Search
  • Follow NativePlanet
Share
ಮುಖಪುಟ » ಸ್ಥಳಗಳು » ದ್ವಾರಕಾ » ಹವಾಮಾನ

ದ್ವಾರಕಾ ಹವಾಮಾನ

ವರ್ಷಪೂರಾ ದ್ವಾರಕದಲ್ಲಿ ಸುಂದರ ವಾತಾವರಣವಿರುತ್ತದೆ. ಬೇಸಿಗೆಯಲ್ಲಿ ಉಷ್ಣತೆಯಿರುತ್ತದೆ ಆದರೆ ಸಹಿಸಲಸಾಧ್ಯವಲ್ಲ. ಮಳೆಗಾಲದ ದಿನಗಳು ಸುಂದರವಾಗಿರುತ್ತವೆ ಮತ್ತು ಚಳಿಗಾಲದ ಹವಾಮಾನವು ಪ್ರವಾಸಕ್ಕೆ ಸೂಕ್ತವಾಗಿರುತ್ತದೆ.

ಬೇಸಿಗೆಗಾಲ

ದ್ವಾರಕದಲ್ಲಿ ಬೇಸಿಗೆ ತಿಂಗಳುಗಳು ಮಾರ್ಚ್-ಜೂನ್. ಉಷ್ಣತೆಯಿದ್ದರೂ ಈ ದಿನಗಳು ಆಹ್ಲಾದಕರವಾಗಿರುತ್ತವೆ. ಬೇಸಿಗೆಯ ದಿನಗಳಲ್ಲಿ ಇಲ್ಲಿನ ಸ್ಥಳಗಳಲ್ಲಿ ಸುತ್ತಾಡಲು ಚೆನ್ನಾಗಿರುತ್ತದೆ. ಈ ದಿನಗಳಲ್ಲಿ ಗರಿಷ್ಠ ಉಷ್ಣಾಂಶ 32 ಡಿಗ್ರಿ ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರುತ್ತದೆ.

ಮಳೆಗಾಲ

ಜುಲೈ-ಸೆಪ್ಟಂಬರ್ ಮಳೆಗಾಲ. ಈ ತಿಂಗಳುಗಳಲ್ಲಿ ದಿನದ ಸಮಯ ಆಹ್ಲಾದಕರವಾಗಿರುತ್ತದೆ ಮತ್ತು ರಾತ್ರಿಗಳು ತಣ್ಣಗಿರುತ್ತವೆ.

ಚಳಿಗಾಲ

ಚಳಿಗಾಲದಲ್ಲಿ ದ್ವಾರಕೆಯಲ್ಲಿ ಉಷ್ಣಾಂಶವು 28 ರಿಂದ 18 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಈ ದಿನಗಳು ಪ್ರವಾಸಕ್ಕೆ ಸೂಕ್ತ ಸಮಯವಾಗಿದ್ದು ವಾತಾವರಣವು ಆಹ್ಲಾದಕರವಾಗಿರುತ್ತದೆ.