Search
  • Follow NativePlanet
Share
ಮುಖಪುಟ » ಸ್ಥಳಗಳು» ರಾಜಸ್ಥಾನ

ರಾಜಸ್ಥಾನ - ರಾಜವೈಭವದ, ಗಾಂಭೀರ್ಯ ಮೆರೆಯುವ ನಾಡು

'ರಾಜಸ್ಥಾನ್' ಹೆಸರು ಕೇಳಿದಾಕ್ಷಣ ಸಾಕು, ಎಲ್ಲರಿಗು ನೆನಪಾಗುವುದು ಸುಂದರವಾದ ಅರಮನೆಗಳು, ಮರಳುಗಾಡಿನಲ್ಲಿ ಒಂಟೆ ಸವಾರಿ, ಕೌತುಕಮಯ ಹಾಗು ರೋಮಾಂಚನಕಾರಿ ಕಥೆಗಳು, ಮನಮೋಹಕ ಸಂಸ್ಕೃತಿ ಹಾಗು ಸಂಪ್ರದಾಯ...ಹೌದಲ್ಲವೆ? ಖಂಡಿತವಾಗಿಯೂ ಹೌದು. ಈ ವಿಶೀಷ್ಟ 'ರಾಜರುಗಳ ಭೂಮಿ' ತನ್ನಲ್ಲಿ ಯಥೇಚ್ಛವಾಗಿ ಇನ್ನು ಹಲವಾರು ವಿಸ್ಮಯಕರ ಸಂಗತಿಗಳನ್ನು ಹುದುಗಿಸಿಟ್ಟಿಕೊಂಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.ಭಾರತದ ವಾಯವ್ಯ ಭಾಗದಲ್ಲಿ ನೆಲೆಸಿರುವ ರಾಜಸ್ಥಾನ್ ಒಂದು ಅಭೂತಪೂರ್ವ ಪ್ರವಾಸಿ ತಾಣವಾಗಿದ್ದು, ಯಾವುದೇ ವೃತ್ತಿಪರ ಪ್ರವಾಸಿಗ ಈ ಸ್ಥಳವನ್ನು ಅವಲೋಕಿಸದೆ, ಅನ್ವೇಷಿಸದೆ ಬಿಡಲಾರ. ರಾಜವಂಶದ ಗತಕಾಲದ ವೈಭವತೆಯನ್ನು, ತನ್ನಲ್ಲಿರುವ ಸುಭದ್ರವಾದ ಕೋಟೆ, ಕಟ್ಟಡ ಹಾಗು ಇನ್ನಿತರೆ ರಚನೆಗಳಿಂದ ಇನ್ನೂ ಜೀವಂತವಾಗಿಟ್ಟಿರುವ ರಾಜಸ್ಥಾನ ರಾಜ್ಯವು ಪ್ರವಾಸಿಗರಿಗೆ ಒಂದು ಮರೆಯಲಾರದ ಅನುಭವವನ್ನು ನೀಡುವುದರಲ್ಲಿ ಯಾವುದೆ ಸಂಶಯವಿಲ್ಲ. ಹಾಗಾದರೆ ಬನ್ನಿ...ಈ ವೆಬ್ ತಾಣದ ಮೂಲಕ ರಾಜಸ್ಥಾನದ ಕುರಿತು ಸಂಪೂರ್ಣ ಮಾಹಿತಿಯನ್ನು ಪಡೆಯಿರಿ.

ಐತಿಹಾಸಿಕ ರಾಜ್ಯದ ಸ್ಥಳಾಕೃತಿ

ದೇಶದ ವಾಯವ್ಯ ಭಾಗದಲ್ಲಿ ನೆಲೆಸಿರುವ ರಾಜಸ್ಥಾನವು, ವಿಸ್ತೀರ್ಣದಲ್ಲಿ ಭಾರತದಲ್ಲಿಯೇ ದೊಡ್ಡದಾದ ರಾಜ್ಯವಾಗಿದೆ. ಭಾರತದ ಒಟ್ಟು ಭಾಗದಲ್ಲಿ ಸುಮಾರು 10.4 ಪ್ರತಿಶತ ಭಾಗದಷ್ಟು ಆವರಿಸಿರುವ ರಾಜಸ್ಥಾನವು 342,269 ಚ.ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ. ಪಿಂಕ್ ಸಿಟಿ ಎಂದೆ ಖ್ಯಾತವಾಗಿರುವ ಜೈಪುರ್ ರಾಜಸ್ಥಾನ ರಾಜ್ಯದ ರಾಜಧಾನಿಯಾಗಿದ್ದು, ಅರಾವಳಿ ಶ್ರೇಣಿಗಳಲ್ಲಿ ಬರುವ ಮೌಂಟ್ ಅಬು ರಾಜ್ಯದ ಏಕೈಕ ಗಿರಿಧಾಮವಾಗಿದೆ. ರಾಜಸ್ಥಾನದ ವಾಯವ್ಯ ಭಾಗವು ಬಹುತೇಕವಾಗಿ ಮರಳಿನಿಂದ ಆವರಿಸಿದ್ದು, ಇದರ ಬಹುಭಾಗವು ಥಾರ್ ಮರಭೂಮಿಗೆ ಒಳಪಡುತ್ತದೆ.

