Search
  • Follow NativePlanet
Share
ಮುಖಪುಟ » ಸ್ಥಳಗಳು» ಗುಜರಾತ್

ಗುಜರಾತ್ ಪ್ರವಾಸೋದ್ಯಮ : ಒಂದು ಸಣ್ಣ ಪರಿಚಯ

ಭಾರತದ ಪಶ್ಚಿಮ ಭಾಗದಲ್ಲಿರುವ ಗುಜರಾತ್ ರಾಜ್ಯವು ತನ್ನ ಭೌಗೋಳಿಕತೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಯಿಂದಾಗಿ ಪ್ರಸಿದ್ಧವಾಗಿದೆ. ಸಿಂಧೂ ನಾಗರಿಕತೆಯ ತೊಟ್ಟಿಲಾದ ಗುಜರಾತ್ ಎಂದಿನಿಂದಲೂ ಭಾರತದ ಇತಿಹಾಸದಲ್ಲಿ ಸಾಂಸ್ಕೃತಿಕವಾಗಿ ಮತ್ತು ವ್ಯಾಪಾರ ಕೇಂದ್ರವಾಗಿ ಪ್ರಮುಖ ಸ್ಥಾನವನ್ನು ಪಡೆದಿದೆ. ಭಾರತದ ಪಿತರೆನಿಸಿಕೊಂಡ ಮಹಾತ್ಮ ಗಾಂಧಿ ಈ ರಾಜ್ಯಕ್ಕೆ ಸೇರಿದವರು.

ಈ ಪ್ರದೇಶದ ಭೌಗೋಳಿಕ ವೈವಿಧ್ಯತೆಯು ಕಚ್ನಲ್ಲಿ ಉಪ್ಪಿನ ಜವುಗು ದಂಡೆಗಳನ್ನು, ಸಮುದ್ರ ತೀರಗಳನ್ನು ಮತ್ತು ಸಪ್ತುರ, ಗಿರನಾರ್ನಂತಹ ಗಿರಿಶ್ರೇಣಿಗಳನ್ನು ಒಳಗೊಂಡಿದೆ. ಗುಜರಾತಿನ ಉತ್ತರಕ್ಕೆ ಕಚ್ ಮತ್ತು ನೈರುತ್ಯ ಭಾಗದಲ್ಲಿ ಕತೈವಾರಿದೆ. ಕತೈವಾರ ಪ್ರದೇಶವು ಸೌರಾಷ್ಟ್ರ ಎಂದು ಕೂಡ ಪ್ರಸಿದ್ಧವಾಗಿದೆ. ಇದು ಬ್ರಿಟೀಷರ ಕಾಲದಲ್ಲಿ 217 ರಾಜ್ಯಗಳನ್ನು ಒಳಗೊಂಡಿತ್ತು. ಗತಕಾಲದ ವೈಭವವನ್ನು ಹೇಳುವಂತಿರುವ ಈ ವಾಸ್ತುಶಿಲ್ಪ ಸ್ಮಾರಕಗಳು ಗುಜರಾತಿನ ಪ್ರವಾಸೋದ್ಯಮದ ಅವಿಭಾಜ್ಯ ಅಂಗ.

ಇಲ್ಲಿನ ಪ್ರಸಿದ್ಧ ಆಚರಣೆಗಳಾದ ರಾಸ್ ಮತ್ತು ಗಾರ್ಬಾಗಳಲ್ಲಿ ಗುಜರಾತಿನ ಸಂಸ್ಕೃತಿಯನ್ನು ಕಾಣಬಹುದು.

ಗುಜರಾತಿನಲ್ಲಿ ಪ್ರವಾಸೋದ್ಯಮ

ಗುಜರಾತಿನಲ್ಲಿ 26 ವಿವಿಧ ಬಗೆಯ ಜಿಲ್ಲೆಗಳಿವೆ. ಇಲ್ಲಿ ಶುಭ್ರವಾದ ಅರಬ್ಬಿ ಸಮುದ್ರ ತೀರಗಳು, ಸಹ್ಯಾದ್ರಿ ಪರ್ವತ ಶ್ರೇಣಿಗಳು, ಅರಾವಲ್ಲಿ ಶ್ರೇಣಿಗಳು, ಸತ್ಪುರ ಶ್ರೇಣಿಗಳಿಂದ ಹಿಡಿದು ಕಚ್ನ ರಾನ್ನ್ವರೆಗೆ ವಿವಿಧ ಬಗೆಯ ಭೌಗೋಳಿಕ ವಿಭಿನ್ನತೆಯನ್ನು ಕಾಣಬಹುದು. ಬೇರೆಲ್ಲೂ ಕಾಣ ಸಿಗದಷ್ಟು ವೈವಿಧ್ಯತೆ ಪ್ರವಾಸಿಗರಿಗೆ ಗುಜರಾತಿನಲ್ಲಿ ಕಾಣಸಿಗುತ್ತದೆ. ತಿಥಾಲ್- ಕಪ್ಪುಮಣ್ಣಿ ನ ಸಮುದ್ರತೀರ, ಮಾಂಡವಿ ಸಮುದ್ರ ತೀರ, ಚೊರ್ವಾದ್ ತೀರ, ಅಹ್ಮೆಪುರ-ಮಾಂಡವಿ ತೀರ, ಸೋಮನಾಥ ತೀರ, ಪೋರಬಂದರ್ ತೀರ, ದ್ವಾರಕಾ ತೀರ ಹೀಗೆ ಗುಜರಾತಿನ ಸಮುದ್ರ ತೀರಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಅದೇ ರೀತಿ ಇಲ್ಲಿ ಅಸಂಖ್ಯ ಯಾತ್ರಾಸ್ಥಳಗಳಿವೆ. ದ್ವಾರಕ ಮತ್ತು ಸೋಮನಾಥದಂತಹ ಸ್ಥಳಗಳು ಭಾರತೀಯ ಪುರಾಣ ಮತ್ತು ಧರ್ಮದ ಭಾಗಗಳು, ಅದೇ ರೀತಿ ಅಂಬಾಜಿ ದೇಗುಲ ಮತ್ತು ಗಿರಿನಾರ್ ಬೆಟ್ಟಗಳಲ್ಲಿನ ಹಿಂದೂ ಮತ್ತು ಜೈನ ದೇಗುಲಗಳು ಕೂಡ ಮುಖ್ಯವಾದವು.

ಗುಜರಾತಿನ ರಾಷ್ಟ್ರೀಯ ಉದ್ಯಾನಗಳು ಮತ್ತು ವನ್ಯಜೀವಿಧಾಮಗಳಲ್ಲಿ 40ಕ್ಕೂ ಹೆಚ್ಚು ಬಗೆಯ ಪ್ರಾಣಿಗಳಿವೆ. ಏಪ್ಯಾಟಿಕ್ ಸಿಂಹ, ಕಾಡು ಕತ್ತೆ ಮತ್ತು ಬ್ಲ್ಯಾಕ್ ಬಕ್ಗಳನ್ನು ಇಲ್ಲಿ ಕಾಣಬಹುದು. ಗಿರ್ ನ್ಯಾಷನಲ್ ಪಾರ್ಕ್, ವನಸ್ದಾ ನ್ಯಾಷನಲ್ ಪಾರ್ಕ್, ವಿರಾವದರ್ ಬ್ಲ್ಯಾಬಕ್ ನ್ಯಾಷನಲ್ ಪಾರ್ಕ್, ನಾರಾಯಣ ಸರೋವರ ವನ್ಯಜೀವಿಧಾಮ, ಥೋಲ್ ಲೇಕ್ಪಕ್ಷಿಧಾಮ, ಕಚ್ ಗ್ರೇಟ್ ಇಂಡಿಯನ್ ಬಸ್ಟರ್ಡ್  ಸಂಚುರಿಗಳು ರಾಜ್ಯದ ಪ್ರಮುಖ ವನ್ಯಜೀವಿ ರಕ್ಷಣಾ ಸ್ಥಳಗಳು.

ಭಾರತದ ಆರ್ಥಿಕವಾಗಿ ಶ್ರೀಮಂತವಾಗಿರುವ ರಾಜ್ಯಗಳಲ್ಲೊಂದಾದ ಗುಜರಾತಿನ ಸಾಂಪ್ರದಾಯಿಕ ಕರಕುಶಲಕಲೆಯು ವಿಶ್ವದಾದ್ಯಂತದ ಪ್ರವಾಸಿಗರ ಮೆಚ್ಚುಗೆಯನ್ನು ಪಡೆದಿದೆ. ಇದರಲ್ಲಿ ಪುರುಷರು ಧರಿಸುವ ಕುತ್ತಿಗೆವರೆಗಿನ ತುಂಬುತೋಳಿನ ಗಂಟು ಹಾಕುವ ಜಾಕೆಟ್ಗಳು, ಬಿಗಿಯಾದ ಪೈಪ್ ಮಾದರಿಯ ಪ್ಯಾಂಟುಗಳು, ಮಣಿಗಳು ಅಥವ ಗಾಜಿನ ಕಸೂತಿ ಹಾಕಿದ ಗಾಗ್ರ ಮತ್ತು ಚೋಲಿಗಳು ಇಲ್ಲಿ ಪ್ರಸಿದ್ಧವಾಗಿದೆ. ಪಟಾನ್ನ ಪಟೋಲ ಸೀರೆಗಳು ಕೂಡ ಪ್ರಸಿದ್ಧವಾದವು.

ಹವಾಮಾನ

ಗುಜರಾತಿನಲ್ಲಿ ಸಮುದ್ರ ತೀರದ ಕಾರಣದಿಂದ ಬೇಸಿಗೆಯಲ್ಲಿ ಹೆಚ್ಚಿನ ಧಗೆಯಿರುತ್ತದೆ. ಮಳೆಗಾಲದಲ್ಲಿ ಮಳೆಹೆಚ್ಚಾಗಿರುತ್ತದೆ. ಚಳಿಗಾಲ ಪ್ರವಾಸಕ್ಕೆ ಹೇಳಿಮಾಡಿಸಿದ ಸಮಯವಾಗಿದೆ.

ಭಾಷೆಗಳು

ಇಲ್ಲಿನ ಪ್ರಮುಖ ರಾಜ್ಯಭಾಷೆ ಗುಜರಾತಿ. ಇದಲ್ಲದೆ ಪಾರ್ಸಿ ಗುಜರಾತಿ, ಗಮ್ಥಿ, ಕಥೈವಾಡಿಗಳಂತಹ ಉಪಭಾಷೆಗಳಿವೆ. ಸಿಂಧಿ ಮತ್ತು ಕುತ್ಚಿಯಂತಹ ಭಾಷೆಗಳು ಕೂಡ ಬಳಕೆಯಲ್ಲಿದೆ. ಕೈಗಾರಿಕರಣ ಮತ್ತು ವಲಸೆಯಿಂದಾಗಿ ಈಗ ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳನ್ನು ಕೂಡ ಬಳಸುತ್ತಾರೆ.

ಗುಜರಾತಿನ ಪ್ರತಿಭಾಗವೂ ವಿಶಿಷ್ಟವಾಗಿದೆ. ಸರ್ಕಾರವು ಜನರಲ್ಲಿ ಈ ವೈವಿಧ್ಯತೆಯ ಅರಿವನ್ನು ಮೂಡಿಸಲು ಶ್ರಮಿಸಿದ ಫಲವಾಗಿ ಇಂದು ಗುಜರಾತ್ ಪ್ರಮುಖ ಪ್ರವಾಸಿ ತಾಣವಾಗಿದೆ.

ಗುಜರಾತ್ ಸ್ಥಳಗಳು

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu