Search
  • Follow NativePlanet
Share
» »ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಕೃಷ್ಣನ ನಗರಿಯಲ್ಲಿ ಆಚರಿಸಿದ್ರೆ ಹೇಗೆ?

ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಕೃಷ್ಣನ ನಗರಿಯಲ್ಲಿ ಆಚರಿಸಿದ್ರೆ ಹೇಗೆ?

ಸೆ.2 ರಂದು ದೇಶದಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತಿದೆ. ನೀವು ಈ ಬಾರಿಯ ಕೃಷ್ಣ ಜನ್ಮಾಷ್ಟಮಿಯನ್ನು ಎಲ್ಲಿ ಆಚರಿಸಬೇಕೆಂದಿದ್ದೀರಾ? ಹೆಚ್ಚಿನವರು ಜನ್ಮಾಷ್ಟಮಿಯನ್ನು ಮನೆಯಲ್ಲೇ ಪೂಜೆ, ವಿವಿಧ ಬಗೆಯ ಭಕ್ಷ್ಯಗಳನ್ನು ತಯಾರಿಸುವ ಮೂಲಕ ಆಚರಿಸುತ್ತಾರೆ. ಇನ್ನೂ ಕೆಲವರು ಮಂದಿಗಳಿಗೆ ಹೋಗುತ್ತಾರೆ. ಪ್ರತಿಬಾರಿ ಮನೆಯಲ್ಲೇ ಕೃಷ್ಣಾಷ್ಟಮಿ ಆಚರಿಸುತ್ತಿದ್ದೀರೆಂದಾರೆ ಈ ಬಾರಿಯ ಕೃಷ್ಣಾಷ್ಟಮಿಯನ್ನು ವಿಶೇಷ ರೀತಿಯಲ್ಲಿ ಆಚರಿಸಿ.

ದ್ವಾರಕಾ

ದ್ವಾರಕಾ

PC: Scalebelow

ದ್ವಾರಕಾವನ್ನು ಶ್ರೀ ಕೃಷ್ಣನ ನಗರಿ ಎನ್ನುತ್ತಾರೆ. ಈ ಬಾರಿ ನೀವೂ ನಿಮ್ಮ ಪರಿವಾರದ ಜೊತೆಗೆ ದ್ವಾರಕಾಗೆ ತೆರಳಿ. ದ್ವಾರಕಾ ಮಂದಿರದಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ವಿಶೇಷ ರೂಪದಲ್ಲಿ ಆಚರಿಸಲಾಗುತ್ತದೆ. ಇಲ್ಲಿನ ಜನ್ಮಾಷ್ಟಮಿ ಇಡೀ ವಿಶ್ವದಲ್ಲೇ ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿ ಕೃಷ್ಣ ಬಾಲ್ಯ ರೂಪವನ್ನು ಪೂಜಿಸಲಾಗುತ್ತದೆ. ಈ ಸಂದರ್ಭದಲ್ಲಿ ದ್ವಾರಕಾದಲ್ಲಿ ಎಲ್ಲೆಡೆ ಭಜನೆ ಕೀರ್ತನೆಗಳೇ ಕೇಳಿಸುತ್ತವೆ.

ಇದು ದೇಶದ ಅತ್ಯಂತ ಡೇಂಜರಸ್ ರಾಜ್ಯ; ಇಲ್ಲಿ ವಿಸ್ಕೀ, ಬಿಯರ್, ರಮ್ ಮಾತ್ರ ಕುಡಿಯಬಹುದು

ತಲುಪುವುದು ಹೇಗೆ?

ತಲುಪುವುದು ಹೇಗೆ?

ದ್ವಾರಕಾಕ್ಕೆ ಹೋಗಲು ರೈಲು ವ್ಯವಸ್ಥೆ ಇದೆ. ಇಲ್ಲಿಗೆ ಸಮೀಪದ ಏರ್‌ಪೋರ್ಟ್ ಎಂದರೆ ಜಮಾನಗರ್ ಏರ್‌ಪೋರ್ಟ್ . ದ್ವಾರಕಾದಿಂದ ಇದು ಕೇವಲ ೪೫ ಕಿ.ಮಿ ದೂರದಲ್ಲಿದೆ. ರಸ್ತೆ ಮಾರ್ಗದಿಂದಲೂ ಗುಜರಾತ್‌ನ ಯಾವುದೇ ನಗರದಿಂದ ಇಲ್ಲಿಗೆ ತಲುಪಬಹುದು.

ಮಥುರಾ ವೃಂದಾವನ

ಮಥುರಾ ವೃಂದಾವನ

PC: Shahnoor Habib Munmun

ಈ ಸ್ಥಳಗಳು ಅಕ್ಕ ಪಕ್ಕದಲ್ಲೇ ಇವೆ. ವೃಂದಾವನದಲ್ಲಿ ಶ್ರೀಕೃಷ್ಣ ರಾಸಲೀಲೆಯಾಡುತ್ತಿದ್ದದ್ದು. ಜನ್ಮಾಷ್ಟಮಿಯನ್ನು ಇಲ್ಲಿ ಹತ್ತು ದಿನ ಮೊದಲೇ ಆಚರಿಸಲು ಪ್ರಾರಂಭಿಸುತ್ತಾರೆ. ಈ ಸಂದರ್ಭದಲ್ಲಿ ಕೃಷ್ಣನಿಗೆ ಸಂಬಂಧಿಸಿದ ಮಹಾಭಾರತ, ರಾಸಲೀಲೆಯ ಸೀನ್‌ಗಳನ್ನು ಕಲಾಕಾರರು ಆಡಿ ತೋರಿಸುತ್ತಾರೆ. ಮಥುರಾ, ವೃಂದಾವನ ಹಾಗೂ ಗೋಕುಲದಲ್ಲಿ 4 ಸಾವಿರಕ್ಕಿಂತಲೂ ಅಧೀಕ ಮಂದಿರಗಳಿವೆ. ಜನ್ಮಾಷ್ಟಮಿ ಸಂದರ್ಭದಲ್ಲಿ ಈ ಮಂದಿರಗಳನ್ನು ಬಹಳ ಸುಂದರವಾಗಿ ಅಲಂಕರಿಸಲಾಗುತ್ತದೆ.

ಶಿವಮೊಗ್ಗದ ಈ ಊರಲ್ಲಿ ಮಾತು ಸಂಸ್ಕೃತದಲ್ಲಿ, ಜಗಳಾನು ಸಂಸ್ಕೃತದಲ್ಲಿ

ತಲುಪುವುದು ಹೇಗೆ?

ತಲುಪುವುದು ಹೇಗೆ?

ಮಥುರಾ, ವೃಂದಾವನ ಹಾಗೂ ಗೋಕುಲಕ್ಕೆ ಹೋಗಲು ದೇಶದ ವಿವಿಧ ಭಾಗಗಳಿಂದ ರೈಲು ಹಾಗೂ ಬಸ್‌ ವ್ಯವಸ್ಥೆ ಇದೆ. ಮಥುರಾ ರೈಲು ನಿಲ್ದಾಣದಿಂದ ದೇಶದ ಪ್ರಮುಖ ನಗರಗಳಿಗೆ ನೇರ ರೈಲು ವ್ಯವಸ್ಥೆ ಇದೆ. ಮಥುರಾದ ಸಮೀಪದ ಏರ್‌ಪೋರ್ಟ್ ಎಂದರೆ ಆಗ್ರಾ.

