Search
  • Follow NativePlanet
Share
ಮುಖಪುಟ » ಸ್ಥಳಗಳು » ಮಥುರಾ » ಹವಾಮಾನ

ಮಥುರಾ ಹವಾಮಾನ

ಉತ್ತರ ಭಾರತದ ಇತರ ಪಟ್ಟಣಗಳಂತೆ ಈ ಪಟ್ಟಣಕ್ಕೂ ಭೇಟಿ ನೀಡಲು ನವೆಂಬರ್ ನಿಂದ ಮಾರ್ಚ್ ವರೆಗೆ ಸೂಕ್ತ ಸಮಯ. ಈ ಅವಧಿಯಲ್ಲಿ ವಾತಾವರಣವು ಬಹಳ ಹಿತಕರವಾಗಿರುತ್ತದೆ. ಹಲವಾರು ಜಾತ್ರೆಗಳು, ಹಬ್ಬಗಳ ಆಚರಣೆಗಳು ವರ್ಷಪೂರ್ತಿ ಇರುತ್ತವೆ. ಮುಖ್ಯವಾಗಿ ಹೋಳಿ (ಮಾರ್ಚ್) ಹಾಗು ಜನ್ಮಾಷ್ಟಮಿ (ಆಗಸ್ಟ್/ಸೆಪ್ಟೆಂಬರ್) ಸಂದರ್ಭದಲ್ಲಿ ಮಥುರಾ ಪಟ್ಟಣವು ಹೆಚ್ಚು ಆಕರ್ಷಣೀಯವಾಗಿರುತ್ತದೆ. ಹೀಗಾಗಿ ಮಥುರಾ ಪಟ್ಟಣವು ವರ್ಷವಿಡೀ ಪ್ರವಾಸಕ್ಕೆ ಪ್ರಸಿದ್ಧಿ ಹೊಂದಿದೆ.

ಬೇಸಿಗೆಗಾಲ

ಬೇಸಿಗೆ ಕಾಲದಲ್ಲಿ ಬಿಸಿಲಿನ ಬೇಗೆ ಹೆಚ್ಚಾಗಿದ್ದು, ಮಾರ್ಚ್ ನಿಂದ ಮೇವರೆಗೆ ಇಲ್ಲಿನ ತಾಪಮಾನ ಸುಮಾರು 45 ಡಿಗ್ರಿ ಸೆಂಟಿಗ್ರೇಡ್ ವರೆಗೆ ಇರುತ್ತದೆ. ಒಣಹವೆ ಇರುವುದರಿಂದ ಅಹಿತಕರ ವಾತಾವರಣವಿರುತ್ತದೆ.

ಮಳೆಗಾಲ

ಈ ಪಟ್ಟಣದಲ್ಲಿ ಮುಂಗಾರು ಜೂನ್ ನಿಂದ ಆಗಸ್ಟ್ ವರೆಗೆ ಇರುತ್ತದೆ. ಈ ಅವಧಿಯಲ್ಲಿ ಬಿಸಿಲಿನ ಬೇಗೆ ತೊಲಗಿ ತಂಪಾದ ಶೀತ ವಾತಾವರಣ ನಿರ್ಮಾಣವಾಗಿರುತ್ತದೆ.

ಚಳಿಗಾಲ

ಚಳಿಗಾಲ ಅಕ್ಟೋಬರ್ ನಿಂದ ಜನವರಿವರೆಗೆ ಇರುತ್ತದೆ. ಈ ಅವಧಿಯಲ್ಲಿ ಹಗಲುಗಳು ಹಿತಕರವಾಗಿರುತ್ತವೆ. ರಾತ್ರಿಗಳು ಚಳಿಯಿಂದ ಕೂಡಿರುತ್ತವೆ. ಉಷ್ಣಾಂಶ ಸುಮಾರ್ 12 ಡಿಗ್ರಿಯಿಂದ 25 ಡಿಗ್ರಿವರೆಗೆ ಇರುತ್ತದೆ.