂದಾದ ಗಿರ್ಗಾಮ್ ಚೌಪಾಟಿ ಗಣೇಶ ಚತುರ್ಥಿ ಆಚರಣೆಗಳಿಗಾಗಿ ಹೆಚ್ಚಿನ ಮಟ್ಟದಲ್ಲಿ ಪ್ರಸಿದ್ದಿಯನ್ನು ಹೊಂದಿದೆ. ಇದು ಮೆರೈನ್ ಡ್ರೈವ್ ನಲ್ಲಿರುವ ಈ ಸ್ಥಳಕ್ಕೆ ಮುಂಬೈನ ಎಲ್ಲೆಡೆಯಿಂದ ಜನರು ಅರಬ್ಬಿ ಸಮುದ್ರದಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ಈ ಸ್ಥಳಕ್ಕೆ ಬರುತ್ತಾರೆ. ಹಬ್ಬದ ಆಚರಣೆಯನ್ನು ಸಂಭ್ರಮಿಸಲು ಬರುವ ಪ್ರವಾಸಿಗರು ಇಲ್ಲಿಯ ಕಡಲತೀರದಲ್ಲಿರುವ ಅಂಗಡಿಗಳಲ್ಲಿಯ ರಗಡಾ ಪಟ್ಟೀಸ್, ಬೇಲ್ ಪುರಿ, ಪಾವ್ ಬಾಜಿ ಮತ್ತು ಪಾನಿಪುರಿ ಇತ್ಯಾದಿಗಳನ್ನು ಸವಿಯಬಹುದಾಗಿದೆ.

ಮಧ್ಯಪ್ರದೇಶ

ಮಧ್ಯಪ್ರದೇಶ

ಭಾರತದ ಇನ್ನಿತರ ಸ್ಥಳಗಳಲ್ಲಿ ಅತ್ಯಂತ ಉತ್ಸಾಹದಿಂದ ಆಚರಿಸುವಂತೆ ಗಣೇಶ ಚತುರ್ಥಿಯನ್ನು ಮಧ್ಯಪ್ರದೇಶದಲ್ಲಿಯೂ ಸಹ ಅಷ್ಟೇ ಸಂಭ್ರಮದಿಂದ ಆಚರಿಸಲಾಗುತ್ತದೆ. ಪರಿಸರ ಸ್ನೇಹಿ ಆಚರಣೆಗಾಗಿ ಈ ರಾಜ್ಯದ ಕೆಲವು ಸ್ಥಳಗಳಲ್ಲಿ ಜೈವಿಕ ವಿಘಟನೀಯ ವಸ್ತುಗಳನ್ನು ಬಳಸಲಾಗುತ್ತದೆ. ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ನಿರ್ಮಾಣದಲ್ಲಿ ಬಳಸುವ ಇತರ ರಾಸಾಯನಿಕಗಳ ಮೂಲಕ ಜಲ ಮಾಲಿನ್ಯವನ್ನು ತಡೆಗಟ್ಟುವ ಸಲುವಾಗಿ ಕೃತಕ ಕೊಳಗಳನ್ನು ಸಿದ್ಧಪಡಿಸಲಾಗುತ್ತಿದೆ.

ಆಂಧ್ರ ಪ್ರದೇಶ

ಆಂಧ್ರ ಪ್ರದೇಶ

ಗಣೇಶ ಚತುರ್ಥಿಯನ್ನು ಆಂಧ್ರ ಪ್ರದೇಶದಾದ್ಯಂತ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ ಇಲ್ಲಿ ಗಣೇಶ ಚತುರ್ಥಿಯನ್ನು ವಿನಾಯಕ ನಿಮರ್ಜನಾ ಅಥವಾ ವಿನಾಯಕ ನಿಮಜ್ಜನಂ ಎಂದೂ ತೆಲುಗಿನಲ್ಲಿ ಕರೆಯಲಾಗುತ್ತದೆ. "ಗಣೇಶ್ ಮಹಾರಾಜ್ ಕಿ, ಜೈ" ಎಂಬ ಮಂತ್ರವು ಹೈದರಾಬಾದ್, ವಿಶಾಖಪಟ್ಟಣಂ ಮತ್ತು ಇನ್ನಿತರ ಎಲ್ಲಾ ಸ್ಥಳಗಳಲ್ಲಿಯೂ ಕೇಳಿ ಬರುತ್ತದೆ. ಖೈರ್ತಾಬಾದ್ ವಿಶ್ವದಲ್ಲೇ ಅತಿ ದೊಡ್ಡ ಗಣೇಶನ ವಿಗ್ರಹವನ್ನು ಹೊಂದಿದೆ.

ಇಲ್ಲಿ ಗಣೇಶ ವಿಸರ್ಜನೆಯು ಕುಟುಂಬದ ಸಂಪ್ರದಾಯಕ್ಕೆ ಅನುಗುಣವಾಗಿ 3, 5 ಅಥವಾ 7ನೇ ದಿನದ ಪೂಜೆಯ ನಂತರ ನಡೆಸಲಾಗುತ್ತದೆ. ಈ ಹಬ್ಬದಲ್ಲಿ ತಯಾರಿಸಲಾಗುವ ಪ್ರಮುಖ ಸಿಹಿ ಖಾದ್ಯವೆಂದರೆ ಮೋದಕಂ ಅಥವಾ ಕುಡುಮು ಆಗಿದೆ. ಇದು ಮಾತ್ರವಲ್ಲದೆ ವುಂಡಾರಲ್ಲು, ಪಾನಕಂ, ವಡಪಪ್ಪು, ಮತ್ತು ಚಲಿವಿಡಿ ಇವು ಗಣೇಶ ಚತುರ್ಥಿಯ ಸಮಯದಲ್ಲಿ ತಯಾರಿಸಲಾಗುವ ಇನ್ನಿತರ ಖಾದ್ಯಗಳಾಗಿವೆ. ಅಲ್ಲದೆ ಮನೆಗಳಲ್ಲಿ ಮಣ್ಣಿನ ಅಥವಾ ಅರಿಶಿನ ಮೂರ್ತಿಗಳನ್ನು ಹೆಚ್ಚಾಗಿ ಪೂಜಿಸಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X