Search
  • Follow NativePlanet
Share
ಮುಖಪುಟ » ಸ್ಥಳಗಳು » ಚೆನ್ನೈ » ಹವಾಮಾನ

ಚೆನ್ನೈ ಹವಾಮಾನ

ಅಕ್ಟೋಬರ್ ನಿಂದ ಫೆಬ್ರುವರಿ ಮಧ್ಯದ ಅವಧಿಯು ಚೆನ್ನೈ ಭೇಟಿಗೆ ಸಕಾಲ. ಈ ಒಂದು ಸಂದರ್ಭದಲ್ಲೆ ಚೆನ್ನೈನ ತಾಪಮಾನ ಹಿತಕರವಾಗಿರುತ್ತದೆ. ಶಾಖವು ಹೆಚ್ಚಾಗಿರುವುದಿಲ್ಲ ಮತ್ತು ಆರ್ದ್ರತೆಯು ಕಡಿಮೆಯಾಗಿರುತ್ತದೆ.

ಬೇಸಿಗೆಗಾಲ

ಚೆನ್ನೈ ನಗರವು ಭೂಮಧ್ಯ ರೇಖೆಗೆ ಹತ್ತಿರವಾಗಿರುವುದರಿಂದ ಅತಿಯಾದ ಉಷ್ಣ ಹಾಗು ಆರ್ದ್ರತೆಯ ಹವಾಮಾನವನ್ನು ಅನುಭವಿಸುತ್ತದೆ. ಏಪ್ರಿಲ್ ನಲ್ಲಿ ಪ್ರಾರಂಭವಾಗುವ ಇಲ್ಲಿನ ಬೇಸಿಗೆ ಮೇ ಕೊನೆಯವರೆಗೂ ಇರುತ್ತದೆ. ಇಲ್ಲಿ ದಾಖಲಾಗುವ ಗರಿಷ್ಠ ಉಷ್ಣಾಂಶ 45 ಡಿಗ್ರಿ ಸೆಲ್ಶಿಯಸ್.

ಮಳೆಗಾಲ

ಜೂನ್ ಮಧ್ಯಂತರದಲ್ಲಿ ಇಲ್ಲಿ ಮಳೆಗಾಲ ಪ್ರಾರಂಭವಾಗುತ್ತದೆ. ಅಗಸ್ಟ್ ಕೊನೆಯವರೆಗೂ ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತದೆ. ನೈರುತ್ಯ ಮಾನ್ಸೂನ್ ಮಾರುತಗಳು ಚೆನ್ನೈನ ಈ ಅಗಾಧ ಪ್ರಮಾಣದ ಮಳೆಗೆ ಕಾರಣ. ಬೇಸಿಗೆಯ ಶಾಖದಿಂದ ಬೆಂದಿದ್ದ ಭೂಮಿಯು ಈ ಸಂದರ್ಭದಲ್ಲಿ ತಂಪುಗೊಳ್ಳುತ್ತದೆ. ಕೌತುಕದ ಸಂಗತಿಯೆಂದರೆ ಚೆನ್ನೈನ ಜನರು ಮಳೆಯಲ್ಲಿ ಕೊಡೆಗಳಿಲ್ಲದೆ ಹಾಗೆಯೆ ನಡೆದಾಡಲು ಇಷ್ಟಪಡುತ್ತಾರೆ.

ಚಳಿಗಾಲ

ಸಮುದ್ರ ತೀರಕ್ಕೆ ಸನಿಹವ್ವಗಿರುವುದರಿಂದ ಚೆನ್ನೈ ನಗರವು ಮಧ್ಯಮ ಪ್ರಮಾಣದ ಚಳಿಗಾಲವನ್ನು ಅನುಭವಿಸುತ್ತದೆ ಹಾಗು ಇದರ ಕಾಲಾವಧಿಯು ದೀರ್ಘವಾಗಿಯೂ ಇರುವುದಿಲ್ಲ. ನವಂಬರ್ ಮಧ್ಯಂತರದಲ್ಲಿ ಪ್ರಾರಂಭವಾಗುವ ಚಳಿಗಾಲ ಫೆಬ್ರುವರಿ ಮಧ್ಯ ಭಾಗದಲ್ಲಿ ಕೊನೆಗೊಳ್ಳುತ್ತದೆ. ಈ ಸಮಯದಲ್ಲಿ ಇಲ್ಲಿ ದಾಖಲಾದ ಗರಿಷ್ಠ ಹಾಗು ಕನಿಷ್ಠ ತಾಪಮಾನಗಳು ಕ್ರಮವಾಗಿ 27 ಮತ್ತು 19 ಡಿಗ್ರಿ ಸೆಲ್ಶಿಯಸ್ ಗಳು.