ಮುಂಬೈ

ಮುಂಬೈ

PC:AKS.9955

ಮುಂಬೈ ಸುತ್ತಾಡಲು ಹೋಗಬೇಕೆಂದಿದ್ದರೆ ಇದು ನಿಮಗೆ ಸೂಕ್ತ ಸಮಯವಾಗಿದೆ. ಜನ್ಮಾಷ್ಟಮಿ ದಿನ ಇಲ್ಲಿ ದಹೀ ಹಂಡಿ ಉತ್ಸವ ನಡೆಯುತ್ತದೆ. ಕೃಷ್ಣನಿಗೆ ಬೆಣ್ಣೆ ಅಂದರೆ ಅತೀ ಪ್ರೀಯವಾದುದು. ಹಾಗಾಗಿ ಪ್ರತಿವರ್ಷ ಇಲ್ಲಿ ದಹೀ ಹಂಡಿ ಉತ್ಸವ ಆಚರಿಸಲಾಗುತ್ತದೆ. ವಿವಿಧ ಕಡೆಯಿಂದ ಮಡಿಕೆ ಒಡೆಯುವವರ ತಂಡ ಈ ಸ್ಪರ್ಧೇಯಲ್ಲಿ ಭಾಗವಹಿಸುತ್ತದೆ. ಗೆದ್ದ ತಂಡಕ್ಕೆ ಪ್ರಶಸ್ತಿಯೂ ಸಿಗುತ್ತದೆ.

ಇಲ್ಲಿ ಹಾಲು, ಮೊಸರು ಫ್ರೀಯಾಗಿ ಸಿಗುತ್ತೆ, ದುಡ್ಡು ಕೊಡೋ ಅಗತ್ಯನೇ ಇಲ್ಲ

ತಲುಪುವುದು ಹೇಗೆ?

ತಲುಪುವುದು ಹೇಗೆ?

ಮುಂಬೈಗೆ ಹೋಗೋದೆಂದರೆ ಬಹಳ ಸುಲಭವಾದುದು. ಬಸ್‌, ರೈಲು ಅಥವಾ ವಿಮಾನ ಮೂಲಕ ಮುಂಬೈ ಸುಲಭವಾಗಿ ತಲುಪಬಹುದು.

 ಜುಂಜುನ್

ಜುಂಜುನ್

ಈ ಸ್ಥಳದ ವಿಶೇಷತೆ ಏನೆಂದರೆ ಇಲ್ಲಿ ಮುಸಲ್ಮಾನರು ಕೂಡಾ ಜನ್ಮಾಷ್ಟಮಿಯನ್ನು ಆಚರಿಸುತ್ತಾರೆ. ಇಲ್ಲಿನ ನರ್‌ಹರ್‌ ದರ್ಗಾ ಜನ್ಮಾಷ್ಟಮಿ ಸಂದರ್ಭ ಉತ್ತಮವಾದ ಸ್ಥಳವಾಗಿ ಮಾರ್ಪಡುತ್ತದೆ. ಇಲ್ಲಿ ಮೂರು ದಿನಗಳ ಕಾಲ ವಿಜೃಂಭಣೆಯಿಂದ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ. ಸುಮಾರು ೪೦೦ ವರ್ಷಗಳ ಹಿಂದೆಯೇ ಇಲ್ಲಿ ಜನ್ಮಾಷ್ಟಮಿಯನ್ನು ಆಚರಿಸಲು ಪ್ರಾರಂಭಿಸಲಾಗಿದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ಜುಂಜುನ್ ರಾಜಸ್ತಾನದ ಒಂದು ಪ್ರಮುಖ ಜಿಲ್ಲೆಯಾಗಿದೆ. ರಾಜಸ್ತಾನದಿಂದ ಇಲ್ಲಿಗೆ ನಿಯಮಿತ ಬಸ್‌ಗಳು ಇವೆ. ಇಲ್ಲಿ ರೈಲು ನಿಲ್ದಾಣವೂ ಇದೆ. ಆದರೆ ಏರ್‌ಪೋರ್ಟ್ ಇಲ್ಲ. ಹಾಗಾಗಿ ನೀವು ಬಸ್‌ ಇಲ್ಲವೇ ರೈಲು ಮೂಲಕ ಇಲ್ಲಿಗೆ ಬರಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X