ರಾಜಸ್ಥಾನದ ಹವಾಗುಣ

ಬೇಸಿಗೆಗಾಲ, ಮಳೆಗಾಲ ಮತ್ತು ಚಳಿಗಾಲ ಇಲ್ಲಿನ ಮೂರು ಪ್ರಮುಖ ಋತುಗಳಾಗಿದ್ದು, ರಾಜ್ಯವು ಮಳೆಗಾಲವೊಂದನ್ನು ಹೊರತುಪಡಿಸಿ ಯಾವಾಗಲು ಒಣಹವೆಯಿಂದ ಕೂಡಿರುತ್ತದೆ. ಬೇಸಿಗೆಯು ತುಂಬ ಶಾಖಮಯವಾಗಿದ್ದು ತಾಪಮಾನವು ಸಾಮಾನ್ಯವಾಗಿ  48° ಸೆಲ್ಶಿಯಸ್ ಗೆ ಏರುವುದನ್ನು ನೋಡಬಹುದು. ಈ ಸಮಯದಲ್ಲಿ, ರಾಜಸ್ಥಾನ್ ನ ಮೌಂಟ್ ಅಬು ಸ್ಥಳವು ಮಾತ್ರ ಹಿತಕರವಾದ ವಾತಾವರಣವನ್ನು ಹೊಂದಿರುತ್ತದೆ.

ರಾಜಸ್ಥಾನಿನಲ್ಲಿ ಮಾತನಾಡಲಾಗುವ ಭಾಷೆಗಳು ಯಾವುದು ಗೊತ್ತೆ?

ರಾಜಸ್ಥಾನಿ ಭಾಷೆಯನ್ನೆ ಇಲ್ಲಿ ಹೆಚ್ಚಾಗಿ ಮಾತನಾಡಲಾಗುತ್ತದೆ, ಆದರೂ ಹಿಂದಿ ಹಾಗು ಇಂಗ್ಲೀಷ್ ಭಾಷೆಗಳನ್ನೂ ಬಹುತೇಕವಾಗಿ ಎಲ್ಲೆಡೆ ಕೇಳಬಹುದಾಗಿದೆ. ಇಲ್ಲಿ ನೆಲೆಸಿರುವ ಕೆಲವು ಹಿರಿಯ ವಯಸ್ಕರು ಸಿಂಧಿ ಭಾಷೆಯನ್ನೂ ಸಹ ಬಳಸುತ್ತಾರೆ.

