Search
  • Follow NativePlanet
Share
» »ನೆಟ್ ಕನೆಕ್ಷನ್ ಇಲ್ಲದೆ ಈ ಜಿಪಿಎಸ್ ನ್ಯಾವಿಗೇಷನ್ ಆಪ್ಸ್ ಗಳನ್ನೂ ನಿಮ್ಮ ಆಂಡ್ರಾಯ್ಡ್ ಮೊಬೈಲ್ನಲ್ಲಿ ಬಳಸಬಹುದು

ನೆಟ್ ಕನೆಕ್ಷನ್ ಇಲ್ಲದೆ ಈ ಜಿಪಿಎಸ್ ನ್ಯಾವಿಗೇಷನ್ ಆಪ್ಸ್ ಗಳನ್ನೂ ನಿಮ್ಮ ಆಂಡ್ರಾಯ್ಡ್ ಮೊಬೈಲ್ನಲ್ಲಿ ಬಳಸಬಹುದು

21 ನೇ ಶತಮಾನದ ತಂತ್ರಜ್ಞಾನಗಳು ನಮ್ಮ ಪ್ರಪಂಚದಲ್ಲಿ ತುಂಬಾ ಕ್ರಾಂತಿ ಉಂಟುಮಾಡಿವೆ ಮತ್ತು ಹಲವು ತುಂಬಾ ಸಮಯ ತೆಗೆದುಕೊಳ್ಳುವ ಕೆಲಸಗಳನ್ನು ಸುಲಭಗೊಳಿಸಿವೆ. ತಂತ್ರಜ್ಞಾನ ನಮ್ಮ ಬೆರಳ ತುದಿಯಲ್ಲಿ ಮಾಹಿತಿಯನ್ನು ಕಲೆ ಹಾಕುವಿದರ ಜೊತೆಗೆ ನಮ್ಮ ಜೀವನವನ್ನು ಸುಲಭ, ವೇಗವಾಗಿ ಮತ್ತು ಉತ್ತಮಗೊಳಿಸಿದೆ. ಸ್ಮಾರ್ಟ್‌ಫೋನ್‌ಗಳು ಮತ್ತು ಸ್ಮಾರ್ಟ್‌ವಾಚ್‌ಗಳಂತಹ ಹೆಚ್ಚಿನ ಸಂಖ್ಯೆಯ ಬಹು-ಕ್ರಿಯಾತ್ಮಕ ಸಾಧನಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ. ಇದಲ್ಲದೆ, ಈ ಸ್ಮಾರ್ಟ್ ಸಾಧನಗಳ ಜಿಪಿಎಸ್ ತಂತ್ರಜ್ಞಾನವು ನಮ್ಮ ದಿನನಿತ್ಯದ ಜೀವನದ ಮೇಲೆ ಗಮನಾರ್ಹ ಪರಿಣಾಮ ಬೀರಿದೆ. ಇದು ಹಳೆಯ ಕಾಲದ ದಿಕ್ಸೂಚಿ ಮತ್ತು ಮುದ್ರಿತ ನಕ್ಷೆಗಳಿಂದ ನಮ್ಮನ್ನು ಮುಕ್ತಗೊಳಿಸಿದೆ. ಹೆಚ್ಚು ಕಡಿಮೆ, ನಮ್ಮ ಸಮಾಜಕ್ಕೆ ವರದಾನವಾಗಿದೆ. ಆದಾಗ್ಯೂ, ಅಂತಹ ಸಹಾಯಕವಾದ ಅಪ್ಲಿಕೇಶನ್‌ಗಳನ್ನು ಬಳಸಲು ನಮಗೆ ಇಂಟರ್ನೆಟ್ ಚಾರ್ಜಸ್ ಇರುತ್ತದೆ.

Offline GPS Apps for android

80% ಜಿಪಿಎಸ್ ಅಪ್ಲಿಕೇಶನ್‌ಗಳು ನೆಟ್‌ವರ್ಕ್‌ ಸಂಪರ್ಕದಿಂದ ಮಾತ್ರ ಕಾರ್ಯನಿರ್ವಸಿಬಲ್ಲವು ಎಂದು ಅಧ್ಯಯನಗಳು ತೋರಿಸುತ್ತವೆ; ನೀವು ಯಾವುದಾದರು ಹೊರ ಪ್ರಪಂಚಕ್ಕೆ ಹೋದಾಗ ನಿಮ್ಮ ಇಂಟರ್ನೆಟ್ ಆಧಾರಿತ ಜಿಪಿಎಸ್ ಆಪ್ಸ್ ಕೆಲಸ ಮಾಡುವುದಿಲ್ಲ ಮತ್ತು ಅದನ್ನು ಹೆಚ್ಚು ಅನುಕೂಲಕರವಾಗಿಸಲು, ಅನೇಕ ಟೆಕ್-ಬುದ್ಧಿವಂತರು ಈ ವಿಷಯದ ಬಗ್ಗೆ ಕೆಲಸ ಮಾಡಿ ಆಫ್‌ಲೈನ್ ಮ್ಯಾಪ್ಸ್ ಬೆಂಬಲದೊಂದಿಗೆ ಕೆಲಸ ಮಾಡುವ ಜಿಪಿಎಸ್ ಅಪ್ಲಿಕೇಶನ್‌ಗಳನ್ನು ಬೆಳವಣಿಗೆ ಮಾಡಿದರು.

ಈ ಆಫ್‌ಲೈನ್ ಅಪ್ಲಿಕೇಶನ್‌ಗಳು ಒಬ್ಬರ ಸ್ಥಳವನ್ನು ಹುಡುಕಲು ಫೋನ್‌ನ ಅಂತರ್ನಿರ್ಮಿತ ಜಿಪಿಎಸ್ ರೇಡಿಯೊವನ್ನು (ಡೇಟಾವನ್ನು ಲೆಕ್ಕಿಸದೆ ಕಾರ್ಯನಿರ್ವಹಿಸುತ್ತದೆ) ಬಳಸುತ್ತದೆ ಮತ್ತು ಇದರ ಪರಿಣಾಮವಾಗಿ, ಫೋನ್‌ನ ಮೆಮೊರಿಯನ್ನು ಬಳಸಿಕೊಂಡು ನಕ್ಷೆಯಲ್ಲಿ ಅಗತ್ಯವಾದ ಮಾರ್ಗವನ್ನು ಯೋಜಿಸಿ. ಇಲ್ಲಿ ಕೆಲವು ಆಫ್‌ಲೈನ್ ಜಿಪಿಎಸ್ ನ್ಯಾವಿಗೇಷನ್ ಅಪ್ಲಿಕೇಶನ್‌ಗಳ ಪಟ್ಟಿ ನೋಡೋಣ.

1. ಸಿಜಿಕ್ ನ್ಯಾವಿಗೇಷನ್ ಮ್ಯಾಪ್ಸ್ (Sygic Navigation Maps )

1. ಸಿಜಿಕ್ ನ್ಯಾವಿಗೇಷನ್ ಮ್ಯಾಪ್ಸ್ (Sygic Navigation Maps )

ಇದು ಆಂಡ್ರಾಯ್ಡ್‌ ಬಳಕೆದಾರರು ಹೆಚ್ಚು ಡೌನ್‌ಲೋಡ್ ಮಾಡಲಾದ ಆಫ್‌ಲೈನ್ ಜಿಪಿಎಸ್ ನ್ಯಾವಿಗೇಷನ್ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಇದು ಉಚಿತ ಅಪ್ಲಿಕೇಶನ್ ಆಗಿದ್ದು. ಆದಾಗ್ಯೂ, ವಿಶ್ವ ನಕ್ಷೆಗಾಗಿ, ನೀವು 50 ಡಾಲರ್ ಕೊಡಬೇಕು. ಇದು ಟಾಮ್‌ಟಾಮ್‌ನೊಂದಿಗೆ ಕೈಜೋಡಿಸಿ, ವಿಶ್ವದ ಪ್ರತಿಯೊಂದು ದೇಶದ ಆಫ್‌ಲೈನ್ ನಕ್ಷೆಗಳನ್ನು ಒದಗಿಸುವ ಪರವಾನಗಿಯನ್ನು ಹೊಂದಿದೆ. ಇದು ವೇಗದ ಕ್ಯಾಮೆರಾಗಳು, ಗ್ಯಾಸ್ ಸ್ಟೇಷನ್‌ಗಳು ಮತ್ತು ರೆಸ್ಟೋರೆಂಟ್ ಬಗ್ಗೆ ನಿಮ್ಮನ್ನು ಎಚ್ಚರಿಸುವ ಸ್ಮಾರ್ಟ್ ಅಪ್ಲಿಕೇಶನ್ ಆಗಿದೆ. ಹೀಗಾಗಿ, ಸಾಕಷ್ಟು ಸಮಯ ಮತ್ತು ಹಣವನ್ನು ಉಳಿಸುತ್ತದೆ. ಇದಲ್ಲದೆ, ನೀವು ಕಾಲ್ನಡಿಗೆಯಲ್ಲಿರುವಾಗ ಉಚಿತ ನಕ್ಷೆ ಅಪ್ಡೇಟ್ಸ್, ಧ್ವನಿ-ನಿರ್ದೇಶಿತ ಜಿಪಿಎಸ್ ನ್ಯಾವಿಗೇಷನ್ ಮತ್ತು ಪಾದಚಾರಿ ಜಿಪಿಎಸ್ ನ್ಯಾವಿಗೇಷನ್ ಅನ್ನು ಸಹ ಇದು ನೀಡುತ್ತದೆ.

2. ಜೀನಿಯಸ್ ಆಪ್ಸ್ (Genius Maps)

2. ಜೀನಿಯಸ್ ಆಪ್ಸ್ (Genius Maps)

ಇದು ಉಚಿತ ಅಪ್ಲಿಕೇಶನ್ ಆಗಿದ್ದು ಅದನ್ನು ಪ್ಲೇ ಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಆಂಡ್ರಾಯ್ಡ್ ನ ಈ ಆಫ್‌ಲೈನ್ ಜಿಪಿಎಸ್ ನ್ಯಾವಿಗೇಷನ್ ಅಪ್ಲಿಕೇಶನ್ ಆಫ್‌ಲೈನ್ ನಕ್ಷೆಗಳನ್ನು ಡೌನ್‌ಲೋಡ್ ಮಾಡಲು ನಿಮಗೆ ಅನುಮತಿಸುತ್ತದೆ ಮತ್ತು ನಿಮ್ಮ ಅಪೇಕ್ಷಿತ ಸ್ಥಳಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ. ಇದು ಪ್ರಪಂಚದಾದ್ಯಂತ ವ್ಯಾಪ್ತಿಯನ್ನು ಹೊಂದಿರದಿದ್ದರೂ, ವಿಶ್ವದ ಹೆಚ್ಚಿನ ನಗರಗಳಿಗೆ ಆಫ್‌ಲೈನ್ ನಕ್ಷೆಗಳನ್ನು ಹೊಂದಿದೆ. ಧ್ವನಿ-ನಿರ್ದೇಶಿತ ಜಿಪಿಎಸ್ ನ್ಯಾವಿಗೇಷನ್ ಮತ್ತು ಪಾದಚಾರಿ ಜಿಪಿಎಸ್ ನ್ಯಾವಿಗೇಷನ್ ನಂತಹ ವೈಶಿಷ್ಟ್ಯಗಳು ಉಚಿತ ಆವೃತ್ತಿಯಲ್ಲಿ ಲಭ್ಯವಿದೆ. ಇನ್ನು ಹೆಚ್ಚಿನ ವೈಶಿಷ್ಟ್ಯ ತೆಗಳು ಬೇಕಾದಲ್ಲಿ ನೀವು ಪ್ರೊ ಆವೃತ್ತಿಗೆ ಅಪ್‌ಗ್ರೇಡ್ ಹಾಗಬೇಕು.

3. ಕೋ ಪೈಲಟ್ ಜಿಪಿಎಸ್ (CoPilot GPS)

3. ಕೋ ಪೈಲಟ್ ಜಿಪಿಎಸ್ (CoPilot GPS)

ಇದು ಕಾರುಗಳು ಮತ್ತು ಇತರ ವಾಹನಗಳನ್ನು ಬಳಸುವ ಚಾಲಕರಿಗೆ ಸಹಾಯ ಮಾಡಲು ಮಾತ್ರ ವಿನ್ಯಾಸಗೊಳಿಸಲಾಗಿದೆ. ಇದು ಪಾದಚಾರಿಗಳಿಗೆ ಅಲ್ಲ. ಸಂಚಾರ ದಟ್ಟಣೆಯನ್ನು ತಪ್ಪಿಸಲು ಹಲವು ಮಾರ್ಗಗಳನ್ನು ನೀಡುತ್ತದೆ, ಇದರ ಪರಿಣಾಮವಾಗಿ ಸಮಯವನ್ನು ಉಳಿಸಲು ಸಹಾಯ ಮಾಡುತ್ತದೆ. ಈ ಆಫ್‌ಲೈನ್ ಆಂಡ್ರಾಯ್ಡ್ ಜಿಪಿಎಸ್ ಅಪ್ಲಿಕೇಶನ್ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಗ್ಯಾಸ್ ಸ್ಟೇಷನ್‌ಗಳು ಮತ್ತು ಇತರ ನಿಮ್ಮ ಆಸಕ್ತಿಯ ಸ್ಥಳಗಳನ್ನು ಸಹ ಪತ್ತೆ ಮಾಡುತ್ತದೆ.

4. ಹಿಯರ್ ವೀಗೋ (HERE WeGo)

4. ಹಿಯರ್ ವೀಗೋ (HERE WeGo)

ಇದು ಪ್ರಾಥಮಿಕವಾಗಿ ಉತ್ತರ ಅಮೆರಿಕ ಮತ್ತು ಯುರೋಪಿನ ರಸ್ತೆಗಳನ್ನು ಪತ್ತೆಹಚ್ಚಲು ಉದ್ದೇಶಿಸಿದ್ದರೂ, ಆಂಡ್ರಾಯ್ಡ್‌ಗಾಗಿ ಈ ಆಫ್‌ಲೈನ್ ಜಿಪಿಎಸ್ ನ್ಯಾವಿಗೇಷನ್ ಅಪ್ಲಿಕೇಶನ್ 100 ದೇಶಗಳಿಗೆ ಮತ್ತು ವಿಶ್ವದ 1300 ನಗರಗಳ ನಕ್ಷೆಗಳಿಗೆ ತನ್ನ ವ್ಯಾCoPilot GPSಪ್ತಿಯನ್ನು ಒದಗಿಸುತ್ತದೆ. ಇದು ಉಚಿತವಾಗಿದ್ದು ಪ್ಲೇ ಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಿಕೋಳ್ಳ ಬಹುದು. ಈ ಅಪ್ಲಿಕೇಶನ್ ರೂಟ್ ಮ್ಯಾಪ್, ಡೈರೆಕ್ಷನ್, ಕಾರು ಹಂಚಿಕೆ ದರಗಳು, ಸಾರಿಗೆ ಟಿಕೆಟ್ ದರಗಳು ಮತ್ತು ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಗ್ಯಾಸ್ ಸ್ಟೇಷನ್‌ಗಳು ಮತ್ತು ವೇಗ ಕ್ಯಾಮೆರಾಗಳ ಬಗ್ಗೆ ನಿಮಗೆ ಎಚ್ಚರಿಕೆ ನೀಡುತ್ತದೆ.

5. ಮ್ಯಾಪ್‌ಫ್ಯಾಕ್ಟರ್ ಜಿಪಿಎಸ್ ನ್ಯಾವಿಗೇಷನ್ ಮ್ಯಾಪ್ಸ್ (MapFactor GPS Navigation Maps)

5. ಮ್ಯಾಪ್‌ಫ್ಯಾಕ್ಟರ್ ಜಿಪಿಎಸ್ ನ್ಯಾವಿಗೇಷನ್ ಮ್ಯಾಪ್ಸ್ (MapFactor GPS Navigation Maps)

ಯುರೋಪಿನ 56 ಕ್ಕೂ ಹೆಚ್ಚು ನಗರಗಳಿಗೆ ಮತ್ತು ಅಮೆರಿಕಾದಲ್ಲಿ 53 ಕ್ಕೂ ಹೆಚ್ಚು ನಗರಗಳಿಗೆ ನಕ್ಷೆಗಳನ್ನು ನೀಡುತ್ತಿದೆ, ಈ ಆಫ್‌ಲೈನ್ ಜಿಪಿಎಸ್ ಅಪ್ಲಿಕೇಶನ್ ಆಂಡ್ರಾಯ್ಡ್ ಬಳಕೆದಾರರಿಂದ ಹೆಚ್ಚು ಡೌನ್‌ಲೋಡ್ ಆಗಿದ್ದು. ಇದು ಡೈರೆಕ್ಷನ್ಸ್ , ನಕ್ಷೆಗಳು ಮತ್ತು ರೂಟ್ ಮ್ಯಾಪ್ ಗಳಂತಹ ಪ್ರಮುಖ ವೈಶಿಷ್ಟ್ಯಗಳನ್ನು ಸಹ ಹೊಂದಿದೆ. ಆದಾಗ್ಯೂ, ನೀವು ಅದನ್ನು ಡೌನ್ಲೋಡ್ ಮಾಡಿಕೊಂಡಾಗ, ನಿಮ್ಮ ಫೋನ್‌ನ ಮೆಮೊರಿಯಿಂದ ನಕ್ಷೆಗಳನ್ನು ಡೌನ್‌ಲೋಡ್ ಮಾಡಲು ಅದು ನಿಮ್ಮನ್ನು ಕೇಳುತ್ತದೆ, ಏಕೆಂದರೆ ಇದು ಅಂತರ್ನಿರ್ಮಿತ ಆನ್‌ಲೈನ್ ನಕ್ಷೆಗಳನ್ನು ಹೊಂದಿಲ್ಲ. ಅದೇನೇ ಇದ್ದರೂ, ಇದು ಪ್ರಯಾಣಕ್ಕಾಗಿ ಉತ್ತಮವಾದ ಆಂಡ್ರಾಯ್ಡ್ ಅಪ್ಲಿಕೇಶನ್ ಹಾಗಿದೆ.

6. ಮ್ಯಾಪ್ಸ್.ಮಿ (MAPS.ME)

6. ಮ್ಯಾಪ್ಸ್.ಮಿ (MAPS.ME)

ಇದು ಆಂಡ್ರಾಯ್ಡ್ ಬಳಕೆದಾರರು ಹೆಚ್ಚು ಡೌನ್ಲೋಡ್ ಮಾಡಿಕೊಂಡ ಜಿಪಿಎಸ್ ನ್ಯಾವಿಗೇಷನ್ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಇದು ಉಚಿತ, ಉಪಯುಕ್ತ ಮತ್ತು ಡೌನ್‌ಲೋಡ್ ಮಾಡಲು ಯೋಗ್ಯವಾದ ಆಪ್ ಹಾಗಿದೆ. ಇದು ರಿ-ರೂಟಿಂಗ್ ಲೆಕ್ಕಾಚಾರ, ಧ್ವನಿ ಸಂಚರಣೆ ಮತ್ತು ಸಾರ್ವಜನಿಕ ಸಾರಿಗೆಯಂತಹ ಪ್ರಮುಖ ವೈಶಿಷ್ಟ್ಯಗಳನ್ನು ನೀಡುತ್ತದೆ. ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಮತ್ತು ಎಟಿಎಂಗಳು ಮತ್ತು ಇತರ ಆಸಕ್ತಿಯ ಸ್ಥಳಗಳ ಬಗ್ಗೆಯೂ ನಿಮಗೆ ತಿಳಿಸುತ್ತದೆ. ಇದು ಅನೇಕ ಪ್ರವಾಸಿ ಆಕರ್ಷಣೆಗಳ ಮಾರ್ಗ ನಕ್ಷೆಗಳನ್ನು ತೋರಿಸುವ ಪ್ಲಗಿನ್ ಅನ್ನು ಒಳಗೊಂಡಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more