ವೈವಿಧ್ಯಮಯ ಸಂಸ್ಕೃತಿ ಮತ್ತು ಉಲ್ಲಾಸಕರ ಖಾದ್ಯಗಳು

ರಾಜಸ್ಥಾನಿನ ಕುರಿತು ಮಾತನಾಡುವಾಗ ಅಲ್ಲಿನ ಅದ್ಭುತ ಸಂಸ್ಕೃತಿ ಮತ್ತು ಉತ್ಕೃಷ್ಟ ಖಾದ್ಯಗಳ ಬಗ್ಗೆ ಮಾತನಾಡದಿರಲು ಸಾಧ್ಯವೆ? ಸಾಧ್ಯವೇ ಇಲ್ಲ. ರಾಜಸ್ಥಾನ್ ತನ್ನ ಶ್ರೀಮಂತಮಯ ಸಂಸ್ಕೃತಿ ಹಾಗು ಸಂಪ್ರದಾಯಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಹಲವು ವಿಶೀಷ್ಠ ಬಗೆಯ ಜಾನಪದ ನೃತ್ಯ ಹಾಗು ಸಂಗೀತಗಳ ಹೊರತಾಗಿ ಜನಪ್ರಿಯವಾಗಿರುವ ಸುಂದರಮಯ ಕಲೆಗಳನ್ನೂ ಸಹ ನೋಡಬಹುದಾಗಿದೆ. ಇಲ್ಲಿನ ಸಾಂಪ್ರದಾಯಿಕ ಉಡುಗೆ ತೊಡುಗೆಗಳು ಅದ್ಭುತವಾದ ವಿನ್ಯಾಸಗಳನ್ನು ಹೊಂದಿದ್ದು, ಸುಂದರವಾದ ಚಿಕ್ಕ ಚಿಕ್ಕ ಕನ್ನಡಿಗಳನ್ನು ಒಳಗೂಡಿಸಿಕೊಂಡು ನೋಡಲು ವಿಶೇಷವಾಗಿರುತ್ತದೆ. ಇಲ್ಲಿ ಆಚರಿಸಲಾಗುವ ಕೆಲವು ಪ್ರಮುಖ ಉತ್ಸವಗಳೆಂದರೆ ಹೋಳಿ ಹಬ್ಬ, ತೀಜ್, ದೀಪಾವಳಿ, ದೇವನಾರಾಯಣ ಜಯಂತಿ, ಸಂಕ್ರಾಂತಿ ಮತ್ತು ಜನ್ಮಾಷ್ಟಮಿ ಹಬ್ಬಗಳು. ಇದಲ್ಲದೆ ರಾಜಸ್ಥಾನಿ ಮರಳುಗಾಡು ಉತ್ಸವ, ಒಂಟೆ ಮೇಳ ಮತ್ತು ದನಗಳ ಜಾತ್ರೆಯನ್ನೂ ಕೂಡ ಪ್ರತಿ ವರ್ಷಕ್ಕೊಮ್ಮೆ ಆಚರಿಸಲಾಗುತ್ತದೆ.ಇನ್ನು ಇಲ್ಲಿಯ ಊಟ ತಿನಿಸುಗಳ ಬಗ್ಗೆ ಹೇಳುವುದಾದರೆ, ನೀರಿನ ಅಭಾವ ಹಾಗು ತರಕಾರಿಗಳ ಕೊರತೆಯಿಂದಾಗಿ ಇಲ್ಲಿ ಸಿಗುವ ಖಾದ್ಯಗಳು ಸ್ವಲ್ಪ ಮಟ್ಟಿಗೆ ಒಣ-ಒಣ ವಾಗಿರುತ್ತದೆ. ಆದರೂ ಕೂಡ ಸವಿಯಲು ರುಚಿಕರವಾಗಿರುತ್ತದೆ. ಇಲ್ಲಿ ತಯಾರಿಸಲಾಗುವ ಕೆಲವು ಸಾಂಪ್ರದಾಯಿಕ ಖಾದ್ಯಗಳೆಂದರೆ: ದಾಲ್ ಬಾತಿ, ಬೈಲ್-ಗಟ್ಟೆ, ರಾಬ್ಡಿ, ಬಾಜ್ರೆ ಕಿ ರೋಟಿ, ಲಸೂಣ್ ಕಿ ಚಟ್ನಿ ಮತ್ತು ಬಿಕಾನೇರ್ ನ ರಸಗುಲ್ಲಾಗಳು. ನೀವೇನಾದರೂ ಈ ಸ್ಥಳದಲ್ಲಿ ಪ್ರವಾಸದಲ್ಲಿದ್ದರೆ ಖಂಡಿತವಾಗಿಯೂ ಇವುಗಳ ರುಚಿಯನ್ನು ಸವಿಯಲೇ ಬೇಕು.

ರಾಜರುಗಳ ಭೂಮಿ ಎಂದೆ ಕರೆಸಿಕೊಳ್ಳುವ ರಾಜಸ್ಥಾನ ನಲ್ಲಿಯ ನೋಡಲೇ ಬೇಕಾದ ಸ್ಥಳಗಳು!

ಈಗಾಗಲೇ ನಿಮಗೆ ಈ ಪ್ರದೇಶದ ಭೌಗೋಳಿಕ, ಹವಾಮಾನ ಮತ್ತು ಸಂಸ್ಕೃತಿಯ ಕುರಿತು ಕಿರುಪರಿಚಯ ನೀಡಿದ್ದೆವೆ. ಇನ್ನು ನೀವು ಈ ರಾಜವೈಭವದ ರಾಜ್ಯದಲ್ಲಿ ಎಲ್ಲೆಲ್ಲಿ ಪ್ರವಾಸ ಮಾಡಬಹುದು ಎಂಬುದರ ಬಗ್ಗೆ ಒಂದು ಸಂಕ್ಷೀಪ್ತ ವಿವರಣೆ ನೀಡಬಯಸುತ್ತೆವೆ. ಬಹುತೇಕವಾಗಿ ರಾಜಸ್ಥಾನದ ಎಲ್ಲ ಸ್ಥಳಗಳು ನೋಡಲು ಸುಂದರವಾಗಿದ್ದು, ರಾಜವೈಭವವನ್ನು ಮೆರೆಯುತ್ತವೆ. ಕೆಲವು ಭೇಟಿ ನೀಡಲೆ ಬೇಕಾದ ಜನಪ್ರಿಯ ಸ್ಥಳಗಳೆಂದರೆ, ಜೈಪುರ್, ಜೋಧಪುರ್, ಉದೈಪುರ್ ಮತ್ತು ಜೈಸಲ್ಮೇರ್. ಇವುಗಳ ಹೊರತಾಗಿ ಬನ್ಸ್ ವಾರಾ, ಕೋಟಾ, ಭರತ್ಪುರ್, ಬುಂದಿ, ವಿರಾಟ್ ನಗರ್, ಸರಿಸ್ಕಾ ಮತ್ತು ಶೇಖಾವತಿ ಮೂಂತಾದ ಸ್ಥಳಗಳು ಕೂಡ ಕೌತುಕಭರಿತವಾಗಿದ್ದು, ಒಂದು ಅದ್ಭುತವಾದ ಅನುಭವವನ್ನು ನೀಡುತ್ತವೆ.  ಇನ್ನು ವನ್ಯಜೀವಿ ಪ್ರಿಯರಿಗೆ, ಇಲ್ಲಿರುವ ರಣಥಂಬೋರ್ ರಾಷ್ಟ್ರೀಯ ಉದ್ಯಾನವನ, ಸರಿಸ್ಕಾ ಹುಲಿ ರಕ್ಷಿತ ಪ್ರದೇಶ, ದರ್ರಾ ವನ್ಯಜೀವಿಧಾಮ ಮತ್ತು ಕುಂಭಲ್ಗಡ್ ವನ್ಯಜೀವಿಧಾಮಗಳು ಕೈಬಿಸಿ ಆಹ್ವಾನಿಸುತ್ತವೆ. ಇತಿಹಾಸ ಪ್ರಿಯರು, ಹಲವು ಪ್ರಾಚೀನ ಹಿಂದು ಮತ್ತು ಜೈನ ದೇವಾಲಯಗಳನ್ನು ಈ ಪ್ರದೇಶದಲ್ಲಿ ನೋಡಬಹುದಾಗಿದೆ. ಇವುಗಳಲ್ಲದೆ ಇಲ್ಲಿರುವ ಕೋಟೆಗಳು ಮತ್ತು ಹವೇಲಿಗಳು ತಮ್ಮಲ್ಲಿಯ ಅದ್ಭುತವಾದ ವಾಸ್ತುಶಿಲ್ಪದಿಂದಾಗಿ ತುಂಬ ಪ್ರಸಿದ್ಧಿಯನ್ನು ಪಡೆದಿವೆ.ಒಬ್ಬ ಪ್ರಸಿದ್ಧ ಲಾಟೀನ್ ತತ್ವಜ್ಞಾನಿ ಹೇಳುತ್ತಾನೆ " ಈ ಜಗತ್ತು ಒಂದು ಪುಸ್ತಕ ಇದ್ದ ಹಾಗೆ, ಯಾರಿಗೆ ಪ್ರಯಾಣಿಸಲಾಗುವದಿಲ್ಲವೊ ಅವರು ಕೇವಲ ಒಂದು ಪುಟವನ್ನು ಓದಿದರೆಸಾಕು". ಇದರಂತೆ, ರಾಜಸ್ಥಾನ ರಾಜ್ಯವು ಕೂಡ ಪುಸ್ತಕದ ಒಂದು ಪುಟವಾಗಿದೆ. ನೀವು ಯಾವಾಗ ಈ ಪುಟವನ್ನು ಓದುತ್ತಿರೋ ಎಂಬುದನ್ನು ಕಾದು ನೋಡಬೇಕಾಗಿದೆ ಅಷ್ಟೆ.

ರಾಜಸ್ಥಾನ ಸ್ಥಳಗಳು

  • ಮೌಂಟ್ ಅಬು 40
  • ಜೈಸಲ್ಮೇರ್ 83
  • ಉದೈಪುರ್ 98
  • ಬಿಕಾನೇರ್ 42
  • ರಣಥಂಬೋರ್ 25
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri